📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಒಂದು ವಾಟ್ಸ್ಯಾಪ್ ಮೆಸೇಜ್… ಕೋರ್ಟ್ ವರೆಗೂ ಎಳೆದ ಶಾಕ್ ಘಟನೆಯ ಸುತ್ತ..

    ಲಭ್ಯ ಮಾಹಿತಿ ಪ್ರಕಾರ 2026ರ ಮೇ ತಿಂಗಳಲ್ಲಿ, ಶಾಸಕ ಪೊನ್ನಣ್ಣ ಅವರ ಕುಟುಂಬವನ್ನು ಉಲ್ಲೇಖಿಸಿ ವಾಟ್ಸ್ಯಾಪ್‌ ಗ್ರೂಪ್‌ನಲ್ಲಿ ವಿವಾದಾತ್ಮಕ ಸಂದೇಶ ಪೋಸ್ಟ್‌ ಮಾಡಿದ ಆರೋಪದ ಮೇಲೆ ದೇವಯ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು. ‘ಕೊಡಗಿನ ಸಮಸ್ಯೆಗಳು’ ಎಂಬ ವಾಟ್ಸ್ಯಾಪ್‌ ಗ್ರೂಪ್‌ನಲ್ಲಿ ನಡೆದ ಚರ್ಚೆಯ ವೇಳೆ ದೇವಯ್ಯ, “ಪೊನ್ನಣ್ಣನಿಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಾದು ನೋಡಿ ಕರ್ಮ ಹಿಂದಿರುಗಲಿದೆ” ಎಂದು ಬರೆದಿದ್ದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಕೆಪಿಸಿಸಿ ಕಾನೂನು ಘಟಕ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ನಂತರ ತನಿಖೆಯನ್ನು ಸಿಸಿಬಿ ಸೈಬರ್‌ ಠಾಣೆಗೆ ವರ್ಗಾಯಿಸಲಾಯಿತು. ಬಂಧನದ ಭೀತಿಯ ನಡುವೆ ದೇವಯ್ಯ ಬೆಂಗಳೂರಿನ 1ನೇ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದಿದ್ದಾನೆ. ಇದೇ ವೇಳೆ, ದೇವಯ್ಯ ವಿರುದ್ಧ ಈ ಹಿಂದೆ ಯುವತಿಗೆ ಅಸಭ್ಯ ಸಂದೇಶ ಕಳುಹಿಸಿದ ಪ್ರಕರಣವೂ ದಾಖಲಾಗಿದ್ದು, ಅದರಲ್ಲಿ ಶಿಕ್ಷೆಯಾಗಿದ್ದರೂ ಬಳಿಕ 2025ರಲ್ಲಿ ಹೈಕೋರ್ಟ್‌ ರಾಜಿ ಒಪ್ಪಂದದ ಆಧಾರದ ಮೇಲೆ ಶಿಕ್ಷೆಯನ್ನು ರದ್ದುಪಡಿಸಿತ್ತು.

    ಈ ಘಟನೆ ಕೇವಲ ಒಂದು ವಾಟ್ಸ್ಯಾಪ್ ಮೆಸೇಜ್‌ನ ವಿಷಯವಲ್ಲ. ಇದು ಇಂದಿನ ಡಿಜಿಟಲ್ ಸಮಾಜದಲ್ಲಿ “ಮಾತಿನ ಶಕ್ತಿ”, “ಕಾನೂನಿನ ಆಯ್ಕೆಮಾಡಿದ ಕಾರ್ಯಾಚರಣೆ” ಮತ್ತು “ಸಾಮಾಜಿಕ ಸಮಾನತೆಯ ಕೊರತೆ” ಎಲ್ಲವನ್ನೂ ಒಟ್ಟಿಗೆ ಎತ್ತಿ ಹಿಡಿಯುವ ಒಂದು ಕನ್ನಡಿ.

