📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!

    ಕಾರ್ಕಳ: ಪ್ರತಿಷ್ಠಿತ ಮಾರಿಯಮ್ಮ ದೇವಳದ ತಕರಾರುಗಳ ಬಗೆಗಿನ ಮಾತುಕತೆಗೆಂದು ಉಪ-ಮುಖ್ಯಮಂತ್ರಿಗಳ ಕಛೇರಿಯಿಂದ ಕಾರ್ಕಳ ಸಾಮಾಜಿಕ ಕಾರ್ಯಕರ್ತರ ತಂಡಕ್ಕೆ ಬುಲಾವ್ ಬಂದಿದೆ. ಇಲ್ಲಿಯ ಹತ್ತು-ಹಲವು ಗೋಲ್ಮಾಲ್‌ಗಳನ್ನು ದಾಖಲೆ ಸಹಿತ ಜನಜ್ಜಾಹೀರು ಮಾಡಿದ್ದಲ್ಲದೆ, ಮಾನ್ಯ ನ್ಯಾಯಾಲಯಗಳಿಂದ ಹಾಗೂ ಹಿರಿಯ ಅಧಿಕಾರಿಗಳಿಂದ ಸೂಕ್ತ ತನಿಖೆಗೆ ಆದೇಶವಾಗುತ್ತಿದ್ದಂತೆ, ದೇವಳದಲ್ಲಾಗುತ್ತಿರುವ ಗೋಲ್ಮಾಲ್‌ಗಳ ಬಗ್ಗೆ ಮಾಹಿತಿ ಪಡೆದಿರುವ ಡಿ.ಕೆ.ಶಿವಕುಮಾರ್ ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲು ಬೆಂಗಳೂರು ಕಛೇರಿಗೆ ವಾರಂತ್ಯದಲ್ಲಿ ಬರುವಂತೆ ತಿಳಿಸಿದ್ದಾರೆ.
    ಜಗತ್ಪ್ರಸಿದ್ಧ ಮಾರಿಯಮ್ಮ ದೇವಳದ ಕಾಣಿಕೆ ಡಬ್ಬಿಯ ಲೆಕ್ಕಾಚಾರದ ಗೋಲ್ಮಾಲ್‌ಗಳಿಂದ ಹಿಡಿದು, ಜೀರ್ಣೋದ್ದಾರ ಸಮಯ ಬ್ಯಾಂಕ್ ಖಾತೆಗಳನ್ನು ರಚಿಸಿ ಗೋಲ್ಮಾಲ್‌ಗಳ ನಡೆಸಿರುವ ಹಾಗೇ ದೇವರ ಹರಕೆಗೊಪ್ಪಿಸಿದ ಒಡವೆಗಳು, ಹಣಕಾಸಿನ ಅವ್ಯವಹಾರ, ಜಾಗದ ತಕರಾರುಗಳು, ಪ್ರಾಂಗಣದಲ್ಲಿಯ ಅಂಗಡಿ ಮುಂಗಟ್ಟುಗಳ ವಿಚಾರ, ಅರ್ಚಕರ ಸಮಸ್ಯೆ, ಸ್ವಘೋಷಿತ ಆಡಳಿತ ಸಮಿತಿ ಮೊದಲಾಗಿ ಪ್ರತಿಯೊಂದು ವಿಚಾರಗಳನ್ನು ತೆಗೆದರೂ ಇಲ್ಲಿ ಗೋಲ್ಮಾಲ್‌ಗಳೇ ನಡೆಯುತ್ತಿದ್ದು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ದಾಖಲೆ ಸಮೇತ ರುಜುವಾತು ಪಡಿಸಿದ್ದಾರೆ. ಹಾಗೇ ಮಾಧ್ಯಮಗಳು ಬೆಳಕು ಚೆಲ್ಲ್ಲಿವೆ. ಒಂದಷ್ಟು ನ್ಯಾಯಾಲಯಗಳು ತಪರಾಕಿ ನೀಡಿವೆ. ಹಿರಿಯ ಅಧಿಕಾರಿ ವರ್ಗ ಸೂಕ್ತ ಕಾನೂನು ಕ್ರಮಕ್ಕೆ ಆದೇಶಿಸಿವೆ.
    ಇವೆಲ್ಲವನ್ನು ಗಮನಿಸಿದ ರಾಜ್ಯದ ಉಪ-ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ದೇವಸ್ಥಾನಗಳಲ್ಲೂ ಈ ಮಟ್ಟದ ಅವ್ಯವಹಾರಗಳ ಬಗ್ಗೆ ಕೇಳಿ ಚಕಿತಗೊಂಡಿದ್ದಲ್ಲದೆ, ಎಲ್ಲಾ ವಿಚಾರಗಳನ್ನು ತಿಳಿದುಕೊಂಡು, ಸರಿಯಾದ ಕ್ರಮ ಜರುಗಿಸುವರೇ ದಾಖಲೆಗಳೊಂದಿಗೆ ತಮ್ಮ ಕಛೇರಿಗೆ ಬರುವಂತೆ ಇಲ್ಲಿಯ ಸಾಮಾಜಿಕ ಕಾರ್ಯಕರ್ತರ ತಂಡಕ್ಕೆ ಆಹ್ವಾನ ನೀಡಿದ್ದಾರೆ.
    ಉಪ-ಮುಖ್ಯಮಂತ್ರಿಗಳ ಕಾರ್ಯದರ್ಶಿ ವಾರದ ಹಿಂದೆಯೇ ಈ ಬಗ್ಗೆ ಸಾ. ಕಾರ್ಯಕರ್ತರ ತಂಡಕ್ಕೆ ಬೆಂಗಳೂರು ಕಛೇರಿಗೆ ಆಗಮಿಸುವಂತೆ ತಿಳಿಸಿದ್ದರು. ಅದೇ ಸಮಯ ಉಚ್ಚನ್ಯಾಯಾಲಯದ ತೀರ್ಪೊಂದನ್ನು ಕಾಯುತ್ತಿದ್ದ ತಂಡ ವಾರಾಂತ್ಯದವರೆಗೆ ಸಮಯ ಕೇಳಿದ್ದು, ಆ ಆದೇಶದೊಂದಿಗೆ ಬರುವಂತೆ ತಿಳಿಸಲಾಗಿದೆ.
    ಕೂತರು-ನಿಂತರು ತಕರಾರು ನಡೆಸುತ್ತಿರುವ, ಹಾಗೇ ಎಲ್ಲೆಂದರಲ್ಲಿ ಗೋಲ್ಮಾಲ್ ಮಾಡುತ್ತಿರೋ ಆಡಳಿತ ಮಂಡಳಿಯ ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳು ಕಟ್ಟ-ಕಡೆಗೂ ಸರಕಾರದ ಗಮನಕ್ಕೆ ಬಂದಿದೆ ಎಂದಾಯಿತು. ಸಾಮಾಜಿಕ ಕಾರ್ಯಕರ್ತರ ಅವಿರತ ಶ್ರಮಕ್ಕೆ ಕೊನೆಗೂ ಪರಿಹಾರ ದೊರಕುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ. ಒಟ್ಟಿಗೆ ಸ್ವಘೋಷಿತ ಆಡಳಿತಗಾರರ ಅಧಿಕಾರದ ದರ್ಪ, ದುರಂಕಾರ ಮತ್ತು ಆಟಾಟೋಪಗಳಿಗೊಂದು ತಾರ್ಕಿಕ ಅಂತ್ಯ ಹಾಡುವ ಕಾಲ ಒದಗಿ ಬಂದAತಾಗಿದೆ.
    ದಿನ ಬೆಳಗಾದರೆ ಪೂಜೆ-ಪುರಸ್ಕಾರಗಳೆಂಬ, ಧಾರ್ಮಿಕ ವಿಚಾರಗಳಲ್ಲಿ ಅವಿರತ ಭಕ್ತಿ-ಭಾವನೆಗಳ ಹೊಂದಿರುವ ಡಿ.ಕೆ.ಶಿವಕುಮಾರವರಿಗೆ ಈ ಜಗತ್ಪ್ರಿಸಿದ್ಧ ಮಾರಿಯಮ್ಮ ದೇಗುಲದ ಅನಾಚಾರಗಳು ಹಾಗೂ ಗೋಲಮಾಲ್‌ಗಳ ವಿಚಾರ ಗಮನಕ್ಕೆ ಬಂದಿದ್ದು ಒಳ್ಳೆಯದೇ ಆಯಿತು. ಇಲ್ಲಿಯ ಪೂರ್ತಿ ಅವ್ಯವಹಾರಗಳನ್ನು ತಿಳಿದರೆ ಅವರೇ ಸ್ವಯಂ ಪ್ರೇರಿತರಾಗಿ ಇದಕ್ಕೊಂದು ಅಂತ್ಯ ಹಾಡಲಿದ್ದಾರೆ ಅಂತೆನಿಸುತ್ತದೆ. ಧಾರ್ಮಿಕಥೆಯನ್ನು ತನ್ನ ಹೃದಯದಿಂದ ಪೂಜಿಸುವ ಡಿ.ಕೆ.ಶಿ.ಯವರು ಇಂತಹ ಪ್ರತಿಷ್ಠಿತ ದೇವಳವೊಂದನ್ನು ಈ ಮಟ್ಟಕ್ಕೆ ಲಗಾಡಿ ತೆಗೆಯಲು ಹೊರಟವರಿಗೊಂದು ಸರಿಯಾದ ಬುದ್ದಿ ಕಲಿಸ ಹೊರಟಂತಿದೆ. ಅದಕ್ಕಾಗಿಯೇ ಪೂರ್ತಿ ವಿವರಗಳು, ಅದಕ್ಕೆ ಬೇಕಾದ ದಾಖಲೆಗಳನ್ನು ತರುವಂತೆ ತಿಳಿಸಿದ್ದಾರೆ.
    ಅಂತೂ, ಈ ಬಾರಿ ಜಗದೊಡತಿ ಮಾರಿಯಮ್ಮನಿಗೊಂದು ಶಾಪ ವಿಮೋಚನೆಯಾಗೋ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಕಡೆಗೂ ಇಲ್ಲಿಯ ಅನಾಚಾರಗಳು ಸರಕಾರದ ಗಮನಕ್ಕೆ ಬಂದಿದ್ದು, ಅದಕ್ಕೊಂದು ತÁರ್ಕಿಕ ಅಂತ್ಯ ಹಾಡಲು ಉಪ-ಮಂತ್ರಿಗಳು, ಅವಿರತ ಶ್ರಮ ಪಟ್ಟಿರುವ ಕಾರ್ಯಕರ್ತರ ತಂಡದಿAದ ದೂರು ದುಮ್ಮಾನಗಳ ಕೇಳಿ ಇಲ್ಲೊಂದು ಶಾಶ್ವತ ಪರಿಹಾರ ಕಲ್ಪಿಸಲಿದ್ದಾರೆ ಡಿಕೆಶಿ ಎಂಬ ಆಶಾಭಾವನೆಯಲ್ಲಿದ್ದಾರೆ ಕಾರ್ಕಳದ ಜನತೆ. ಅವÀರ ಅಶೋತ್ತರಗಳು ಪೂರೈಸಲಿ ಎಂಬುದೇ ನಮ್ಮೆಲ್ಲರ ಅಭಿಪ್ರಾಯ.

