📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್

    ಕರ್ನಾಟಕ ಸಿಐಡಿ (CID)ಮತ್ತು ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ “ಡಿಜಿಟಲ್ ಅರೆಸ್ಟ್” ವಂಚನೆಗೆ ಹೊಂಚು …!ಅಧಿಕಾರಿಗಳು ವೀಡಿಯೊ ಕಾಲ್ ಮೂಲಕ “ಡಿಜಿಟಲ್ ಅರೆಸ್ಟ್” ಮಾಡುವುದಿಲ್ಲ- ಎಚ್ಚರ

    ಬೆಂಗಳೂರು: ನಗರದ ಮಹಿಳೆ ನೈನಾ (Naina) ಅವರನ್ನು ಗುರಿಯಾಗಿಸಿಕೊಂಡು ‘ಡಿಜಿಟಲ್ ಅರೆಸ್ಟ್’ ಎಂಬ ಹೆಸರಿನಲ್ಲಿ ವಂಚನೆ ಮಾಡಲು ಅಪರಿಚಿತರು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಮೋಸಗಾರರು ತಮ್ಮನ್ನು ಬೆಂಗಳೂರು ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಮಹಿಳೆಯನ್ನು ಭಯಪಡಿಸಿ ಹಣ ಕಸಿದುಕೊಳ್ಳಲು ಪ್ರಯತ್ನಿಸಿದ್ದರು. ತಮ್ಮ ಹೇಳಿಕೆಗಳು ನಿಜವೆಂದು ತೋರಿಸಲು, ಆರೋಪಿಗಳು ಸುಪ್ರೀಂ ಕೋರ್ಟ್ ಮತ್ತು ನಗರ ಪೊಲೀಸ್ ಆಯುಕ್ತರಿಂದ ಆದೇಶವಿದೆ ಎಂದು ಹೇಳುವ ಸೀಮಂತ್ ಕುಮಾರ್ ಸಿಂಗ್ ಹೆಸರಿರುವ ನಕಲಿ ದಾಖಲೆಗಳನ್ನು ಕಳುಹಿಸಿದ್ದಾರೆ. ದಾಖಲೆಗಳಲ್ಲಿ ಬೆಂಗಳೂರು ಪೊಲೀಸ್ ಆಯೋಗದ ಮುದ್ರೆ ಮತ್ತು ಸಹಿ ಇದೆ ಎಂದು ಹೇಳಲಾಗಿದೆ…

    Also Read  ಮಂಗಳೂರಿನ ಆಡಳಿತ ವೈಫಲ್ಯ ಸರ್ಕಾರಿ ಕಚೇರಿಗಳಲ್ಲಿ ಸಾಲು...ಪಾಲಿಕೆ ಸೇವೆಗಳ ವಿಳಂಬ, ಭೂಪರಿವರ್ತನೆ ಗೊಂದಲ: ರಾಜ್ಯ ಸರ್ಕಾರದ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ..

    ಘಟನೆ ಹೇಗೆ ನಡೆಯಿತು?

    ವಂಚಕರು ಮೊದಲು ನೈನಾಗೆ ಫೋನ್ ಮಾಡಿ, “ನಿಮ್ಮ ತಾಯಿ ಅಕ್ರಮ (illeagle)ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ” ಎಂದು ಹೇಳಿ ಭಯ ಹುಟ್ಟಿಸಿದರು.

    ನಂತರ ಕರೆ ವೀಡಿಯೊ ಕಾಲ್‌ಗೆ ಬದಲಿಸಿ, ತಮ್ಮನ್ನು ಪೊಲೀಸ್ ಅಧಿಕಾರಿಗಳಂತೆ ತೋರಿಸಿಕೊಂಡರು.

    ಅವರು ಕರ್ನಾಟಕ ಸಿಐಡಿ (CID) ಹೆಸರಿನಲ್ಲಿ ನಕಲಿ ವರದಿ ಹಾಗೂ ಕೆಲವು ಕೃತಕ ದಾಖಲೆಗಳನ್ನು ನೈನಾಳ ಹೆಸರಿನಲ್ಲಿ ಸೃಷ್ಟಿಸಿ ಕಳುಹಿಸಿದರು.

    “ತನಿಖೆ ನಡೆಯುತ್ತಿದೆ, ನೀವು ಸಹಕರಿಸಬೇಕು” ಎಂದು ಒತ್ತಡ ಹಾಕಿ ‘ಡಿಜಿಟಲ್ ಅರೆಸ್ಟ್’ ಎಂಬ ನೆಪದಲ್ಲಿ ಹಣ ಪಡೆಯಲು ಯತ್ನಿಸಿದರು.

