📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನಡೆ ಹಲವರಲ್ಲಿ ಅಚ್ಚರಿಯನ್ನುಂಟು ಮಾಡಿದ್ದರೆ ಇನ್ನು ಹಲವರಲ್ಲಿ ಆಕ್ರೋಶವನ್ನುಂಟು ಮಾಡುತ್ತಿದೆ. ಹಾಗಿದ್ದರೆ ಮುಖ್ಯಮಂತ್ರಿಗಳ ಈ ಬದಲಾವಣೆಗೆ ಕಾರಣ ಏನು? ಅವರ ಈ ಬದಲಾವಣೆಯ ಹಿಂದಿನ ರಹಸ್ಯವೇನು? ಈ ಬದಲಾವಣೆಗೂ ಪ್ರಸ್ತುತ ರಾಜಕಾರಣಕ್ಕೂ ಏನಾದರೂ ಸಂಬಂಧ ಇದೆಯಾ? ಎಲ್ಲದಕ್ಕೂ ಹೆಚ್ಚಾಗಿ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯ ಅಚ್ಚರಿ ಘೋಷಣೆಯ ಹಿಂದೆ ಏನೆಲ್ಲಾ ಅಡಗಿದೆ ಇದು ಎಲ್ಲವೂ ಹೊಸ ರಾಜಕಾರಣದ ಹೆಜ್ಜೆಗೆ ನಾಂದಿ ಹಾಡಲಿದೆಯಾ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂಥವರು ಅನ್ನೋದು ಎಲ್ಲರಿಗೂ ಗೊತ್ತಿರುವಂತಹ ಸಂಗತಿ. ಸಮಾಜವಾದಿ ಸಿದ್ಧಾಂತ ಹಾಗೂ ಅಹಿಂದ್ ನಾಯಕ ಎಂದೆಲ್ಲಾ ಪ್ರೊಜೆಕ್ಟ್ ಮಾಡಿಕೊಂಡು ಬಂದಂತಹ ವ್ಯಕ್ತಿ. ಇದರ ಪರಿಣಾಮವೊ ಅಥವಾ ಇನ್ನೇನೊ , ಸಿದ್ದರಾಮಯ್ಯ ಸಾಹೇಬರು ಬ್ರಾಹ್ಮಣ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡದ್ದು ಸುಳ್ಳಲ್ಲ. ಆ ಹಣೆ ಪಟ್ಟಿಯನ್ನು ಅವರ ನಡೆಯ ಮೂಲಕ ಅಂಟಿಸಿಕೊಂಡರೋ ಅಥವಾ ನಿಜವಾಗಿಯೂ ಬ್ರಾಹ್ಮಣ ವಿರೋಧಿಯಾಗಿಯೇ ಇದ್ದರೊ, ಇಲ್ಲವೇ ಅವರ ಹಿಂದೆ ಮುಂದೆ ಓಡಾಡಿಕೊಂಡಿದ್ದ ವ್ಯಕ್ತಿಗಳ ಕಾರಣದಿಂದಾಗಿ ಈ ಒಂದು ಹಣೆಪಟ್ಟಿ ಅವರಿಗೆ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಸಾಹೇಬರ ಬಗ್ಗೆ ಈ ರೀತಿಯ ಹಣೆಪಟ್ಟೆ  ಅಂಟಿಕೊಂಡದ್ದಂತೂ ಸುಳ್ಳಲ್ಲ.

ಅದಿರ್ಲಿ, ಈಗ ಈ ವಿಚಾರ ಪ್ರಸ್ತುತ ವಾಗಲು ಕಾರಣ ಏನು ಗೊತ್ತಾ? ಮೊನ್ನೆ ನಡೆದ ರಾಜ್ಯ ಬಜೆಟ್ ಮಂಡನೆಯ ಮೊದಲು ಹಾಗೂ ಬಜೆಟ್ ಸಂದರ್ಭದಲ್ಲಿ ಘೋಷಿಸಿದ ಆ ಒಂದು ವಿಚಾರ ಕೆಲವರಲ್ಲಿ ಅಭದ್ರತೆ ಸೃಷ್ಟಿಸಿದೆ ಅನ್ನುವುದಕ್ಕೆ, ವ್ಯಕ್ತವಾಗುತ್ತಿರುವ ಅನವಶ್ಯಕ ಟೀಕೆಗಳು ಸಾಕ್ಷಿ ನುಡಿಯುತ್ತಿವೆ.