    Also Read  ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೇಂದ್ರ ಸಚಿವ ಸೋಮಣ್ಣರ ವಿರುದ್ಧ  ವಾಗ್ದಾಳಿ: “ನಡೆದು ಬಂದ ದಾರಿ ಮರೆತು ಮಾತನಾಡಬೇಡಿ”
    ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    ಶಾರ್ಜಾದಲ್ಲಿ ಉಡುಪಿ ಮೂಲದ ಪ್ರಕಾಶ್ ಕುಂದರ್ ಕೊಲೆ…!ಪತ್ನಿ, 10ನೇ ತರಗತಿ ಪುತ್ರ ನಾಪತ್ತೆ.?
    ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
    ಭಾನುವಾರ ಬ್ಯಾಂಕ್ ಓಪನ್! ಸೆ.28ರಿಂದ 3 ದಿನ ಮುಷ್ಕರ
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
    ಸದ್ಯದಲ್ಲೇ ಬರುತ್ತೆ ತಣ್ಣೀರ್ಬಾವಿ ಬೀಚ್‌ಗೆ shortcut ಮಾರ್ಗ!30 ನಿಮಿಷ ಕಡಿಮೆ ಪ್ರಯಾಣ..!
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್!
    ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
    ಮುಂಜಾನೆ ಹೊತ್ತಿ ಉರಿದ ಆಸ್ಪತ್ರೆ…ಜೀವ ಉಳಿಸಿಕೊಳ್ಳಲು ರೋಗಿಗಳ ಪರದಾಟ.ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ.
    ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ಬೆಳ್ತಂಗಡಿಯ ಹೆಮ್ಮೆಯ ಪುತ್ರಿ ಉಷಾರಾಣಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕರಾವಳಿಗೆ ಗೌರವದ ಗರಿ!
    ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಕುರಿತು ಕಾಂಗ್ರೆಸ್‌ ನಾಯಕರ ಸಭೆ
    ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್…!ಅಪ್ಲಿಕೇಶನ್ ಬ್ಯಾನ್ ಅಲ್ಲ, ವ್ಯವಸ್ಥೆ ಸರಿಪಡಿಸಿ! ಸರ್ಕಾರಕ್ಕೆ ನಿಸರ್ಗ ಅಧಿಕಾರಿಯ ಸಲಹೆ
    ತಿರುಮಲ ತಿಮ್ಮಪ್ಪನ 3,550 ಮೆಟ್ಟಿಲು ಹತ್ತಿದ 116 ವರ್ಷದ ನವನೀತಮ್ಮ ಕರ್ನಾಟಕದ ಶತಾಯುಷಿ!
    ಮಂಗಳೂರು–ಉಡುಪಿಗೆ ಹೈಕೋರ್ಟ್ ಪೀಠ? ಅಧಿಕೃತ ಪರಿಶೀಲನೆಗೆ ಸಮಿತಿ ರಚನೆ
    ಪುತ್ತೂರು ಅತ್ಯಾಚಾರ ಪ್ರಕರಣ: ಹೈಕೋರ್ಟ್‌ನಲ್ಲಿ ರಾಜಿ ಸಂಧಾನ ಪ್ರಸ್ತಾಪ..!
    ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಎರಡು ಬಣಗಳ ರಣರಂಗ!ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಕ್ಷಣ…
    ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
    ಖಾಸಗಿ ಬಸ್ಸಿನಲ್ಲಿ ಮಹಿಳೆಯ ಮಂಗಳಸೂತ್ರ ಏಗರಿಸಿದ್ರಾ?
    Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
    ಅಕ್ರಮ ಭೂಕಬಳಿಕೆ: ಡಿಸಿ ಕೋರ್ಟ್ ಆದೇಶದ ವಿರುದ್ಧದ ರಿಟ್  ಹೈಕೋರ್ಟನಲ್ಲಿ ವಜಾ
    “ರೈಲಿನಲ್ಲೇ ಇಂಥಾ ಕೃತ್ಯ! ನಾಗರಿಕ ಪ್ರಜ್ಞೆ ಎಲ್ಲಿದೆ?”
    ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
    ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour