📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?

    ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ನಡೆದ ಈ ಘಟನೆ, ಅವರವರ ಭಾವಕ್ಕೆ ಅವರವರ ಭಕುತಿಗೆ…ಕುಂದಾಪುರದ ಹೆನ್ನಾಬೈಲು ಪ್ರದೇಶದಲ್ಲಿ ನಡೆದ ಪ್ರಸಂಗ, ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಅವರು ಭಾಗವತಿಕೆ ವೇಳೆ ಪ್ರೇಕ್ಷಕರೊಬ್ಬರು ಶಿಳ್ಳೆ ಹಾಕಿದ ಹಿನ್ನೆಲೆಯಲ್ಲಿ ಕಿಡಿಕಾರಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳ ಅಲೆ ಎಬ್ಬಿಸಿದೆ.

    ಮೊದಲನೆಯದಾಗಿ, ಕಲಾವಿದರ ನಡೆಗೆ ವಿರೋಧ ವ್ಯಕ್ತವಾಗಿದೆ. “ವೇದಿಕೆಯ ಮೇಲೆ ಪಾತ್ರಧಾರಿಯಾಗಿ ಇದ್ದಾಗ, ವೈಯಕ್ತಿಕ ಭಾವನೆಗಳನ್ನು ಹೊರಹಾಕುವುದು ತಪ್ಪು” ಎಂಬುದು ಈ ಗುಂಪಿನ ಪ್ರಮುಖ ವಾದ. ಕೆಲವರು ತೀಕ್ಷ್ಣವಾಗಿ ಟೀಕಿಸಿ, “ಅಷ್ಟು ದೊಡ್ಡ ಕಲಾವಿದ ಆಗಿದ್ದರೂ ಸಹನೆ ಇರಬೇಕು” ಎಂದು ಹೇಳಿದ್ದಾರೆ. “ಪ್ರೇಕ್ಷಕರಿಲ್ಲದೆ ಕಲೆ ಉಳಿಯುವುದಿಲ್ಲ, ‘ನಿಮ್ಮಂಥವರ ಅಗತ್ಯ ಇಲ್ಲ’ ಎನ್ನುವುದು ಅಹಂಕಾರ” ಎಂಬ ಕಮೆಂಟ್‌ಗಳು ಕೂಡ ಕಾಣಿಸಿಕೊಂಡಿವೆ. ಈ ಅಭಿಪ್ರಾಯದಲ್ಲಿ, ಕಲಾವಿದನ ಪ್ರತಿಕ್ರಿಯೆ ಹೆಚ್ಚು ತೀವ್ರವಾಗಿದೆ ಎಂಬ ಧ್ವನಿ ಕೇಳಿಬರುತ್ತಿದೆ. 

    Also Read  ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”

    ಇನ್ನೊಂದು ವಲಯದಲ್ಲಿ, ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರೇಕ್ಷಕರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಕ್ಷಗಾನ ಅನ್ನೋದು ಕೇವಲ ಮನರಂಜನೆ ಅಲ್ಲ, ಅದು ಭಕ್ತಿ ಮತ್ತು ಸಂಪ್ರದಾಯದ ಕಲೆಯಾಗಿದೆ” ಎಂಬ ಅಭಿಪ್ರಾಯ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಕೆಲವರು ನೇರವಾಗಿ ಟೀಕಿಸಿ, “ಶಿಳ್ಳೆ ಹಾಕೋದು ಸಿನಿಮಾ ಥಿಯೇಟರ್‌ನಲ್ಲಿ ಸರಿಹೋಗಬಹುದು, ಯಕ್ಷಗಾನದಲ್ಲಿ ಅಲ್ಲ” ಎಂದು ಬರೆದಿದ್ದಾರೆ. ಇನ್ನೂ ಕೆಲವರು “ಇಂತಹ ಅಸಭ್ಯ ಪ್ರೇಕ್ಷಕರಿಂದಲೇ ಕಲೆ ಕುಸಿಯುತ್ತಿದೆ” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಗುಂಪಿನವರು ಕಲಾವಿದನ ಪ್ರತಿಕ್ರಿಯೆಯನ್ನು ಸಮರ್ಥಿಸುತ್ತಾ, “ಅವರು ಕೋಪಗೊಂಡದ್ದು ಸಹಜ” ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮಧ್ಯಮ ನಿಲುವಿನವರು ಎರಡೂ ಬದಿಗಳ ತಪ್ಪನ್ನು ಗುರುತಿಸಿದ್ದಾರೆ. “ಪ್ರೇಕ್ಷಕರು ಶಿಸ್ತು ಪಾಲಿಸಬೇಕು, ಆದರೆ ಕಲಾವಿದರು ಸಹ ತಾಳ್ಮೆ ಕಾಪಾಡಬೇಕು” ಎಂಬ ಸಮತೋಲನದ ಅಭಿಪ್ರಾಯಗಳು ಗಮನ ಸೆಳೆಯುತ್ತವೆ. “ಇದು ಒಂದು ತಪ್ಪು-ಪ್ರತಿಕ್ರಿಯೆಯ ಸರಪಳಿ, ಇಬ್ಬರೂ ಸ್ವಲ್ಪ ಮಿತಿಮೀರಿ ವರ್ತಿಸಿದ್ದಾರೆ” ಎಂದು ಕೆಲವರು ವಿಶ್ಲೇಷಿಸಿದ್ದಾರೆ. ಇಂತಹ ಪ್ರತಿಕ್ರಿಯೆಗಳು ಸಮಾಜದಲ್ಲಿ ಸಮತೋಲನದ ಚಿಂತನೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸೂಚಿಸುತ್ತವೆ.

