📍 Karavali Maruta kannada News
LIVE CONTACT

ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ

ಹೊಸ ವರ್ಷ ಪ್ರಾರಂಭವಾಗಿದೆ. ಮಂಗಳೂರಿಗಷ್ಟೇ ಅಲ್ಲ ಇಡೀ ಕರಾವಳಿ ತೀರಕ್ಕೆ ಸಂತಸದ ಮತ್ತು ಖುಷಿಯ ವಿಚಾರ ಸರ್ಕಾರದ ಕಡೆಯಿಂದ ಸಿಕ್ಕಿದೆ. ಏನದು ಆ ಖುಷಿಯ ವಿಚಾರ? ಜನವರಿ ಎರಡನೇ ವಾರದಲ್ಲೇ ಕರಾವಳಿ ತೀರದ ಡೆವಲಪ್ಮೆಂಟ್ ಹಾಗೂ ಪ್ರವಾಸೋದ್ಯಮದ ಹಬ್ ನಿರ್ಮಿಸುವ ನಿಟ್ಟಿನಲ್ಲಿ ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ಪರಿಣಿತರನ್ನು ಒಟ್ಟುಗೂಡಿಸಿ ಸ್ವತಹ ರಾಜ್ಯದ ಉಪಮುಖ್ಯಮಂತ್ರಿ ಯವರೇ ಬೆಳಗಿನಿಂದ ಸಂಜೆವರೆಗೆ ಅಲುಗಾಡದೆ ಕೂತು, ಅಧಿಕಾರಿಗಳಿಗೆ ಬೇಕಾಬಿಟ್ಟಿಯಾಗಿ ಕಾರ್ಯಕ್ರಮವನ್ನು ನಿರ್ವಹಣೆ ಮಾಡಲು ಬಿಡದೆ, ಇದೇ ಮೊದಲ ಬಾರಿಗೆ ಎಂಬAತೆ ಅತ್ಯಂತ ಯಶಸ್ವಿ ಹಾಗೂ ದೊಡ್ಡ ಆಸೆಯನ್ನು ಹುಟ್ಟಿಸಿದಂತಹ ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ಸಭೆಯ ಕೊನೆಯಲ್ಲಿ ಸ್ವತಹ ಮುಖ್ಯಮಂತ್ರಿಗಳು ಸಹ ಭಾಗವಹಿಸುವ ಮೂಲಕ ಮೂರು ಜಿಲ್ಲೆಯ ಜನರಲ್ಲಿ ಹೊಸ ಆಶಾ ಭಾವನೆಯನ್ನು ಮೂಡಿಸಿದ್ದು ಸತ್ಯವೇ.


ಈ ಕಾರ್ಯಕ್ರಮವು ಕೇವಲ ಇನ್ವೆಸ್ಟರ್ಸ್ ಹಾಗೂ ಈ ಪ್ರದೇಶದ ಹಲವು ಸಂಸ್ಥೆಗಳ ಮುಖಂಡರ ಜೊತೆ ಸೇರಿ ಕಾರ್ಯಕ್ರಮ ಮಾಡಿದ್ದೇವೆ ಎಂದು ತೋರಿಸುವುದಕ್ಕೋಸ್ಕರ ಈ ಒಂದು ಸಭೆಯನ್ನು ಮಾಡಿದ್ದಾರೆ ಅಂತ ಇದೇ ಪ್ರಥಮ ಬಾರಿಗೆ ಅನ್ನಿಸುವುದಿಲ್ಲ. ಈ ಒಂದು ಕಾರ್ಯಕ್ರಮದ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸರ್ಕಾರಕ್ಕೆ ಈ ಬಗ್ಗೆ ನೈಜ ಕಾಳಜಿ ಇರುವಂತೆ ಬಹಿರಂಗವಾಗಿ ಕಾಣಲು ಸಾಧ್ಯವಾಗುತ್ತಿತ್ತು.
ಎಸ್, ವರ್ಷದ ಎರಡನೆಯ ವಾರದಲ್ಲೇ ಮಂಗಳೂರು ನಗರದಲ್ಲಿ ಇಂತಹದೊAದು ದೊಡ್ಡ ಸ್ಟೆಪ್ ಸರ್ಕಾರದಿಂದ ಕಂಡು ಬಂತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಒಂದು ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು ಮತ್ತು ಅವರು ಈ ವಿಚಾರದಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದಾರೆ ಎನ್ನುವುದು ಅವರ ಪಾಲ್ಗೊಳ್ಳುವಿಕೆಯು ಸ್ಪಷ್ಟವಾಗಿ ಹೇಳುತ್ತಿತ್ತು.
ಉತ್ತರ ಕನ್ನಡ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಡಳಿತಗಳು ಪ್ರವಾಸೋದ್ಯಮ ಇಲಾಖೆ ಸಹಿತ ಹಲವು ಇಲಾಖೆಗಳ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರುಗಳು ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಿದ್ದಷ್ಟೇ ಅಲ್ಲ, ಮೂರು ಜಿಲ್ಲೆಗೆ ಸಂಬAಧಪಟ್ಟ ಪ್ರವಾಸೋದ್ಯಮ ಮತ್ತು ಅದಕ್ಕೆ ತತ್ಸಮಾನ ವಿವಿಧ ಕ್ಷೇತ್ರದಲ್ಲಿ ದುಡಿದಂತಹ ಸಂಸ್ಥೆಗಳ ಮುಖ್ಯಸ್ಥರು, ಮತ್ತು ಇನ್ವೆಸ್ಟರ್‌ಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು ೨೦೦ ಆಹ್ವಾನಿತ ಗಣ್ಯರು ಮತ್ತು ಅಧಿಕಾರಿಗಳು, ಶಾಸಕರುಗಳು, ಮಂತ್ರಿಗಳು ಭಾಗವಹಿಸಿದಂತಹ ಅತ್ಯಂತ ಯಶಸ್ವಿ ಸಭೆ ಅಂತ ಹೇಳಬಹುದು.
ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಶುರುವಾದಾಗಿನಿಂದ ಸಮಾರೋಪ ಸಮಾರಂಭ ಮುಗಿಯುವವರೆಗೂ ಅಂದರೆ ಬೆಳಗ್ಗೆ ೧೧:೩೦ಯಿಂದ ರಾತ್ರಿ ಸರಿ ಸುಮಾರು ಹತ್ತರವರೆಗೂ ರಾಜ್ಯದ ಉಪಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಗಟ್ಟಿಯಾಗಿ ಕೂತು ಇಡೀ ಕಾರ್ಯಕ್ರಮವನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ನೋಡಿಕೊಂಡದ್ದು ವಿಶೇಷ ಹಾಗೂ ಈ ಕಾರ್ಯಕ್ರಮದ ಯಶಸ್ವಿಗೆ ಕಾರಣ. ಬಹುತೇಕ ಸರ್ಕಾರಿ ಕಾರ್ಯಕ್ರಮಗಳು ಅಸಮರ್ಪಕ ಹಾಗೂ ಬೇeವಾಬ್ದಾರಿಯುತವಾಗಿ ನಡೆಯುತ್ತದೆ. ಕಾರ್ಯಕ್ರಮಗಳನ್ನು ಮಾಡಬೇಕು ಎಂಬ ಕಾರಣಕ್ಕೆ ಕಾರ್ಯಕ್ರಮದ ಹೆಸರಲ್ಲಿ ಒಂದಷ್ಟು ಜನ ಕಾಸು ಮಾಡಿಕೊಳ್ಳುವುದಕ್ಕಾಗಿ ಕಾರ್ಯಕ್ರಮಗಳನ್ನು ಮಾಡುವಂತಹ ನಿದರ್ಶನವು ಇದೆ, ಇದೆಲ್ಲವುದರ ಮಧ್ಯೆ ಈ ಕಾರ್ಯಕ್ರಮವು ಅತ್ಯಂತ ಆಶಾದಾಯಕವಾಗಿ ಮತ್ತು ಬೆಳಗಿನಿಂದ ರಾತ್ರಿಯವರೆಗೂ ಚೆತೋಹಾರಿಯಾಗಿ ನಡೆದದ್ದು ಪ್ರಶಂಸನೀಯವೇ ಹೌದು.
ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ನೀತಿಯನ್ನು ರೂಪಿಸುವದಕ್ಕೆ ಘೋಷಣೆಯಾಯಿತು. ಹಾಗೆಯೇ ಖಾಸಗಿಯವರ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುವ ಯೋಜನೆಗೆ ಒತ್ತು ನೀಡಿರುವ ಕರ್ನಾಟಕ ಸರ್ಕಾರವು ಅದಕ್ಕಾಗಿ ಸ್ಥಳೀಯ ಮೂಲಕ ಇನ್ವೆಸ್ಟರ್ಗಳಿಗೆ ಹೆಚ್ಚಿನ ಆದ್ಯತೆಗಳನ್ನು ನೀಡಲು ಪ್ರಸಕ್ತವಾಗಿದೆ.
ವಾಟರ್ ಮೆಟ್ರೋ, ಕ್ರೂಸ್ ಬಂದರು ಅಭಿವೃದ್ಧಿ (ಕ್ರೂಸ್ ಟರ್ಮಿನಲ್) ಮೂಲಕ ಜಲ ಸಾರಿಗೆಗೆ ಹೆಚ್ಚಿನ ಆದ್ಯತೆಯನ್ನು ಕಲ್ಪಿಸುವುದರ ಜೊತೆಗೆ ಮಂಗಳೂರಿನಿAದ ಮರವಂತೆಯವರೆಗೆ ಬೋಟ್ ಸಾರಿಗೆ ವ್ಯವಸ್ಥೆಗೆ ಶೀಘ್ರದಲ್ಲಿಯೇ ಅನುಮೋದನೆಗೆ ತೀರ್ಮಾನಿಸಲಾಯಿತು. ಹೀಗೆ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟುಕೊAಡು ಪರಿಣಿತರೊಂದಿಗೆ ಚರ್ಚಿಸಿ, ಅಧಿಕಾರಿಗಳ ಜೊತೆಗೂ ಸ್ಥಳದಲ್ಲಿಯೇ ಚರ್ಚಿಸಿ ಒಂದು ಬ್ಲೂಪ್ರಿಂಟ್ ಮಾದರಿಯನ್ನು ಸ್ವತಃ ಡಿಕೆ ಶಿವಕುಮಾರ್ ತಯಾರಿಸಿದ್ದು ಅಲ್ಲಿ ಭಾಗವಹಿಸಿದ ಎಲ್ಲಾ ೨೦೦ ಪ್ರತಿನಿಧಿಗಳಿಗೂ ಸಂತಸ ಕೊಟ್ಟಿತು.
ಎಲ್ಲವೂ ಸರಿ ಆದರೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ನಿರಾಸಕ್ತಿ ನಡೆ, ಪ್ರತಿಯೊಂzರಲ್ಲೂ ಪಡೆಯುವ ದುರಾಲೋಚನೆ ಇವುಗಳಿಂದಾಗಿ ಈ ಒಂದು ಅದ್ಭುತವಾದ ಆಲೋಚನೆಯೂ ನೆನೆಗುದಿಗೆ ಬೀಳದಿದ್ದರೆ ಸಾಕು ಅಂತ ಅನ್ನುತ್ತಿದ್ದಾರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ಗಣ್ಯರು ಮತ್ತು ಇನ್ವೆಸ್ಟರ್ಸ್.
ಡಿಕೆ ಶಿವಕುಮಾರ್ ರಾಜಕಾರಣಿಯಾಗಿ ಅವರ ಪರ ವಿರೋಧದ ಆರೋಪಗಳು ಪ್ರತ್ಯಾರೋಪಗಳು ಏನೇ ಇರಲಿ ಆ ವ್ಯಕ್ತಿ ಯಾವುದೇ ಕೆಲಸಕ್ಕೆ ಕೈ ಹಾಕಿದರು ಆ ಕೆಲಸ ಮಾಡುವವರೆಗೆ ವಿರಮಿಸದಂತಹ ವ್ಯಕ್ತಿತ್ವದವರು. ಅವರ ಮೇಲಿನ ಆರೋಪಗಳೆಲ್ಲವೂ ಇಲ್ಲಿ ನಗಣ್ಯ. ಈ ಹಿಂದೆ ಅಸೆಂಬ್ಲಿಯಲ್ಲಿಯೇ ಕರಾವಳಿ ಪ್ರವಾಸೋದ್ಯಮದ ಬಗ್ಗೆ ಪ್ರಸ್ತಾಪ ಮಾಡಿದ್ದ ಉಪಮುಖ್ಯಮಂತ್ರಿ ಇಲ್ಲಿಗೆ ಬಂದು ಈ ವಿಚಾರವಾಗಿ ಚರ್ಚಿಸಿ ಪ್ಲಾನ್ ರೂಪಿಸುವ ಮುನ್ಸೂಚನೆಯನ್ನು ನೀಡಿದ್ದರು. ಅದರ ಮುಂದುವರಿದ ಭಾಗವೇ ಈ ಒಂದು ಯಶಸ್ವಿ ಸಭೆ ಅಂತ ಅಂದುಕೊಳ್ಳುವ.
ಕರಾವಳಿಯ ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಸ್ವತಹ ಡಿಕೆ ಶಿವಕುಮಾರ್ ಅವರಿಗೆ ಲಾಭ ಇರಬಹುದು ಅವರ ಬೆಂಬಲಿಗರಿಗೆ ಲಾಭವಾಗಬಹುದು. ಆದರೆ ಅದರ ನೇರ ಪರಿಣಾಮ ಈ ಭಾಗದ ಜನರ ಮೇಲೆ ಹಾಗೂ ಅವರ ಆರ್ಥಿಕತೆಯ ಮೇಲೆ ಮತ್ತು ರಾಜ್ಯದ ಆರ್ಥಿಕತೆಗೆ ಬಲ ತುಂಬುತ್ತದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ.
ಆದರೆ ದೊಡ್ಡ ದೊಡ್ಡ ಇನ್ವೆಸ್ಟರ್‌ಗಳಿಗಿಂತ ಈ ಒಂದು ಪ್ರವಾಸೋದ್ಯಮದ ಪಥದಲ್ಲಿ ಸ್ಥಳೀಯ ಸ್ಮಾಲ್ ಇನ್ವೆಸ್ಟರ್ಸ್ಗಳಿಗೂ ಆದ್ಯತೆಯು ಸಿಗಬೇಕು. ನಿಜ ಮೊನ್ನೆ ಸಭೆಯಲ್ಲಿ ಭಾಗವಹಿಸಿದಂತಹ ಗಣ್ಯರಿಗೆ ಅವರವರ ಇಂಟರೆಸ್ಟ್ಗೆ ತಕ್ಕಂತೆ ಎಲ್‌ಓಐ ಪತ್ರ ನೀಡಲಾಗಿದೆ. ಇನ್ನು ಮುಂದೆ ಅವರ ಇಂಟರೆಸ್ಟ್ಗೆ ತಕ್ಕಂತೆ ಸ್ವತಃ ಇಲಾಖೆಯು ಆ ಪತ್ರ ಪಡೆದ ಇನ್ವೆಸ್ಟರ್ಸ್ಗಳಿಗೆ ಕರೆ ಕಳುಹಿಸುತ್ತದೆ ಹಾಗಂತ ಸ್ವತಃ ಡಿಕೆ ಶಿವಕುಮಾರ್ ಮೊನ್ನೆಯ ಸಭೆಯಲ್ಲಿ ಹೇಳಿದ್ದರು
