📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ

ಜಗತ್ತಿನಲ್ಲೇ, ಡಿಫೆನ್ಸ್ ಮತ್ತು ಗೂಢಚಾರಿಕೆಯಲ್ಲಿ ದೊಡ್ಡ ಹೆಸರು ಮಾಡಿದ ಎರಡನೇ ದೇಶ ಇಸ್ರೇಲ್. ಅದೇ ಇಸ್ರೇಲ್ ಇದೀಗ ತಂಡಾ ಹೊಡೆಯುತ್ತಿದೆ ಎಂಬ ಮೆಸೇಜ್ ಬರುತ್ತಿದೆ.
ನಿರಂತರವಾದ ಯುದ್ಧದಿಂದಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿಕೊಂಡಿರುವ, ಇಸ್ರೇಲ್ ಇದೀಗ ಅದರ ಎಲ್ಲಾ ಹೊಣೆಗಾರಿಕೆಯನ್ನು ನೇತನ್ಯಹೋ ಅವರ ಮೇಲೆ ಹಾಕಲಾರಂಬಿಸಿದ್ದಾರೆ ಅಲ್ಲಿನ ವಿರೋಧ ಪಕ್ಷದ ನಾಯಕರು. ಯುದ್ಧ ಭಂಡಾರದಲ್ಲೂ ವಿಪರೀತ ಅನ್ನುವಷ್ಟು ಖಾಲಿ ಸ್ಥಳಗಳು ಕಾಣಸಿಗುತ್ತಿವೆಯಂತೆ. ಕ್ಷಿಪಣಿಗಳ ಸಂಖ್ಯೆ ಕ್ಷೀಣಿಸುತ್ತಿದೆಯಂತೆ. ಶಸ್ತ್ರಾಸ್ತ್ರಗಳ ಕೊರತೆಯು ಮುಂದಿನ ದಿನದಲ್ಲಿ ಕಾಣುವ ಅಪಾಯವಿದೆ ಎಂಬ ಎಚ್ಚರಿಕೆಯನ್ನು ಅಲ್ಲಿನ ತಜ್ಞರು ಸರ್ಕಾರಕ್ಕೆ ನೀಡುತ್ತಿದ್ದಾರೆ.
ಆದೇಶದ ಮುಖ್ಯಸ್ಥರಲ್ಲಿ ಒಬ್ಬರಾದ ಇಯಾಲ್ ಜಮೀರ್ ಅವರು ಸ್ಪಷ್ಟವಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಸೇನೆಯ ಮೇಲೆ ವಿಪರೀತವಾದಂತಹ ಒತ್ತಡ ಹೇರಲಾಗುತ್ತಿದೆ. ಆದಷ್ಟು ಬೇಗ ಇದನ್ನು ಕಡಿಮೆ ಮಾಡಬೇಕು. ಮಿಲ್ಟ್ರಿ ಸೇವೆಯನ್ನು ಹೆಚ್ಚಿಸಬೇಕು. ಹೊಸದಾಗಿ ಸೈನ್ಯಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯ ಪ್ರಾರಂಭವಾಗಬೇಕು. ಈಗಾಗಲೇ ದೇಶದ ಸೈನಿಕರು ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದಾರೆ. ಕೌಟಿಂಬಿಕ ಸಮಸ್ಯೆಯು ಅವರನ್ನು ಬಾದೀಸುತ್ತಿದೆ. ಇದೆಲ್ಲವನ್ನು ಅರ್ಥಮಾಡಿಕೊಳ್ಳ ಬೇಕಾದ್ದು ಸರ್ಕಾರ ಎಂದು ಹೇಳಿರುವ ಇಯಾಲ್ ಜಮೀರ್ ಅವರು 10 ಕೆಂಪು ಬಾವುಟವನ್ನು ಮೇಲೆತ್ತಿದ್ದಾರೆ ಎನ್ನಲಾಗುತ್ತಿದೆ.
ಲೇಬನಾನ್, ಗಾಜಾ, ಪ್ಯಾಲಿಸ್ಟೈನ್, ಸಿರಿಯಾ ಹೀಗೆ ಹತ್ತು ಹಲವರ ಜೊತೆ ನಿರಂತರವಾಗಿ ಕದನವನ್ನು ಮಾಡುತ್ತಲೇ ಬಂದಿರುವ ಇಸ್ರೇಲ್, ತನ್ನ ಯುದ್ಧ ಕೌಶಲ್ಯವನ್ನು ಜಗತ್ತಿನ ಎದುರು ಮೆರೆಸುತ್ತಾ ಬಂದಿತ್ತು. ಅವರ ಆಕ್ರಮಣ ಹಾಗೂ ಡಿಫೆನ್ಸ್ ಎರಡು ವಿಚಾರದಲ್ಲೂ ಜಗತ್ತು ನಿಬ್ಬರಗಿಂದ ನೋಡುವಂತೆ ಮಾಡಿತ್ತು. ಅಂತಹ ಇಸ್ರೇಲ್ ಈಗ ಹೆಚ್ಚು ಕಡಿಮೆ ಸೋತು ಸುಣ್ಣವಾಗಿದೆ. ಅಮೇರಿಕಾದ ಬೆಂಬಲದೊಂದಿಗೆ ಯುದ್ಧಕ್ಕೆ ನುಗ್ಗಿದ್ದ ಇಸ್ರೇಲ್ ಪ್ರಾರಂಭದಲ್ಲಿ ಜಯದ ಲಯದಲ್ಲೇ ಕಾಣುತ್ತಿತ್ತು. ಆದರೆ ಇರಾನ್ ನಿಧಾನವಾಗಿ ತನ್ನ ಆಕ್ರಮಣವನ್ನು ಬಲಿಷ್ಠ ಗೊಳಿಸುತ್ತಾ ಹೋಯಿತು. ನೋ ಡೌಟ್, ಇರಾನ್ ತನ್ನ ನಾಯಕರನ್ನು ಕಳೆದುಕೊಂಡಿದೆ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅಂದರೆ ಹೆಚ್ಚು ಕಡಿಮೆ ಎರಡು ಸಾವಿರದಷ್ಟು ಇರಾನ್ ನಾಗರಿಕರನ್ನು ಕಳೆದುಕೊಂಡಿದೆ.. ಅಮೇರಿಕಾ ಹಾಗೂ ಇಸ್ರೇಲ್ ಸತತವಾಗಿ ಇರಾನಿನ ಸಾಕಷ್ಟು ಅತ್ಯಮೂಲ್ಯ ಸ್ಥಳಗಳನ್ನೂ ನಾಶ ಮಾಡಿದ್ದರೂ ಸಹ, ಇರಾನ್ ಧೃತಿಗೆಡಲೇ ಇಲ್ಲ. ಮಂಡಿಯೂರಲ್ಲು ಇಲ್ಲ. ತನ್ನ ಬತ್ತಳಿಕೆಯನ್ನು ಅಕ್ಷಯ ಪಾತ್ರೆಯದಂತೆ ತುಂಬಿಸಿಕೊಳ್ಳುತ್ತಾ ಸತತವಾಗಿ ಇಸ್ರೇಲ್ ಮತ್ತು ಅಮೆರಿಕಕ್ಕೆ ನಷ್ಟವನ್ನುಂಟು ಮಾಡುತ್ತಲೇ ಸಾಗಿತು. ಇಸ್ರೇಲ್ ನ ಹಲವು ತೈಲಾಗಾರ ಸೇರಿದಂತೆ ಅವರ ಡಿಫೆನ್ಸ್ ಲಾಂಚರ್ ಗಳು ಇರಾನಿನ ದಾಳಿಗೆ ಸುಟ್ಟು ಕರಕಲಾದವು. ಅತ್ತ ಅಮೆರಿಕಾದ ಕಥೆಯು ಇದಕ್ಕಿಂತ ಬೇರೆ ಇರಲಿಲ್ಲ. ಸೌದಿ ಸಹಿತ ಸುತ್ತಮುತ್ತಲಿನ ಅನೇಕ ದೇಶಗಳಲ್ಲಿ ತನ್ನ ಸೈನಿಕ ನೆಲೆಯನ್ನು ನಿರ್ಮಿಸಿಕೊಂಡಿದ್ದ ಅಮೆರಿಕಾದ ರಕ್ಷಣಾ ಕವಚವನ್ನೆಲ್ಲಾ ಧ್ವಂಸ ಮಾಡಿ ಲಕ್ಷಾಂತರ ಕೋಟಿ ನಷ್ಟ ಆಗುವಂತೆ ಮಾಡಿದೆ. ಇರಾನಿಗೆ ಆದ ನಷ್ಟ ಎಷ್ಟೇ ಇರಲಿ, ಆದರೆ ಇಸ್ರೇಲ್ ಮತ್ತು ಅಮೆರಿಕ ಈ ಎರಡು ದೇಶಕ್ಕೆ ದೊಡ್ಡ ಪ್ರಮಾಣದಲ್ಲೇ ನಷ್ಟವಾಗಿದೆ. ಅವರ ಅಮೂಲ್ಯವಾದ ಕ್ಷಿಪಣಿಗಳು ಯುದ್ಧವಿಮಾನಗಳು ಧ್ವಂಸಗೊಂಡಿವೆ.
ಕೇವಲ ಇಷ್ಟೇ ಆಗಿದ್ದರೆ ಬಹುಷ್ಯ ಅಮೆರಿಕ ಹಾಗೂ ಇಸ್ರೇಲ್, ಈ ಮಟ್ಟಿಗೆ ಕಂಗಾಲಾಗುತ್ತಿರಲಿಲ್ಲ. ನಿಧಾನವಾಗಿ ರಷ್ಯಾ ಮತ್ತು ಚೀನಾ ಇರಾನ್ ಜೊತೆಗೆ ಗಟ್ಟಿಯಾಗಿ ನಿಲ್ಲುತ್ತಿವೆ. ಮತ್ತೊಂದು ಕಡೆ ಇರಾನ್ ಹಾರ್ಮುಜ್ ಜಲಸಂಧಿ ಯನ್ನು ತನ್ನ ಬಹುದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡಿತು. ಇದರ ಪರಿಣಾಮ ಅಮೆರಿಕಾದಂತಹ ಅಮೇರಿಕಾವೇ ಕಂಗಾಲಾಗಿ ಹೋಯಿತು. ಈ ಸಂದರ್ಭದಲ್ಲಿ ಅಮೆರಿಕ ಹಾಗೂ ಇಸ್ರೇಲ್ಗೆ ಒಂದು ಕಡೆ ಯುದ್ಧವನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಅನ್ನುವುದು ಒಂದುಡೆಯಾದರೆ, ಮತ್ತೊಂದು ಕಡೆಯಿಂದ ವಿಶ್ವದಲ್ಲಿ ತಮ್ಮ ಅಗ್ರತ್ವವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ. ಇವೆರಡರ ನಡುವೆ ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್ ನಿಮಿಷಕ್ಕೊಂದು ಮಾತನಾಡಲು ಪ್ರಾರಂಭಿಸಿದ್ದರು. ಅವರ ಮಾತಿಗೆ ನ್ಯಾಟೋದ ಸದಸ್ಯ ರಾಷ್ಟ್ರಗಳೇ ಕಿವಿಗೊಡಲಿಲ್ಲ. ಸ್ವತಹ ಬ್ರಿಟನ್ ಸಕ್ರಿಯವಾಗಿ ಜೊತೆಗೆ ನಿಲ್ಲಲಿಲ್ಲ. ಆಸ್ಟ್ರೇಲಿಯಾ ದೂರವೇ ನಿಂತಿತು. ಜರ್ಮನ್ ರೆಸ್ಪಾನ್ಸ್ ಮಾಡಲಿಲ್ಲ. ಜಪಾನ್ ತಟಸ್ಥವಾಯಿತು.
ಇದೆಲ್ಲವುದರ ಒತ್ತಡ ಅಮೆರಿಕಾದ ಮೇಲೆ ಹೆಚ್ಚಾಗುತ್ತಾ ಹೋಗುತ್ತಿದೆ. ಅಮೆರಿಕಾದಲ್ಲೂ ಈ ಯುದ್ಧದಿಂದ ಆರ್ಥಿಕ ಬಿಸಿಯು ನಿಧಾನವಾಗಿ ಏರಲಾರಂಭಿಸಿದೆ. ಇದರಿಂದಾಗಿ ಟ್ರಂಪ್ ವಿರುದ್ಧ ಆರೋಪಗಳು ಬರಲಾರಂಬಿಸಿವೆ. ಪರಿಣಾಮ ಟ್ರಂಪ್ ಈ ಎಲ್ಲಾ ಆರೋಪಗಳಿಗೆ ಇಸ್ರೇಲ್ ನಾಯಕ ನೇತನ್ಯಹೋ ಕಾರಣ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.
ಒಟ್ಟಿನಲ್ಲಿ ಅಮೆರಿಕ ಹಾಗೂ ಇಸ್ರೇಲ್ ಎರಡು ದೇಶವು ಇರಾನ್ ಜೊತೆಗೆ ಕಾಲು ಕೆದರಿ ಯುದ್ಧಕ್ಕೆ ಹೋಗಿ ಈಗ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಇರಾನ್ ಮಂಡಿಯುರುವ ಲಕ್ಷಣವೇ ಇಲ್ಲ.
ಭಯದ ವಿಚಾರ ಏನಂದರೆ, ಡೊನಾಲ್ಡ್ ಟ್ರಂಪ್ ಹುಚ್ಚಾಟಕ್ಕೆ ಬಿದ್ದು ನ್ಯೂಕ್ಲಿಯರ್ ಬಾಂಬನ್ನು ಇರಾನ್ ಮೇಲೆ ಎಸೆಯಬಹುದೇ ಎನ್ನುವುದಾಗಿದೆ. ಒಟ್ಟಿನಲ್ಲಿ ಕೇವಲ ಎರಡು ದೇಶದ ಹುಚ್ಚಾಟದಿಂದಾಗಿ ಇಡೀ ಜಗತ್ತು ತಲ್ಲಣ ವಾಗುವಂತೆ ವಾತಾವರಣ ಸೃಷ್ಟಿಯಾಗಿದೆ ಈಗ. ಇಡೀ ಜಗತ್ತು ಆರ್ಥಿಕ ಕುಸಿತಕ್ಕೆ ಒಳಗಾಗುತ್ತಿದೆ. ಕಚ್ಚಾ ತೈಲ ಹಾಗೂ ಎಲ್ಪಿಜಿ ಮತ್ತು ಡಾಂಬರ್ ಕೊರತೆಗೆ ಒಳಗಾಗುತ್ತಿವೆ. ಇದೆಲ್ಲವೋ ಇಡೀ ಜಗತ್ತನ್ನು ಮಿನಿಮಮ್ 10 ರಿಂದ 15 ವರ್ಷ ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಆಶ್ಚರ್ಯ ಏನು ಎಂದರೆ ಅಮೆರಿಕ ಹಾಗೂ ಇಸ್ರೇಲ್ ಇವೆರಡರ ಶಕ್ತಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದು. ಅಂತಹ ಶಕ್ತಿಯನ್ನೇ ಇರಾನ್ ಕಂಗಾಲು ಮಾಡಿರುವಂತದ್ದು.
ಪರಿಣಾಮ ಇಸ್ರೇಲಿನ ಒಳಗೆ ಸಾಕಷ್ಟು ವಿರೋಧದ ಮಾತುಗಳು ಕೇಳಲಾರಮಿಸಿವೆ. ಸೈನ್ಯದ ಒಳಗು ಅಸಮಾಧಾನ ಸೃಷ್ಟಿಯಾಗಿದೆ. ರಜೆಗೆ ಹೋದ ಸೈನಿಕರು ವಾಪಸ್ ಕರ್ತವ್ಯಕ್ಕೆ ಬರಲು ಒಪ್ಪುತ್ತಿಲ್ಲ. ಅವರ ಪ್ರಕಾರ ಇದು ಅನವಶ್ಯಕವಾದ ಯುದ್ಧ. ಇದರಿಂದಾಗಿ ಇಡೀ ದೇಶ ಸಂಕಷ್ಟಕ್ಕೆ ಈಡಾಗಿದೆ ಎನ್ನುವುದು ಅವರ ಆರೋಪ. ಜೊತೆಗೆ ಇನ್ನೂ ಒಂದು ಆರೋಪವಿದೆ. ಇಸ್ರೇಲ್ ಅಲ್ಲೊಂದು ಸಾಂಪ್ರದಾಯಕವಾದ ಬುಡಕಟ್ಟು ಸಮುದಾಯವಿದೆ. ಅವರನ್ನು ಹರೇಡಿ ಸಮುದಾಯವೆಂದು ಕರೆಯುತ್ತಾರೆ. ಇಸ್ರೇಲಿನ ಇಲ್ಲಿ ಎಲ್ಲರಿಗೂ ಸೈನ್ಯದಲ್ಲಿ ಕೆಲಸ ಮಾಡುವುದು ಕಡ್ಡಾಯ. ಆದರೆ ಈ ಹರೇಡಿ ಸಮುದಾಯದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಈಗ ಈ ವಿಚಾರ ಮುನ್ನೆಲೆಗೆ ಬಂದಿದೆ. ಆ ಒಂದು ಸಮುದಾಯಕ್ಕೆ ಮಾತ್ರ ಯಾಕೆ ವಿನಾಯತಿ ಎಂಬ ಪ್ರಶ್ನೆಯನ್ನು ಇತರ ಸೈನಿಕರು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಅಲ್ಲಿನ ವಿರೋಧ ಪಕ್ಷದ ನಾಯಕ ಲ್ಯಾಪಿಡ್ ಕೂಡ ಸರ್ಕಾರದ ನಿರ್ಧಾರಗಳ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರವು ತಪ್ಪು ನಿರ್ಧಾರಗಳನ್ನು ಮಾಡುತ್ತಿದೆ ಇದರಿಂದ ದೇಶವನ್ನು ಸಂಕಷ್ಟಕೀಡು ಮಾಡುತ್ತಿದ್ದಾರೆ ಎನ್ನುವುದು ಅವರ ನೇರ ಆರೋಪವು ಆಗಿದೆ.
_ದತ್ತು

#IsraelIranWar#ವಾರ್ crisis

COMMENTS

Login with Gmail to comment

ಇನ್ನಷ್ಟು ಸುದ್ದಿ

ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..