📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ

ಮಂಗಳೂರು: MDMA ಹಾಗೂ ಗಾಂಜಾ ಮಾರಾಟ ಪ್ರಕರಣ – 6 ಆರೋಪಿಗಳ ಬಂಧನ

ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ.

ಕಮಿಷನರ್
ಆರೋಪಿಗಳು

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.ಕ್ರ.56/2026ರಲ್ಲಿ NDPS ಕಾಯ್ದೆಯ ಕಲಂ 8(c), 20(b)(ii)(A), 22(C) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ಮೊಹಮ್ಮದ್ ಸಯ್ಯದ್ ಆಫ್ರಿದಿ, ಮಕ್ಸೂದ್ ಸಾಗ್, ಅಹಮ್ಮದ್ ಅಲಿ ಅರ್ಷಾನ್ ಮತ್ತು ಫೆಲಿಕ್ಸ್ ಪಿ. ಜೋಸೆಫ್ ಎಂದು ಗುರುತಿಸಲಾಗಿದೆ. ಇವರಿಂದ 53.87 ಗ್ರಾಂ MDMA, 103.20 ಗ್ರಾಂ ಹೈಡ್ರೋವೀಡ್ ಗಾಂಜಾ ಹಾಗೂ MG Hector ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್ 4ರಂದು ಬದ್ರಿಯಾ ರಸ್ತೆಯ Classic Comfort Lodgeನಲ್ಲಿ ರೂಮ್ ಪಡೆದು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು
ರೋಪಿಗಳು

ಇದೇ ವೇಳೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.29/2026ರಲ್ಲಿ NDPS ಕಾಯ್ದೆಯ ಕಲಂ 8(c), 20(B)(ii)(B) ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಾಸ್ರಾದೋ ಬಂಧಿತರಾಗಿದ್ದು, ಇವರಿಂದ 60 ಗ್ರಾಂ ಹೈಡ್ರೋವೀಡ್ ಗಾಂಜಾ, 1 ಕೆಜಿ 155 ಗ್ರಾಂ ಗಾಂಜಾ ಹಾಗೂ ಮಾರುತಿ ಸ್ವಿಫ್ಟ್ ಕಾರು ವಶಪಡಿಸಿಕೊಳ್ಳಲಾಗಿದೆ. ಇವರನ್ನು ಗ್ರೀನ್ ಪಾರ್ಕ್ ಮೈದಾನ, ಬಂದರ್ ಬಳಿ ಕಾರಿನಲ್ಲಿ ಕುಳಿತು ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಬಂಧಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಮುಂಬೈ ಮೂಲದ ಸಂದೀಪ್ ಶೆಟ್ಟಿ ದುಬೈಯಲ್ಲಿರುವ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದು, ವಿಮಾನದ ಮೂಲಕ ಮಾದಕ ವಸ್ತುಗಳನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದನೆಂದು ತಿಳಿದುಬಂದಿದೆ. ಬೆಂಗಳೂರಿನಿಂದ ಎಡಲ್ ರೋಚ್ ಮೂಲಕ ಸಾಗಾಟ ವ್ಯವಸ್ಥೆ ಮಾಡಲಾಗುತ್ತಿತ್ತು. ಬಳಿಕ ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಾಸ್ರಾದೋ ಮಕ್ಸೂದ್ ಸಾಗ್ ಮೂಲಕ ಮೊಹಮ್ಮದ್ ಸಯ್ಯದ್ ಆಫ್ರಿದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ಅವರಿಗೆ ಮಾದಕ ವಸ್ತು ಪೂರೈಸುತ್ತಿದ್ದರು.

ಆರೋಪಿಗಳು

ಆಫ್ರಿದಿ ಮತ್ತು ಅರ್ಷಾನ್ ಬೆಂಗಳೂರಿನಿಂದ ಗಾಂಜಾ, ಹೈಡ್ರೋವೀಡ್ ಹಾಗೂ MDMA ಅನ್ನು MG Hector ವಾಹನದಲ್ಲಿ ಮಂಗಳೂರಿಗೆ ತರಲಾಗಿತ್ತು. ನಂತರ Classic Comfort Lodgeನಲ್ಲಿ ಯುವಕ-ಯುವತಿಯರಿಗೆ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೂಡಿಗೇರಿಸಿಕೊಂಡ ಭಾರತ
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ಮಂಗಳೂರು ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
ಭೀಕರ ಅಪಘಾತ ಮಹಿಳೆ ಬಲಿ
ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
🚨 ದೇಶಾದ್ಯಂತ ಉಗ್ರ ಜಾಲದ ಮೇಲೆ ದೊಡ್ಡ ದಾಳಿ: ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಂ ಸೇರಿದಂತೆ 7 ರಾಜ್ಯಗಳಲ್ಲಿ 12 ಮಂದಿ ಬಂಧನ — ಯುವಕರಿಗೆ ಎಚ್ಚರಿಕೆ!
ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು
ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ಶಿಶಿಲದಲ್ಲಿ ವಿಷಪೂರಿತ ಹಾವು ಕಚ್ಚಿ 65 ವರ್ಷದ ರೈತ ಮೃತ್ಯು
ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