ಎಲ್ಲಾ ಇನ್ವೆಸ್ಟರ್ಸ್ಗಳಿಗೂ ಸಭೆಯಲ್ಲಿ ತಮ್ಮ ಅನಿಸಿಕೆಯನ್ನು ಮತ್ತು ತಮ್ಮ ವಾದವನ್ನು ಮಂಡಿಸಲು ಸಮಯಾವಕಾಶದ ಕೊರತೆಯಿಂದ ಸಾಧ್ಯವಾಗಿಲ್ಲ ಆದರೆ ಅವರ ಸಲಹೆ ಮತ್ತು ವಾದದಲ್ಲೂ ಹುರುಳಿದೆ. ಸಭೆ ಯಶಸ್ವಿಯಾಗಿದೆ ಅಂತ ಸ್ವತಹ ಎಲ್ಲಾ ಗಣ್ಯರು ಒಕ್ಕೋರಲಿನಿಂದ ಹೇಳುತ್ತಿದ್ದಾರೆ. ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಈ ವಿಚಾರದಲ್ಲಿ ಸಂತುಷ್ಟರಾಗಿದ್ದಾರೆ. ಅವರ್ಯಾರು ಸಹ ಸಭೆಯಿಂದ ಅರ್ಧದಲ್ಲೇ ಹೋದವರಲ್ಲ ಮತ್ತು ಅಲ್ಲಿ ಮಾತನಾಡುತ್ತಾ ಹರಟೆ ಹೊಡೆಯುತ್ತಾ ಕಳೆದವರು ಅಲ್ಲ. ಅದೇ ಕಾರಣ ಆ ಸಭೆಯು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಗಂಭೀರತೆಯಿAದ ನಡೆದಿದೆ. ಆದರೆ ಈಗ ಮುಂದಿನ ಕೆಲಸಗಳು ಇಲಾಖೆಯ ಅಧಿಕಾರಿಗಳಿಂದಲೇ ಆಗಬೇಕು. ಆ ಅಧಿಕಾರಿಗಳು ಈ ವಿಚಾರದಲ್ಲಿ ಎಷ್ಟರ ವiಟ್ಟಿಗೆ ಆಸಕ್ತರಾಗಿರುತ್ತಾರೆ? ಇಷ್ಟು ದಿನದ ಅಧಿಕಾರಿಗಳ ವರ್ತನೆಯು ನಿರಾಶದಾಯಕವಾಗಿತ್ತು, ಹಾಗಾಗಿ ಆ ಬಗ್ಗೆ ಅವರಲ್ಲಿ ಚಿಂತೆ ಇದೆ.
ಇಷ್ಟೇ ಅಲ್ಲ, ಈ ವಿಚಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಒಳಗೆ ಸಿಂಗಲ್ ವಿಂಡೋ ಸಿಸ್ಟಮ್ ತೆರೆಯಬೇಕು. ಇನ್ವೆಸ್ಟರ್‌ಗಳು ಇಲಾಖೆಗೆ ಬೇಕಾಗುವಂತಹ ಕಾಗದಪತ್ರಗಳನ್ನು ಆ ಸಿಂಗಲ್ ವಿಂಡೋ ಮೂಲಕ ತಲುಪಿಸಬೇಕು. ಅಲ್ಲಿ ಪ್ರವಾಸೋದ್ಯಮ ಇಲಾಖೆಗೆ ಇತರ ಇಲಾಖೆಯ ಅಧಿಕಾರಿಗಳಿಂದ ಏನೆಲ್ಲಾ ಪರವಾನಿಗೆ ಏನ್‌ಓಸಿ ಅಥವಾ ಇನ್ನೇನಾದರೂ ಬೇಕಾದಲ್ಲಿ ಅವರೇ ಪಡೆದು ಅರ್ಜಿದಾರನಾದ ಇನ್ವೆ¸್ಟರ್‌ಗೆ ಆದೇಶ ಪತ್ರ ಅಥವಾ ಲೈಸೆನ್ಸ್ ನೀಡಬೇಕು. ಇದಕ್ಕಾಗಿ ಆ ಇನ್ವೆಸ್ಟರ್ ವಿವಿಧ ಇಲಾಖೆಯ ಬಾಗಿಲಿಗೆ ಅಡ್ಡಾಡುವಂತದ್ದನ್ನು ಪ್ರವಾಸೋದ್ಯಮ ಇಲಾಖೆಯು ತಪ್ಪಿಸಬೇಕು. ಎಲ್ಲಾ ಇಲಾಖೆಗಳು ಅದು ರಾಜ್ಯದ್ದಿರಬಹುದು ಕೇಂದ್ರದ್ದು ಇರಬಹುದು ಅದೆಲ್ಲವನ್ನು ಪರಿಹರಿಸಿ ಕೊಡಬೇಕಾದದ್ದು ಪ್ರವಾಸೋದ್ಯಮ ಇಲಾಖೆಯ ಕಾರ್ಯವೇ ಆಗಬೇಕು ಅದಕ್ಕಾಗಿ ಇನ್ವೆಸ್ಟರ್‌ಗಳು ಸಮಯ ಹಾಗೂ ಹಣ ಎರಡನ್ನು ವ್ಯರ್ಥ ಮಾಡಲು ಸರ್ಕಾರ ಅವಕಾಶ ಕೊಡಬಾರದು. ಈ ಒಂದು ಯಶಸ್ವಿ ಸಭೆಯು ಯಶಸ್ವಿ ಅಭಿವೃದ್ಧಿಯತ್ತ ದಾಪುಗಾಲು ಇಡಬೇಕು ಅಂದ್ರೆ ಇಲಾಖೆಯ ಅಧಿಕಾರಿಗಳ ಸಹಕಾರ ಮತ್ತು ಪ್ರಾಮಾಣಿಕತೆ ಅತ್ಯಂತ ಮಹತ್ವದ್ದಾಗಿರುತ್ತದೆ. ಹಾಗೆ ಆಗುವಂತೆ ನೋಡಿಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ. ಹಲವು ಇಲಾಖೆಗಳಲ್ಲಿಗೆ ಓಡಾಡುವುದನ್ನು ತಪ್ಪಿಸಿದಲ್ಲಿ, ಟೆಕ್ನಿಕಲ್ ಪ್ರಾಬ್ಲಂಗೆ, ಫೈಲ್ ಅನ್ನು ಪೆಂಡಿAಗ್ ಇಟ್ಟುಕೊಳ್ಳುವಂತಹ ಕೆಲಸಕ್ಕೆ ಇತಿಶ್ರೀ ಹಾಡುವ ಹಾಗೆ ನೋಡಿಕೊಳ್ಳುವುದರ ಜೊತೆಗೆ ಅದೆಲ್ಲವನ್ನು ಸಿಂಗಲ್ ವಿಂಡೋ ಮೂಲಕ ಜಾರಿಗೆ ತಂದರೆ ಖಂಡಿತವಾಗಿಯೂ ಕರಾವಳಿ ತೀರವು, ಗೋವಾ ಹಾಗೂ ಕೇರಳದ ಮಾದರಿಯಲ್ಲಿ ಪ್ರವಾಸೋದ್ಯಮದಲ್ಲಿ ದೊಡ್ಡ ಹೆಸರು ಮಾಡುತ್ತದೆ ರಾಜ್ಯಕ್ಕೆ ಆದಾಯವನ್ನು ತಂದುಕೊಳ್ಳಬಲ್ಲAತಹ ಪೋರ್ಟ್ ಆಗಿ ಮಾರ್ಪಾಡಾಗುತ್ತದೆ.

ಬಾಕ್ಸ್
ಸಿಎಂ ಮಂಗಳೂರಿಗೆ ಬಂದಿದ್ಯಾಕೆ? ಡಿಸಿಎಂಗೆ ಗೊತ್ತು ಬಿಡಿ
ಕಳೆದ ಶನಿವಾರ ಅಂದರೆ ಜನವರಿ ಹತ್ತರಂದು ಮಂಗಳೂರಿಗೆ ಸಿಎಂ ಮತ್ತು ಡಿಸಿಎಂ ಇಬ್ಬರ ಆಗಮನವೂ ಆಗುತ್ತದೆ. ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಒಂದು ಸಭೆಯನ್ನು ಡಿಸಿಎಂ ಸ್ವತಹ ಮುತುವರ್ಜಿ ವಹಿಸಿ ಮೂರು ಜಿಲ್ಲೆಯ ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತು ಆಯ್ದ ಗಣ್ಯರನ್ನು ಆಹ್ವಾನಿಸಿ ಸಭೆ ನಡೆಸಲು ತೀರ್ಮಾನಿಸಿ ಬಂದಿರುತ್ತಾರೆ. ಅದ್ಯಾಕೋ ಗೊತ್ತಿಲ್ಲ ಇದ್ದಕ್ಕಿದ್ದಂತೆಯೇ ಸಿಎಂ ಸಿದ್ದರಾಮಯ್ಯನವರು ನಾನು ಬರುತ್ತೇನೆ ಅಂತ ಅವರು ಸಹ ಬೇರೆ ನಿಗದಿತ ಕಾರ್ಯಕ್ರಮವನ್ನು ಬಿಟ್ಟು ಮಂಗಳೂರಿಗೆ ಹಾರಿ ಬರುತ್ತಾರೆ ಯಾಕೆ?
ಸಿಎಂ ಮತ್ತು ಡಿಸಿಎಂ ಮಧ್ಯ ಕುರ್ಚಿಗಾಗಿ ನಡೆಯುತ್ತಿರುವ ಲೆಕ್ಕಾಚಾರ ಪ್ರಯತ್ನ ತಂತ್ರಗಾರಿಕೆ ಎಲ್ಲವೂ ಈಗ ಜಗಜ್ಜಾಹಿರು. ಆದರೆ ಡಿಸಿಎಂ ಮಂಗಳೂರಿಗೆ ಬಂದರೆ ತಮ್ಮ ಕುರ್ಚಿಗೆ ಏನಾದರೂ ತೊಂದರೆಯಾಗೋಬಹುದೇ ಎಂಬ ಶಂಕೆಯಲ್ಲಿ ಬಂದ್ರಾ? ನೋ ಚಾನ್ಸ್ ಆ ಚಾನ್ಸ್ ಇಲ್ಲ. ಡಿಕೆ ಶಿವಕುಮಾರ್ ಕರಾವಳಿ ಭಾಗದಲ್ಲಿ ಒಂದಷ್ಟು ಆಸ್ತಿಯನ್ನು ಹೊಂದಿದ್ದಾರೆ ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಅವರು ಒಳ್ಳೆಯ ಲಾಭ ಮಾಡಿಕೊಳ್ಳುತ್ತಾರೆ. ತಾವು ಸಹ ತಮ್ಮ ಬೆಂಬಲಿಗರ ಮೂಲಕ ಅಲ್ಲಿ ಇನ್‌ವಾಲ್‌ಮೆಂಟ್ ತೋರಿಸಿದರೆ ಡಿಸಿಎಂ ಲಾಭಕ್ಕೆ ಕೊಕ್ಕೆ ಹಾಕಬಹುದು ಎಂಬ ಕಾರಣಕ್ಕೆ ಸಿಎಂ ಬೆಂಬಲಿಗರೇ ಅವರನ್ನು ಮಂಗಳೂರಿಗೆ ಕಳುಹಿಸಿದ್ದಾರೆಂಬ ಗುಸು-ಗುಸು ಪಕ್ಷದ ವಲಯದಲ್ಲಿದೆ. ಹಾಗೆಯೇ ಕರಾವಳಿಯ ಟೂರಿಸಂ ಡೆವಲಪ್ಮೆಂಟ್ ವಿಷಯ ಇಂದಲ್ಲ ನಾಳೆ ದೊಡ್ಡ ನೇಮ್ ಕೊಡುತ್ತದೆ. ಈ ಹಿಂದಿನ ಯಾವುದೇ ಸರ್ಕಾರವು ಈ ವಿಚಾರದಲ್ಲಿ ತಲೆಕೆಡಿಸಿಕೊಂಡಿಲ್ಲ ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಿಲ್ಲ. ಆದರೆ ಈಗ ಈ ವಿಚಾರವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತುಂಬಾ ಆಸಕ್ತಿಯಿಂದ ಕೆಲಸ ಮಾಡುತ್ತಿರುವುದರಿಂದ ಅದರ ಕ್ರೆಡಿಟ್ ಡಿಕೆ ಶಿವಕುಮಾರ್ಗೆ ಹೋಗುತ್ತದೆ. ಆ ಕ್ರೆಡಿಟ್ ಮುಖ್ಯಮಂತ್ರಿಗಳಿಗೆ ಬರಬೇಕು. ಯಾವುದೇ ಕಾರಣಕ್ಕೂ ಡಿಕೆಶಿಗೆ ಹೋಗಬಾರದು ಅನ್ನುವುದು ಒಂದು, ಮತ್ತೊಂದು ಡಿಕೆ ಶಿವಕುಮಾರ್ ತಮಗೆ ಬೇಕಾದವರಿಗೆ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕೈಜೋಡಿಸುವÀವರಿಗೆ ಆದ್ಯತೆ ನೀಡುತ್ತಾರೆ. ಅದರಿಂದ ದೊಡ್ಡ ಲಾಭ ಅವರಿಗೆ ಆಗುತ್ತದೆ ಅದನ್ನು ತಡೆಯಬೇಕು. ಆ ಲಾಭದಲ್ಲೂ ಪಾಲು ಪಡೆಯಬೇಕು, ಎಂಬ ಉದ್ದೇಶದೊಂದಿಗೆ ಸಿಎಂ ಬೆಂಬಲಿಗರು ಸಿದ್ದರಾಮಯ್ಯರನ್ನು ಮಂಗಳೂರಿಗೆ ಒತ್ತಾಯ ಪೂರಕವಾಗಿ ಕರೆಸಿದ್ದಾರೆ ಎನ್ನಲಾಗುತ್ತಿದೆ. ಮಂಗಳೂರಿನಲ್ಲಿ ಸಿಎಂಗೆ ಅಂತಹ ದೊಡ್ಡ ಕಾರ್ಯಕ್ರಮ ಇರಲಿಲ್ಲ. ಡಿಕೆ ಶಿವಕುಮಾರ್ ಹಾಗೆ ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಬಾಗಿಯೂ ಆಗಿಲ್ಲ. ಕೇವಲ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಅಷ್ಟೇ. ಆದರೆ ಸಿಎಂ ಸಾಹೇಬರು ಮಂಗಳೂರಿನಲ್ಲಿ ವಾಸ್ತವ್ಯ ಹೂಡುತ್ತಾರೆ ಮರುದಿನ ಡಿಕೆಶಿ ಜೊತೆಗೇನೆ ಬೆಂಗಳೂರಿಗೆ ವಾಪಾಸ್ ಆಗುತ್ತಾರೆ. ಹೀಗಂತ ವಿಪರೀತವಾದಂತಹ ಗುಸು-ಗುಸು ಇದೆ. ಆಟಲಿಸ್ಟ್ ಮುಖ್ಯಮಂತ್ರಿಗಳು ಈ ಸಮಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತರ ಅಥವಾ ಪ್ರತಿ ತಾಲೂಕಿನ ಬ್ಲಾಕ್ ಅಧ್ಯಕ್ಷರು, ಕಾರ್ಯದರ್ಶಿಗಳ ಜೊತೆಗೆ ಮೀಟಿಂಗ್ ಮಾಡಬಹುದಿತ್ತು. ಅವರಿಗೆ ಸಮಯವಿತ್ತು ಆದರೂ ಆ ಕೆಲಸ ಮಾಡಿಲ್ಲ ಅನ್ನುವ ವಿಚಾರ ಪಕ್ಷದ ವಲಯದಲ್ಲೇ ಚರ್ಚಿತವಾಗುತ್ತಿದೆ.