📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!

ಮಂಗಳೂರು ಹೊಸ ರೂಲ್: ಪ್ಲಾಸ್ಟಿಕ್ ಪಾರ್ಸೆಲ್ ಸ್ಟಾಪ್, ಪಬ್ಲಿಕ್ ಸ್ಮೋಕಿಂಗ್‌ಗೆ ಗುಟ್ಕಾ ತೂ … ,₹1000 ಫೈನ್!” ಉತ್ತಮ ಆರೋಗ್ಯಕ್ಕಾಗಿ ಕಠಿಣ ಕ್ರಮ…

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಗುಟ್ಕಾ ತೂ ….. ಮಾಡಿದ್ರೆ ₹1000 ಫೈನ್
ಆರೋಗ್ಯ ರಕ್ಷಣೆಗಾಗಿ ಜಿಲ್ಲಾಡಳಿತದ ಕಠಿಣ ಕ್ರಮ ಕೈಗೊಂಡಿದೆ . ಮಂಗಳೂರಿನ ಜನರು ಸಹಕರಿಸಿದರೆ – ಸ್ವಚ್ಛ, ಆರೋಗ್ಯಕರ ನಗರ ನಿರ್ಮಾಣ ಸಾಧ್ಯ!

ಮಂಗಳೂರು: ಆರೋಗ್ಯ ಮತ್ತು ಪರಿಸರದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಹೋಟೆಲ್, ಕ್ಯಾಂಟೀನ್ ಮತ್ತು ಕಫೆಗಳಲ್ಲಿ ಪ್ಲಾಸ್ಟಿಕ್ ಕವರ್ ಅಥವಾ ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥ ಪಾರ್ಸೆಲ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಅಪರ ಜಿಲ್ಲಾಧಿಕಾರಿ ರಾಜು ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

🍽️ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ , ಗುಟ್ಕಾ ಕ್ಕೆ ಕಠಿಣ ಕ್ರಮ.

ಈಗಾಗಲೇ ಸಾವಿರಾರು ಪ್ರಕರಣ ದಾಖಲು……ಶಾಲೆ–ಕಾಲೇಜುಗಳ ಸುತ್ತ 100 ಮೀಟರ್ ಕಟ್ಟುನಿಟ್ಟಿನ ನಿಷೇಧ….ಅಭ್ಯಾಸ ಬದಲಿಸುವುದು ದೊಡ್ಡ ಸವಾಲು …… ಜಾಗೃತಿ ಅಭಿಯಾನಕ್ಕೂ ಒತ್ತು….ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು ಹಾಗೂ ಪೌರ ಕಾರ್ಮಿಕರು ಹೆಚ್ಚು ತಂಬಾಕು ಸೇವನೆಗೆ ಒಳಗಾಗುವ ವರ್ಗವಾಗಿರುವುದರಿಂದ ಅವರಿರುವ ಸ್ಥಳಗಳಿಗೆ ತೆರಳಿ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಲಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ,ಪ್ಲಾಸ್ಟಿಕ್‌ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ಬಿಸಿ ಆಹಾರದೊಂದಿಗೆ ಬೆರೆತು ಮಾನವ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತವೆ ಎಂದು ಎಚ್ಚರಿಸಿದರು. ದೀರ್ಘಕಾಲದಲ್ಲಿ ಇದು ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಸೂಚಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹೋಟೆಲ್ ಮತ್ತು ಕ್ಯಾಂಟೀನ್‌ಗಳಿಂದ ಕಾರ್ಮಿಕರು, ಆಸ್ಪತ್ರೆಯ ರೋಗಿಗಳು ಹಾಗೂ ಸಾರ್ವಜನಿಕರು ಬಿಸಿ ಆಹಾರವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕೊಂಡೊಯ್ಯುವ ಪ್ರಕ್ರಿಯೆ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕವರ್ ಹಾಗೂ ನ್ಯೂಸ್ ಪೇಪರ್ ಬಳಸಿ ಬಿಸಿ ಆಹಾರ ಪಾರ್ಸೆಲ್ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಅಥವಾ ಗುಟ್ಕಾ ಜಗಿದು ಉಗುಳುವವರಿಗೆ ₹1000 ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಂಗಡಿಗಳಲ್ಲಿ ಚಿಲ್ಲರೆ ಸಿಗರೇಟ್ ಮಾರಾಟಕ್ಕೂ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದ ಅಂಗಡಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ.

