📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ

    ಕಳೆದ 37 ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅನವಶ್ಯಕವಾದಂತಹ ಆಕ್ರಮಣ ಹಾಗೂ ವಿದ್ವಂಸಕಾರಕ ಚಟುವಟಿಕೆಯ ವಿರುದ್ಧವಾಗಿ ವಿಶ್ವಸಂಸ್ಥೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲ, ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸುವಂತಹ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದ್ದ ವಿಶ್ವ ಸಂಸ್ಥೆ ಮೌನವಾಗಿ ಕುಳಿತಿದ್ದು ಆಶ್ಚರ್ಯಕರವಾಗಿತ್ತು. ಇದೆಲ್ಲವದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ನ್ಯಾಯ ಸಮ್ಮತವಲದಂತಹ ವಿಶ್ವ ಸಂಸ್ಥೆಯ ಅಗತ್ಯತೆ ಜಗತ್ತಿಗೆ ಇದಿಯಾ ಎಂಬ ಪ್ರಶ್ನೆ ಎದ್ದೇಳುತ್ತದೆ.

    ಆಂಟೋನಿಯೋ ಗುಟೆರಸ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುವಂತಹ ವ್ಯಕ್ತಿ. ಇವರ ಅವಧಿಯು ಇನ್ನೊಂದು ವರ್ಷದಲ್ಲಿ ಮುಗಿಯಲಿದೆ. ಅದಕ್ಕೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿಯ ರಚನೆಯು ಆಗುವುದಕ್ಕೆ ಇನ್ನೊಂದಿಷ್ಟು ಸಮಯ ಬಾಕಿ ಇದೆ ಅಷ್ಟೇ.

    ಅಮೇರಿಕಾದ ನ್ಯೂ ಯಾರ್ಕ್ ಸಿಟಿಯಲ್ಲಿ ವಿಶ್ವಸಂಸ್ಥೆಯು ಪ್ರಧಾನ ಕಚೇರಿಯನ್ನು ಹೊಂದಿದೆ. ಅಲ್ಲದೆ ಕೆಲವು ದೇಶಗಳಲ್ಲಿ ಒಂದಿಷ್ಟು ಶಾಖಾ ಕಚೇರಿಗಳನ್ನು ವಿಶ್ವಸಂಸ್ಥೆಯು ಹೊಂದಿದೆ ಕೂಡ. ವಿಶ್ವಸಂಸ್ಥೆಯು ಹಲವು ವಿಭಾಗಗಳಲ್ಲಿ ಅಂತರರಾಷ್ಟ್ರೀಯ  ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಹೆಚ್ಚಾಗಿ ಆರು ಕೌನ್ಸಿಲ್ ಗಳ ಮೂಲಕ ಕೆಲಸ ಮಾಡುತ್ತದೆ. ಹಾಗೆಯೇ ಒಂದಿಷ್ಟು ಉಪ ಸಂಸ್ಥೆ ಗಳು ಕೂಡ ಇವೆ.

    ಮುಖ್ಯವಾಗಿ ಜನರಲ್ ಅಸೆಂಬ್ಲಿ, ಸೆಕ್ಯೂರಿಟಿ ಕೌನ್ಸಿಲ್, ಆರ್ಥಿಕ  ಮತ್ತು ಸಾಮಾಜಿಕ ಕೌನ್ಸಿಲ್, ಟ್ರಸ್ಟಿ  ಶಿಪ್ ಕೌನ್ಸಿಲ್, ರಾಷ್ಟ್ರೀಯ ನ್ಯಾಯಾಲಯ ಮತ್ತು ಸಚಿವಾಲಯ ಹೀಗೆ ಆರು ವಿಭಾಗದಲ್ಲಿ ಕೆಲಸ ಮಾಡುತ್ತದೆ. ಒಟ್ಟು 193 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿರುವಂತಹ ವಿಶ್ವಸಂಸ್ಥೆಯು ಶಾಂತಿ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಭಾರತವು ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಂದಾಗಿದ್ದರು, ಭಾರತವನ್ನು ಖಾಯಂ ಸದಸ್ಯತ್ವದಿಂದ ಪ್ರಯತ್ನವನ್ನು ಹಲವು ರಾಷ್ಟ್ರಗಳು ಮಾಡುತ್ತಾ ಬಂದಿವೆ . ಅದರಲ್ಲಿ ಮುಖ್ಯವಾದದ್ದು ಚೀನಾ ಹಾಗೂ ಅಮೆರಿಕ. ಈ ಎರಡು ದೇಶವು ಭಾರತವನ್ನು ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವದ ಹತ್ತಿರಕ್ಕೂ ಹೋಗಲು ಬಿಡುತ್ತಿರಲಿಲ್ಲ. ರಷ್ಯಾ ಬೆಂಬಲ ಇದ್ದರೂ ಸಹ, ವಿಶ್ವಸಂಸ್ಥೆ ಹಾಗೂ ಅದರ ಇತರ ಸದಸ್ಯರ ಮೇಲಿರುವ ಅಮೆರಿಕಾದ ಪ್ರಭಾವವು ಭಾರತಕ್ಕೆ ಸಹಕಾರ ನೀಡುತ್ತಾ ಬಂದಿತ್ತು.

    Also Read  E20 ಪೆಟ್ರೋಲ್‌ನಿಂದ ಮರ್ಸಿಡಿಸ್ ಕಾರಿನ ಮೈಲೇಜ್ ಕುಸಿತವೇ? ವೈರಲ್ ವಿಡಿಯೋ ಬಳಿಕ ಕಂಪನಿಯ ಸ್ಪಷ್ಟನೆ; ನಿಜ ಏನು?

    ವಿಶ್ವಸಂಸ್ಥೆಯ ಮೇಲೆ ಅಮೆರಿಕವು ವಿಪರೀತವಾದಂತಹ ಪ್ರಭಾವವನ್ನು ಹೊಂದಿರುವಂತದ್ದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸುವ ಕೆಲಸವು ಯಾವತ್ತೂ ಆಗಬೇಕಿತ್ತು. ಆದರಿಗ ವಿಶ್ವಸಂಸ್ಥೆಯ ನಡೆಯನ್ನ ಪ್ರಶ್ನಿಸುವ ಸಮಯ ಬಂದಾಗಿದೆ.

    ಎಸ್ ಒಂದನೇ ಮಹಾಯುದ್ಧದ ನಂತರ 20ನೇ ಶತಮಾನದ ಆದಿಯಲ್ಲಿ  ಹಲವು ಯುದ್ಧಗಳು ಹಿಂಸೆಗಳಿಂದ ಜಗತ್ತು ತಲ್ಲಣಗೊಂಡಿತ್ತು. ಯುದ್ಧದ ಪರಿಣಾಮ ಮನುಕುಲ ಸಂಕಷ್ಟದಲ್ಲಿತ್ತು. ಇಂತಹ ಸಂದರ್ಭದಲ್ಲಿ ಒಂದು ಬಲಿಷ್ಠ ಸಂಸ್ಥೆಯ ಬೇಕು ಎಂಬ ನಿರ್ಧಾರಕ್ಕೆ ಬಂದಂತಹ ಪ್ರಮುಖ ದೇಶಗಳು ಸೇರಿಕೊಂಡು ಲೀಗ್ ಆಫ್ ನೇಶನ್ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. ಈ ಸಂಸ್ಥೆಯ ಕಾರ್ಯವೈಕರಿ ಜಗತ್ತಿನ ದೇಶಗಳಿಗೆ ಹಿಡಿಸಲಿಲ್ಲ. ಈ ಒಂದು ಸಂಸ್ಥೆಯಿಂದ ಜಪಾನ್ ಜಪಾನ್ ಇಟಲಿ ಸಹಿತ ಸಾಕಷ್ಟು ರಾಷ್ಟ್ರಗಳು ಹಿಂದೆ ಸರಿದಿದ್ದವು. 1936ರಲ್ಲಿ ಇಟಲಿಯ ಆಕ್ರಮಣವನ್ನು ಲೀಗ್ ಆಫ್ ನೇಶನ್ ನಿಭಾಯಿಸುವಲ್ಲಿ ವಿಫಲವಾಗಿರುವುದನ್ನು ಇಡೀ ಜಗತ್ತು ನೋಡಿದ ಕಾರಣ ಈ ಸಂಸ್ಥೆಯ ಬಗ್ಗೆ ಜಗತ್ತೇ ಆಸಕ್ತಿ ಕಳೆದುಕೊಂಡಿತು. ಅಲ್ಲಿಂದ ಅದರ ಪಥನವೂ ಪ್ರಾರಂಭವಾಯಿತು. ಜಗತ್ತಿನ ಬಲಿಷ್ಠ ರಾಷ್ಟ್ರಗಳು ಲೀಗ್ ಆಫ್ ನೇಷನ್ ಜೊತೆಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಬಿಡಿ, ಅದರಿಂದ ದೂರವೇ ಉಳಿದಿದ್ದವು. ಹಾಗಾಗಿ ಲೀಗ್ ಆಫ್ ನೇಶನ್ ತನ್ನ ಅಸ್ತಿತ್ವವನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಾ ಹೋಯಿತು.

    Also Read  ವಾಹನ ಸವಾರರಿಗೆ ಸರ್ಕಾರದ ಮತ್ತೆ 50% ಫೈನ್ ರಿಯಾಯಿತಿ!ಸಿಹಿ ಸುದ್ದಿ... ಆದರೆ ಜನ ಕೇಳುತ್ತಿರುವ ಕಹಿ ಪ್ರಶ್ನೆಗಳಿಗೂ ಉತ್ತರಿಸಿ… ಉಲ್ಲಂಘಿಸುವವರಿಗೆ ರಿಯಾಯಿತಿ…ಹಾಗೇ ನಿಯಮ ಪಾಲಿಸುವವರಿಗೆ ಬಹುಮಾನ ಉಂಟಾ…?!!!!

    ಎರಡನೇ ಮಹಾಯುದ್ಧದ ನಂತರ ಜಗತ್ತಿಗೆ ಅಂತರರಾಷ್ಟ್ರೀಯ ಭದ್ರತಾ ಮಂಡಳಿಯ ಅವಶ್ಯಕತೆ ಇದೆ ಅನ್ನೋದನ್ನ ಹೇಳಿತು. ಪರಿಣಾಮ 1941 ರಿಂದಲೇ ಅಂತರಾಷ್ಟ್ರೀಯ ಸಂಸ್ಥೆಯ ಉಪರೇಷೆ ಬಗ್ಗೆ  ಪೂರ್ವಪರ ಚರ್ಚೆಗಳು ಪ್ರಾರಂಭವಾದವು. 1945 ರಲ್ಲಿ  ಅಧಿಕೃತವಾಗಿ ವಿಶ್ವಸಂಸ್ಥೆಯು ಜನ್ಮ ತಾಳಿತು.  ಹೀಗೆ ಜನ್ಮ ತಾಳಿದ ವಿಶ್ವಸಂಸ್ಥೆಯ ಮೇಲೆ ಆರಂಭದಿಂದಲೂ ಬ್ರಿಟನ್ ಹಾಗೂ ಅಮೆರಿಕಾದ ಪ್ರಭಾವ ಹೆಚ್ಚಾಗಿತ್ತು. ಸದ ನಂತರ ಬ್ರಿಟನ್ ಪ್ರಭಾವ ಕಡಿಮೆಯಾದರು ಅಮೇರಿಕಾದ ಪ್ರಭಾವ ಬಿಗೂ ಗೊಳ್ಳುತ್ತಲೇ ಹೋಯಿತು. ವಿಶ್ವಸಂಸ್ಥೆಯು ಒಂದು ಸ್ವಾಯತ್ತ ಸಂಸ್ಥೆಯಾಗಿ ಕಾಣಿಸಿಕೊಳ್ಳುವಲ್ಲಿ ವಿಫಲವಾಗಿದ್ದಂತು ಸತ್ಯವೇ. ಸಂದರ್ಭಗಳಲ್ಲಿ ಅಮೆರಿಕವು ಹಲವು ದೇಶಗಳ ಮೇಲೆ ಆಕ್ರಮಣ ಮಾಡಿದಾಗಲೂ ಅಲ್ಲಿ ಅಂತರರಾಷ್ಟ್ರೀಯ ಕಾನೂನಿನ ವಿರುದ್ಧವಾಗಿ ನಡೆದುಕೊಂಡಾಗಲು ವಿಶ್ವಸಂಸ್ಥೆಯಿಂದ ಯಾವುದೇ ಟೀಕೆ ಬಾರದೇ ಇರುವುದು ವಿಶ್ವಸಂಸ್ಥೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

    ಈ ಹಿಂದೆ ಇರಾಕ್ ಮೇಲಿನ ದಾಳಿಯ ವಿಚಾರವಿರಲಿ, ವೆನಿಜುಗಳಾದ ಅಧ್ಯಕ್ಷರನ್ನ ಹೊತ್ತುಕೊಂಡು ಬಂದ ವಿಚಾರವಿರಲಿ, ಪ್ಯಾಲಿಸ್ಟೇನ್ ಹಾಗೂ ಲೆಬನಾನ್ ಮೇಲೆ ನಡೆಯುತ್ತಿರುವ ಕ್ರೌರ್ಯದ ದಾಳಿಯ ವಿಚಾರವಾಗಿರಲಿ ಇತ್ತೀಚೆಗೆ ನಡೆದ ಇರಾನ್ ಮೇಲಿನ ದಾಳಿಯ ವಿಚಾರದಲ್ಲಿರಲಿ ವಿಶ್ವಸಂಸ್ಥೆಯು ಎಲ್ಲೂ ಮಾತನಾಡಲಿಲ್ಲ. ಕಾರಣ ಇಷ್ಟೇ ಒಂದು ಕಡೆ ಅಮೆರಿಕ ಗಟ್ಟಿಯಾಗಿ ನಿಂತಿರುವ ಕಾರಣ ಅದರ ವಿರುದ್ಧ ಹೆಜ್ಜೆ ಇಡಲು ವಿಶ್ವಸಂಸ್ಥೆಯು ಭಯಪಡುತ್ತಿರುವುದೇ ಇದಕ್ಕೆ ಕಾರಣ. ವತಹ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಅಂತರರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ಅತ್ಯಂತ ಕಟುವಾದ ರೀತಿಯಲ್ಲಿ ಮತ್ತು ಅಸಹ್ಯಕರವಾಗಿ ಬೈದಾಡಿರುವುದನ್ನು ಕಾಣುತ್ತೇವೆ. ಈ ಹಿಂದೆ ಡಬ್ಲ್ಯೂ ಎಚ್ ಓ ವಿರುದ್ಧವು ಹರಿಹಾಯ್ದಿದ್ದ ಈ ಡೊನಾಲ್ಡ್ ಟ್ರಂಪ್. ಒಟ್ಟಿನಲ್ಲಿ ವಿಶ್ವಸಂಸ್ಥೆಯು ಜಗತ್ತಿಗೆ ನ್ಯಾಯ ಸಮ್ಮತವಾಗಿಲ್ಲ ಅನ್ನುವುದನ್ನು ಈ ಮೂಲಕ ಬಹುತೇಕವಾಗಿ ತೋರ್ಪಡಿಸಿದೆ. 

    Also Read  ಸೂರತ್‌ನಲ್ಲಿ ಮಳೆಯ ರೌದ್ರನರ್ತನ: 200ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿ ₹200 ಕೋಟಿ ನಷ್ಟ – ಕಣ್ಣೀರಿನಲ್ಲಿ ಮುಳುಗಿದ ವ್ಯಾಪಾರಿಗಳು

    ಜಗತ್ತಿಗೆ ಒಂದು ಬಲಿಷ್ಠ ವಾದಂತಹ ಹಾಗೂ ಅಷ್ಟೇ ನ್ಯಾಯೋಚಿತ ನಿಬಂಧನೆಗೆ ಒಳಪಟ್ಟಂತಹ ಸಂಸ್ಥೆಯ ಅಗತ್ಯತೆ ಖಂಡಿತವಾಗಿಯೂ ಇದೆ. ಕತ್ತಿನ ಎಲ್ಲಾ ದೇಶಗಳನ್ನು ಒಳಗೊಂಡಂತಹ ಸಂಸ್ಥೆಯು ಅದಾಗಿರಬೇಕು. ಅಂತರರಾಷ್ಟ್ರೀಯ ಮಟ್ಟದ ವ್ಯಾಜ್ಯಗಳನ್ನು ನಿಭಾಯಿಸುವಂತಹ ನ್ಯಾಯಾಂಗ ವ್ಯವಸ್ಥೆಯನ್ನು ಇದೇ ಸಂಸ್ಥೆಯ ಆಡಳಿತದಲ್ಲಿ ಇರಬೇಕು. ಯಾವುದೇ ಸದಸ್ಯ ರಾಷ್ಟ್ರದ ಮೇಲೆ ಯಾವುದೇ ಶಕ್ತಿಯ ಏಕಾಏಕಿ ದಾಳಿಯ ವಿರುದ್ಧ ಅಂತರಾಷ್ಟ್ರೀಯ ನಿಯಮಗಳ ವಿರುದ್ಧವಾಗಿ ನಡೆಯುವಂತಹ ದಾಳಿಗೆ ಪ್ರತ್ಯುತ್ತರ ನೀಡುವಂತಹ ಶಕ್ತಿಯನ್ನು ಆ ಒಂದು ಸಂಸ್ಥೆಯು ಹೊಂದಿರಬೇಕು. ಶಕ್ತಿಯನ್ನು ಜಗತ್ತಿನ ಎಲ್ಲಾ ರಾಷ್ಟ್ರವೂ ಆ ಸಂಸ್ಥೆಗೆ ನೀಡುವಂತಹ ಕೆಲಸ ಮಾಡಬೇಕು. ಯಾವ ದೇಶವನ್ನು ಮೇಲು-ಕೀಳು ಅಂತ ನೋಡದೆ ಜಗತ್ತಿನ ಮುಂದೆ ಎಲ್ಲರನ್ನೂ ಸರಿಸಮಾನವಾಗಿ ನೋಡುವಂತಹ ಶಕ್ತಿಯುತ ಸಂಸ್ಥೆ ಅತ್ಯವಶ್ಯಕವಾಗಿ ಬೇಕೇ ಬೇಕು. ನ್ಯಾಯೋಚಿತ ಸಂಸ್ಥೆ ಏನಾದರೂ ಈಗ ಇದ್ದಿದ್ದರೆ ಖಂಡಿತವಾಗಿಯೂ ಅಮೆರಿಕ ಹಾಗೂ ಇಸ್ರೇಲ್ ಎರಡು ದೇಶವು ಅಂತರರಾಷ್ಟ್ರೀಯ ಕಾನೂನಿನ ಮುಂದೆ ತಪ್ಪಿತಸ್ಥರಾಗಿ ನಿಲ್ಲುತ್ತಿದ್ದರು ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಏಕಾದಂತಹ ದೇಶಗಳು ತಮಗೆ ಬೇಕಾದ ಹಾಗೆ ನಡೆದುಕೊಳ್ಳುವುದನ್ನು, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು, ಇನ್ನೊಂದು ರಾಷ್ಟ್ರದ ಸಂಪತ್ತನ್ನು ನಾಶ ಮಾಡಲು ಅಥವಾ ಕಬಳಿಸಲು ಪ್ರಯತ್ನಿಸುವ  ವ್ಯಕ್ತಿಗಳ ಮೇಲೆ ಅಥವಾ ರಾಷ್ಟ್ರಗಳ ಮೇಲೆ ಪ್ರಹಾರ ಮಾಡುವಂತಹ ಗಟ್ಟಿಗ ಸಂಸ್ಥೆಯ ಅವಶ್ಯಕತೆ ಇದೆ. ಆ ಸಂಸ್ಥೆಯನ್ನು ನಮ್ಮದೇ ದೇಶದ ನೇತೃತ್ವದಲ್ಲಿ ಪ್ರಾರಂಭವಾಗಲಿ  ಏನಂತೀರಿ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
    ಮಿಜಾರಿನಲ್ಲಿ ರಸ್ತೆ ಕುಸಿತ, ಸಾರ್ವಜನಿಕರಲ್ಲಿ ಆತಂಕ ಮೊದಲ ಮಳೆಯಲ್ಲೇ ಕೊಚ್ಚಿಹೋಯ್ತು ಹೆದ್ದಾರಿ! ಕೋಟಿ ಕೋಟಿ ಕಾಮಗಾರಿಯ ಅಸಲಿ ಮುಖ ಬಯಲು? 
    ಪ್ರಚೋದನಾಕಾರಿ ಭಾಷಣ ಪ್ರಕರಣ: ರಿಯಾಝ್ ಫರಂಗಿಪೇಟೆಗೆ 6 ತಿಂಗಳ ಜೈಲು ಶಿಕ್ಷೆ, ₹10 ಸಾವಿರ ದಂಡ
    ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ತಿಮರೋಡಿ ಸೇರಿ ನಾಲ್ವರಿಗೆ ಕೇಸ್…
    “ರಾಜಕಾರಣಿಗಳ ಮಕ್ಕಳೂ ಸರ್ಕಾರಿ ಶಾಲೆಗೆ! ಇಸ್ರೋ ವಿಜ್ಞಾನಿಗೆ ಶಿಕ್ಷಣದ ಚುಕ್ಕಾಣಿ, ಸಿಎಂ ವಿಜಯ್‌ನ ಹೊಸ ಹೆಜ್ಜೆ ದೇಶದ ಗಮನ ಸೆಳೆದಿದೆ
    ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
    🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!
    ಹೈಕೋರ್ಟ್‌ನ ಅಪರೂಪದ ಆದೇಶ..ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ವಕೀಲನಿಗೆ ಸಿಕ್ಕ ಶಿಕ್ಷೆ ಏನ್ ಗೊತ್ತಾ…?!!!
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್!
    ಐಫೋನ್ ಅಲ್ಲ… ಕಾರು ಅಲ್ಲ… 9 ವರ್ಷ ಉಳಿಸಿ ಜಮೀನು ಖರೀದಿಸಿದ ದೀಕ್ಷಾ!
    ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
    ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
    ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಾತ್ರ (ಅ)ವ್ಯವಸ್ಥೆ ಎಚ್ಚರಗೊಳ್ಳಬೇಕೇ? ಯಾರು ಹೊಣೆ? ಏನು ಕ್ರಮ?
    ಆಂಬ್ಯುಲೆನ್ಸ್‌ನಲ್ಲೇ ನಡೆದ ಭೀಕರ ಘಟನೆ… ನಂಬಲು ಕಷ್ಟ, ಆದರೆ ಸತ್ಯ!
    “ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
    “ಡಾಲರ್ ಐಡಿ” ಹೆಸರಿನಲ್ಲಿ ಶೇರ್ ಮಾರ್ಕೆಟಿಂಗ್ ವಂಚನೆ – 30.90 ಲಕ್ಷ ರೂ. ವಂಚನೆ- ನಾಲ್ವರ ಮೇಲೆ ಪ್ರಕರಣ ದಾಖಲು
    ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    UPಯಲ್ಲಿ ಮಳೆಯ ರುದ್ರಾವತಾರ: 81 ಸಾವು, 2,254 ಮನೆಗಳು ಜಲಾವೃತ!
    ನಿಶ್ಶಬ್ದ ಕೊಠಡಿ ಹೇಳುವ ನಿಗೂಢ ರಹಸ್ಯ …!ಮನೆಯ ಗೋಡೆಗಳ ಮೇಲೆ ಬರಹ,ಕಾಗದಗಳು ನೂರಾರು…! ಅಸಹಜ ಮರಣದ ಹಿಂದೆ ಅಡಗಿರುವ ಸತ್ಯ ಇನ್ನೂ ಅನಾವರಣವಾಗಿಲ್ಲ…”
    “ವಾಟ್ಸಾಪ್ university ” (ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು/ಅಪೂರ್ಣ ಮಾಹಿತಿ)ಕುರಿತು ಸುಪ್ರೀಂ ಕೋರ್ಟ್ ಖಡಕ್ ನಿಲುವು…!
    ಪ್ರಧಾನಿ ಮೋದಿ ನೆದರ್ಲ್ಯಾಂಡ್ ಭೇಟಿ ಭಾರತ ಸಹಕಾರದ ಸೇತುವೆ ಕಟ್ಟುವ ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ…
    2029ರೊಳಗೆ 21 ಎನ್‌ಡಿಎ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ
    35 ವಾರಂಟ್ ಇದ್ದ ಆರೋಪಿಯು ವಿದೇಶದಿಂದ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
    ಕರ್ನಾಟಕ ಬಂದ್ LIVE: ಪ್ರತಿಭಟನಾಕಾರರು ವಶಕ್ಕೆ, ರಾಜ್ಯಾದ್ಯಂತ ಬಿಗಿ ಭದ್ರತೆ; ಶಾಲೆ, ಬ್ಯಾಂಕ್, ಬಸ್ ಸೇವೆ ಎಂದಿನಂತೆ….!
    AI ವಿಶ್ವವಿದ್ಯಾಲಯಕ್ಕೂ ಮೊದಲು AI ಪರಿಣಾಮಗಳ ಅಧ್ಯಯನ ಅಗತ್ಯವೇ?