📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ

30 ವರ್ಷ ದನದ ಕೊಟ್ಟಿಗೆಯಲ್ಲಿ ಬದುಕಿದ ನಾಗ!! ಒಂದು ನಯಾ ಪೈಸೆಯೂ ಸಂಬಳ ಕೊಡದೆ ಮೂರು ದಶಕದಿಂದ ದುಡಿಸಿ ಕೊಳ್ಳಲಾಗುತ್ತಿದ್ದ ಪ್ರಕರಣ.. ಉಡುಪಿಯಲ್ಲಿ ಶಾಕ್… ಆರೋಪಿ –ಮಹಿಳೆ ಬಂಧನ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಕಬೈಲು ಗ್ರಾಮದಲ್ಲಿ ಅಮಾನವೀಯತೆಯನ್ನು ಕಂಗೊಳಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಕೊರಗ ಸಮುದಾಯದ ವ್ಯಕ್ತಿಯೊಬ್ಬರನ್ನು ಸುಮಾರು 30 ವರ್ಷಗಳಿಂದ ಜೀತದಾಳಾಗಿ ಮನೆಯಲ್ಲಿ ಕೆಲಸ ಮಾಡಿಸಿಕೊಂಡು ದೌರ್ಜನ್ಯ ನಡೆಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಈ ಘಟನೆ ಇದೀಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು,  ದಾಸ್ಯ ವ್ಯವಸ್ಥೆಯಂತಹ ಪರಿಸ್ಥಿತಿ ಇನ್ನೂ ಸಮಾಜದಲ್ಲಿ ಇರುವುದನ್ನು ಈ ಪ್ರಕರಣ ಮತ್ತೆ ನೆನಪಿಸಿದೆ.

30 ವರ್ಷ ಕೆಲಸ ಮಾಡಿದರೂ ಸಂಬಳ ಇಲ್ಲ. ದನದ ಕೊಟ್ಟಿಗೆಯಲ್ಲೇ ವಾಸ – ಮಾನವೀಯತೆ ಮರೆತ ವರ್ತನೆ, ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜೀತದಾಳು ಪದ್ಧತಿ, ಜೀತಕ್ಕೆ ಇಟ್ಟುಕೊಂಡವರು ಪುಗಸಟ್ಟೆ ಕೆಲಸ ಮಾಡಿಸಿಕೊಂಡು  ದರ್ಬಾರ್ ನಡೆಸುತ್ತಿದ್ದರು.

65 ವರ್ಷದ ನಾಗನಿಗೆ ಅವನ ಹರೆಯದ ಕಾಲದಲ್ಲೇ ಕೆಲಸ ಕೊಡುತ್ತೇವೆ ಎಂದು ಕರೆದುಕೊಂಡು ಹೋಗಿ ಬಂಧನದ ಬದುಕು ಕೊಟ್ಟ ಕುಟುಂಬವೇ ಈ ರಜನಿ ಶೆಟ್ಟಿಯ ಕುಟುಂಬ ನೋಡಿ , ದನ ಕಾಯುವುದು, ತೋಟದ ಕೆಲಸ – ವಿಶ್ರಾಂತಿ ಇಲ್ಲದ ದಿನಗಳು ಆ ನಾಗನದ್ದಾಗಿತ್ತು

ಮೂಲತಃ ಕನ್ಯಾನ ಗ್ರಾಮದ ನಿವಾಸಿಯಾದ ನಾಗ (65) ಅವರು ಸುಮಾರು 30 ವರ್ಷಗಳ ಹಿಂದೆ ಕೆಲಸದ ಹುಡುಕಾಟದಲ್ಲಿದ್ದಾಗ ಹೆಮ್ಮಾಡಿಯ ನಿವಾಸಿ ಸುಬ್ಬಣ್ಣ ಶೆಟ್ಟಿ ಅವರು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಇಟ್ಟಿದ್ದರು. ಆದರೆ ಕೆಲಸದ ಹೆಸರಿನಲ್ಲಿ ಆರಂಭವಾದುದು ನಾಗನಿಗೆ ಬದುಕಿನ ಬಂಧನವಾಗಿಯೇ ಮಾರ್ಪಟ್ಟಿತು ಎಂದು ಆರೋಪಿಸಲಾಗಿದೆ.

ದನ ಕಾಯುವುದು, ತೋಟದ ಕೆಲಸ – ವಿಶ್ರಾಂತಿ ಇಲ್ಲದ ದಿನಗಳು
ನಾಗ ಅವರಿಗೆ ಪ್ರತಿದಿನ ವಿವಿಧ ಕಠಿಣ ಕೆಲಸಗಳನ್ನು ಮಾಡಿಸಲಾಗುತ್ತಿತ್ತು.ಅವರಿಂದ ಮಾಡಿಸಲಾದ ಕೆಲಸಗಳು,ದನ ಹಾಗೂ ಎಮ್ಮೆಗಳನ್ನು ಕಾಯುವುದು,ಗದ್ದೆ ಮತ್ತು ತೋಟದ ಕೆಲಸ ದನದ ಸೆಗಣಿ ತೆಗೆದು ಸ್ವಚ್ಛಗೊಳಿಸುವುದು
ಮನೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು.ಈ ಎಲ್ಲಾ ಕೆಲಸಗಳನ್ನು ದಿನವೂ ನಿರಂತರವಾಗಿ ಮಾಡಬೇಕಾಗುತ್ತಿತ್ತು ಎಂದು ಹೇಳಲಾಗಿದೆ.

