📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ

ನಿರೀಕ್ಷಿತ ಬೆಲೆ ಏರಿಕೆಯೇ ಇದು. ತೈಲ ಹಾಗೂ ಗ್ಯಾಸ್ ದರ ಏರುತ್ತದೆ ಎಂಬ ನಿರ್ಧಾರಕ್ಕೆ ಈಗಾಗಲೇ ಸಾಮಾನ್ಯ ಜನರು ಬಂದುಬಿಟ್ಟಿದ್ದರು. ಈ ದರ ಏರಿಕೆಯು, ಇದಕ್ಕೆ ರಿಲೇಟೆಡ್ ಆಗಿರುವ ಅನೇಕ ವಸ್ತುವಿನ ಬೆಲೆ ಏರಿಕೆಗೆ ಕಾರಣವಾಗಲಿದೆ ಅನ್ನುವುದು ಸಹ ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ವಿಚಾರವಾಗಿದೆ. ಗ್ಯಾಸ್ ದರ ಏರಿಕೆಯಿಂದ ಮುಖ್ಯವಾಗಿ ಮಧ್ಯಮವರ್ಗದವರ ಮುಖದಲ್ಲಿ ಕಪ್ಪು ಕಾಣಿಸಿಕೊಳ್ಳುತ್ತಿದೆ. ಅವರ ಮುಖದಲ್ಲಿ ಸ್ಪಷ್ಟವಾಗಿ ಹತಾಶೆಯ ಲಕ್ಷಣ ಗೋಚರವಾಗುತ್ತಿದೆ.

ಮಧ್ಯ ಪ್ರಾಚ್ಯದ ಪ್ರಾಂತ್ಯಗಳಲ್ಲಿ ಯುದ್ಧದ ಪ್ರಾರಂಭಿಕ  ಕಹಳೆಯು ಈಗಷ್ಟೇ ಮೊಳಗಿದೆ. ಆಗಲೇ ತೈಲ ಬೆಲೆಯಲ್ಲಿ ಏರಿಕೆ ಕಂಡಿದೆ ಗ್ಯಾಸ್ ದರವು ಸಹ 60 ರಿಂದ 70 ರೂ ಏರಿಕೆಯಾಗಿದೆ.

ನಮ್ಮ ದೇಶದ ಸರ್ಕಾರ ಇಂತಹ ಸಂದರ್ಭದಲ್ಲಿ ಒಂದಷ್ಟು ಕಟ್ಟು ನಿಟ್ಟಿನ ನಿರ್ಧಾರ ಹಾಗೂ ಕ್ರಮ ಎರಡನ್ನೂ ಮಾಡಬೇಕಿತ್ತು. ಆದರೆ ಆ ಕೆಲಸವನ್ನು ಈ ಕ್ಷಣದವರೆಗೆ ನಮ್ಮ ದೇಶದ ಸರ್ಕಾರಗಳು ಮಾಡಲು ಆಸಕ್ತಿಯನ್ನೇ ತೋರಿಸಿಲ್ಲ. ಅಷ್ಟಕ್ಕೂ ಇಂತಹ ಸಂದರ್ಭದಲ್ಲಿ ತಕ್ಷಣದ ಕ್ರಮಕ್ಕೆ ಅಂದರೆ ಜನಸಾಮಾನ್ಯರ ಮೇಲೆ ಯಾವುದೇ ರೀತಿಯ ಹೆಚ್ಚಿನ ಹೊರೆ ಬೀಳದ ರೀತಿಯಲ್ಲಿ ಮಾರ್ಕೆಟ್ ನಿಯಂತ್ರಣವನ್ನು ಸರ್ಕಾರವು ಖುದ್ದಾಗಿ ಮಾಡಬೇಕಿತ್ತು. ಅರಬ್ ರಾಷ್ಟ್ರಗಳ ಪೈಕಿ ಕೆಲವು ರಾಷ್ಟ್ರಗಳು ಈ ಕೆಲಸವನ್ನು ನಾಲ್ಕು ದಿನಗಳ ಹಿಂದೆಯೇ ಮಾಡಿವೆ. ಯಾವುದೇ ಅಗತ್ಯ ವಸ್ತುಗಳ ಮೇಲಿನ ದರ ಏರಿಸದಂತೆ ಕಟ್ಟುನಿಟ್ಟಿನ ಆದೇಶವನ್ನು ಆ ದೇಶದ ಉದ್ಯಮಿಗಳಿಗೆ ವ್ಯಾಪಾರಸ್ಥರಿಗೆ ನೀಡಿದ್ದಾರೆ. ಆ ದೇಶವು ನೀಡುವ ಆದೇಶವನ್ನು, ಅಲ್ಲಿನ ವ್ಯಾಪಾರಸ್ಥರು ಉದ್ಯಮಿಗಳು ಪಾಲಿಸುವಂತೆ ನೋಡಿಕೊಳ್ಳುತ್ತಾರೆ ಅದು ಕೂಡ ಮುಖ್ಯ ಎನಿಸಿಕೊಳ್ಳುತ್ತದೆ.

ನಮ್ಮ ದೇಶದ ಸರ್ಕಾರಗಳಿಂದಲೂ ನಾವು ಇಂಥವುದೇ ನಡೆಯನ್ನು ನಿರೀಕ್ಷಿಸುವುದು ತಪ್ಪಲ್ಲ ತಾನೇ? ದುರ್ದೈವ ಎಂದರೆ, ಇಂತಹ ಮಾತನ್ನು ಆಡಿದರೆ ನಮ್ಮಲ್ಲಿ ಸರ್ಕಾರದ ಪರವಾಗಿ ನಿಂತ ಕೆಲವು ನಾಗರಿಕರು ಸರ್ಕಾರದ ನಿರ್ಧಾರವೇ ಸರಿ ಅನ್ನುವ ರೀತಿಯಲ್ಲಿ ವಾದ ಮಾಡುತ್ತ ನಾಗರಿಕರ ಮೇಲಿನ ಹೊರೆಯನ್ನು ಸಮರ್ಥಿಸಿ ಕೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ತಟ್ಟದಂತೆಯೂ ನೋಡಿಕೊಳ್ಳುತ್ತಾರೆ. ಇಂತಹ ವಿಚಾರದಲ್ಲಿ ದೇಶದ ನಾಗರಿಕರು ಒಟ್ಟಾಗಿ ಸರ್ಕಾರವನ್ನು ನಾಗರಿಕರ ಪರ ಸರ್ಕಾರವನ್ನಾಗಿಸುವ ನಿಟ್ಟಿನಲ್ಲಿ ಸಾಗಬೇಕಿತ್ತು. ಆದರೆ ಅದು ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ ಜನರನ್ನು ಆಳುವ ವರ್ಗವು ಉದ್ಯಮಿಗಳ ಅಥವಾ ಹಲವು ಉದ್ಯಮ ಸ್ನೇಹಿ ಮಾಧ್ಯಮಗಳ ಸಹಾಯದಿಂದ ಸಾಮಾನ್ಯ ಜನರನ್ನು ಯಾವತ್ತೂ ಒಂದಾಗದಂತೆ ವಿಭಜಿಸಿಯಾಗಿದೆ. ಈ ವಿಭಜನೆಯ ಕಾರಣದಿಂದಾಗಿ ನಮ್ಮ ದೇಶದ ಸರ್ಕಾರಗಳು ಯಾವ ಅಂಜಿಕೆಯೂ ಇಲ್ಲದೆ ತಮಗೆ ಹೇಗೆ ಬೇಕೋ ಹಾಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಆಡಳಿತವನ್ನು ನಡೆಸುತ್ತಾರೆ. 

ದೇಶದಲ್ಲಿ ಒಂದು ತಿಂಗಳಿಗಾಗುವಷ್ಟು ತೈಲಗಳು ಸ್ಟಾಕ್ ಇವೆ. ಅದು ಎಲ್ಲಾ ದೇಶದಲ್ಲೂ ಇದ್ದೇ ಇರುತ್ತದೆ. ಹಾಗಿರುವಾಗ ಆ ಸ್ಟಾಕುಗಳ ಮೇಲಿನ ದರವನ್ನು ಹೆಚ್ಚಿಸಲು ಅವಕಾಶ ಇರಬಾರದು. ಆದ್ರೂ ತೈಲೋದ್ಯಮಿಗಳು, ಅದನ್ನು ಯಾವುದೇ ಕ್ಷಣದಲ್ಲಾದರೂ ಏರಿಸುತ್ತಾರೆ. ಈ ಬಗ್ಗೆ ಆಳುವವರು ಮಾತನಾಡುವುದಿಲ್ಲ ಆಳುವವರನ್ನು ಪ್ರಶ್ನಿಸಬೇಕಾದ ವಿರೋಧಪಕ್ಷದವರು ಗಂಭೀರವಾಗಿ ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ನಮ್ಮ ಜನರ ಮೇಲಿನ ಹೊರೆಯನ್ನು ಇಳಿಸುವ ಪ್ರಯತ್ನ ಬೇಡ, ಹೊರಿಸುವ ವಿಚಾರಧಲ್ಲಾದರೂ ಸರ್ಕಾರ ಅಂಕುಶ ಇಟ್ಟುಕೊಳ್ಳದೆ ಇರುವಂತದ್ದು ದುರ್ದೈವ. ಇವೆಲ್ಲವನ್ನು ಉದ್ಯಮ ಮಾಫಿಯಾ ನಿಯಂತ್ರಿಸುತ್ತಿದೆ ಅನ್ನುವುದಕ್ಕೆ ಇದಕ್ಕಿಂತಲೂ ದೊಡ್ಡ ಉದಾಹರಣೆಯೇ ಬೇಕಿಲ್ಲ ನೋಡಿ.

ಈಗಾಗಲೇ ಇರಾನ್ ಅಮೆರಿಕ ಇಸ್ರೇಲ್ ನಡುವಿನ ಕಾಳಗ ಎಂಟನೆಯ  ದಿನಕ್ಕೆ ಕಾಲಿಟ್ಟಿದೆ. ನಮ್ಮ ದೇಶಕ್ಕೆ ಇರಾನ್ ದೇಶದ ತೈಲ ಅತ್ಯವಶ್ಯಕ. ಈಗ ಅದಕ್ಕೆ ಈ ಕ್ಷಣದ ತಡೆ ಬಿದ್ದಿದೆ. ಕೇವಲ ಎಂಟನೇ ದಿನದಲ್ಲಿಯೇ ತೈಲ ಬೆಲೆಯಲ್ಲಿ ಏರಿಕೆಯೂ ಆಗಿದೆ. ಗ್ಯಾಸ್ ದರ ಏರಿಕೆ ಕಂಡಿದೆ. ಇದರ ಪರಿಣಾಮ, ಅಗತ್ಯ ವಸ್ತುಗಳ ಬೆಲೆಯು ಹೆಚ್ಚಾಗಲಿದೆ ಎನ್ನುವುದರಲ್ಲಿ  ಎರಡು ಮಾತೇ ಇಲ್ಲ. ಒಂದು ವಾರದಿಂದ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ ಕೂಡ. ಆದರೆ ಸರ್ಕಾರವು ಮಾತ್ರ ಈ ವಿಚಾರದಲ್ಲಿ ಆರ್ಥಿಕತೆಯ ಪರಿಣಾಮ ಬೀರದ ಹಾಗೆ ಯಾವ ರೀತಿ ನಿಭಾಯಿಸಬೇಕು ಅನ್ನುವುದರ ಬಗ್ಗೆ ಗಂಭೀರ  ಚಿಂತನೆ ಮಾಡದಿರುವುದು ಮೇಲ್ನೋಟಕ್ಕೆ  ಕಂಡುಬರುತ್ತದೆ. ಈ ಸಂದರ್ಭದಲ್ಲಿ ನಾಗರಿಕರ ಪರವಾಗಿ ಹಾಗೂ ಮಾರ್ಕೆಟ್ ನಿಯಂತ್ರಣ ಮಾಡುವವರ ಮೇಲೆ ಕಣ್ಣಿಡುವ ಕೆಲಸ ಜರೂರ್ ಆಗಿ ಆಗಬೇಕಿತ್ತು , ಅದು ಯಾವುದು ಇಲ್ಲಿ ಆಗಿಲ್ಲ ಅನ್ನೋದು, ಸರ್ಕಾರದ ಕಡೆಯಿಂದ ಈ ವಿಚಾರದಲ್ಲಿ ಯಾವುದೇ ರೀತಿಯ ತಿಳುವಳಿಕೆಯಾಗಲಿ, ಆದೇಶ ಮಾಡಿದ್ದಾಗಲಿ ಕಾಣದೆ ಇರುವಂತದ್ದನ್ನು ನಾವು ನೋಡಬಹುದು. 

ಈಗಲೂ ಕಾಲ ಮಿಂಚಿಲ್ಲ ಸರ್ಕಾರವು ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ದೇಶದ ಜನರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಆದಾಯದಲ್ಲಿ ಸ್ವಲ್ಪವೂ ಹೆಚ್ಚಾಗಿಲ್ಲ ಅನ್ನುವ ಕೊರಗು ಕಳೆದ ಎರಡು ಮೂರು ವರ್ಷದಿಂದ ಇರುವುದು ಗೌಪ್ಯ ವಿಚಾರವಲ್ಲ. ಆದರೆ ಕಳೆದ ಎರಡು ಮೂರು ವರ್ಷದಲ್ಲಿ ಜನರ ಮೇಲೆ ಹೊರೆಯಂತು ಆಗಾಗ ಬೀಳುತ್ತಲೇ ಇದೆ.  ಜನರ ಆದಾಯದಲ್ಲಿ ಏರಿಕೆ ಕಾಣದೆ ಇರುವಾಗ ಅವರ ಮೇಲಿನ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗುತ್ತದೆ. ಇಷ್ಟರಲ್ಲಾಗಲೇ ಬೆಲೆ ಏರಿಕೆಯ ಬಿಸಿಯಿಂದ ಸಾಕಷ್ಟು ನಲಿಗಿರುವ ನಾಗರಿಕರಿಗೆ ಇನ್ನೊಮ್ಮೆ ಬೆಲೆ ಏರಿಕೆಯ ಪೆಟ್ಟನ್ನು ಕೊಡಬೇಡಿ ಎಂಬ ಮಾತುಗಳು ನಾಗರಿಕ ಸಮಾಜದ ಮುಖಂಡರುಗಳಿಂದ ಕೇಳಿಬರುತ್ತಿವೆ

COMMENTS

Login with Gmail to comment

ಇನ್ನಷ್ಟು ಸುದ್ದಿ

ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!
ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
2026 ವಿಧಾನಸಭೆ ಚುನಾವಣೆ – ಮುಖ್ಯ ಮಾಹಿತಿ
ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
ಸಚಿವ ಜಮೀರ್ ಕಥೆ ಗೋವಿಂದ!!!?
book ಮಾಡಿದ ನಿಮ್ಮ ಹೊಸ ಕಾರು-ಬೈಕ್ ಇನ್ನೂ ಬಂದಿಲ್ವಾ?ಪಶ್ಚಿಮ ಏಷ್ಯಾ ಯುದ್ಧದಿಂದ ಸರಬರಾಜು ವಿಳಂಬ…!
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
sdfdf
ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
ಕಾರಿಗೆ ಮಹಿಳೆ ಡಿಕ್ಕಿ..ಗುಳಿಗಜ್ಜನೆ ಕಾಪಾಡಿದ್ದ..! ಎದೆ ಜಲ್ಲೆನಿಸುವ ದೃಶ್ಯ
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
ಮಂಗಳೂರಿನಲ್ಲಿ ಪಕ್ಕಪ್ಲಾನ್ ಡ್ ಅಟ್ಯಾಕ್ ..!ರೌಡಿ ಶೀಟರ್ ಬರ್ಬರ ಹತ್ಯೆ…ವಿಶೇಷ ತಂಡ ರಚನೆ..!
ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!