    ದಾಖಲೆಗಳನ್ನು ಗಮನವಿಟ್ಟು ಪರಿಶೀಲಿಸಿದ ನೈನಾ ಅವರಿಗೆ ಅನುಮಾನ ಬಂತು,ತಕ್ಷಣವೇ ಅವರು ಪೊಲೀಸರನ್ನು ಸಂಪರ್ಕಿಸಿ, ಬಳಿಕ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಮೂಲಕ ಆನ್‌ಲೈನ್ ದೂರು ದಾಖಲಿಸಿದರು. ಮಹಿಳೆಯ ಎಚ್ಚರಿಕೆಯಿಂದ ದೊಡ್ಡ ಮೋಸ ತಪ್ಪಿತು.

    Also Read  79% ಹಾಲು ಅಶುದ್ಧ! ಹಾಲಿನ ಮಾಫಿಯಾಗೆ ಸಿಂಹಸ್ವಪ್ನವಾದ ಐಎಎಸ್ ತುಕಾರಾಂ ಮುಂಧೆ…350 ಬಂಧನ, 360 ದಾಳಿ!

    ಜನರಿಗೆ ಎಚ್ಚರಿಕೆ

    ಈ ಘಟನೆ ಸೈಬರ್ ವಂಚಕರು ಹೊಸ ರೀತಿಯಲ್ಲಿ ಜನರನ್ನು ಭಯಪಡಿಸಿ ಹಣ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ.

    ನಿಮಗೆ ಗೊತ್ತಿರಬೇಕಾದ ಹಾಗೇ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

    ಪೊಲೀಸ್ ಅಥವಾ ಸರ್ಕಾರಿ ಅಧಿಕಾರಿಗಳು ವೀಡಿಯೊ ಕಾಲ್ ಮೂಲಕ “ಡಿಜಿಟಲ್ ಅರೆಸ್ಟ್” ಮಾಡುವುದಿಲ್ಲ. ಅಪರಿಚಿತ ಕರೆಗಳಲ್ಲಿ ವೈಯಕ್ತಿಕ ಮಾಹಿತಿ ಅಥವಾ ಹಣ ಕಳುಹಿಸಬೇಡಿ. ಸಂದೇಹಾಸ್ಪದ ದಾಖಲೆಗಳು ಬಂದರೆ ತಕ್ಷಣ ಪರಿಶೀಲಿಸಿ. ಒತ್ತಡ ಹಾಕಿ ತಕ್ಷಣ ಹಣ ಕೇಳಿದರೆ ಅದು ಬಹುತೇಕ ಮೋಸವೇ ಆಗಿರಬಹುದು.

    ಇಂತಹ ಕರೆ ಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೈಮ್ ಪೋರ್ಟಲ್‌ಗೆ ದೂರು ನೀಡಿ ಕರ್ನಾಟಕ ಪೊಲೀಸ್ ಸರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