ಎಸ್ ಅವತ್ತು ಕೆಲವು ಪ್ರಮುಖ ಪತ್ರಕರ್ತರನ್ನು ಕರೆದು ಡಿನ್ನರ್ ಪಾರ್ಟಿ ನೀಡುತ್ತಾರೆ ಮುಖ್ಯಮಂತ್ರಿಗಳು. ಪತ್ರಕರ್ತರ ಮತ್ತು ರಾಜಕಾರಣಿಗಳ ಮಧ್ಯೆ ಇಂತಹ ಪಾರ್ಟಿಗಳು ಸಹಜ ಹಾಗೂ ನಿರಂತರ ಕೂಡ. ಆದರೆ ಅವತ್ತಿನ ಪಾರ್ಟಿಯ ವಿಚಾರದಲ್ಲಿ ಒಂದಿಷ್ಟು ಜನರು ತಗಾದೆ ತೆಗೆದಿದ್ದಾರೆ. ಹಾಗೆ ತಗಾದೆ ತೆಗೆದವರಲ್ಲಿ ಪತ್ರಕರ್ತರೂ ಇದ್ದಾರೆ ಪತ್ರಕರ್ತರಲ್ಲದವರೂ ಇದ್ದಾರೆ. ಈ ವಿಚಾರವನ್ನು ನಾವು ವಿಶ್ಲೇಷಣೆಗೆ ಒಳಪಡಿಸಬಹುದೇ ಹೊರತು ಟೀಕೆ ಮಾಡುವುದಕ್ಕಲ್ಲ. ಖಂಡಿತವಾಗಿಯೂ ಈ ವಿಚಾರ ವಿಶ್ಲೇಷಣೆಗೆ ಯಾಕೆ ಒಳಪಡುತ್ತದೆ ಎಂದರೆ ಸಿದ್ದರಾಮಯ್ಯನವರು ಇಲ್ಲಿಯವರೆಗೆ ನಡೆದುಕೊಂಡು ಬಂದ ರೀತಿ ಮತ್ತು ಅವರು ಗಟ್ಟಿಯಾಗಿ ನಿಂತ ಸ್ಥಳದ ವಿಚಾರ ದಿಂದಾಗಿ ಅವರ ಇವತ್ತಿನ ನಡೆ ಅಚ್ಚರಿಗೆ ಕಾರಣವಾಗಿದ್ದಂತೂ ಸತ್ಯ.  ಹಾಗಾಗಿ ಅವರ ಈ ಬದಲಾದ ನಿಲುವಿಗೆ ಕಾರಣ ಏನು ಅನ್ನುವುದರ ವಿಶ್ಲೇಷಣೆ ಸಹಜವಾದದ್ದು ತಾನೇ?

ಆದರೆ ಎಡಪಂತಿಯ ವಿಚಾರಧಾರೆಯನ್ನು ಹೊತ್ತಿರುವಂತಹ ವ್ಯಕ್ತಿಗಳು ಸಿದ್ದರಾಮಯ್ಯನವರ ಈ ನಡೆಯ ವಿಚಾರವಾಗಿ ಟೀಕೆಗೆ ಧೂಮಕಿರುವಂತದ್ದು ಎಲ್ಲೋ ಒಂದು ಕಡೆ ಅವರ ಒಳಗಿನ ಅಭದ್ರತೆಯನ್ನು ತೋರ್ಪಡಿಸುತ್ತಿದೆ ಅಂತಲೇ ವ್ಯಾಖ್ಯಾನಿಸಬೇಕಾಗುತ್ತದೆ.

ಎಡ ಪಂಥೀಯ ಹಾಗೂ ಬಲಪಂಥೀಯ ವಿಚಾರವಾಗಿ ಸಾಕಷ್ಟು ವಿಚಾರಧಾರೆಗಳು ಟೀಕೆ ಟಿಪ್ಪಣಿಗಳು ನಿರಂತರವಾಗಿ ನಾವು ಕಾಣುತ್ತಲೇ ಬಂದಿದ್ದೇವೆ ಅದು ಅವಶ್ಯಕತೆ ಕೂಡ. ಎರಡು ಪಂಥಗಳ ನಡುವೆ ಆರೋಗ್ಯಕರವಾದಂತಹ ಚರ್ಚೆ ಒಬ್ಬರನ್ನೊಬ್ಬರು ಎಕ್ಸ್ಪೋಸ್ ಮಾಡುವಂತಹ ನಡೆಗಳು ಬೇಕೇ ಬೇಕು. ಆದರೆ ಈಗ ವ್ಯಕ್ತವಾಗುತ್ತಿರುವ ಅಭಿಪ್ರಾಯ, ಟೀಕೆ ಅನಾರೋಗ್ಯಕರವಾಗಿದೆ ಅದು ಆರೋಗ್ಯಕರವಾದದ್ದಲ್ಲ . ಏಕೆ ಮಾಡುತ್ತಿರುವವರು ತಂತ್ರಗಾರಿಕೆಯ ಭಾಗವಾಗಿ ಟೀಕೆ ಮಾಡುತ್ತಿದ್ದಾರೆ ಯೇ ಎಂಬ ಸಂಶಯವೂ ಇಲ್ಲದಿಲ್ಲ.

ಆ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡುವ   ಈಗ ಮುಖ್ಯಮಂತ್ರಿಗಳ ಈ ನಡೆಯ ಬಗ್ಗೆ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸೋಣ. ಎಲ್ಲಾ ಮುಖ್ಯಮಂತ್ರಿಗಳು, ಸಚಿವರುಗಳು, ವಿರೋಧಪಕ್ಷದ ನಾಯಕರುಗಳು ತಮ್ಮ ಆತ್ಮೀಯ ಹಾಗೂ ರಾಜಕೀಯ ತೋಟದಲ್ಲೇ ಮಿಂದುನ್ನುತ್ತಿರುವ ಹಿರಿಯ ಪತ್ರಕರ್ತರನ್ನು ಕರೆದು ಮಾತನಾಡಿಸುವುದು ಹಾಗೂ ಅವರ ಜೊತೆ ಎಲ್ಲಾ ರೀತಿಯ ಪಾರ್ಟಿಗಳನ್ನು ಅಟೆಂಡ್ ಮಾಡುವಂತದ್ದು ಇದೆ ಮೊದಲೆನಲ್ಲ. ಅದು ನಿರಂತರ ಪ್ರಕ್ರಿಯೆ . ಹಾಗಾಗಿ ಸಿದ್ದರಾಮಯ್ಯನವರು ಪಾರ್ಟಿ ಕೊಟ್ಟಿದ್ದಾರೆ ಅನ್ನೋದು ತೀರ ಟೀಕೆ ಮಾಡುವಂತಹ ವಿಚಾರ ಅಲ್ಲ. ಆದರೆ ಆ ಪಾರ್ಟಿಯಲ್ಲಿ ಬಲಪಂತೀಯ ಪತ್ರಕರ್ತರಿಗೆ ಆದ್ಯತೆ ಸಿಕ್ಕಿರುವದರ ಬಗ್ಗೆ ಒಂದಷ್ಟು ಜನರಿಗೆ ಅದರಲ್ಲೂ ಎಡಪಂತೀಯ ವಿಭಾಗದಲ್ಲಿ ಕಾಣಿಸಿಕೊಳ್ಳುವವರಿಗೆ ಕಸಿವಿಸಿ ಆಗಿದೆ. ಅದಕ್ಕೆ ಕಾರಣ…… ಸಹಜ ಅರ್ಥ ಆಯ್ತು ಅಂದುಕೊಳ್ಳುವ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಪಟ್ಟುಗಳು ಅದ್ಭುತವಾದಂತದ್ದು. ಅದು ಬಿಗಿಪಟ್ಟೆ ಆಗಿರುತ್ತದೆ. ಅದರ ಭಾಗವೇ ಈ ಚೇಂಜಸ್ ನಡೆ ಯಾಕಾಗಿರಬಾರದು? ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಅದಕ್ಕೆ ಸಂಬಂಧಿಸಿದ ರಾಜಕಾರಣ ಕಳೆದ ಏಳೆಂಟು ತಿಂಗಳಿನಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಡಿಕೆ ಶಿವಕುಮಾರ್ ಈ ಬಾರಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವಂಥದ್ದು ಕಣ್ಣಿಗೆ ನೇರವಾಗಿ ಕಾಣುತ್ತಿರುವಂತಹ ಸತ್ಯ ಅದರಲ್ಲಿ ಯಾವುದೇ ಮುಚ್ಚು ಮರೆಯು ಇಲ್ಲ. ಅದೇರೀತಿ ಸಿದ್ದರಾಮಯ್ಯನವರು ಸಹ, ಪೂರ್ಣಾವಧಿಯಾಗಿ ತಾವೇ ಅಧಿಕಾರವನ್ನು ಹೊಂದಬೇಕು, ಅಧಿಕಾರ ಹಸ್ತಾಂತರ ವಿಚಾರ ಗೌಣ ವಾಗಿಸಬೇಕು ಎಂಬ ನಿಟ್ಟಿನಲ್ಲಿ ಅವರು ಸಾಗುತ್ತಿರುವಂಥದ್ದು  ರಾಜಕಾರಣದ ಭಾಗ,ಅದು ತಪ್ಪು ಅಲ್ಲ.

ಎಸ್, ಮಾಧ್ಯಮ ವಿಭಾಗದಲ್ಲಿ ಬಲಪಂಥೀಯ ವಿಚಾರಧಾರೆಗೆ ಅಂಟಿರುವವರು  ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ವಿಚಾರಧಾರೆಯನ್ನು ಅಪ್ಪಿಕೊಳ್ಳುವವರ ಸಂಖ್ಯೆಯು ದೊಡ್ಡದಿದೆ. ಈ ವಿಚಾರವನ್ನು ಸಿದ್ದರಾಮಯ್ಯನವರು ಸ್ವಲ್ಪ ಲೇಟಾಗಿ ಅರ್ಥ ಮಾಡಿಕೊಂಡಿದ್ದಾರೆ ಅಷ್ಟೇ. ಡಿಕೆ ಶಿವಕುಮಾರ್ ಬಲ ಕುಗ್ಗಿಸಬೇಕು ಎಂದರೆ ಅವರ ಪರವಾಗಿರುವಂತಹ ಅಲೆ ಹಾಗೂ ನಡೆಯುವ ಪ್ರಚಾರ ಎರಡನ್ನು ಕಂಟ್ರೋಲ್ ಗೆ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದಾರೆ. ಆದರೆ ಆ ಪ್ಲಾನ್ ವರ್ಕೌಟ್ ಆಗಬೇಕು ಅಂದರೆ ಅದಕ್ಕೊಂದು ತಂಟ್ರಾಗರಿಕೆಯ ಅಗತ್ಯತೆ ಇದೆ. ಸಿದ್ದರಾಮಯ್ಯ ನವರು ಮೊನ್ನೆ ಪತ್ರಕರ್ತರಿಗೆ ಡಿನ್ನರ್ ಪಾರ್ಟಿ ನೀಡಿರುವಂತದ್ದು. ಈ ವಿಚಾರವನ್ನು ಮುನ್ನೆಲೆಗೆ ತರುತ್ತಿರುವುದು ಕೂಡ ಅದರ ಒಂದು ಭಾಗವೇ ಆಗಿದೆ. ಸಿದ್ದರಾಮಯ್ಯನವರ ಸಿದ್ಧಾಂತದ ಜೊತೆಗೆ ಥಳುಕು ಹಾಕಿಕೊಂಡವರು ಬೇಕಂತಲೇ ಈ ವಿಚಾರವನ್ನು ಮುನ್ನಲೆಗೆ ತರುತ್ತಿದ್ದಾರೆ. ಅವರ ಇಂಟೆನ್ಶನ್ ಇಷ್ಟೇ. ಸಿದ್ದರಾಮಯ್ಯನವರು ಬದಲಾಗಿದ್ದಾರೆ ಅನ್ನುವುದನ್ನು ಪ್ರಚುರಪಡಿಸಬೇಕು. ಆ ಬದಲಾವಣೆಯನ್ನು ಬಲಪಂಥೀಯ ಪತ್ರಕರ್ತರು ನಂಬಬೇಕು.  ಕಾರಣಕ್ಕಾಗಿಯೇ  ಮುಖ್ಯಮಂತ್ರಿಗಳ ಬಲಪಂಥೀಯ ಸ್ನೇಹವನ್ನು ಟೀಕಿಸುವ ಮೂಲಕ ಅವರ ಬದಲಾವಣೆಯನ್ನು  ಪ್ರಚುರಪಡಿಸಿ ಈ ರೀತಿಯ ಚರ್ಚೆಗೆ ಕಾರಣವಾಗಬೇಕು. ಇದರ ಅರ್ಥ ಇಷ್ಟೇ , ಇದೆಲ್ಲವೂ ಅಧಿಕಾರಕ್ಕೋಸ್ಕರ ಹೆಣೆಯಲಾದ ತಂತ್ರಗಾರಿಕೆ . ಇದರಲ್ಲಿ ಹೆಚ್ಚಿನ ಆಶ್ಚರ್ಯವೇನು ಇಲ್ಲ. ಸಿದ್ದರಾಮಯ್ಯನವರಿಗೆ ಬೇಕಿರುವಂಥದ್ದು ಬಲಪಂಥೀಯ ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು   ಅದು ಅಷ್ಟು ಈಜಿ ಆಗಿ ಸಿಗುವುದಿಲ್ಲ ಅನ್ನುವುದು ಸಹ ಗೊತ್ತಿತ್ತು. ಆ ಕೆಲಸವನ್ನು ಸಿದ್ದರಾಮಯ್ಯ ಅಂಡ್ ಟೀಮ್ ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ  

ಇದರ ಜೊತೆಗೇನೆ ಹವ್ಯಕ  ಭಾಷಾ ಅಕಾಡೆಮಿ ಘೋಷಿಸುವ ಮೂಲಕ ತಲೆ ತಿರುಗುವಂತಹ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಎರಡು ನಡೆಯಿಂದಾಗಿ ಸಿದ್ದರಾಮಯ್ಯ ವಿಚಾರದಲ್ಲಿ ಬಲ ಬಂತಿಯರ ಕೋಟೆಯಲ್ಲಿ  ಮೆಚ್ಚುಗೆಯ ಮಾತುಗಳು ಕೇಳಲಾರಂಬಿಸಿದೆ. ಇದು ಅವರ ಪ್ಲಾನ್ ವರ್ಕೌಟ್ ಆಗುತ್ತಿರುವುದರ ಮುನ್ಸೂಚನೆ.

ಎಸ್ ಡಿ ಕೆ ಶಿವಕುಮಾರ್ ಅವರ ಪರವಾಗಿ ಹಾಗೂ ಪ್ರಚಾರವನ್ನು ಕಂಟ್ರೋಲ್ ಮಾಡಬೇಕು ಎಂದರೆ ಈ ಬಲಪಂಥೀಯ ಪತ್ರಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆ ಮೂಲಕವೇ ಡಿಕೆ ಅಲೆಯನ್ನ ಕುಗ್ಗಿಸಬಹುದು ಎಂಬ ಲೆಕ್ಕಾಚಾರದ ಭಾಗವೇ ಸಿದ್ದರಾಮಯ್ಯನವರ ಈ ಬದಲಾವಣೆಯ ನಡೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಅಷ್ಟೇ ಅಲ್ಲ, ಸಿದ್ದರಾಮಯ್ಯನವರ ಈ ನಡೆಯನ್ನ ಟೀಕಿಸುತ್ತಿರುವ ಎಡಪಂತಿಯ ಪ್ರಮುಖರುಗಳು ಸಹ ಈ ಒಂದು ಪ್ಲಾನಿನ ಭಾಗವೇ ಆಗಿದ್ದಾರೆ ಅಂತ ಅಂದುಕೊಳ್ಳಬೇಕು. ಏನಂತೀರಿ?

ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
ಕೊನೆಗೂ ಸೋತ ಖಾಕಿ….!!!
ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 
ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್
ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
sdfdf
ಮೂರನೇ ಮಹಾಯುದ್ಧದ ಭೀತಿ: ಇರಾನ್ ಹೊಸ ನಾಯಕನಾಗಿ ಮೊಜ್ತಬಾ ಖಮೇನಿ –ನೂತನ ನಾಯಕನಿಗೆ ರಷ್ಯಾ, ಚೀನಾ ಬೆಂಬಲ
ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!