    Also Read  ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿಕೆ: ಜುಲೈ 2ಕ್ಕೆ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್, ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

    ಇನ್ನೂ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯನ್ನು ದೊಡ್ಡ ಸಾಂಸ್ಕೃತಿಕ ಸಂಕಟದ ಲಕ್ಷಣವಾಗಿ ನೋಡಿದ್ದಾರೆ. “ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಕಡಿಮೆಯಾಗುತ್ತಿದೆ” ಎಂಬ ಆತಂಕ ವ್ಯಕ್ತವಾಗಿದೆ. “ಯಕ್ಷಗಾನ ನೋಡಲು ಬರುವವರು ಅದರ ಮಹತ್ವ ಅರಿತು ಬರಬೇಕು” ಎಂಬ ಸಲಹೆಗಳು ಕೂಡ ಹರಿದಾಡಿವೆ. ಕೆಲವರು ಶಿಕ್ಷಣ ಮತ್ತು ಜಾಗೃತಿ ಅಭಿಯಾನಗಳ ಅಗತ್ಯವಿದೆ ಎಂದು ಸೂಚಿಸಿದ್ದಾರೆ.

    ಶಿಳ್ಳೆ ಚಪ್ಪಾಳೆಗಳನ್ನು ದಿಕ್ಕರಿಸುವ ಪಾತ್ರಧಾರಿ ಕಲಾವಿದನೇ ಅಲ್ಲ. ಕಲೆ ಜೀವಂತವಾಗಿರುವುದೇ ಕಲೆಯನ್ನು ಆರಾಧಿಸುವ ಪ್ರೇಕ್ಷಕರಿಂದಲೇ.ಅನೇಕ ಕಡೆಗಳಲ್ಲಿ ಮಳೆಗಾಳಿಯನ್ನೂ ಲೆಕ್ಕಿಸದೇ ಕಲಾವಿದರು ರಂಗದಲ್ಲಿ ತಮ್ಮ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಡೆಸಿಕೊಟ್ಟದ್ದಿದೆ. ಅದೇರೀತಿ ಅದೇತರಹದ ಮಳೆಗಾಳಿಯನ್ನೂ ಲೆಕ್ಕಿಸದೇ ಪ್ರೇಕ್ಷಕರೂ ವೀಕ್ಷಿಸಿದ್ದಿದೆ.ಒಟ್ಟಿನಲ್ಲಿ ಕಲಾವಿದರ ಹಾಗೂ ಕಲಾಭಿಮಾನಿಗಳ ನಡುವೆ ಸಮರವಾಗುವ ಬದಲು ಸಮರಸದ ಬದುಕು ಜೀವಿಸುವಂತಾಗಲಿ ಅನ್ನುವ ಮಾತುಗಳು ಕೇಳಿಬರ್ತಿದೆ.

    Also Read  ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…

    ಒಟ್ಟಿನಲ್ಲಿ, ಈ ಘಟನೆ ಕೇವಲ ಒಬ್ಬ ಪ್ರೇಕ್ಷಕ ಮತ್ತು ಒಬ್ಬ ಕಲಾವಿದ ನಡುವಿನ ಘರ್ಷಣೆಯಲ್ಲ-ನಡುವಿನ ಸಂಬಂಧ, ಸಂಸ್ಕೃತಿ, ಶಿಸ್ತು, ಮತ್ತು ಸಾರ್ವಜನಿಕ ವೇದಿಕೆಯ ವರ್ತನೆಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿ ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆಗಳು ಜನಮನದ ವಿಭಿನ್ನ ಮುಖಗಳನ್ನು ತೆರೆದಿಟ್ಟಿದ್ದು  ಅಭಿಪ್ರಾಯ ವ್ಯಕ್ತಪಡಿಸೋದು “ಪ್ರತಿಯೊಬ್ಬರ ಜನ್ಮ ಸಿದ್ಧ  “ಹಕ್ಕಂತೆ ಕಾಣಿಸುತ್ತಿದೆ.

    #arrogant artist#artist and audience#conflict#mangalore news#overact audience#respect yakshagana#ಕರಾವಳಿ culture

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಡೆಲಿವರಿ ಬಾಯ್ ಗೆ “₹500 ಟಿಪ್… !” video viral ಅಸಲಿ ಕಥೆ ಏನು..!?
    NSAದುರ್ಬಳಕೆ ಆರೋಪ: ಜಿಲ್ಲಾಧಿಕಾರಿಗೆ ₹5 ಲಕ್ಷ ದಂಡ!
    ಧರ್ಮಸ್ಥಳ-ಚಿಕ್ಕಮಗಳೂರು ಟ್ರಿಪ್‌ಗೆ ಹೊರಟ ಸ್ವಿಗ್ಗಿ ಡೆಲಿವರಿ ಬಾಯ್ಸ್… ಅರಬೈಲ್ ಘಾಟ್‌ನಲ್ಲಿ ಭೀಕರ ಅಪಘಾತ, 6 ಜೀವಗಳು ಅಂತ್ಯ!
    ಜಾನ್ಸನ್ & ಜಾನ್ಸನ್‌ನಿಂದ ₹52 ಸಾವಿರ ಕೋಟಿ ಪರಿಹಾರ? ಟಾಲ್ಕಮ್ ಪೌಡರ್ ಪ್ರಕರಣಕ್ಕೆ ಐತಿಹಾಸಿಕ ಒಪ್ಪಂದದ ಪ್ರಸ್ತಾವ
    ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಸ್ಥಳೀಯ ರೈತರಿಂದಲೇ ಆಗ್ರಹ
    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!
    ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
    ಮಹಾನಗರಗಳ ಜಲಕಂಠಕ:ಸ್ಮಾರ್ಟ್ ಸಿಟಿಗಳ ಕರಾಳ ಮುಖ: ಕುಡಿಯಲು ನೀರಿಲ್ಲ, ಸಿಗುವ ನೀರು ವಿಷ!
    ಬ್ರೇಕಿಂಗ್ ನ್ಯೂಸ್
    “ಅಂಕಗಳು ಭವಿಷ್ಯ ನಿರ್ಧರಿಸುವುದಿಲ್ಲ” B.Tech ನಲ್ಲಿ 24 ವಿಷಯ ಫೇಲ್ ಆದರೂ IPS ಆದ ಸಮೀರ್ ಶರ್ಮಾ
    ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
    🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
    “ಅಮ್ಮಾ… ಉಸಿರಾಡಲು ಆಗ್ತಿಲ್ಲ!” — 2 ಗಂಟೆಯ ಕೊನೆಯ ಕರೆ ಬಳಿಕ 4:30ಕ್ಕೆ ಶವ… ನಿಮಿಷಾಳಿಗೆ ಏನಾಯ್ತು?
    50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
    “ಕೃಷ್ಣ ಜೆ. ರಾವ್‌ ಡಿಎನ್ಎ ಸತ್ಯ ಬಯಲು — ಮಗುವಿಗೆ ನ್ಯಾಯ ಬೇಕು ಎಂದ ಹೈಕೋರ್ಟ್!”
    ಬೆಳ್ಮಣ್ಣಿನಲ್ಲಿ ಗುಂಡಿನ ಸದ್ದು… ಮಾಜಿ ಸಚಿವರ ಶಿಷ್ಯನ ಭೀಕರ ಹತ್ಯೆ
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
    ವೋಟರ್ಸ್ ಗಮನಕ್ಕೆಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ: ಸಾರ್ವಜನಿಕರು ತಿಳಿಯಲೇಬೇಕಾದ ಪ್ರಮುಖ ವರದಿ
    ಖಾಸಗಿ ಶಿಕ್ಷಕರಿಗೂ ಸಮಾನ ವೇತನ–ಸಾಮಾಜಿಕ ಭದ್ರತೆ?
    ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    “ನನ್ನ ಮಗಳನ್ನೂ ಅದೇ ಕೋಟೆಯಿಂದ ಕೆಳಗೆ ತಳ್ಳಿ!” – ನಿಶ್ಚಿತ ವರನ ಹತ್ಯೆಗೈದ ಸಿಯಾ ಹೆತ್ತವರ ಆಕ್ರೋಶದ ಹೇಳಿಕೆ
    ‘ಗಾರ್ಡನ್ ಸಿಟಿ’ ಈಗ ‘ಹಾಟ್ ಸಿಟಿ’!ದಾಖಲೆ ಮಟ್ಟಕ್ಕೆ ಏರಿದ ಬಿಸಿ…
    ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
    ಸಮಾಜಸೇವಕನ ಮುಖವಾಡದ ಹಿಂದೆ ಡ್ರಗ್ಸ್ ದಂಧೆ?ಅದು ಆ್ಯಂಬುಲೆನ್ಸ್ ನಲ್ಲಿ ..!ಚಾಲಕ ಜಲೀಲ್ ಬಾಬಾ ಪರಾರಿ!ಆತನಿಗೆ ಆಶ್ರಯ ಅಥವಾ ಪರಾರಿಯಾಗಲು ಸಹಾಯ ಮಾಡಿದವರ ಮೇಲೂ ಕಾನೂನು ಕ್ರಮ