    Also Read  ಪಹಲ್ಗಾಂಮ್ ದಾಳಿಯ ಒಂದು ವರ್ಷ: ಇನ್ನೂ ಮುಗಿಯದ ನೋವು, ಮರೆಯಲಾಗದ ನೆನಪುಗಳು

    ಒಂದು ಮೆಸೇಜ್, ಆದರೆ ದೊಡ್ಡ ಪ್ರತಿಕ್ರಿಯೆ

    ಒಬ್ಬ ವ್ಯಕ್ತಿ ಗ್ರೂಪ್‌ನಲ್ಲಿ ಬರೆದ一ಸಂದೇಶ, post ವೈಯಕ್ತಿಕ ಮಾತು—ಕುಟುಂಬವನ್ನು ಉಲ್ಲೇಖಿಸಿ ಮಾಡಿದ ಒಂದು ವ್ಯಂಗ್ಯ—ಕ್ಷಣಾರ್ಧದಲ್ಲೇ ವಿವಾದವಾಗಿ ಬದಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಸಾವಿರಾರು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತವೆ. ಕೆಲವು ಅಸಹ್ಯ ಅನಿಸುವಷ್ಟು ಅಸಭ್ಯ, ಕೆಲವು ಅವಮಾನಕಾರಿ, ಕೆಲವು ನೇರ ದ್ವೇಷದಿಂದ cheap ಮೆಂಟಾಲಿಟಿ ಯಿಂದ ತುಂಬಿರುತ್ತವೆ. ಆ ತರಹದ ಒಂದು ವರ್ಗವೇ ಸಕ್ರಿಯವಾಗಿದೆ.ಆದರೆ ಅವುಗಳಲ್ಲಿ ಬಹುಪಾಲು “ನಗಣ್ಯ” ಆಗಿ ಮರೆತುಹೋಗುತ್ತವೆ. ಆದರೆ ಕೆಲವೊಂದು ಮಾತ್ರ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತವೆ, ಪ್ರಕರಣವಾಗುತ್ತವೆ, ತನಿಖೆಗೆ ಹೋಗುತ್ತವೆ. ಈ ವ್ಯತ್ಯಾಸವೇ ಜನರಲ್ಲಿ ಮೊದಲ ಪ್ರಶ್ನೆಯನ್ನು ಹುಟ್ಟಿಸುತ್ತದೆ—“ಇದು ಮಾತ್ರ ಯಾಕೆ?”

    ಕಾನೂನು ಎಲ್ಲರಿಗೂ ಒಂದೇ, ಆದರೆ ಕಾರ್ಯದಲ್ಲಿ ಒಂದೇ ಅಲ್ಲ

    ಭಾರತದಲ್ಲಿ ಸೈಬರ್ ಕಾನೂನುಗಳು ಸ್ಪಷ್ಟವಾಗಿವೆ. ಮಾನಹಾನಿ, ಪ್ರಚೋದನೆ, ಅಸಭ್ಯ ಸಂದೇಶಗಳು—ಇವುಗಳಿಗೆ ಸ್ಪಷ್ಟ ನಿಯಮಗಳಿವೆ. ಆದರೆ ನಿಜ ಜೀವನದಲ್ಲಿ ಅವುಗಳ ಅನುಷ್ಠಾನ ಸಮಾನವಾಗಿಲ್ಲ. ಕೆಲ ಪ್ರಕರಣಗಳಲ್ಲಿ FIR ತಕ್ಷಣ ದಾಖಲಾಗುತ್ತದೆ, ಸೈಬರ್ ವಿಭಾಗ ಚುರುಕಾಗಿ ಕೆಲಸ ಆರಂಭಿಸುತ್ತದೆ. ಇನ್ನೂ ಕೆಲವು ಪ್ರಕರಣಗಳು ದೂರು ಕೊಟ್ಟರೂ ಫೈಲ್‌ನಲ್ಲೇ ನಿಲ್ಲುತ್ತವೆ. ಈ ಅಸಮತೋಲನವೇ ಜನರಲ್ಲಿ “ಕಾನೂನು ಎಲ್ಲರಿಗೂ ಒಂದೇನಾ ಅಥವಾ ಪ್ರಭಾವ ಇದ್ದವರಿಗೆ ಮಾತ್ರವೇ ಜಾಗೃತವಾಗುತ್ತದೆಯಾ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

    Also Read  ಒಬ್ಬನೇ ಯುವಕ… ಕೈಯಲ್ಲಿ ಗ್ಲೌಸ್, ಮನದಲ್ಲಿ ಸಂಕಲ್ಪ! ‘ಬಿಟ್ಟು ತಬಾಹಿ’ಗೆ ದೇಶದ ಸಲಾಂ

    ಸಾಮಾಜಿಕ ಮಾಧ್ಯಮ ಒಂದು ವಿಚಿತ್ರ ಜಗತ್ತು. ಇಲ್ಲಿ ಒಬ್ಬರು ಹೇಳಿದ ಮಾತು ಕ್ಷಣದಲ್ಲಿ ಸಾವಿರಾರು ಜನರಿಗೆ ತಲುಪುತ್ತದೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಆದರೆ ಅದೇ ಸಮಯದಲ್ಲಿ ಮಾತಿನ ದುರುಪಯೋಗವೂ ಇದೆ. ದಿನನಿತ್ಯ ನಾವು ನೋಡುವುದು ಏನೆಂದರೆ—ಕೆಲವರು ಯಾವುದೇ ಮಿತಿಯಿಲ್ಲದೆ ಮಾತನಾಡುತ್ತಾರೆ, ಕುಟುಂಬಗಳನ್ನು ಗುರಿಯಾಗಿಸುತ್ತಾರೆ, ವ್ಯಕ್ತಿತ್ವ ಹಾಳುಮಾಡುವ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆ. ಆದರೆ ಆ ಮಾತುಗಳು ಬಹುಪಾಲು ಸಮಯದಲ್ಲಿ ಯಾವುದೇ ಕಾನೂನು ಕ್ರಮಕ್ಕೆ ಒಳಪಡುವುದಿಲ್ಲ. ಇದರಿಂದ ಜನರಲ್ಲಿ “ನ್ಯಾಯ ಆಯ್ಕೆಮಾಡಲ್ಪಡುತ್ತಿದೆಯೇ?” ಉತ್ತರವಿಲ್ಲದ ಪ್ರಶ್ನೆ.

    ಶಕ್ತಿ ಮತ್ತು ಪ್ರಭಾವದ ಅಸಮಾನತೆ

    ಯಾವಾಗಲಾದರೂ ಪ್ರಭಾವಶಾಲಿ ವ್ಯಕ್ತಿ ಅಥವಾ ರಾಜಕೀಯ ಸಂಬಂಧಿತ ವಿಷಯಗಳು ಒಳಗೊಂಡಾಗ ಮಾತ್ರ ಪ್ರಕರಣಗಳು ತಕ್ಷಣ ಬೆಳಕು ಕಾಣುತ್ತವೆ. ಸಾಮಾನ್ಯ ವ್ಯಕ್ತಿಯ ವಿರುದ್ಧದ ದ್ವೇಷಪೂರಿತ ಕಾಮೆಂಟ್‌ಗಳು ಅನೇಕ ಬಾರಿ ಗಮನಕ್ಕೇ ಬರುವುದಿಲ್ಲ.—“ಬಲಶಾಲಿಗಳ ಮೇಲೆ ಮಾತು ಬಂದಾಗ ಮಾತ್ರ ವ್ಯವಸ್ಥೆ ಕೆಲಸ ಮಾಡುತ್ತದೆಯಾ?” ಎಂಬ ಪ್ರಶ್ನೆ.

    ಇಂದಿನ ಸಮಾಜದಲ್ಲಿ ಮತ್ತೊಂದು ವಾಸ್ತವತೆ ಇದೆ. ಜನರು ಪ್ರತಿಯೊಂದು ಘಟನೆಗೆ ಸಮಾನವಾಗಿ ಪ್ರತಿಕ್ರಿಯಿಸುವುದಿಲ್ಲ. ಕೆಲವರು ಧರ್ಮಾಧಾರಿತ ವೈಯಕ್ತಿಕ ಪ್ರತಿಕ್ರಿಯೆಗಳಲ್ಲಿ ಸಕ್ರಿಯವಾದರೆ ಇನ್ನುಳಿದವರು ಕೆಲವೊಂದು ಘಟನೆಗಳು ರಾಜಕೀಯ, ವ್ಯಕ್ತಿತ್ವ ಅಥವಾ ಮಾಧ್ಯಮದ ಗಮನದಿಂದ ದೊಡ್ಡದಾಗುತ್ತವೆ. ಉಳಿದವುಗಳು ಮೌನವಾಗುತ್ತವೆ. ಈ “selective outrage” ಸಮಾಜದ ನಿಜವಾದ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ.

    Also Read  ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour

    ಈ ಘಟನೆಯ ನಿಜವಾದ ಪಾಠ

    ಈ ಪ್ರಕರಣವನ್ನು ಕೇವಲ “ಒಂದು ಮೆಸೇಜ್‌ಗೆ ಬಂಧನ” ಎಂದು ನೋಡಿದರೆ ಅದು ಅಪೂರ್ಣ ಚಿತ್ರಣ. ಇದು ಒಂದು ದೊಡ್ಡ ವ್ಯವಸ್ಥೆಯ ಪ್ರತಿಬಿಂಬ. ಇಲ್ಲಿ ಪ್ರಶ್ನೆ ಆರೋಪಿ ಯಾರು ಎಂಬುದಲ್ಲ, ಪ್ರಶ್ನೆ ಇದು—“ನಮ್ಮ ವ್ಯವಸ್ಥೆ ಎಲ್ಲರಿಗೂ ಸಮಾನವಾಗಿ ಕೆಲಸ ಮಾಡುತ್ತಿದೆಯಾ?” ಎಂಬುದು.

    ಸಾಮಾಜಿಕ ಮಾಧ್ಯಮ ಈಗ ಕೇವಲ ಸಂವಹನ ಸಾಧನವಲ್ಲ, ಅದು ನ್ಯಾಯ, ಅನ್ಯಾಯ, ಪ್ರಭಾವ ಮತ್ತು ಪ್ರತಿಕ್ರಿಯೆಯ ವೇದಿಕೆಯಾಗಿದೆ. ಆದರೆ ಆ ವೇದಿಕೆಯಲ್ಲಿ ಎಲ್ಲರಿಗೂ ಒಂದೇ ಮಟ್ಟದ ನ್ಯಾಯ ಸಿಗುತ್ತಿಲ್ಲ ಎಂಬುದು ಸ್ಪಷ್ಟ.

    ಇದೇ ಕಾರಣಕ್ಕೆ ಪ್ರತಿಯೊಂದು ಇಂತಹ ಘಟನೆಗಳು ಮತ್ತೆ ಮತ್ತೆ ಒಂದು ಗಂಭೀರ ಪ್ರಶ್ನೆಯನ್ನು ಎತ್ತುತ್ತವೆ


    “ಕೆಲವು ಮಾತಿನ ತಪ್ಪಿಗೆ ಕಾನೂನು ತಕ್ಷಣ ಜಾಗೃತವಾಗುತ್ತದೆ, ಆದರೆ ಅದೇ ಮಾತು ಸಾವಿರಾರು ಬಾರಿ ನಡೆದಾಗ ಯಾಕೆ ಮೌನವಾಗುತ್ತದೆ?”

    ##MadikeriCase #KodaguNews #DevaiahCase #WhatsAppControversy #CCBCyberCrime #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೆಳಗಾವಿ ಮಾಜಿ ಯೋಧನ ಸಾವಿನ ಹಿಂದೆ ಬೆಚ್ಚಿಬೀಳಿಸುವ ಸತ್ಯ ₹2 ಕೋಟಿ ವಿಮೆ..!? ಸಿನೆಮಾವನ್ನೂ ಮೀರಿಸಿದ ಕ್ರೈಂ ಸ್ಟೋರಿ!
    🔥 ಬಿಸಿಲಿನ ಬಿಸಿ ತಾರಕ್ಕೇರಿದೆ, ಆದರೆ ಮಳೆ ಸಿಡಿಲು ಸರ್ಪ್ರೈಸ್ ಬರ್ತಿದೆ! 🌩️
    ಬೆಳಕು-ನೆರಳಿನ ಕಾವ್ಯ: ಕಾಲವನ್ನೇ ಕಟ್ಟಿಹಾಕುವ ಛಾಯಾಚಿತ್ರಗಳ ವೈಭವ
    ವಯನಾಡಿನ ಮೇಪ್ಪಾಡಿ ವಲಯದಲ್ಲಿ ಮರುಕಳಿಸಿದ 2024ರ ಭೂಕುಸಿತದ ಕರಾಳತೆ
    ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
    ರಾಜ್ಯ ಬಿಜೆಪಿಯಲ್ಲಿ ಕೋಲಾಹಲ, ನಾಯಕರ ಒಗ್ಗೂಡಿಸುವಲ್ಲಿ ವಿಫಲ: ರಾಧಾ ಮೋಹನ್ ತಲೆದಂಡಕ್ಕೆ ಸಿದ್ಧತೆ
    ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!
    ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
     “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
    ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …
    ‘INS Malvan’ ಲೋಕಾರ್ಪಣೆ-ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗೆ ಹೊಸ ಕಾವಲುಗಾರ ‘ಸೈಲೆಂಟ್ ಹಂಟರ್’ ಕಾರವಾರದಿಂದ ಭಾರತದ ಸಮುದ್ರಶಕ್ತಿಗೆ ಮತ್ತಷ್ಟು ಬಲ!
    ಮಾಜಿ ಮುಖ್ಯಮಂತ್ರಿಗೆ ಉಂಡೇನಾಮ ತಿಕ್ಕಿದ ಸಚಿವ ಯಾರು?
    5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
    🩸 4 ಲಕ್ಷ ವಿದ್ಯಾರ್ಥಿಗಳು…!!??ಕರ್ನಾಟಕದ ‘ಜೀವ ರಕ್ಷಕ’ Blood Donor Pool!ಏನಿದು ಜೆನ್ ಜಿ ಹೊಸ ಸೋಚ್…
    ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
    ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
    ಶಾಲಾ ಶಿಕ್ಷಕಿಯರ ಹೆಸರಿನಲ್ಲಿ ಡ್ರಗ್ಸ್ ಜಾಲ ..! ತನಿಖೆಯಲ್ಲಿ ಬೆಚ್ಚಿಬೀಳಿಸುವ ಕೊಂಡಿಗಳು ಇನ್‌ಸ್ಟಾಗ್ರಾಮ್‌ನಿಂದ ಗ್ರಾಹಕರ ಸೆಳೆತ, ಗಲ್ಫ್ ನಂಬರ್ ಮೂಲಕ ಬುಕ್ಕಿಂಗ್
    ಒಂದು iPhoneಗಾಗಿ ಆರಂಭವಾದ ಮಗನ ಹಠ… ಕೊನೆಗೆ ಒಂದೇ ಕುಟುಂಬದ ಮೂವರ ಜೀವವೇ ಹೋಯ್ತು!
    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    ಪಶ್ಚಿಮ ಬಂಗಾಳದಲ್ಲಿ ಗುಂಡಾಗಿರಿ ಮುಂದುವರಿಕೆ
    ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
    ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ PIL: SIR ವಿಚಾರಕ್ಕೆ ಹೊಸ ತಿರುವು
    ‘ಪೊಲೀಸರಿಗೆ ದೂರು ಕೊಡ್ತೀಯಾ?’… ಗಾಂಜಾ ವ್ಯಸನಕ್ಕೆ ಸೈಜು ಕಲ್ಲಿನಿಂದ ಅಜ್ಜಿಯ ತಲೆ ಪುಡಿ ಮಾಡಿದ ಮೊಮ್ಮಗ!ಅಜ್ಜಿಯೇ ಬಲಿ!
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
    ದೆಹಲಿ ಹೋಟೆಲ್ ಭೀಕರ ಅಗ್ನಿ ದುರಂತ!ಹೊತ್ತಿ ಉರಿದ ಹೋಟೆಲ್‌ನಲ್ಲಿ 21 ಮಂದಿ ಸಜೀವ ದಹನ..
    ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
    ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ… 
    ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!