📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…

    ಮಂಗಳೂರು‌ ನಗರದ ಕಾಲೇಜುಗಳ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಗಾಂಜಾ ಪೂರೈಸುತ್ತಿದ್ದ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.


    ಬಂಧಿತ ವಿದ್ಯಾರ್ಥಿಗಳು ಬೇರೆ ಬೇರೆ ಕಾಲೇಜಿನವರಾಗಿದ್ದಾರೆ. ಇವರು ರೂಮಿನಲ್ಲಿ ಉಳಿದುಕೊಂಡು ನಾನಾ ಕಡೆಯಿಂದ ಗಾಂಜಾ ಖರೀದಿಸಿ ರೂಮಿನಲ್ಲಿ ಅದನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳಿಗೆ ತುಂಬಿಸಿ ವಿದ್ಯಾರ್ಥಿಗಳು ಮತ್ತಿತರರಿಗೆ ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳ ಬಳಿಯಿದ್ದ ಗ್ರಾಹಕರ ಪಟ್ಟಿಯನ್ನು ಪರಿಶೀಲಿಸಿದಾಗ ಅದರಲ್ಲಿ 6 ಕಾಲೇಜುಗಳ 40 ವಿದ್ಯಾರ್ಥಿಗಳು ಮತ್ತು 10 ಮಂದಿ ಇತರರಿದ್ದರು. ಅವರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.


    ತನ್ನ ಮಗನ ಬಳಿ ಸಣ್ಣ ಪ್ಯಾಕೆಟ್ ಗಾಂಜಾ ಸಿಕ್ಕಿರುವುದಾಗಿ ವಿದ್ಯಾರ್ಥಿಯೊಬ್ಬನ ಹೆತ್ತವರು ತಮ್ಮ ಗಮನಕ್ಕೆ ತಂದಿದ್ದರು. ಅದರಂತೆ ತನಿಖೆ ನಡೆಸಿದಾಗ 5 ಮಂದಿ ವಿದ್ಯಾರ್ಥಿಗಳು ಗಾಂಜಾ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದು ವಿದ್ಯಾರ್ಥಿಗಳು ಮತ್ತವರ ಹೆತ್ತವರಿಗೆ ಕೌನ್ಸೆಲಿಂಗ್ ಮಾಡಲಾಗುವುದು. ಹೆತ್ತವರು ಮಕ್ಕಳ ನಡತೆ ಪರಿಶೀಲಿಸುತ್ತಿರಬೇಕು. ಬದಲಾವಣೆ ಕಂಡು ಬಂದರೆ ನಮಗೆ ತಿಳಿಸಬೇಕು. ಮಕ್ಕಳು ಹಾಸ್ಟೆಲ್‌ನಲ್ಲಿರದೆ ರೂಮ್‌ನಲ್ಲಿ ಉಳಿದು ಕೊಂಡಿದ್ದರೆ ಯಾಕೆ ರೂಮಿನಲ್ಲಿದ್ದಾರೆ? ಏನಾದರೂ ಸಮಸ್ಯೆ ಇದೆಯೇ? ಎಂದು ಕಾಲೇಜು ಮತ್ತು ಮನೆಯವರು ತಿಳಿದುಕೊಳ್ಳಬೇಕು. ಮಾಹಿತಿ ಅಥವಾ ಅನುಮಾನವಿದ್ದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು. ಇದರಿಂದ ಸಕಾಲಕ್ಕೆ ಸಮಸ್ಯೆ ಪರಿಹರಿಸಲು ಸುಲಭವಾಗಲಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ‌ಕುಮಾರ್ ರೆಡ್ಡಿ, ಮಂಗಳೂರು ತಿಳಿಸಿದ್ದಾರೆ.

    Also Read  ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ಹೈಕೋರ್ಟ್, ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಭದ್ರತೆ ಬಿಗಿ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
    ಸೋಶಿಯಲ್ ಮೀಡಿಯಾದ ವೈರಲ್ ವಿಡಿಯೋದಿಂದ ಕೋರ್ಟ್ ತನಕ..!ರಸ್ತೆ ರೇಜ್ ಪ್ರಕರಣದಲ್ಲಿ ಹೊಸ ತಿರುವು
    ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
    ಮುಗ್ಧ ಮಗು ಮೇಲೆ ನಡೆದ ಅಮಾನವೀಯ ಕ್ರೌರ್ಯ… ನ್ಯಾಯಕ್ಕಾಗಿ ಸಮಾಜದ ಒಕ್ಕೊರಲ ಹೋರಾಟ
    “Arvind Kejriwal: ‘ಸತ್ಯಾಗ್ರಹ’ದಿಂದ ನ್ಯಾಯದ ಬೇಡಿಕೆ.”
    Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
    ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವೈದ್ಯನನ್ನು ಅಮಾನತ್ತು ಮಾಡಿದರೆ ಸಾಕೆ?
    ಬಾಲಗರ್ಭಿಣಿಯರ ಸಂಖ್ಯೆ 5975….!!
    ಬೆಂಗಳೂರು ಮಾತ್ರವಲ್ಲ… ಮಂಗಳೂರಿನಿಂದಲೂ Startup ಹಾರಾಟ! ₹9.5 ಕೋಟಿಗೂ ಅಧಿಕ ಹೂಡಿಕೆಯ K-Combinatorಗೆ ಚಾಲನೆ
    ಜಾಗತಿಕ ಯುದ್ಧ ಭೀತಿ:ಟ್ರಂಪ್ ಎಫೆಕ್ಟ್‌ಗೆ ಭಾರೀ ಆರ್ಥಿಕ ಭೂಕಂಪ! — ಒಂದೇ ದಿನ ₹6 ಲಕ್ಷ ಕೋಟಿ ನಷ್ಟ!ಸೆನ್ಸೆಕ್ಸ್ ಧರೆಗುರುಳಿ, ರೂಪಾಯಿ ದಾಖಲೆ ಪತನ!
    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿ 47 ಜೀವಂತ ಅಪರೂಪದ ಪ್ರಾಣಿಗಳು ಪತ್ತೆ! 
    108 ಆಂಬ್ಯುಲೆನ್ಸ್ ಸೇವೆಗೆ ಬ್ರೇಕ್ ಬೀಳುತ್ತಾ? ನೌಕರರ ಸಾಮೂಹಿಕ ರಾಜೀನಾಮೆ ಎಚ್ಚರಿಕೆ…
    ಕೆತ್ತಿಕಲ್‌ನಿಂದ ಚಾರ್ಮಾಡಿವರೆಗೆ ಅಪಾಯದ ಗಂಟೆ! ಭೂಕುಸಿತ ಭೀತಿಯಲ್ಲಿ ಕರಾವಳಿ ರಸ್ತೆಗಳು !ಮಳೆ ಬಂದ ಮೇಲೆ ಸಭೆ, ಪರಿಶೀಲನೆ… ಆದರೆ ಮುನ್ನೆಚ್ಚರಿಕೆ ಎಲ್ಲಿದೆ?
    ಜಾರಕಿಹೊಳಿ ಮನೆಗೆ ED ದಾಳಿ; ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಕಾವು!
    ದಿಲ್ಲಿಯಲ್ಲಿ ವಾಗ್ದಾಳಿ.. ಗಲ್ಲಿಯಲ್ಲಿ ಒಪ್ಪಂದ?! ದೇಶದ ಅತ್ಯಂತ ಕಾಂಟ್ರವರ್ಸಿಯಲ್ ಬಿಡ್ ತೆರೆಮರೆಯಲ್ಲಿ ನಡೆದ ಆ ಒಂದು ನಡೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯಾಕೆ?!
    ಮುಖವಾಡ ಧರಿಸಿದವರನ್ನು ನಂಬುವ ಮುನ್ನ ನೂರು ಬಾರಿ ಯೋಚಿಸಿ…!
    UPIಗೆ ಶುಲ್ಕ ಬರಲಿದೆಯೇ? – ಲೋಕಸಭೆಯಲ್ಲಿ ಅಂಗೀಕಾರವಾದ bill ಮಸೂದೆ ಏನು ಹೇಳುತ್ತದೆ?
    ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
    ದರ್ಶನ್‌ಗೆ ಇನ್ನೊಂದು ವರ್ಷ ಜೈಲೇ ಗತಿ…ಜಾಮೀನು ನಿರಾಕರಣೆ.
    ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
    ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
    ರೀಲ್ಸ್ ನೋಡುವ ಕೈಗಳೇ… ದೇಶ ಕಟ್ಟುವ ಕೈಗಳಾಗಬಹುದು.ಡ್ರಗ್ಸ್ ,ಮೊಬೈಲ್ ,ವ್ಯಸನಗಳು ನಿಮ್ಮ ಕನಸುಗಳನ್ನು ಕದಿಯುವ ಮೊದಲು… ಯುವಕರೇ ಎಚ್ಚರಗೊಳ್ಳಿ!
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    ಹೆಡ್‌ಲೈಟ್ ಇಲ್ಲ… ಮೊಬೈಲ್ ಟಾರ್ಚ್‌ನಲ್ಲೇ ಓಡಿದ ಸರ್ಕಾರಿ ಬಸ್!
    🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
    ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
    ಮೀನು ಮಾರುವ ಮಹಿಳೆಯರ ಮೇಲೆ ಹಲ್ಲೆ :ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಭರ್ಜರಿ ಒದೆ