📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು

    ಅತ್ಯಂತ ಅಪರೂಪದಲ್ಲಿಯೇ ಅಪರೂಪದ ಘಟನೆ ಇದು. ನ್ಯಾಯಾಲಯದಲ್ಲಿ ನ್ಯಾಯವು ಇನ್ನೂ ಇದೆ, ಅನ್ನೋದನ್ನು ಸಾಬೀತು ಪಡಿಸುವಂತಹ ಆದೇಶವು ಕೇಳ ನ್ಯಾಯಾಲಯದಿಂದ ಬಂದಿದೆ.

    ಅದು ಅಂತಿಂತಹ ಪ್ರಕರಣವಲ್ಲ, ಲಾಕಪ್ ಡೆತ್ ಪ್ರಕರಣ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಂಬತ್ತು ಪೊಲೀಸರ ತಪ್ಪು ಸಾಬೀತಾಗಿದ್ದು, ಅವರಿಗೆ ನ್ಯಾಯಾಲಯವು ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದೆ.

    ಇದು ಪಕ್ಕದ ತಮಿಳುನಾಡು ರಾಜ್ಯದ ಮಧುರೈ ಸಮೀಪದ ತೂತುಕುಡಿ ಜಿಲ್ಲೆಯಲ್ಲಿ ನಡೆದಂತಹ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ, ಇಂತಹದೊಂದು ಜಬರ್ದಸ್ತ್ ಆದೇಶವು ನ್ಯಾಯಾಲಯದಿಂದ ಬಂದಿದೆ.

    2020 ಜೂನ್ 19 ತೂತುಕುಡಿ ಜಿಲ್ಲೆಯ ಸತಮ್ ಕುಳಂ ಪೋಲಿಸ್ ಠಾಣೆಯಲ್ಲಿ ನಡೆದಂತಹ ಭೀಕರವಾದಂತಹ ಘಟನೆಇದು. ಇಡೀ ದೇಶದಲ್ಲಿ ಕರೋನ ಮಹಾಮಾರಿಯು ತನ್ನ ಅಟ್ಟಹಾಸ ಮೆರೆಯುತ್ತಿರುವಂತಹ ಸಮಯವದು. ಇಲ್ಲಿನ ಮೊಬೈಲ್ ಅಂಗಡಿ ಒಂದರ ಮಾಲೀಕ ಜಯರಾಜ್ ಹಾಗೂ ಅವರ ಮಗ  ಬೆನಿಕ್ಸ್  ತಮ್ಮ ಅಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ, ಅವರಿಬ್ಬರನ್ನು ಪೊಲೀಸರು ಕರೆದೊಯ್ಯುತ್ತಾರೆ.

    Also Read  🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!

    ಹಾಗೆ ಬಂಧಿಸಿ ಕರೆದೊಯ್ದ ಜಯರಾಜ್ ಹಾಗೂ ಬೆನಿಕ್ಸ್ ಇಬ್ಬರೂ ಜೀವಂತವಾಗಿ ಹೊರಗೆ ಬರುವುದಿಲ್ಲ. ಅವರಿಬ್ಬರೂ ಪೊಲೀಸ್ ಠಾಣೆಯಲ್ಲಿಯೇ  ಲಾಕಪ್ ಡೆತ್ ಆಗುತ್ತಾರೆ. ಪೊಲೀಸರ ವಿಪರೀತ ಚಿತ್ರಹಿಂಸೆಯಿಂದಾಗಿ ಪೊಲೀಸರ ಬಂದಿಯಾಗಿರುವಾಗಲೇ ಇಬ್ಬರೂ ಕೊಲೆಯಾಗುತ್ತಾರೆ. ಕಾನೂನು ಪಾಲಕರೇ, ಅಲ್ಲಿ ತಂದೆ ಮಗ ಇಬ್ಬರನ್ನು ಕೊಂದು ಹಾಕಿದ್ದರು.

    ಈ ಪ್ರಕರಣವು ಇಡೀ ದೇಶದಲ್ಲಿ ದೊಡ್ಡ ಸುದ್ದಿಯನ್ನಾಗಿ ಮಾಡಿತ್ತು ಅವತ್ತು. ಈ ಪ್ರಕರಣದ ಪರವಾಗಿ ಮತ್ತು ಪೊಲೀಸರ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶವು ಮುಗಿಲು ಮುಟ್ಟಿದ್ದವು. ಪರಿಣಾಮ, ಈ ಬಗ್ಗೆ ಉನ್ನತ ತನಿಖೆಯು   ಪ್ರಾರಂಭವಾಗುತ್ತದೆ. ಆ ಉನ್ನತ ತನಿಖೆಯಲ್ಲಿ  ಪೊಲೀಸರ ತಪ್ಪು ಸ್ಪಷ್ಟವಾಗಿ ಕಾಣಿಸುತ್ತದೆ. ಅವರ ತಪ್ಪುಗಳು ಸಾಬೀತಾಗುತ್ತವೆ. ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್, ಇಬ್ಬರು ಸಬ್ ಇನ್ಸ್ಪೆಕ್ಟರ್, ಉಳಿದ ಪೊಲೀಸ್ ಕಾನ್ಸ್ಟೇಬಲ್ ಗಳು ತಂದೆ ಹಾಗೂ ಮಗನನ್ನು ಬೆತ್ತಲೆ ಗೊಳಿಸಿ ಥಳಿಸಿ ಕೊಂದಿದ್ದಾರೆ ಎನ್ನುವುದು ತನಿಖೆಯಲ್ಲಿ ಸಾಬೀತಾಗುತ್ತದೆ. ಈ ಪ್ರಕರಣಕ್ಕೆ  ಸಂಬಂಧಿಸಿದಂತೆ ಸುಮಾರು ನೂರಕ್ಕೂ ಹೆಚ್ಚು ಸಾಕ್ಷಿಗಳು, ಪೊಲೀಸರ ವಿರುದ್ಧವೇ  ಸ್ಪಷ್ಟವಾಗಿ ಸಾಕ್ಷಿ ಹೇಳಿದ್ದರು. ಇದರಲ್ಲಿ ಅದೇ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಒಬ್ಬರು, ಪೊಲೀಸರ ವಿರುದ್ಧವೇ ಸಾಕ್ಷ್ಯ ನೋಡಿದ್ದರು.

    Also Read  ಮುಂಜಾನೆ ಹೊತ್ತಿ ಉರಿದ ಆಸ್ಪತ್ರೆ…ಜೀವ ಉಳಿಸಿಕೊಳ್ಳಲು ರೋಗಿಗಳ ಪರದಾಟ.ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ.