‘ಕೋಟ್ಪಾ’ ಕಾಯ್ದೆಯಡಿ ಜಿಲ್ಲೆಯಲ್ಲಿ ಈಗಾಗಲೇ 2,587 ಪ್ರಕರಣಗಳು ದಾಖಲಾಗಿದ್ದು, ₹3.89 ಲಕ್ಷ ದಂಡ ಸಂಗ್ರಹಿಸಲಾಗಿದೆ. ತಂಬಾಕು ಸಂಬಂಧಿಸಿದ 52 ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ.

ತಂಬಾಕು ಉತ್ಪನ್ನ ಪ್ಯಾಕ್‌ಗಳಲ್ಲಿ ಆರೋಗ್ಯ ಎಚ್ಚರಿಕೆಯ ಚಿತ್ರಗಳು 85% ಕ್ಕಿಂತ ಕಡಿಮೆ ಇದ್ದರೆ ಅಥವಾ ಹಳೆಯ ಚಿತ್ರಗಳನ್ನು ಬಳಸಿದರೆ ದಂಡ ವಿಧಿಸಲಾಗುತ್ತದೆ. ತಂಬಾಕು ಬ್ರ್ಯಾಂಡ್ ಹೆಸರಿನ ಜಾಹೀರಾತು ಫಲಕಗಳು ಅಥವಾ ಯಾವುದೇ ರೀತಿಯ ಪ್ರಚಾರ ನಡೆಸಿದರೂ ಕ್ರಮ ಕೈಗೊಳ್ಳಲಾಗುತ್ತದೆ.

ಶಾಲೆ ಮತ್ತು ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಸಂಪೂರ್ಣ ನಿಷೇಧ. ಈ ಪ್ರದೇಶಗಳಲ್ಲಿ ನಿಷೇಧ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ನಿಯಮ ಉಲ್ಲಂಘಿಸುವವರ ಬಗ್ಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ಸರ್ವೇಕ್ಷಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ಲಾಸ್ಟಿಕ್ ಪಾರ್ಸೆಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಬಹುಕಾಲದಿಂದ ಸಾಮಾನ್ಯ ಅಭ್ಯಾಸವಾಗಿದೆ. ಆದ್ದರಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಆಡಳಿತಕ್ಕೆ ಸವಾಲಾಗಬಹುದು. ಆದಾಗ್ಯೂ ಆರೋಗ್ಯಕರ ಸಮಾಜ ನಿರ್ಮಾಣದತ್ತ ಇದು ಮಹತ್ವದ ಹೆಜ್ಜೆ ಎಂದು ನಾಗರಿಕ ವಲಯಗಳು ಅಭಿಪ್ರಾಯಪಟ್ಟಿವೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ
🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
📣3 ತಿಂಗಳಲ್ಲಿ LPG ಸಂಪರ್ಕ ರದ್ದು ??– PNGಗೆ ಬದಲಾವಣೆ ಕಡ್ಡಾಯ” ಈಗಲೇ ಸತ್ಯ ತಿಳಿದುಕೊಳ್ಳಿ..! ಗ್ಯಾಸ್ ಬಗ್ಗೆ ಗೊಂದಲಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ.
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
ಕಣ್ಣೀರಾದ ಕಣ್ಣಾಲಿಗಳು ಹೊಟ್ಟೆ ತುಂಬಾ ಊಟ ಮಾಡಿ ನಿದ್ರಿಸುವಂತೆ ಮಾಡುವ  “ಕಾರುಣ್ಯ ಸೇವಾಕ್ಕೀಗ 3000 ದಿನಗಳು…!!!”
ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..