📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ


    ಮಂಗಳೂರುದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಲಾಯಿತು. ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ಈ ಕೇಂದ್ರವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಿ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುತ್ತೂಟ್ ಫೈನಾನ್ಸ್ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ್ ನಾಯ್ಕ್, ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ ಮತ್ತು ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡುತ್ತಿದ್ದಾರೆ. ಮಹಿಳಾ ದಿನವು ಕೇವಲ ಆಚರಣೆಯ ದಿನವಲ್ಲ; ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮಾನ ಪ್ರಾತಿನಿಧ್ಯ ಹಾಗೂ ಗೌರವಯುತ ಜೀವನಕ್ಕೆ ಸಂಕಲ್ಪ ಮಾಡುವ ದಿನವಾಗಿದೆ ಎಂದು ಹೇಳಿದರು.

    Also Read  ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ ಮಾತನಾಡಿ, ಮಹಿಳಾ ದಿನಾಚರಣೆ ಸಮಾಜದಲ್ಲಿ ಸಮಾನತೆ ಮತ್ತು ಗೌರವಕ್ಕಾಗಿ ಒಟ್ಟಾಗಿ ಕಾರ್ಯನಿರ್ವಹಿಸುವ ಸಂದೇಶ ನೀಡುತ್ತದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ. ಮಹಿಳಾ ಸಂಪನ್ಮೂಲ ಕೇಂದ್ರವು ಜಿಲ್ಲೆಯ ಮಹಿಳೆಯರಿಗೆ ತರಬೇತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯನ್ನು ನೀಡುವ ಮೂಲಕ ಸಬಲೀಕರಣಕ್ಕೆ ನೆರವಾಗಲಿದೆ ಎಂದು ಹೇಳಿದರು.

    ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಸಿಎಸ್‌ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಮಾತನಾಡಿ, ಸಂಸ್ಥೆ ಸಾಮಾಜಿಕ ಜವಾಬ್ದಾರಿಯೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮುತ್ತೂಟ್ ಫೈನಾನ್ಸ್ ಪಿವಿಎಸ್ ಶಾಖೆಯ ವ್ಯವಸ್ಥಾಪಕಿ ಗಾಯತ್ರಿ ನಾಯಕ್ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಪ್ರಿಯ ಮಾತನಾಡಿದರು. ಮುತ್ತೂಟ್ ಫೈನಾನ್ಸ್ ವಲಯ ವ್ಯವಸ್ಥಾಪಕ ಸಂದೇಶ್ ಶೆಣೈ, ಶಾಖಾ ವ್ಯವಸ್ಥಾಪಕ ಚಂದ್ರಶೇಖರ್ ಯು, ವಿಜಿಲನ್ಸ್ ಅಧಿಕಾರಿ ತಾರನಾಥ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

    Also Read  ಚುನಾವಣಾ ಆಯೋಗ ಸರ್ವಾಧಿಕಾರಿಯಾಗುತ್ತಿದೆ ಎಂಬ ಅನುಮಾನದ ಸುತ್ತ....

    ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 8 ಮಕ್ಕಳಿಗೆ ಹೊಯ್ಸಳ ಕೆಳದಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಡಿಜಿಟಲ್ ಡಿಟಾಕ್ಸ್‌ಗೆ ಮಾದರಿಯಾದ ಸಿಇಒ: ಯುವಜನತೆಗೆ ಹೊಸ ಸಂದೇಶ!
    “ಒಂದು ಫಾರ್ವರ್ಡ್… ಒಂದು ಎಫ್‌ಐಆರ್!”ಲಾವಣ್ಯ ಕೊಲೆ ಪ್ರಕರಣ ಆರೋಪಿಗೆ ಕೋಮು ಬಣ್ಣ ಹಚ್ಚಿದ – 6 ಸಾಮಾಜಿಕ ಜಾಲತಾಣ ಖಾತೆಗಳು/ಗ್ರೂಪ್‌ಗಳ ವಿರುದ್ಧ FIR..!
    ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
    ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಬೋಗಸ್ ದೂರು ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಗಂಡಾಂತರ ಗ್ಯಾರೆಂಟಿ
    ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
    2029ರೊಳಗೆ 21 ಎನ್‌ಡಿಎ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ
    ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಹೈಪ್ ನಡುವೆ ಮಂಧಾನಾ ಮಾತು ವೈರಲ್…
    ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ
    ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಎರಡು ಬಣಗಳ ರಣರಂಗ!ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಕ್ಷಣ…
    ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
    ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ಮನೆಗೆ ಡಿ.ಕೆ. ಶಿವಕುಮಾರ್ ಸರ್ಪ್ರೈಸ್ ವಿಸಿಟ್!
    ಭೀಕರ ಅಪಘಾತ ಮಹಿಳೆ ಬಲಿ
    ಮಂಗಳೂರು ಹೆದ್ದಾರಿಗಳಲ್ಲಿ ರಾತ್ರಿ ಟ್ರಾನ್ಸ್ಜೆಂಡರ್ ಕಿರುಕುಳಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಸೂಚನೆ..!
    ಬಿಲ್‌ಗಾಗಿ ಶವ ತಡೆದರೆ ಹುಷಾರ್! ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಕ್ರಮ?
    ಆಂಬುಲೆನ್ಸ್ ಡ್ರೈವರ್ ನ ಸಮಾಜ ಸೇವೆಯ ಕಾರ್ಯ ಶ್ಲಾಘನಿಯ – ಸುದೇಶ್ ಕುಮಾರ್
    ಸುರ್ಜೆವಾಲ ಸಿಎಂ ಡಿಕೆಶಿ ಗುಪ್ತ ಮಾತುಕತೆ
    ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
    ನಿತ್ಯ bus ಪ್ರಯಾಣಿಕರಿಗೆ ಶಾಕ್‌: ‌ ಟಿಕೆಟ್‌ ದರ 5 ರಿಂದ 8% ಹೆಚ್ಚಳ: ಇನ್ಮೇಲೆ ಓಡಾಟ ಮತ್ತಷ್ಟು ದುಬಾರಿ!
    ಆನ್ಲೈನ್ ವಂಚಕರಿಂದ ಮಂಗಳೂರು ಡಾಕ್ಟರ್ ಒಬ್ಬರ ಏಳು ದಿನಗಳ ಕಾಲ ಹೌಸ್ ಅರೆಸ್ಟ್
    ಮೋದಿ ಪೋಸ್ಟ್‌ನಿಂದ ಮೆಟಾಗೆ ಸಮನ್ಸ್! ಡಿಜಿಟಲ್ ಸುರಕ್ಷತೆ ಕುರಿತು ಕೇಂದ್ರದ ಕಠಿಣ ಪ್ರಶ್ನೆಗಳು
    60 ಕೋಟಿ ರೂ. ಸರ್ಕಾರಿ ಹಣ ಗುಳುಂ: ಸಿಬಿಐ ಬಲೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ!
    ಅಹಮದಾಬಾದ್ ಬಾಂಬ್ ಸ್ಫೋಟ:38 ಮಂದಿಗೆ ಗಲ್ಲು ಎತ್ತಿಹಿಡಿದ ಹೈಕೋರ್ಟ್
    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    “ಸೌಜನ್ಯಾ ಕೇಸ್ ಮತ್ತೆ ಓಪನ್!”14 ವರ್ಷಗಳ ಬಳಿಕ ಸೌಜನ್ಯಾ ಪ್ರಕರಣಕ್ಕೆ ಮತ್ತೆ ಮರುಜೀವ!ಸುಪ್ರೀಂ ‘ರೀ-ಸ್ಟಾರ್ಟ್’!
    “ಬೇಕಾದರೇ ನನಗೆ ಪೊರಕೆಲಿ ಹೊಡಿರಿ ಆದ್ರೆ ಅಧಿಕಾರಿಗಳಿಗಲ್ಲ”- ಡಿಕೆಶಿ “ಭೂಮಿ ಉಳಿಸಿಕೊಳ್ಳಲು ಹೋರಾಡಿದ ರೈತರ ಮೇಲೆ ಕೊಲೆ ಕೇಸ್? ಬಿಡದಿ ವಿವಾದದ ಬಗ್ಗೆ ರಾಜ್ಯಾದ್ಯಂತ ಆಕ್ರೋಶ!
    ಏನಿದು ‘ಲಾಸ್ಟ್ ಲೈವ್’ ಮತ್ತು ಅಂತಿಮ ಸಂಸ್ಕಾರದ ವಿಡಿಯೋ ಅಸಲಿ ಸಮಾಚಾರ? ವೈರಲ್ ಆದ ಬಿಹಾರದ ಭರತ್ ತಿವಾರಿ ಎನ್‌ಕೌಂಟರ್ ಕೇಸ್…
    ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
    ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು