📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    KSRTC ಬಸ್ ಪಲ್ಟಿಯಾಗಿ ಕಂದಕಕ್ಕೆ — ಐವರು ದುರ್ಮರಣ, ಹಲವರಿಗೆ ಗಂಭೀರ ಗಾಯ-ಜಹೀರಾಬಾದ್ ಸಮೀಪ ಭೀಕರ ರಸ್ತೆ ಅಪಘಾತ

    ಸಂಗಾರೆಡ್ಡಿ, ಮೇ 12: ಹೈದರಾಬಾದ್‌ನಿಂದ ಬೀದರ್ ಕಡೆಗೆ ಪ್ರಯಾಣಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಜಹೀರಾಬಾದ್ ಸಮೀಪ ಭೀಕರ ಅಪಘಾತಕ್ಕೀಡಾಗಿ ಐವರು ಸಾವನ್ನಪ್ಪಿರುವ ದುರ್ಘಟನೆ ಮಂಗಳವಾರ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ ಹತ್ತುಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬೀದರ್–ಜಹೀರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಬಸ್ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇದೇ ವೇಳೆ, ಬಸ್‌ನ ಮುಂಭಾಗದಲ್ಲಿ ಕುಳಿತಿದ್ದ ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಬಸ್ ಸಂಪೂರ್ಣವಾಗಿ ಪಲ್ಟಿಯಾಗಿದ್ದರಿಂದ ಪ್ರಯಾಣಿಕರಲ್ಲೆಲ್ಲಾ ಆತಂಕ ಮತ್ತು ಕಿರುಚಾಟ ಮೇಳೈಸಿತ್ತು. ಕೆಲವರು ಬಸ್ ಒಳಗೆ ಸಿಲುಕಿಕೊಂಡ ಸ್ಥಿತಿಯಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    Also Read  ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ... ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ

    ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ದಾರಿಹೋಕರು ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರು. ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದರು.

    ಹೈದರಾಬಾದ್‌ನಿಂದ ಬೀದರ್‌ಗೆ ತೆರಳುತ್ತಿದ್ದ ಈ ಬಸ್‌ನಲ್ಲಿ ಸಾಕಷ್ಟು ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಅಪಘಾತದ ನಿಖರ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈ ದುರ್ಘಟನೆ ಪ್ರದೇಶದಲ್ಲಿ ಮೃತರ ಕುಟುಂಬಗಳ ಆಕ್ರಂದನ ಮನಕಲಕುವಂತಿದೆ.

    ##ಜಹೀರಾಬಾದ್ಅಪಘಾತ #KSRTC #RoadAccident #KannadaNews #Tragedy #Bidar #PrayForVictims

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    35 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದ 50 ವರ್ಷದ ಮಹಿಳೆ: ಇಂಟರ್ನೆಟ್‌ಗೆ ಸ್ಫೂರ್ತಿಯಾದ ಕಥೆ
    ಗ್ರಾಹಕರ ಮಾತು ಕೇಳಿ, ₹900 ಕೋಟಿಯ ರೆಸ್ಟೋರೆಂಟ್ ಸಾಮ್ರಾಜ್ಯ ನಿರ್ಮಿಸಿದ ಉದ್ಯಮಿ..
    ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
    ಭೀಕರ ಅಪಘಾತ ಮಹಿಳೆ ಬಲಿ
    AI ಬಳಸಿ ನಕಲಿ ಹಾಲ್‌ಟಿಕೆಟ್: ಪೊಲೀಸ್ ಆಗಬೇಕಿದ್ದ ಕಡಬ ಯಜೇಶ್ ಬಿ.ಜೆ. ರೈ ಅರೆಸ್ಟ್!
    ಸಚಿವ ಜಮೀರ್ ಕಥೆ ಗೋವಿಂದ!!!?
    ಅಯೋಧ್ಯೆಯಲ್ಲಿ ನ್ಯಾಯಕ್ಕಾಗಿ ವಕೀಲರ ಮೆರವಣಿಗೆ..ಭುಗಿಲೆದ್ದ ಪ್ರತಿಭಟನೆ..ಕಠಿಣ ಕ್ರಮಕ್ಕೆ ಆಗ್ರಹ
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಎರಡು ಬಣಗಳ ರಣರಂಗ!ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಕ್ಷಣ…
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
    ಆಸ್ತಿ ಬರೆದುಕೊಟ್ಟ ಅಪ್ಪ ಬೇಡವಾದನಾ?92ರ ತಂದೆ ಕೋರ್ಟ್‌ನಲ್ಲಿ ಗೆದ್ದ ಕಥೆ!
    ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
    ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
    ತನ್ನ ಹಾಗೂ ನಾದಿನಿಯ ಮೂರುವರೇ ವರ್ಷದ ಮಕ್ಕಳನ್ನು ಬಾವಿಗೆ ಎಸೆದ ತಾಯಿ…!
    ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
    ನೇಪಾಳ ಪ್ರವಾಹ: ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತಾಪ- ನೇಪಾಳ ಪ್ರಧಾನಿಗೆ ಸಹಕಾರದ ಭರವಸೆ
    ಅಮೆರಿಕ–ಇರಾನ್ ಸಂಘರ್ಷಕ್ಕೆ ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ! ಕದನ ವಿರಾಮ ಸಂಪೂರ್ಣ ವಿಫಲ..
    ಬಿಡದಿಗಾಗಿ ಗೌಡರ ಗುಡುಗು! ಹೋರಾಟ ನಿಲ್ಲದು ತೀವ್ರಗೊಳ್ಳಲಿದೆ“ಸುಮ್ಮನಿರಲ್ಲ” ಗೌಡರ ಖಡಕ್ ಎಚ್ಚರಿಕೆ..!
    ಫ್ಲೆಕ್ಸ್‌ಗಳ ಹೊಳಪಿನ ನಡುವೆ ಕಡಲನಗರಿಗೆ ಆಡಳಿತ ಯಂತ್ರ!
    ಇಂದು ಮಂಗಳೂರಲ್ಲಿ ತಲೆಮೇಲೆ ಸುತ್ತು ಹೊಡೆದಂತೆ ಬಾರಿ ಶಬ್ದದೊಂದಿಗೆ ಹೆಲಿಕಾಪ್ಟರ್‌..!ಆಶ್ಚರ್ಯ ಮತ್ತು ಆತಂಕದ ಹಿಂದಿದೆ ಭದ್ರತಾ ‘ಮೆಗಾ ಡ್ರಿಲ್’ ..!ಅಸಲಿ ಕಾರಣವೇನು
    ರೂಪಾಯಿಗೆ ತೈಲದ ಬಿಸಿ! RBI ಅಖಾಡಕ್ಕಿಳಿಯುತ್ತಾ?ತೈಲ ಬೆಲೆ ಏರಿಕೆ ಎಫೆಕ್ಟ್ -ಡಾಲರ್ ಎದುರು ರೂಪಾಯಿ ದುರ್ಬಲ!
    ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
    ಮದುವೆ -ಜೀವನ ಬೇಸರವಾಯ್ತು ಆಸಕ್ತಿ ಇಲ್ಲ ಅಂದ್ರೆ ವಿಚ್ಛೇದನ ಸಿಗುತ್ತಾ ..! ಮಗಳು18 ದಾಟಿದರೂ ಶಿಕ್ಷಣದ ಹೊಣೆ ಯಾರಿಗೆ?
    “ಐಡಿ ಇಲ್ಲ ಅಂದ್ರೆ ಎಂಟ್ರಿಯೇ ಇಲ್ಲ! ಎಲ್ಲಿಗೆ…..!?ಯುವಕರ ಭವಿಷ್ಯಕ್ಕಾಗಿ ಖರ್ಗೆಯ ಕಠಿಣ ಎಚ್ಚರಿಕೆ.”
    ಶಾಲೆಗಳ ಸುತ್ತ ಜಂಕ್ ಫುಡ್‌ಗೆ ಬ್ರೇಕ್: ಮಕ್ಕಳ ಆರೋಗ್ಯ ರಕ್ಷಣೆಗೆ FDA ಅಲರ್ಟ್!
    ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
    ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
    ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
    ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