ದನದ ಕೊಟ್ಟಿಗೆಯಲ್ಲೇ ವಾಸ – ಮಾನವೀಯತೆ ಮರೆತ ವರ್ತನೆ
ನಾಗ ಅವರಿಗೆ ಮನೆಯೊಳಗೆ ವಾಸಿಸಲು ಅವಕಾಶ ನೀಡಲಾಗಲಿಲ್ಲ ಎಂದು ದೂರಲಾಗಿದೆ. ಅವರಿಗೆ ದನದ ಕೊಟ್ಟಿಗೆಯಲ್ಲೇ ವಾಸ ಮಾಡಲು ಬಲವಂತ ಮಾಡಲಾಗಿತ್ತು.

ಅವರ ಪರಿಸ್ಥಿತಿ ಹೇಗಿತ್ತೆಂದರೆ
ಮಲಗುವ ಸ್ಥಳ – ದನದ ಕೊಟ್ಟಿಗೆ
ಊಟ – ಕೊಟ್ಟಿಗೆಯಲ್ಲೇ
ಬಟ್ಟೆ ಮತ್ತು ಪಾತ್ರೆಗಳು – ಕೊಟ್ಟಿಗೆಯಲ್ಲೇ ಇಡಬೇಕು
ಊಟವನ್ನು ಬಾಳೆ ಎಲೆಯಲ್ಲಿ ನೀಡಲಾಗುತ್ತಿತ್ತು.ಇದು ಮನುಷ್ಯನಿಗಿಂತ ಕಡಿಮೆ ಗೌರವದ ಜೀವನ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

30 ವರ್ಷ ಕೆಲಸ ಮಾಡಿದರೂ ಸಂಬಳ ಇಲ್ಲ. …ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ನಾಗ ಅವರು ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿದರೂ ಅವರಿಗೆ ಯಾವುದೇ ಸಂಬಳ ನೀಡಲಾಗಲಿಲ್ಲ.
ಅದರ ಜೊತೆಗೆ,ಮನೆಯಿಂದ ಹೊರಗೆ ಹೋಗಲು ಅವಕಾಶ ನೀಡಲಾಗಲಿಲ್ಲ
ಸ್ವತಂತ್ರವಾಗಿ ಬದುಕಲು ಅವಕಾಶ ಇರಲಿಲ್ಲ. ಇದು ಜೀತದಾಳು ಪದ್ಧತಿಯ ಗಂಭೀರ ಉದಾಹರಣೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆ ಬಂಧನ – ಪೊಲೀಸ್ ತನಿಖೆ ಮುಂದುವರಿಕೆ

ಸುಬ್ಬಣ್ಣ ಶೆಟ್ಟಿ ಮೃತಪಟ್ಟ ನಂತರ ಅವರ ಮಗಳು ರಜನಿ ಶೆಟ್ಟಿ ಮತ್ತು ಅಳಿಯ ಕರುಣಾಕರ ಶೆಟ್ಟಿ ನಾಗ ಅವರಿಂದ ಕೆಲಸ ಮಾಡಿಸುತ್ತಿದ್ದರು ಎಂದು ಹೇಳಲಾಗಿದೆ.

ಈ ಪ್ರಕರಣದ ಸಂಬಂಧ ಪೊಲೀಸರು ರಜನಿ ಶೆಟ್ಟಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜೀತದಾಳು ಪದ್ಧತಿ

ಈ ಘಟನೆ ಮತ್ತೊಮ್ಮೆ ಸಮಾಜದಲ್ಲಿ ಇನ್ನೂ ಕೆಲವೆಡೆ ಜೀತದಾಳು ಪದ್ಧತಿ ಮತ್ತು ಸಮುದಾಯದ ಮೇಲೆ ನಡೆಯುವ ಅನ್ಯಾಯಗಳು ಮುಂದುವರಿಯುತ್ತಿರುವುದನ್ನು ಸ್ಪಷ್ಟಪಡಿಸಿದೆ.

ನಾಗ ಅವರಂತಹ ಅನೇಕ ಜನರ ಕಥೆಗಳು ಇನ್ನೂ ಹೊರಬರದೇ ಇರುವ ಸಾಧ್ಯತೆಯೂ ಇದೆ ಎಂದು ಸಾಮಾಜಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸುತ್ತಿವೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
ಬಾಲಗರ್ಭಿಣಿಯರ ಸಂಖ್ಯೆ 5975….!!
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್
“ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
ಪೂಜೆಗಾಗಿ ತೆರಳಿದ ಅರ್ಚಕರ ಶವ ನಾಲೆಯಲ್ಲಿ ಪತ್ತೆ
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.