📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!

ಮಂಗಳೂರಿನ ಒಂದು ದೈವಸ್ಥಾನದಲ್ಲಿ ನಡೆದ ದೈವ ನರ್ತನ ಸೇವೆ ಈಗ ತುಳುನಾಡಿನಾದ್ಯಂತ ದೊಡ್ಡ ಚರ್ಚೆಯ ವಿಷಯವಾಗಿದೆ. ವಿಷಯ ಸಿಂಪಲ್ ಆಗಿ ಹೇಳ್ಬೇಕಂದ್ರೆ –
“ದೈವ ನರ್ತನ ಸೇವೆ ಕ್ರೈಸ್ತ ವ್ಯಕ್ತಿಯಿಂದ ಮಾಡಿಸಲಾಗಿದೆ” ಅನ್ನೋ ಆರೋಪ ದೊಡ್ಡ ಮಟ್ಟಕ್ಕೆ ಹಬ್ಬಿದೆ. ಇದ್ರಿಂದ ಈಗಿನ ಪರಿಸ್ಥಿತಿ ,ದೈವಾರಾಧನಾ ವಲಯದಲ್ಲಿ ಗೊಂದಲ,ಭಕ್ತರಲ್ಲಿ ಸಂಶಯ ಹಾಗೇ ಸಾಮಾಜಿಕ ಚರ್ಚೆ ತೀವ್ರವಾಗಿದೆ.ವಿಷಯ ಈಗ ಅಧಿಕಾರಿಗಳ ಗಮನಕ್ಕೂ ಹೋಗಿದೆ.

ವಿವಾದ ಹೇಗೆ ಶುರುವಾಯ್ತು?

ಪಂಬದ ಸಮುದಾಯದ ಸಂಶೋಧಕಿ ಡಾ. ರತಿ ಅವರು ಪ್ರೆಸ್ ಮೀಟ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಫೆಬ್ರವರಿ1ರಂದು,ಮಂಗಳೂರಿನ **ಜಾರಂದಾಯ ದೈವಸ್ಥಾನ**ದಲ್ಲಿ ನಡೆದ ನೇಮೋತ್ಸವದಲ್ಲಿ,ಕ್ರೈಸ್ತ ಯುವಕನಿಂದ ದೈವ ನರ್ತನ ಮಾಡಿಸಲಾಗಿದೆ ಅಂತ ಹೇಳಿದ್ದಾರೆ.ಹಾಗೂ ಇದು ದೈವಾರಾಧನಾ ಸಂಪ್ರದಾಯಕ್ಕೆ ವಿರುದ್ಧ ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ.


🔥 ಆರೋಪದ ಮುಖ್ಯ ಅಂಶಗಳು

  • ದೈವ ನರ್ತನ ಸಾಮಾನ್ಯವಾಗಿ ಪಂಬದ ಸಮುದಾಯದವರು ಮಾಡಬೇಕು.ಆದರೆ ಇಲ್ಲಿ “ಅನ್ಯ ಧರ್ಮದ ವ್ಯಕ್ತಿಗೆ ಅವಕಾಶ ಕೊಟ್ಟಿದ್ದಾರೆ”.ಹಣದ ಕಾರಣಕ್ಕೆ ನಿಯಮ ಉಲ್ಲಂಘನೆ ಆಗಿದೆ ಅಂತ ಆರೋಪ.ಪ್ರಶ್ನಿಸಿದಾಗ ಅವಮಾನಕಾರಿ ಉತ್ತರ ಸಿಕ್ಕಿದೆ ಎಂಬ ಮತ್ತೊಂದು ಆರೋಪ.

🧾 ಆರೋಪಕ್ಕೆ ಉತ್ತರ – ನರ್ತಕರ ಸ್ಪಷ್ಟನೆ

ಈ ಆರೋಪಗಳನ್ನೆಲ್ಲಾ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.ಗಣೇಶ್ ಪಂಬದ ಹೇಳೋದು ಏನು ಅಂದ್ರೆ:

  • ನರ್ತನ ಮಾಡಿದ ಸುಶಾಂತ್ ಪಂಬದ ಕ್ರೈಸ್ತನಲ್ಲ,ಅವನು ಪಂಬದ ಸಮುದಾಯದವನೇ..ಅವನ ತಾಯಿ ಮದುವೆಯ ನಂತರ ಹಿಂದೂ ಧರ್ಮ ಪಾಲಿಸುತ್ತಿದ್ದಾರೆ.ಇವನು ಹೊಸಬನು ಅಲ್ಲ, ಹಿಂದೆ ಹಲವಾರು ಕಡೆ ಸೇವೆ ಮಾಡಿದ್ದಾನೆ. “ಯಾವುದೇ ಅಪಚಾರ ಆಗಿಲ್ಲ” ಅಂತ ಹೇಳಿದ್ದಾರೆ.
  •  ಇಷ್ಟಾಗುವಾಗ ಆರೋಪ ಮಾಡಿದವರ ಮೇಲೆಯೇ ಪ್ರಶ್ನೆ ಎತ್ತಿರುವ ಗಣೇಶ್ ಪಂಬದ ರತಿಯವರ ಕುಟುಂಬವೇ ಇವನ ಸಹೋದರನಿಂದ ಬೇರೆಡೆ ನರ್ತನ ಮಾಡಿಸಿಕೊಂಡಿದೆ ಆಗ ಸಮಸ್ಯೆ ಇರಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕ್ಷೇತ್ರಕ್ಕೆ ಯಾವುದೇ ಅಪಚಾರವಾಗಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಈ ಮದ್ಯೆ ಸುಶಾಂತ್ ತುಂಬಾ ಭಾವನಾತ್ಮಕವಾಗಿ ಮಾತನಾಡಿದ್ದಾರೆ:

“ಈ ಆರೋಪದಿಂದ ಜೀವನವೇ ಬದಲಾಗಿದೆ,ಜನರಿಗೆ ಮುಖ ತೋರಿಸಲು ಕಷ್ಟ ಆಗುತ್ತಿದೆ.ತಮ್ಮ ಬಳಿ ಜಾತಿ ಪ್ರಮಾಣಪತ್ರ ಇದೆ ಎಂದು ತಿಳಿಸಿದ್ದಾರೆ.ನ್ಯಾಯ ಬೇಕು ಅಂತ ಮನವಿ ಮಾಡಿದ್ದಾರೆ.”

 ಸುಶಾಂತ್ ತಾಯಿಯ ಸ್ಪಷ್ಟನೆ

  • “ನಾನು ಮೊದಲು ಕ್ರಿಶ್ಚಿಯನ್ ಆಗಿದ್ದೆ, ಮದುವೆಯ ನಂತರ ಹಿಂದೂ ಧರ್ಮಕ್ಕೆ ಬಂದೆ ,ನಾವು ಈಗ ಚರ್ಚ್‌ಗೆ ಹೋಗೋದಿಲ್ಲ”.
  • “ನನ್ನ ಮಗ ಕ್ರಿಶ್ಚಿಯನ್ ಅಂತ ಸಾಬೀತು ಮಾಡಿದ್ರೆ ನರ್ತನ ಮಾಡಿಸಲ್ಲ”

ಈ ವಿಚಾರದಲ್ಲಿ ಎರಡು ಸ್ಪಷ್ಟ ವಿಚಾರಗಳು ಕಾಣಿಸುತ್ತವೆ:

👉 ಒಂದು ಕಡೆ
ಪರಂಪರೆ ಕಾಪಾಡಬೇಕು ಅನ್ನೋ ಆತಂಕ.

👉 ಇನ್ನೊಂದು ಕಡೆ
ತಪ್ಪು ಆರೋಪದಿಂದ ವ್ಯಕ್ತಿಯ ಬದುಕೇ ಹಾಳಾಗಬಾರದು ಅನ್ನೋ ವಿಚಾರ.

ಸತ್ಯ ಏನು ಅನ್ನೋದು ದಾಖಲೆಗಳು ಮತ್ತು ಪರಿಶೀಲನೆ ಮೇಲೆ ನಿರ್ಧಾರವಾಗಬೇಕು.

ಆದರೆ ಒಂದು ಮುಖ್ಯ ಪಾಠ ಏನೆಂದರೆ ,
👉 ಇಂತಹ ಸಂವೇದನಾಶೀಲ ವಿಷಯಗಳಲ್ಲಿ ಆರೋಪ ಮಾಡುವ ಮೊದಲು ಸಂಪೂರ್ಣ ಮಾಹಿತಿ ಇರಬೇಕು
👉 ಅದೇ ಸಮಯದಲ್ಲಿ ಪರಂಪರೆಗೂ ಗೌರವ ಇರಬೇಕು.

ಈ ವಿವಾದಕ್ಕೆ ಅಂತಿಮ ಉತ್ತರ ಇನ್ನೂ ಬರಬೇಕಿದೆ.
ಜನರು ಮತ್ತು ದೈವಾರಾಧಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋದೇ ಮುಂದಿನ ಬೆಳವಣಿಗೆ ನಿರ್ಧರಿಸಲಿದೆ.

#daivaraadhane#latest news#mangalore news#ಕಟ್ಟುಕಟ್ಟಲೆಗಳು#ತುಳುನಾಡ ಸಂಸ್ಕೃತಿ#ದಕ್ಷಿಣ kananda

COMMENTS

Login with Gmail to comment

ಇನ್ನಷ್ಟು ಸುದ್ದಿ

ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ 
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
ಕೊನೆಗೂ ಸೋತ ಖಾಕಿ….!!!
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