📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು


    ಫೆಬ್ರವರಿ 28, 2026 ರಂದು ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿದ್ದು, ಇದನ್ನು Operation Epic Fury (ಅಮೆರಿಕಾ) ಮತ್ತು Roaring Lion (ಇಸ್ರೇಲ್) ಎಂದು ಕರೆಯಲಾಗಿದೆ. ಇದರ ಉದ್ದೇಶ ಇರಾನ್‌ನ ನ್ಯೂಕ್ಲಿಯರ್ ಪವರ್ ನಾಶಗೊಳಿಸುವುದು, ಬ್ಯಾಲಿಸ್ಟಿಕ್ ಮಿಸೈಲ್ ಸಾಮರ್ಥ್ಯವನ್ನು ಕಡಿಮೆ ಮಾಡುವುದು ಮತ್ತು ರೆಜಿಮ್ ಚೇಂಜ್ ಅಂದ್ರೆ ಆಡಳಿತ ಬದಲಾವಣೆ ತರುವುದು ,ಹೀಗಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು ಘೋಷಿಸಿದ್ದಾರೆ.

    ಈ ಮದ್ಯೆ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಾಮೆನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ಮತ್ತು ಟ್ರಂಪ್ ದೃಢಪಡಿಸಿದ್ದಾರೆ. ದಾಳಿಯಲ್ಲಿ ಇರಾನ್‌ನ 40ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
    ಇಸ್ರೇಲ್ 200ಕ್ಕೂ ಹೆಚ್ಚು ವಿಮಾನಗಳೊಂದಿಗೆ 500 ಗುರಿಗಳ ಮೇಲೆ ದಾಳಿ ನಡೆಸಿದೆ. ಇರಾನ್ ಪ್ರತಿಕ್ರಿಯೆಯಾಗಿ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿರುವ ಅಮೆರಿಕಾ ಸೈನಿಕ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಮಿಸೈಲ್ ಮತ್ತು ಡ್ರೋನ್ ದಾಳಿ ನಡೆಸಿದೆ.

    ಯುದ್ಧದ ಸಾವುನೋವುಗಳು
    ಇರಾನ್lಲ್ಲಿ : ಸರ್ಕಾರಿ ವರದಿಗಳ ಪ್ರಕಾರ 200ಕ್ಕೂ ಹೆಚ್ಚು ಸಾವುಗಳು ಕೆಲವು ವರದಿಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಒಂದು ಶಾಲೆಯ ಮೇಲಿನ ದಾಳಿಯಲ್ಲಿ ಸತ್ತಿದ್ದಾರೆ. ಹಲವು ನಾಗರಿಕರು ಮತ್ತು ಸೈನಿಕರು ಸೇರಿದ್ದಾರೆ.

    Also Read  ಮತದಾನದ ಹಕ್ಕು ಉಳಿಸಿಕೊಳ್ಳಿ: ಎಸ್‌ಐಆರ್ ಗಡುವು ಆಗಸ್ಟ್.17ರವರೆಗೆ ವಿಸ್ತರಣೆ
    • ಇಸ್ರೇಲ್: ಇರಾನ್ ಪ್ರತಿದಾಳಿಯಲ್ಲಿ 1 ಮಹಿಳೆ ಸತ್ತಿದ್ದಾರೆ, 121 ಗಾಯಾಳುಗಳು.
    • ಅಮೆರಿಕಾ: ಯಾವುದೇ ಅಮೆರಿಕನ್ ಸೈನಿಕ ಸಾವುಗಳು ವರದಿಯಾಗಿಲ್ಲ .
    • ಇನ್ನೂ UAEಯಲ್ಲಿ 1 ಸಾವು, ಗಲ್ಫ್ ದೇಶಗಳಲ್ಲಿ ಕೆಲವು ಗಾಯಗಳು.

    ಇರಾನ್ ಮುಖ್ಯವಾಗಿ ತನ್ನ ಪ್ರಾಕ್ಸಿ ಗುಂಪುಗಳೊಂದಿಗೆ (Axis of Resistance) ಹೋರಾಡುತ್ತಿದೆ:
    -ಯೆಮೆನ್ ನ ಹೌತಿಗಳು – ರೆಡ್ ಸೀ ದಾಳಿಗಳನ್ನು ಮತ್ತೆ ಆರಂಭಿಸಿದ್ದಾರೆ.
    ಲೆಬನಾನ್ ನ ಹಿಜ್ಬೊಲ್ಲಾ ,
    ಗಾಜಾ ದ ಹಮಾಸ್
    ಇರಾಕ್ ನ ಪಾಪ್ಯುಲರ್ ಫೋರ್ಸ್ ಮುಂತಾದವು.

    • ಈ ನಡುವೇ ರಷ್ಯಾ ಮತ್ತು ಚೀನಾ ಆಯುಧ/ರಾಜಕೀಯವಾಗಿ ಸೀಮಿತ ಬೆಂಬಲ ಸೂಚಿಸಿದೆ .ಯಾವುದೇ ಪ್ರಮುಖ ಸ್ವತಂತ್ರ ದೇಶ ಸೈನಿಕವಾಗಿ ನೇರವಾಗಿ ಇರಾನ್ ಗೆ ಬೆಂಬಲ ಸೂಚಿಸಿಲ್ಲ. ಆದರೆ ಪ್ರಮುಖವಾಗಿ ಅಮೆರಿಕ ಇಸ್ರೇಲ್ ಗೆ ರಕ್ಷಣಾತ್ಮಕ ಬೆಂಬಲವಾಗಿ ಸೌದಿ ಅರೇಬಿಯಾ, UAE, ಬಹ್ರೈನ್, ಕುವೈತ್, ಕತಾರ್, ಜೋರ್ಡಾನ್ – ಇರಾನ್ ದಾಳಿಗಳನ್ನು ಖಂಡಿಸಿ, ಅಮೆರಿಕಾ ನೆಲೆಗಳನ್ನು ರಕ್ಷಿಸಲು ಸಹಾಯ ಮಾಡುತ್ತಿವೆ.
    • ಯುನೈಟೆಡ್ ಕಿಂಗ್‌ಡಮ್ – ಫೈಟರ್ ಜೆಟ್‌ಗಳಂತಹ ಸೀಮಿತ ಬೆಂಬಲ .
      ಇತರ ಪಶ್ಚಿಮ ದೇಶಗಳು ಸೈನಿಕ ಬೆಂಬಲ ನೀಡಿಲ್ಲ.
    Also Read  ಚುನಾವಣೆಯವರೆಗೆ ಮೌನ, ನಂತರ LPG ದರ ಭಾರಿ ಏರಿಕೆ –ಇದು ರಾಜಕೀಯ ಅಜೆಂಡಾನಾ?

    ಜಾಗತಿಕ ಪರಿಣಾಮಗಳು ಏನು?
    ಇರಾನ್‌ನ ನ್ಯೂಕ್ಲಿಯರ್ ಮತ್ತು ಮಿಸೈಲ್ ಪರಮಾಣು ಭಯವನ್ನು ಕಡಿಮೆ ಮಾಡಬಹುದು, ಇಸ್ರೇಲ್ ಮತ್ತು ಗಲ್ಫ್ ದೇಶಗಳ ಸುರಕ್ಷತೆ ಹೆಚ್ಚಿಸಬಹುದು.

    • ಇರಾನ್ ರೆಜಿಮ್ ಬದಲಾವಣೆಯಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ವಾಣಿಜ್ಯ ಅವಕಾಶಗಳು ಹೆಚ್ಚಾಗಬಹುದು.
    • ಇರಾನ್ ಪ್ರಾಕ್ಸಿ ಗುಂಪುಗಳ ದಾಳಿಗಳು ಕಡಿಮೆಯಾಗಬಹುದು.

    ನಷ್ಟಗಳು ಅಥವಾ ವ್ಯತಿರಿಕ್ತ ಪರಿಣಾಮಗಳು
    ಯುದ್ದಕ್ಕೆ ಪ್ರತೀಕಾರವಾಗಿ ತನ್ನ ಏಕೈಕ ಜಲಸಂಧಿ ಸ್ಟ್ರೇಟ್ ಆಫ್ ಹಾರ್ಮುಜ್ ಬಂದ್ ಮಾಡಿದೆ.ಇದರಿಂದ ಯಾವುದೇ ತೈಲ ಹಡಗುಗಳು ಗಲ್ಫ್ ರಾಷ್ಟ್ರಗಳ ಪ್ರಮುಖ ಕೊಂಡಿ ಕಳಚಿರುವುದರಿಂದ ಕಚ್ಚಾತೈಲ ಏರುಪೇರಾಗಲಿದೆ.

    • ಇದರಿಂದ ತೈಲ ಬೆಲೆಗಳ ಏರಿಕೆಯಾಗಿ (ಸ್ಟ್ರೇಟ್ ಆಫ್ ಹಾರ್ಮುಜ್ ಅಡಚಣೆಯಿಂದ), ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಬಹುದು
    • ಲೆಬನಾನ್, ಇರಾಕ್, ಯೆಮೆನ್ ಸೇರಿದಂತೆ ಪ್ರಾದೇಶಿಕ ಯುದ್ಧ ವಿಸ್ತರಣೆಯ ಅಪಾಯ
    • ನಾಗರಿಕ ಸಾವುನೋವುಗಳು ಜಾಸ್ತಿ ಯಾಗಿ ಮಾನವೀಯ ಸಂಕಷ್ಟಗಳು ಎದುರಾಗ್ಬಹುದು.
    • ರಷ್ಯಾ/ಚೀನಾ ಜೊತೆ ಉದ್ವಿಗ್ನತೆ ಹೆಚ್ಚಾಗಬಹುದಾ!

    ಯುದ್ಧ ಇನ್ನೂ ಆರಂಭಿಕ ಹಂತದಲ್ಲಿದ್ದು, UN ಸಭೆಗಳು ಮತ್ತು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ. ಸ್ಥಿತಿ ಬದಲಾಗಬಹುದು.

    ದಾಳಿ ಮತ್ತು ತೈಲ ಬೆಲೆ ಏರಿಕೆಯಿಂದ ಸಂಭಾವ್ಯ ಪರಿಣಾಮ
    ಭಾರತ 80-85% ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ, ಮತ್ತು ಸುಮಾರು 45-50% ಸ್ಟ್ರೇಟ್ ಆಫ್ ಹಾರ್ಮುಜ್ ಜಲಸಂಧಿ ಮೂಲಕ ಬರುತ್ತದೆ (ಮಧ್ಯಪ್ರಾಚ್ಯದಿಂದ). ಇರಾನ್ ಪ್ರತಿದಾಳಿ ಅಥವಾ ಸ್ಟ್ರೇಟ್ ಅಡಚಣೆಯಿಂದ ತೈಲ ಬೆಲೆಗಳು ಏರುತ್ತವೆ, ಇದು ಭಾರತದ ಆರ್ಥಿಕ ಬೆಳವಣಿಗೆಗೆ ಹೊಡೆತ. ಸ್ಟ್ರೇಟ್ ಆಫ್ ಹಾರ್ಮುಜ್ ಸ್ಥಿತಿ ನಿರ್ಣಾಯಕ; ಅಡಚಣೆಯಾದರೆ ದೊಡ್ಡ ಆಘಾತ. ಸ್ಥಿತಿಯನ್ನು ಗಮನಿಸಿ ,RBI ಮತ್ತು ಸರ್ಕಾರದ ನಿರ್ಧಾರಗಳು

    Also Read  Cocktail 2 ಸುತ್ತ ರಶ್ಮಿಕಾ ಮಂದಣ್ಣ ಕ್ರಿಯೇಟ್ ಮಾಡಿದ ಹೈಪ್ ಎಷ್ಟು ಗೊತ್ತಾ?ಅನ್ಟೋಲ್ಡ್ ಮಸಾಲೆ ಸ್ಟೋರಿಗಳು ಇಲ್ಲಿವೆ!

    ಪರಿಣಾಮಗಳು ಅಂದ್ರೆ ಇದರಿಂದ ಪೆಟ್ರೋಲ್/ಡೀಸಲ್ ಬೆಲೆಗಳು ₹3-5 ಏರಬಹುದು, ಸಾಗಣೆ, ಉತ್ಪಾದನೆ ವೆಚ್ಚಗಳು ಹೆಚ್ಚಾಗಬಹುದು. ಗ್ಲೋಬಲ್ ಇನ್ಫ್ಲೇಷನ್ ಆದರೆ ಭಾರತದಂತಹ ಆಮದುದಾರ ದೇಶಕ್ಕೆ ಹೆಚ್ಚು ತೊಂದರೆ.

    • ಇದು ಆಹಾರ, ಸಾಗಣೆ, ಉತ್ಪನ್ನಗಳ ಬೆಲೆಗಳನ್ನು ಏರಿಸಿ, ಆರ್ಥಿಕತೆಯನ್ನು ಮಂದಗೊಳಿಸಬಹುದು.
    • RBI ಬಡ್ಡಿ ದರಗಳನ್ನು ಕಡಿಮೆ ಮಾಡುವುದನ್ನು ನಿಲ್ಲಿಸಬಹುದು ಅಥವಾ ಹೆಚ್ಚಿಸಬಹುದು, ಇದು ಬೆಳವಣಿಗೆಗೆ ಹೊಡೆತ.
      ತೈಲ ಆಮದು ವೆಚ್ಚ ಹೆಚ್ಚಾಗಿ ಕರೆಂಟ್ ಅಕೌಂಟ್ ಡೆಫಿಸಿಟ್ ವಿಸ್ತರಣೆ, ರೂಪಾಯಿ ದುರ್ಬಲಗೊಳ್ಳುವುದು .ಇಂಧನ ಸಬ್ಸಿಡಿ ಹೆಚ್ಚಿಸಬಹುದು. ಏವಿಯೇಷನ್, ಟ್ರಾನ್ಸ್‌ಪೋರ್ಟ್, ಮ್ಯಾನುಫ್ಯಾಕ್ಚರಿಂಗ್ ವೆಚ್ಚಗಳು ಏರುತ್ತವೆ ಇದರಿಂದ ಉತ್ಪನ್ನ ಬೆಲೆಗಳು ಹೆಚ್ಚು.
    • ಸದ್ಯಕ್ಕೆ ಎಲ್ಲವೂ ಸ್ಥಿರವಾಗಿದೆ ಏಕೆಂದರೆ ಮಾರುಕಟ್ಟೆಗಳು ವೀಕೆಂಡ್‌ನಲ್ಲಿ ಮುಚ್ಚಿವೆ. ಸೋಮವಾರ (ಮಾರ್ಚ್ 2) ತೈಲ ಬೆಲೆ ಏರಿಕೆಯ ನಂತರ ನಿಜವಾದ ಪರಿಣಾಮ ಕಾಣಿಸಿಕೊಳ್ಳುತ್ತದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!
    ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡ ಭಾರತ… ನಿಶ್ಯಕ್ತವಾದ ವಿರೋಧ ಪಕ್ಷಗಳು
    ಜಿಲ್ಲಾ ಸರ್ಜನ್ ಡಾ. ಅಶೋಕ್ರನ್ನು ತಕ್ಷಣವೇ ಅಮಾನತು ಮಾಡಿ- ದ.ಸಂ.ಸ. ಆಗ್ರಹ
    ದಾವೂದ್ ಇಬ್ರಾಹಿಂನ ಆಪ್ತ. ಸಲೀಂ ಡೋಲಾ ಬಂದನ ವಿದೇಶದಲ್ಲಿ ಅಡಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ
    ಜೈನ ಮುನಿ… ಇರಾನ್‌ನ ಇಸ್ಲಾಮಿಕ್ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆಯಲ್ಲಿ?
    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
    ಐಸ್‌ಕ್ರೀಂ ಲೋಕಕ್ಕೆ ಅಂಬಾನಿ ಎಂಟ್ರಿ…“ಕೋಲ್ಡ್ ವಾರ್”. ದಿಗ್ಗಜರ ಟೆನ್ಷನ್!₹10ಕ್ಕೆ ಅಂಬಾನಿ ಐಸ್‌ಕ್ರೀಂ…‘ಬಾಂಬೆ ಕ್ರೀಮರಿ’ ಧಮಾಕಾ!
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
    “ಡಾಲರ್ ಐಡಿ” ಹೆಸರಿನಲ್ಲಿ ಶೇರ್ ಮಾರ್ಕೆಟಿಂಗ್ ವಂಚನೆ – 30.90 ಲಕ್ಷ ರೂ. ವಂಚನೆ- ನಾಲ್ವರ ಮೇಲೆ ಪ್ರಕರಣ ದಾಖಲು
    ಪಂಜಾಬ್‌ನಲ್ಲಿ ಮಹಿಳೆಗೆ ಒಂದೇ ಹೆರಿಗೆಗೆ ಆರು ಮಕ್ಕಳು….!!ನಿಜವೇನು?
    ಶಂಕರಾಚಾರ್ಯರ ನಿಂದನಾ ವಿಡಿಯೋ: ಉಡುಪಿ ಶಿರೂರು ಮಠದಿಂದ ವಿಷಾದ, ಬಾಲಕಿಯಿಂದ ಕ್ಷಮಾಪಣೆ
    ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
    ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
    “ಬೆಡ್‌ರೂಮ್ ರಾಜಕೀಯ”ಪಪ್ಪು ಯಾದವ್ ಹೇಳಿಕೆ ಸ್ಫೋಟಕ ಚರ್ಚೆ…!ಪಪ್ಪು ತಪ್ಪಾಗ್ ಮಾತಾಡಿದ್ದು ತಪ್ಪು 
    ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
    ಬಿಡದಿ “ಸಮಗ್ರ ಉಪನಗರ” ಯೋಜನೆ ಕೈಬಿಡಿ: ಸಿಎಂ ಡಿಕೆ ಶಿಗೆ ಎಚ್.ಡಿ. ದೇವೇಗೌಡ ಪತ್ರ
    ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
    ‘ಪೊಲೀಸರಿಗೆ ದೂರು ಕೊಡ್ತೀಯಾ?’… ಗಾಂಜಾ ವ್ಯಸನಕ್ಕೆ ಸೈಜು ಕಲ್ಲಿನಿಂದ ಅಜ್ಜಿಯ ತಲೆ ಪುಡಿ ಮಾಡಿದ ಮೊಮ್ಮಗ!ಅಜ್ಜಿಯೇ ಬಲಿ!
    ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
    3-ಭಾಷಾ ನೀತಿಗೆ ಬ್ರೇಕ್? CBSEಗೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ
    ಲಾರ್ಡ್ಸ್‌ನಲ್ಲಿ ಭಾರತ ಮಹಿಳಾ ತಂಡದ ಐತಿಹಾಸಿಕ ಟೆಸ್ಟ್ ಜಯ; ದೇಶದಲ್ಲಿ ಕ್ರಿಕೆಟ್‌ನಿಂದ ಟೆನಿಸ್‌ವರೆಗೆ… ಕ್ರೀಡೆಗಳತ್ತ ಹೆಚ್ಚುತ್ತಿರುವ ಆಸಕ್ತಿ..!
    ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
    ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
    ಮಂಗಳೂರು, ಮೈಸೂರಿಗೂ ‘Amazon Now’ 2,800 ಕೋಟಿ ಹೂಡಿಕೆ-
    ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
    ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