    ತುರ್ತು ಸಹಾಯಕ್ಕೆ 1930 ಸೈಬರ್ ಕ್ರೈಮ್ ಹೆಲ್ಪ್‌ಲೈನ್ ಸಂಪರ್ಕಿಸಿ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
    ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
    “ಒಂದು ಫಾರ್ವರ್ಡ್… ಒಂದು ಎಫ್‌ಐಆರ್!”ಲಾವಣ್ಯ ಕೊಲೆ ಪ್ರಕರಣ ಆರೋಪಿಗೆ ಕೋಮು ಬಣ್ಣ ಹಚ್ಚಿದ – 6 ಸಾಮಾಜಿಕ ಜಾಲತಾಣ ಖಾತೆಗಳು/ಗ್ರೂಪ್‌ಗಳ ವಿರುದ್ಧ FIR..!
    Cocktail 2 ಸುತ್ತ ರಶ್ಮಿಕಾ ಮಂದಣ್ಣ ಕ್ರಿಯೇಟ್ ಮಾಡಿದ ಹೈಪ್ ಎಷ್ಟು ಗೊತ್ತಾ?ಅನ್ಟೋಲ್ಡ್ ಮಸಾಲೆ ಸ್ಟೋರಿಗಳು ಇಲ್ಲಿವೆ!
    ಗೋವಾ ಕ್ಯಾಲಂಗಟ್ ರೆಸಾರ್ಟ್‌ನಲ್ಲಿ ಕರಾವಳಿಯ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ನಾಪತ್ತೆಯಾದ ಆ ಮಹಿಳೆಗಾಗಿ ತೀವ್ರ ಶೋಧ…
    ಒಂದು ವಾಟ್ಸ್ಯಾಪ್ ಮೆಸೇಜ್… ಕೋರ್ಟ್ ವರೆಗೂ ಎಳೆದ ಶಾಕ್ ಘಟನೆಯ ಸುತ್ತ..
    ತುಮಕೂರಿನಲ್ಲಿ ಬೆಚ್ಚಿಬೀಳಿಸುವ ತಂದೆ-ಮಗಳು ದುರಂತ
    ಪೊಲೀಸ್ ಇಲಾಖೆಯ ಜಯಶ್ರೀ ನೀಡಿದ ದೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್ ಹೆಸರು: ವಿಡಿಯೋ ಕಾಲ್ ಪ್ರಕರಣಕ್ಕೆ ಹೊಸ ತಿರುವು
    ಮುಂಜಾನೆ ಹೊತ್ತಿ ಉರಿದ ಆಸ್ಪತ್ರೆ…ಜೀವ ಉಳಿಸಿಕೊಳ್ಳಲು ರೋಗಿಗಳ ಪರದಾಟ.ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ.
    ಜನಿವಾರಕ್ಕೆ ಕೈ ಹಾಕಿದವರು, ಪರ್ಮನೆಂಟ್ ಮನೆಗೆ ಹೋಗುವ ದಾರಿಯಲ್ಲಿ….
    ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
    “ಅಮ್ಮನ ನೋವು ನೋಡಲಾಗಲಿಲ್ಲ…” ನಾಲ್ಕನೇ ಮಹಡಿಯಿಂದ ತಳ್ಳಿದ ಮಗ …
    ದೆಹಲಿ ಜಂತರ್ ಮಂತರ್‌ನಲ್ಲಿ ಏನಾಗುತ್ತಿದೆ?ವಿದ್ಯಾರ್ಥಿಗಳ ಕೋಪದ ಸ್ಫೋಟಕ್ಕೆ ದೆಹಲಿ ಸಾಕ್ಷಿ!
    ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?
    ಕರಾವಳಿಯಲ್ಲಿಲೋಕಾಯುಕ್ತ ಕಣ್ಣು ಪಂಚಾಯಿತಿಗಳ ಮೇಲೆ; ಸರ್ಕಾರದ ಕಣ್ಣು ಕರಾವಳಿ ಕೃಷಿಯತ್ತ?ಕರಾವಳಿ ಕೃಷಿಗೆ ಪ್ರತ್ಯೇಕ ನೀತಿಗೆ ಡಿಮ್ಯಾಂಡ್!
    ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
    “ಶಾಲಾ ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಂದು ಮಗುವಿನ ಸುರಕ್ಷತೆಗೆ ಶಾಲೆಯೇ ಹೊಣೆ!”
    ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಕಠಿಣ ಎಚ್ಚರಿಕೆ ದ್ವಿವೇದಿ ವಾರ್ನಿಂಗ್ ವೈರಲ್!” “ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದ ಭಾಗವಾಗಬೇಕೆ ?”
    ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಯು.ಟಿ. ಖಾದರ್ – ಕಳಪೆ ಆಹಾರಕ್ಕೆ ಕಟ್ಟುನಿಟ್ಟು,ಕರ್ನಾಟಕದ ಆಹಾರ ಸುರಕ್ಷತೆಗೆ ಜಾಗತಿಕ ಮಟ್ಟದ ಯೋಜನೆ!
    ಅಮ್ಮಾ, ನನ್ನನ್ನು ಕ್ಷಮಿಸು’ ಎಂದು ಡೆತ್‌ನೋಟ್ ಬರೆದು ಯುವಕ ಆತ್ಮಹತ್ಯೆ
    ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
    ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ
    ಬೊಬ್ಬೆ ಕೇಳುತ್ತಿದ್ದಂತೆಯೇ ಓಡಿ ಜೀವ ಉಳಿಸಿದ!ಸಮಯಪ್ರಜ್ಞೆ ಎಂದರೆ ಇದು; ಐದನೇ ತರಗತಿಯ ಬಾಲಕನ ಕ್ಷಿಪ್ರ ನಿರ್ಧಾರದಿಂದ ತಪ್ಪಿದ ಅನಾಹುತ!
    ಕರ್ನಾಟಕದಲ್ಲಿ ಬೇಸಿಗೆ ಬೆಂಕಿ ತೀವ್ರ ಬಿಸಿಗಾಳಿ ಹೈ ಅಲರ್ಟ್
    ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
    ದೆಹಲಿ: ₹21.40 ಕೋಟಿ ಮೌಲ್ಯದ 15 ಕೆ.ಜಿ. ಚಿನ್ನ ವಶ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಭೇದಿಸಿದ DR
    ಗ್ರಾಮೀಣ ಅಭಿವೃದ್ಧಿಯಲ್ಲಿ ಉಡುಪಿ ನಂ.1: ಐದು ಪಂಚಾಯಿತಿಗಳಿಗೆ ರಾಷ್ಟ್ರ ಗೌರವ-ಉಡುಪಿ ಬರೆದ ಸುವರ್ಣ ಇತಿಹಾಸ!
    ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
    ಮಕ್ಕಳ ಸುರಕ್ಷತೆಯೇ ಮುಖ್ಯ – ಸಂದೇಶ ಕೊಟ್ಟ ಹೈಕೋರ್ಟ್