📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ

ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಿಂದ ಹಲವು ರೀತಿಯ ಅನುಮಾನಗಳು ಹುಟ್ಟಿಕೊಂಡಿದ್ದವು. ಆ ಅನುಮಾನಗಳಿಗೆಲ್ಲ ತೆರೆ ಎಳೆಯುವ ನಿಟ್ಟಿನಲ್ಲಿ ತನಿಖಾ ರಿಪೋರ್ಟ್ ಬಂದಿದೆ. ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ನಡೆಸಿದಂತಹ ಈ ತನಿಖೆಯಲ್ಲಿ, ಸಿಜೆ ರಾಯ್ ಮಾನಸಿಕ ಖಿನ್ನತೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ರಿಪೋರ್ಟ್ ಬಂದಿದೆ.

ನಿರೀಕ್ಷಿತವಾದಂತಹ ರಿಪೋರ್ಟ್ ಅದು ಅನ್ನುವುದು ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿರುವಂತಹ ಮೊದಲ ಮಾತಾಗಿದೆ. ಉದ್ಯಮಿ ಸಿಜೆ ರಾಯ್  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತಹ ಸಂದರ್ಭದಲ್ಲಿ, ಅವರ ಸಂಸ್ಥೆಯ ಮೇಲೆ ಈಡಿ ರೈಡ್ ಮಾಡಿತ್ತು. ಅದೇ ಸಂದರ್ಭದಲ್ಲಿ ಉದ್ಯಮಿ ತಮ್ಮದೇ ರಿವಲ್ವಾರಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಾನಸಿಕ ಖಿನ್ನತೆ ಕಾರಣಕ್ಕೆ ಉದ್ಯಮಿಯು ಆತ್ಮಹತ್ಯೆ ಮಾಡಿಕೊಂಡಿದ್ದು ಅನ್ನುವುದನ್ನು ಈಗ ಬಂದಿರೋ ತನಿಖಾ ರಿಪೋರ್ಟ್ ಹೇಳುತ್ತಿದೆ. ಆ ಮಾನಸಿಕ ಖಿನ್ನತೆ ಯಾವ ಕಾರಣದಿಂದ, ಯಾವ ಕಾರಣಕ್ಕೆ ಆತ್ಮಹತ್ಯೆಯ ಮಟ್ಟಕ್ಕೆ ಹೋಗುವಂತೆ ಮಾಡಿತು? ಯಾವ ಕಾರಣಕ್ಕೆ ಆ ಖಿನ್ನತೆಯು  ಈಡಿ ದಾಳಿಯ ಸಮಯದಲ್ಲೇ ಸ್ಪೋಟಗೊಂಡಿತು? ಇದರ ಹಿಂದಿನ ಮರ್ಮವನ್ನು ತನಿಖಾ ತಂಡವು ಬಿಚ್ಚಿಡಲಿಲ್ಲ ಅನ್ನುವುದು ಇಲ್ಲಿ ಇಂಪಾರ್ಟೆಂಟ್. ಉದ್ಯಮಿಯು ಬೇರೆ ಯಾವುದೋ ಖಿನ್ನತೆಯಿಂದ ಬಳಲುತ್ತಿದ್ದರೆ, ಒತ್ತಡಕ್ಕೆ ಒಳಗಾಗಿದ್ದರೆ ಈ ಡಿ ದಾಳಿಯ ಸಂದರ್ಭವನ್ನೇ ತಮ್ಮ ಆತ್ಮಹತ್ಯೆಗೆ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಮಾನಸಿಕ ಖಿನ್ನತೆಯನ್ನು ಒಳಗೊಂಡ ವ್ಯಕ್ತಿ, ಇದಕ್ಕೂ ಮೊದಲು ಆತ್ಮಹತ್ಯೆಗೆ ಪ್ರಯತ್ನಿಸಿದ್ದರೆ? ಪ್ರಯತ್ನಿಸಿದ್ದರೆ ಅಂತಹ ಪ್ರಯತ್ನಗಳು ಎಷ್ಟು ಬಾರಿ ಆಗಿದ್ದವು? ಅವೆಲ್ಲವೂ ತನಿಖಾ ರಿಪೋರ್ಟಿನಲ್ಲಿ ಬಂದಿರಬೇಕು ತಾನೆ? ಇವೆಲ್ಲವನ್ನು ಒಳಗೊಂಡ ರಿಪೋರ್ಟ್ ಅದಾಗಿದ್ದರೆ ಖಂಡಿತವಾಗಿಯೂ ರಾಜ್ಯದ ಜನರು ಅದನ್ನು ಒಪ್ಪಿಕೊಳ್ಳುತ್ತಾರೆ. ಅದಿಲ್ಲದಿದ್ದರೆ ಜನಸಾಮಾನ್ಯರಲ್ಲಿನ ಅನುಮಾನ ಹೋಗುವುದೇ ಇಲ್ಲ. ಡಿಕೆ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಹುತ್ತವೇ ಜನಸಾಮಾನ್ಯರಲ್ಲಿ ಇದೆ. ಅದನ್ನು ಹೋಗಲಾಡಿಸುವ ಪ್ರಯತ್ನ ಸರ್ಕಾರದಿಂದ ಆಗಲೇ ಇಲ್ಲ. ತನಿಕಾ ಸಂಸ್ಥೆಗಳ ತನಿಖೆಯನ್ನು ಜನರು ಒಪ್ಪಲೂ ಇಲ್ಲ. ಜನಸಾಮಾನ್ಯರು ಆ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಾರೆಲ್ಲಾ ಆರೋಪಿಗಳು ಅಂತ ಅಂದುಕೊಂಡಿದ್ದರೊ ಅವರು ಈಗಲೂ ರಾಜರಂತೆಯೇ ಮೆರೆಯುತ್ತಿದ್ದಾರೆ ಹೆಸರಿನಿಂದ ಹೇಳುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೆ ಸರ್ಕಾರ ನಡೆಸುವಂತಹ ಈ ರೀತಿಯ ತನಿಖೆಗಳ ಮೇಲೆ ನಂಬಿಕೆ ಹೊರಟು ಹೋಗುತ್ತಿದೆ. ಒಳ್ಳೆಯ ಬೆಳವಣಿಗೆಯಂತೂ ಅಲ್ಲ, ಇದು ದುರದಷ್ಟಕರ ವಿಚಾರ. 

ಸಿಜೆ ರಾಯ್ ಪ್ರಕರಣದಲ್ಲೂ ಇದೇ ಆಗುತ್ತಿದೆ. ಜನಸಾಮಾನ್ಯರು ಅಂದುಕೊಳ್ಳುತ್ತಿರುವುದೇ ಬೇರೆ. ಜನಸಾಮಾನ್ಯರ ಪ್ರಕಾರ, ಸಿಜೆ ರಾಯ್ ಅವರನ್ನು ಒತ್ತಡಕ್ಕೆ ಸಿಲುಕಿಸುವ ಕೆಲಸವನ್ನು ಕಾಣದ ಕೈ, ವ್ಯವಸ್ಥೆಯ ಮೂಲಕವೇ ಮಾಡಿದೆ. ಆ ವ್ಯವಸ್ಥೆಯ ಮೂಲಕ ಮಾಡಲಾದ ಈ ಒತ್ತಡಕ್ಕೆ ಸಿಜೆ ಬಲಿಯಾಗಿದ್ದಾರೆ. ಆ ವಿಚಾರದಲ್ಲಿ ತನಿಖೆಯು ಸಾಗಿಯೇ ಇಲ್ಲ, ಕೇವಲ ನಿರ್ದಿಷ್ಟ ವಿಚಾರದ ನಿರ್ದೇಶನದಲ್ಲಿ ತನಿಖೆಯು ನಡೆದಂತೆ ಕಾಣುತ್ತಿದೆ ಅನ್ನೋದು ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಂತಹ ವ್ಯಕ್ತಿಗಳ ಅಭಿಪ್ರಾಯ. ಕೇವಲ ಅಭಿಪ್ರಾಯವಲ್ಲ ಆರೋಪವು ಹೌದು.  

COMMENTS

Login with Gmail to comment

ಇನ್ನಷ್ಟು ಸುದ್ದಿ

ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
“ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ 
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.