📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!

ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಬಾಲಕಿ ಶ್ರೀನಂದಾ (14) ಪತ್ತೆಯಾದ ಘಟನೆ ದುಃಖಾಂತವಾಗಿ ಅಂತ್ಯಗೊಂಡಿತು.ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಪರ್ವತದಲ್ಲಿ ಸುಮಾರು ಎರಡು ಸಾವಿರ ಅಡಿ ಆಳದಲ್ಲಿ ಶ್ರೀನಂದಾ ಮೃತದೇಹ ಪತ್ತೆಯಾಗಿದೆ.

ಏಪ್ರಿಲ್ 7ರಂದು ನಾಪತ್ತೆಯಾಗಿದ್ದ ಬಾಲಕಿಯ ಶೋಧ ಕಾರ್ಯಕ್ಕಾಗಿ ಎಸ್‌ಡಿಆರ್‌ಫ್ ಮತ್ತು ಅಗ್ನಿಶಾಮಕ ದಳದಿಂದ ತೀವ್ರ ಕಾರ್ಯಾಚರಣೆ ನಡೆಸಲಾಗಿತ್ತು.ಘಟನೆ ನಡೆದು 48 ಗಂಟೆಗಳಿಗೂ ಹೆಚ್ಚು ಸಮಯ ಕಳೆದ ಬಳಿಕ ಬಾಲಕಿಯ ಮೃತದೇಹ ಪತ್ತೆಯಾಯಿತು.

ಮಂಗಳವಾರ ಸಂಜೆ ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ಬಂದಿದ್ದ ಶ್ರೀನಂದಾ, ಸಂಜೆ 5:30ರವರೆಗೆ ಎಲ್ಲರೊಂದಿಗೂ ಇದ್ದಳು. ತಂದೆಯ ಮೊಬೈಲ್‌ನಲ್ಲಿ ಸಂಬಂಧಿಕರೊಂದಿಗೆ ರೀಲ್ಸ್ ಮಾಡಿ, ಫೋಟೋಗಳನ್ನು ತೆಗೆಸಿಕೊಂಡಿದ್ದಳು. ಆದರೆ, ಜಲಪಾತದ ಮೆಟ್ಟಿಲುಗಳನ್ನು ಇಳಿದು ಬರುವ ಸಂದರ್ಭದಲ್ಲಿ ಬಾಲಕಿ ದಿಢೀರ್‌గా ನಾಪತ್ತೆಯಾಗಿದ್ದಳು.

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡಂಗಿರಿ ಬೆಟ್ಟದಲ್ಲಿ ಏಪ್ರಿಲ್ 7, 2026 ರಂದು ಸಂಜೆ ಸುಮಾರು 5:20ಕ್ಕೆ, ಸ್ರೀನಂದಾ ತನ್ನ ಸುಮಾರು 40 ಜನರ ಕುಟುಂಬದೊಂದಿಗೆ ಇದ್ದಾಗ ಕೇವಲ 4–6 ನಿಮಿಷಗಳ ಅಂತರದಲ್ಲಿ ಕಾಣೆಯಾಗಿದ್ದಾಳೆ. ಜನಸಂದಣಿ ಹಾಗೂ ಮಂಜಿನಿಂದ ಕೂಡಿದ್ದ ಆ ಪ್ರದೇಶದಲ್ಲಿ ಆಕೆ ಹಠಾತ್ ಕಾಣೆಯಾಗಿರುವುದರಿಂದ ಕುಟುಂಬದಲ್ಲಿ ಆತಂಕ ಹೆಚ್ಚಾಗಿದೆ.

ಗುರುವಾರ ಮುಂಜಾನೆಯಿಂದಲೇ ಶೋಧ ಕಾರ್ಯಾಚರಣೆ ಚುರುಕುಗೊಂಡಿದ್ದು, ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ (SDRF) ತಂಡದ 100ಕ್ಕೂ ಹೆಚ್ಚು ಸಿಬ್ಬಂದಿ ಕಾಡಿನ ಮೂಲೆಮೂಲೆಯಲ್ಲಿ ಹುಡುಕಾಟ ನಡೆಸಿದ್ದರು. ದಟ್ಟ ಅರಣ್ಯ ಮತ್ತು ಮಂಜಿನ ನಡುವೆ ಬಾಲಕಿಯನ್ನು ಪತ್ತೆ ಹಚ್ಚಲು ಶ್ವಾನದಳ, ಸಾಮಾನ್ಯ ಡ್ರೋನ್ ಹಾಗೂ ದೇಹದ ಉಷ್ಣತೆಯನ್ನು ಗುರುತಿಸುವ ‘ಥರ್ಮಲ್ ಡ್ರೋನ್’ಗಳನ್ನು ಬಳಸಲಾಗಿತ್ತು. ಸ್ಥಳೀಯ ನಿವಾಸಿಗಳು ಕೂಡ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರು.

ಇದೀಗ ಶೋಧ ಕಾರ್ಯಾಚರಣೆಯ ಫಲವಾಗಿ ಬಾಲಕಿಯ ಮೃತದೇಹ ಪತ್ತೆಯಾಗಿ ಪ್ರಕರಣ ದುಃಖಾಂತ ಅಂತ್ಯ ಕಂಡಿದೆ.

ಇಂತಹ ಘಟನೆಗಳು ನಮ್ಮೆಲ್ಲರಿಗೂ ಪ್ರಕೃತಿ ಪ್ರವಾಸಿ ತಾಣಗಳಲ್ಲಿ ಎಷ್ಟು ಜಾಗರೂಕತೆ ಅಗತ್ಯವೋ ಎಂಬುದನ್ನು ನೆನಪಿಸುತ್ತವೆ. ಜಲಪಾತ ಮತ್ತು ಕಾಡು ಪ್ರದೇಶಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಮಕ್ಕಳನ್ನು ಸದಾ ನಿಗಾದಲ್ಲಿ ಇಡಬೇಕು ಮತ್ತು ಅಪಾಯಕಾರಿ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬೇಕು. ಸ್ವಲ್ಪ ಎಚ್ಚರಿಕೆಯಿಂದ ಇರುವುದು ದೊಡ್ಡ ಅನಾಹುತಗಳನ್ನು ತಪ್ಪಿಸಬಹುದು.

#Chikkamagaluru #BabaBudangiri #MissingCase

COMMENTS

Login with Gmail to comment

ಇನ್ನಷ್ಟು ಸುದ್ದಿ

ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ರಾಜಿ ಮಾಡಲು ಬಂದವನಿಗೇ ಚೂರಿ ಇರಿತ
“ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
ಕೊಲೆ ಆರೋಪಿಗಳ ಕಾರು ಮಾಣಿಯಲ್ಲಿ ಪತ್ತೆ ….!
ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು
ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”
ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…
ಟೀಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸೌಂದರ್ಯ – ಖಾದರ್
ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಬರೆ ಹಾಕಿದ ರಾಜ್ಯ ಸರ್ಕಾರ!
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