📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 

    ಇದು ಇಂದು ನಿನ್ನಯ ಕಥೆಯಲ್ಲ, ಬಹಳ ಸಮಯದಿಂದ ನಡೆದುಕೊಂಡು ಬಂದಂತಹ ಇಲ್ಲಿಗಲ್ ರಿಲೇಷನ್ಶಿಪ್ ಕಥೆ. ಇಂತಹದೊಂದು ಅನಾಹುತಕಾರಿ ಕೆಲಸವನ್ನು ಮಾಜಿ ಶಾಸಕನೊಬ್ಬ ಮಾಡಿ ಸುದ್ದಿಯಾಗುತ್ತಿದ್ದಾನೆ. ಆತ ಮಾಡಿದ ಘನಂದಾರಿ ಕೆಲಸದಿಂದ ಒಬ್ಬ ಸಾಮಾನ್ಯ ಗಂಡಸು , ಮಾನಸಿಕ ವೇದನೆಗೆ ತುತ್ತಾಗಿದ್ದಾನೆ. ಅವನ ವೇದನೆಗೆ ನ್ಯಾಯ ಕೊಡಬೇಕಾದಂತಹ ಅನಿವಾರ್ಯತೆಗೆ ಸಿಲುಕಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

    ಮಂಡ್ಯದ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿ ಕುದ್ದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಚಾನಕ್ಕಾಗಿ ಬಂದಂತಹ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪ್ರಸನ್ನ ಎಂಬ ಯುವಕ, ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಕಣ್ಣೀರನ ಮನವಿ ಒಂದನ್ನು ನೀಡುತ್ತಾರೆ. ನನಗೆ ನ್ಯಾಯ ಕೊಡಿ ಅಂತ ಅತ್ತು ಕರೆದು ಬೇಡಿಕೊಳ್ಳುತ್ತಾರೆ. ಯಾರಿಗೂ ಶಿಕ್ಷೆ ಬೇಡ, ನನಗೆ ಮುಕ್ತಿ ಕೊಡಿಸಿ ಅಂತ ಬೇಡಿಕೊಳ್ಳುತ್ತಾರೆ. ಅಷ್ಟಕ್ಕೂ ಆಗಿದ್ದು ಏನು?

    Also Read  ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ

    ಜೆಡಿಎಸ್ ಪಕ್ಷದ ಮಾಜಿ ಶಾಸಕ ಡಾಕ್ಟರ್ ಕೆ ಅನ್ನದಾನಿ ಈ ಒಂದು ಪ್ರಕರಣದಲ್ಲಿ ಪ್ರಮುಖವಾಗಿ ಗೋಚರಿಸುತ್ತಾರೆ. ಪ್ರಸನ್ನ ಎಂಬ ಯುವಕನ ಹೆಂಡತಿಯನ್ನು ಡಾಕ್ಟರ್ ಕೆ ಅನ್ನದಾನಿ ತನ್ನ ಕಾಮದಾಟಕ್ಕೆ ಬಳಸಿಕೊಳ್ಳುತ್ತಾರೆ ಅನ್ನುವುದು ಆ ಹೆಂಗಸಿನ ಸ್ವಂತ ಗಂಡ ಪ್ರಸನ್ನನ ಗಂಭೀರ ಆರೋಪ . ಶಾಸಕರು ತನ್ನ ಹೆಂಡತಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ, ಬಹುತೇಕವಾಗಿ ಜೊತೆಗೂ ಇದ್ದಾರೆ ಅನ್ನುವುದು ಸ್ವತಃ ಆ ಹೆಂಗಸಿನ ಗಂಡನ ಅಧಿಕೃತ ಸ್ಟೇಟ್ಮೆಂಟ್. ಒಂದು ಮೂಲದ ಪ್ರಕಾರ ಆ ಹೆಂಗಸು ನಡತೆಗಟ್ಟು ಬಹಳ ಸಮಯವೇ ಆಗಿ ಹೋಯಿತು. ಅವಳ ಈ ನಡತೆಗೆಟ್ಟ ಜೀವನಕ್ಕೆ ಸ್ವತಹ ಅವಳ ತವರು ಮನೆಯವರು ಸಹಕಾರ ಕೊಡುತ್ತಿದ್ದಾರೆ ಎನ್ನುವುದು ಆ ಹೆಂಗಸಿನ ಸ್ವಂತ ಪತಿಯ ಆರೋಪವೂ ಹೌದು 

    ಮೈಸೂರಿನಲ್ಲಿ ಸುಮಾರು ಒಂದುವರೆ ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ಒಂದರಲ್ಲಿ ಈ ಹೆಂಗಸನ್ನು ಇಟ್ಟುಕೊಂಡಿದ್ದಾನೆ  ಈ ಮಾಜಿ ಶಾಸಕ ಅನ್ನುವುದು ನೊಂದು ಬೆಂದು ಹೋಗಿರುವಂತಹ ಪ್ರಸನ್ನ ಆರೋಪ. ಅದಕ್ಕೆ ಬೇಕಾದಂತಹ ಒಂದಷ್ಟು ಸಾಕ್ಷಿಗಳನ್ನು ಜೊತೆಗಿಟ್ಟುಕೊಂಡಿದ್ದಾನೆ. ಪೊಲೀಸರು ತನ್ನ ಮಾತನ್ನು ಕೇಳುತ್ತಿಲ್ಲ, ತನ್ನ ದೂರನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಪ್ರಸನ್ನನ ಗಂಭೀರ ದೂರು . ನನಗೆ ಆ ಹೆಂಗಸಿನ ಮೇಲೆ ಕ್ರಮವಾಗಬೇಕು, ಮಾಜಿ ಶಾಸಕರನ್ನು ಬಂಧಿಸಬೇಕು ಅನ್ನುವುದು ಉದ್ದೇಶವಲ್ಲ, ನನಗೆ ಆ ಹೆಂಗಸಿನಿಂದ ಮುಕ್ತಿ ಕೊಡಿಸಿ. ಕಣ್ಣೆದುರೇ ಹೆಂಡತಿಯು ಇನ್ನೊಬ್ಬರ ಸಹವಾಸದಲ್ಲಿರುವುದನ್ನು ನೋಡಿಯೂ ಬದುಕಬೇಕಾದಂತಹ ದುಸ್ಥಿತಿ ನನ್ನದಾಗಿದೆ. ವಿಚ್ಛೇದನ ಕೊಡು ಅಂದರೆ 30 ಲಕ್ಷ ಕೊಡಲು ಹೇಳುತ್ತಾಳೆ. ನಾನು ಅಷ್ಟು ದುಡ್ಡನ್ನು ಎಲ್ಲಿಂದ ತರಲಿ ಅನ್ನೋದು ಆ ಬಡಪ್ರಸನ್ನನ ಗೋಳು. ನಾನು ಅವರಿಂದ ಏನನ್ನು ಬಯಸುತ್ತಿಲ್ಲ. ನನಗೆ ವಿಚ್ಛೇದನ ಕೊಟ್ಟು ಸಂಬಂಧದಿಂದ ಮುಕ್ತವಾದರೆ ಸಾಕು ಅನ್ನುವುದಷ್ಟೇ ಪ್ರಸನ್ನನ ಮನವಿಯಾಗಿದೆ. ಇದೇ ಮನವಿಯನ್ನು ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಮೊನ್ನೆ ಮಾಡಿರುವಂತದ್ದು. ಆ ಮನವಿಯನ್ನು ಸ್ವೀಕರಿಸಿದ ಹೆಚ್ ಡಿ ಕುಮಾರಸ್ವಾಮಿ, ನೊಂದು ಬೆಂದಿರುವ ಪ್ರಸನ್ನನನ್ನು ಸಂತೈಸಿ , ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಇಲ್ಲಿಗಲ್ ರಿಲೇಶನ್ಶಿಪ್ಗಿಂತ ಅವರಿಬ್ಬರೂ ಒಟ್ಟಾಗಿಯೇ ಇರಲಿ, ನನಗೆ ವಿಚ್ಛೇದನ ಕೊಟ್ಟು ಅವರ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಲಿ ಅನ್ನೋದು ಪ್ರಸನ್ನನ ಆಗ್ರಹವಾಗಿದೆ. ಅದು ಸರಿಯೂ ಹೌದು. ಒಬ್ಬ ಮಾಜಿ ಶಾಸಕ ತನ್ನ ಪ್ರೇಯಸಿಯನ್ನು  ಜೊತೆಗಿಟ್ಟುಕೊಳ್ಳಬೇಕೆಂಬ ಬಯಕೆ ಇದ್ದಲ್ಲಿ ಅದರಿಂದ ಇನ್ನೊಬ್ಬ ವ್ಯಕ್ತಿಗೆ ಚುತಿ ಬರದ ಹಾಗೆ ನೋಡಿಕೊಳ್ಳಬೇಕು. ಆ ಹೆಂಗಸಿಗೆ ಮಾನವೂ ಇಲ್ಲ ಮರ್ಯಾದೆಯೂ ಇಲ್ಲ.  ಹಾಳಾಗಿ ಹೋಗಲಿ. ಮಾಜಿ ಶಾಸಕರಿಗಾದರೂ ಬುದ್ಧಿ ಬೇಡ್ವಾ? ಹೇಳಿಕೊಳ್ಳಲು ಪ್ರಸನ್ನ ಗಂಡ, ಚಕ್ಕಂದ ಆಡಲಿಕ್ಕೆ ಮಾಜಿ ಶಾಸಕರು ಅನ್ನುವಂತಾಗಿದೆ ಈಗಿನ ಇವರ ಸಂಬಂಧ. ಇದು ಅಕ್ಷಮ್ಯವೂ ಹೌದು . ಪ್ರಸನ್ನ ಹೇಳಿದ್ದೆಲ್ಲವೂ ಸತ್ಯವಾದರೆ, ಮಾಜಿ ಶಾಸಕ ಹಾಗೂ ಆ ಹೇಂಗಸು ಇಬ್ಬರು ಕ್ರಿಮಿನಲ್ ಅಪರಾಧಿಗಳು ಆಗುತ್ತಾರೆ. ಇವರ ವೈಯಕ್ತಿಕ ಜೀವನ ಏನೇ ಇದ್ದರೂ ಅದರಿಂದ ಇನ್ನೊಬ್ಬರ ಮನಸ್ಸಿಗೆ ಘಾಸಿಯಾಗಬಾರದು ಅಷ್ಟೇ ಅನ್ನುತ್ತಿದ್ದಾರೆ ಮಂಡ್ಯದ ಸಾರ್ವಜನಿಕರು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
    ಹಾರ್ಮುಜ್ ಬಳಿ ಹಡಗುಗಳ ಹಿಂತಿರುಗುವ ಸರಣಿ!ಜಾಗತಿಕ ತೈಲ ಸರಬರಾಜಿಗೆ ಶಾಕ್ ⚠️
    “ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
    ಫೇಸ್‌ಬುಕ್ ‘ಸುಂದರಿ’ಅವಳಲ್ಲ ಅವನು!ಲವ್ ಮಾಡಿ ಹೆಂಡತಿ ಅಂದುಕೊಂಡವನು ಗಂಡಸು ಅಂತ ಗೊತ್ತಾದಾಗ ನಡೆದಿದ್ದೇ ಬೇರೆ!
    ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ಮನೆಗೆ ಡಿ.ಕೆ. ಶಿವಕುಮಾರ್ ಸರ್ಪ್ರೈಸ್ ವಿಸಿಟ್!
    ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
    “ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!
    “ಡಾಲರ್ ಐಡಿ” ಹೆಸರಿನಲ್ಲಿ ಶೇರ್ ಮಾರ್ಕೆಟಿಂಗ್ ವಂಚನೆ – 30.90 ಲಕ್ಷ ರೂ. ವಂಚನೆ- ನಾಲ್ವರ ಮೇಲೆ ಪ್ರಕರಣ ದಾಖಲು
    ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    21 ವರ್ಷದ ಆಡಳಿತಕ್ಕೆ ತೆರೆ: ನಿತೀಶ್ ಕುಮಾರ್ ಹೊರಟರೇ?ಸಿಎಂ ಕುರ್ಚಿ ಖಾಲಿ-ಬಿಜೆಪಿ ಹೊಸ ಮುಖ ಮುಂದಿನ ಸಿಎಂ??
    ಶಾಸಕ ಸ್ಥಾನಕ್ಕೆ ರಾಜೀನಾಮೆ, ಯಶ್ವಂತರಾಯಗೌಡರ ನಡೆ  ಸಸ್ಪೆನ್ಸ್
    90 ನಿಮಿಷದ ರೋಚಕ ರಕ್ಷಣಾ ಕಾರ್ಯಾಚರಣೆ – 6 ಮೀನುಗಾರರ ಜೀವ ಉಳಿಸಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಾಹಸ!ಪ್ರಕ್ಷುಬ್ಧ ಸಮುದ್ರಕ್ಕೂ ಸವಾಲು
    ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
    ನೂತನ ಸಚಿವ ಲಕ್ಷ್ಮಣ ಸವದಿ ಎದುರು ಹೈಡ್ರಾಮಾ: ಸಮಸ್ಯೆ ಹೇಳಿಕೊಳ್ಳುತ್ತಿದ್ದ ವ್ಯಕ್ತಿಗೆ ಶಾಸಕರಿಂದ ಬೆದರಿಕೆ ಆರೋಪ
    ಕಂಬಳಕ್ಕೆ ಘೋಷಿತ ಅನುದಾನ ಕೊಡುವಂತೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ..
    60 ಕೋಟಿ ರೂ. ಸರ್ಕಾರಿ ಹಣ ಗುಳುಂ: ಸಿಬಿಐ ಬಲೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ!
    ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    PTCL ಕಾಯ್ದೆ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ – ಕಂದಾಯ ಸಚಿವರಿಗೆ ದಲಿತ ನಾಯಕರ ಮನವಿ
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!
    “ಮಾಜಿ RSS ಕಾರ್ಯಕರ್ತನಿಗೆ ಮುಸ್ಲಿಂ ಮಹಿಳೆ ಅಗ್ನಿಸ್ಪರ್ಶ”ವಾಸ್ತವ ಏನು?ಮಾನವೀಯತೆಗೆ ಧರ್ಮದ ಗಡಿ ಇಲ್ಲ!
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಸುಬ್ರಹ್ಮಣ್ಯ ಅಭಿವೃದ್ಧಿ — ಸ್ಥಳೀಯರ ಜೊತೆಗೂಡಿ ಮಾತ್ರ ಸಾಧ್ಯ!”
    ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ
    ಮೀನು ಮಾರುವ ಮಹಿಳೆಯರ ಮೇಲೆ ಹಲ್ಲೆ :ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಭರ್ಜರಿ ಒದೆ
    ಭಾರತೀಯರ ಟ್ರಾವೆಲ್ ಲಿಸ್ಟ್‌ನಿಂದ ಯುರೋಪ್ ಔಟ್.. ಲಂಡನ್, ಪ್ಯಾರಿಸ್ ಬಿಟ್ಟು ಥೈಲ್ಯಾಂಡ್, ಮಲೇಷ್ಯಾ ಜಪಾನ್‌ನತ್ತ ಪ್ರವಾಸಿಗರ ದಂಡು ..
    ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!
    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