📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕಂಬಳಕ್ಕೆ ಘೋಷಿತ ಅನುದಾನ ಕೊಡುವಂತೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ..

    ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನದ ಅವಿಭಾಜ್ಯ ಅಂಗವಾಗಿರುವ ಕಂಬಳ ಕ್ರೀಡೆಗೆ ರಾಜ್ಯ ಸರ್ಕಾರ ಘೋಷಿಸಿರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ಅವರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದ್ದಾರೆ.

    ಕಳೆದ ವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು, ಈ ಕುರಿತು ವಿವರವಾಗಿ ಚರ್ಚೆ ನಡೆಸಿದರು ಎಂದು ಶಾಸಕರ ಕಚೇರಿಯು ತಿಳಿಸಿದೆ.

    ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 24 ಕಂಬಳ ಸಮಿತಿಗಳಿಗೆ ತಲಾ 5 ಲಕ್ಷ ರೂ.ಗಳಂತೆ ಅನುದಾನ ನೀಡುವುದಾಗಿ ಸರ್ಕಾರವು ಈ ಹಿಂದೆ ಘೋಷಿಸಿತ್ತು. ಆದರೆ, ಆ ಘೋಷಣೆಯು ಪೂರ್ತಿ ಆಗಿರಲಿಲ್ಲ. ಇನ್ನೂ ಆ ಅನುದಾನ ಬಿಡುಗಡೆಯಾಗಿಲ್ಲ, ಕಂಬಳ ಆಯೋಜನೆಯ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಆರ್ಥಿಕ ನೆರವಿನ ಕೊರತೆಯಿಂದ ಸಮಿತಿಗಳು ತೊಂದರೆ ಅನುಭವಿಸುತ್ತಿವೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.

    Also Read  ಬೆಳ್ತಂಗಡಿ: 16ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಆಟೋ ಚಾಲಕ ಅಂದರ್!

    ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಕೆ.ಜೆ. ಜಾರ್ಜ್ ಅವರು, ವಿಷಯದ ಗಂಭೀರತೆಯನ್ನು ಅರಿತು ಶೀಘ್ರದಲ್ಲಿ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

    ಕಂಬಳದಂತಹ ಸಾಂಸ್ಕೃತಿಕ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಈ ನೆರವು ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಈ ಸಂದರ್ಭದಲ್ಲಿ ತಿಳಿಸಿದರು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರು ದಸರಾ ಮೆರವಣಿಗೆಗೆ ವಿದ್ಯುತ್ ತಂತಿಗಳ ಸಮಸ್ಯೆಗೆ ಗುಡ್‌ಬೈ!
    “ಧುರಂಧರ್ “ಸಿನಿಮಾವನ್ನೂ ಮೀರಿದ ಪಾಕ್ ಸಂಚನ್ನ ಭೇದಿಸಿದ ಕೇಂದ್ರ ಗುಪ್ತಚರ ಇಲಾಖೆ ಮತ್ತು ಕರ್ನಾಟಕ ಖಾಕಿ..
    ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
    ಕೊಪ್ಪ ತಹಸಿಲ್ದಾರ್ ಲಿಖಿತಾ ಮೋಹನ್, ಅಧಿಕಾರ ದುರುಪಯೋಗ ಮಾಡಿಕೊಂಡರಾ?
    “ರೈಲಿನಲ್ಲೇ ಇಂಥಾ ಕೃತ್ಯ! ನಾಗರಿಕ ಪ್ರಜ್ಞೆ ಎಲ್ಲಿದೆ?”
    MRPLನಲ್ಲಿ ಭಾರೀ ಸ್ಫೋಟದ ಸದ್ದು “ಬಾಯ್ಲರ್ ಬ್ಲಾಸ್ಟ್”…!ಕಾಟಿಪಳ್ಳ, ಜೋಕಟ್ಟೆ , ಕೃಷ್ಣಾಪುರದ ಜನರಲ್ಲಿ ಆತಂಕ — ಫೇಸ್‌-3 ಘಟಕದ ಬಳಿ ಘಟನೆ ಶಂಕೆ
    ಭೀಕರ ಅಪಘಾತ ಮಹಿಳೆ ಬಲಿ
    ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
    ನೀವೂ ತಿಳಿದಿರಬೇಕಾದ ವಿಷಯ:ಬರುವ ಆರ್ಥಿಕ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ!
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಅಮೆರಿಕಾ ವಿರುದ್ಧ ‘ಪೈರಸಿ’ ಆರೋಪ: ಇರಾನ್ ಯುಎನ್‌ಗೆ ದೂರು
    ಒಂದು ದೇಶವನ್ನೇ ಮಟ್ಟಾಶ್ ಮಾಡುವಷ್ಟು ನ್ಯೂಕ್ಲಿಯರ್ ಪವರ್ stock ಇರಾನ್ನಲ್ಲಿ ಇದ್ಯಾ !?
    ಕರ್ನಾಟಕಕ್ಕೆ ಮಳೆ ಅಲರ್ಟ್‌ | ಸೆ.24ರಂದು ಕರಾವಳಿಗೆ ರೆಡ್‌ ಅಲರ್ಟ್‌
    ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಪ್ರಕರಣಗಳು..!ಯುವ ಪೀಳಿಗೆಯನ್ನು ಗುರಿಯಾಗಿಸಿ “ಹೈ-ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.”
    ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
    ಡಿಕೆ ಶಿವಕುಮಾರ್ ಪ್ರತಿಷ್ಠೆ ಪಣಕ್ಕಿಟ್ಟ ಪರಿಷತ್ ಚುನಾವಣೆ!
    ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    “ಯೋಗೇಶ್ ಗೌಡ ಪ್ರಕರಣದಲ್ಲಿ ಕಾನೂನು ಗರ್ಜನೆ!”ಕಾನೂನು ಕಾಯುವವರೇ ಬೂಟು ನೆಕ್ಕಿಕಾನೂನು ಮುರಿದಾಗ-7 ವರ್ಷಗಳ ಜೈಲು!ಕಾನೂನು ಇನ್ನೂ ಜೀವಂತ!”
    ₹5ಕ್ಕೆ ಇಡ್ಲಿ… 56 ವರ್ಷಗಳಿಂದ ಅದೇ ರುಚಿ! 70ರ ಹರೆಯದಲ್ಲೂ ಪ್ರತಿದಿನ 1,500 ಇಡ್ಲಿ ಮಾಡಿ ಜನರ ಮನ ಗೆದ್ದ ಕರ್ನಾಟಕದ ಅನ್ನದಾತ…
    ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
    ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವೈದ್ಯನನ್ನು ಅಮಾನತ್ತು ಮಾಡಿದರೆ ಸಾಕೆ?
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ‘ಮೇಕ್ ಇನ್ ಇಂಡಿಯಾ’ಗೆ ಮತ್ತೊಂದು ದೊಡ್ಡ ಗೆಲುವು: C295 ವಿಮಾನದ ಮೊದಲ ಯಶಸ್ವಿ ಪರೀಕ್ಷಾ ಹಾರಾಟ
    ರಾಜ್ಯವ್ಯಾಪಿ ಖೋಟಾ ನೋಟು ಜಾಲ ಭೇದಿಸಿದ ಖಾಕಿಯ ಚಾಣಾಕ್ಷ ಕಾರ್ಯಾಚರಣೆ..!
    ಸಿಜೆಪಿಯ ಪ್ರತಿಭಟನೆ ಬಗ್ಗೆ ತನಿಖೆ ನಡೆಸಲು ಸಲ್ಲಿಸಲಾದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ
    ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
    ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
    ಉತ್ತರ ಕನ್ನಡಕ್ಕೆ ₹6,925 ಕೋಟಿ ಬಂದರು ಯೋಜನೆ: 15 MTPA ಸಾಮರ್ಥ್ಯದ ಮಂಕಿ ಬಂದರಿಗೆ ಸಚಿವ ಸಂಪುಟ ಒಪ್ಪಿಗೆ