    ಈ ಪ್ರಕರಣವು ಹತ್ತರಲಿ ಹನೊಂದಾಗಬಹುದು ಎಂಬ ಅನುಮಾನಗಳ ನಡುವೆ ನ್ಯಾಯದ ಚಿಲುಮೆ ಚಿಮ್ಮಿರುವುದು ಸಾರ್ವಜನಿಕವಾಗಿ ಸಂತೋಷಕ್ಕೆ ಕಾರಣವಾಗಿದೆ.  ಜಿಲ್ಲಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಒಳಗಾದ ಮೂವರು ಪೊಲೀಸ್ ಅಧಿಕಾರಿಗಳು ಆರು ಪೊಲೀಸ್ ಕಾನ್ಸ್ಟೇಬಲ್ಸ್, ಮೇಲಿನ ನ್ಯಾಯಾಲಯದ ಮೊರೆ ಹೋಗುತ್ತಾರೆ ಅನ್ನುವದರಲ್ಲಿ ಯಾವ ಅನುಮಾನವೂ ಇಲ್ಲ. ಇದು ಹೈ ಕೋರ್ಟ್ಗೆ ಹೋಗಲಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.  ಆರೋಪಿತರಿಗೆ ತಮ್ಮ ವಾದ ಮಂಡನೆಗೆ ಇನ್ನೂ ಅವಕಾಶಗಳಿರುವ ಕಾರಣ, ಸದ್ಯಕ್ಕೆ ಮರಣದಂಡನೆ ಶಿಕ್ಷೆಯು ಜಾರಿಯಾಗುವುದಿಲ್ಲ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೈಂದೂರಿನಲ್ಲಿ ಹಳೆ ವೈಷಮ್ಯದಿಂದ ಮನೆಗೆ ನುಗ್ಗಿ ಹಲ್ಲೆಗೆ ಯತ್ನ
    ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
    ಸಂಸತ್ ಕಾರಿಡಾರ್‌ನಲ್ಲಿ ವಿವಾದಿತ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ರೇಣುಕಾ ಚೌಧರಿ ತರಾಟೆ
    ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು
    ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
    ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್, ಕ್ಯಾಪ್ಟನ್ ಪ್ರೇರಣೆಗೆ ವರ್ಮಾ ಬ್ಯಾಟಿನಿಂದ  ಮೊದಲ ಸೆಂಚುರಿ
    ನೀಟ್ ಪರೀಕ್ಷೆಯ ಎಡವಟ್ಟು….ಸುಳ್ಳು ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಿದ ಅಧಿಕಾರಿಗಳು!!?
    ಸರ್ಕಾರಿ ಮಕ್ಕಳ ಶೂ ಕಳಪೆ…!ಸರ್ಕಾರಿ ಯೋಜನೆಗಳಲ್ಲಿ ಗುಣಮಟ್ಟ ಕೊರತೆಗೆ ಪರಿಹಾರವೇ ಇಲ್ವಾ ?
    ಚುನಾವಣಾ ಆಯೋಗ ಸರ್ವಾಧಿಕಾರಿಯಾಗುತ್ತಿದೆ ಎಂಬ ಅನುಮಾನದ ಸುತ್ತ….
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
    ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ 60ರ ವಯಸ್ಸಿನಲ್ಲಿ  ಸಿಕ್ಕ ಪರ್ಫೆಕ್ಟ್ ಸಂಗಾತಿ……?!ಎಷ್ಟನೇ ಮದುವೆ?!
    7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!
    ಬಿಜೆಪಿಯ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ready…!
    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    ಎರಡು ತಿಂಗಳ ಬಳಿಕ ಸಮಾಧಿಯಿಂದ ಹೊರಬಂತು ಆಲ್ಬರ್ಟ್ ರೇಗೋ …ಕೊಲೆ ರಹಸ್ಯ ಬಯಲಾಗುತ್ತಾ ?
    ವೋಟರ್ಸ್ ಗಮನಕ್ಕೆಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ: ಸಾರ್ವಜನಿಕರು ತಿಳಿಯಲೇಬೇಕಾದ ಪ್ರಮುಖ ವರದಿ
    ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
    ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ
    ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಭದ್ರತಾ ಪಡೆ ಮುಖ್ಯಸ್ಥರಿಗೆ ಗೃಹ ಸಚಿವ ‘ಶಾ’ ಸೂಚನೆ
    ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
    ಬಂಗಾಳದ ಸಿಂಹಾಸನಕ್ಕೆ ಸುವೇಂದು ಏರಿಕೆ — 15 ವರ್ಷದ ಮಮತಾ ಯುಗಕ್ಕೆ ಬ್ರೇಕ್!ಟಿಎಂಸಿ ಕೋಟೆ ಕುಸಿತ…
    ನೂತನ ಸಚಿವ ಲಕ್ಷ್ಮಣ ಸವದಿ ಎದುರು ಹೈಡ್ರಾಮಾ: ಸಮಸ್ಯೆ ಹೇಳಿಕೊಳ್ಳುತ್ತಿದ್ದ ವ್ಯಕ್ತಿಗೆ ಶಾಸಕರಿಂದ ಬೆದರಿಕೆ ಆರೋಪ
    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ
    ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
    KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತ್
    ಡೈಪರ್‌ನಲ್ಲಿ ಚಿನ್ನ! ಚಿನ್ನ ಕಳ್ಳಸಾಗಣೆಗೆ ಏನೆಲ್ಲಾ‘ಐಡಿಯಾ’? 8 ತಿಂಗಳ ಮಗುವನ್ನೂ ಬಿಟ್ಟಿಲ್ಲ!
    ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …