📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕ್ರಿಮಿನಲ್ಸ್ ಸಪೋರ್ಟಿಗೆ ನಿಂತವರು ಯಾರ್ಯಾರು ಅನ್ನುವುದು ಈಗ ಗೊತ್ತಾಗುತ್ತಿದೆ ನೋಡಿ….!

    ದೇಶದ ಭದ್ರತೆ ಹಾಗೂ ಶಾಂತಿ ಅತ್ಯಂತ ಮಹತ್ವದ್ದು. ಶಾಂತಿ ಕದಡಿದಾಗಲೇ ಭದ್ರತೆಗೆ ದಕ್ಕೆ ಬರುವುದು. ಶಾಂತಿ ಕದಡುವವರು ಅಪರಾಧಿಗಳಾಗಿರುತ್ತಾರೆ, ಕ್ರಿಮಿನಲ್ ಆಗಿರುತ್ತಾರೆ. ಅಂತಹ ಅಪರಾಧಿಗಳ ವಿಚಾರದಲ್ಲಿ ಹೇಳಿದ ಒಂದು ಹೇಳಿಕೆಯನ್ನು ಒಂದಷ್ಟು ಜನರು ತಮಗೆ ಬೇಕಾದ ಹಾಗೆ ಗುರುತಿಸಿಕೊಂಡು ವಿರೋಧಿಸುವ ಹಾಗೂ ಖಂಡಿಸುವ ಕೆಲಸ ಮಾಡುತ್ತಿರುವುದು ಸರಿಯೇ?
    ಕರ್ನಾಟಕದ ಆರೋಗ್ಯ ಸಚಿವರಾದ ಯುಟಿ ಖಾದರ್ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮಾತನಾಡುತ್ತಿರುವಾಗ ಆಡಿದ ಮಾತನ್ನು ವಿರೋಧಿಸುತ್ತಿರುವುದು ಸುಮ್ಮನೆ ಅಲ್ಲ. ಅದರ ಹಿಂದೆ ಯಾವುದೋ ಒಂದು ಅಜೆಂಡಾವಿದೆ. ಯುಟಿ ಖಾದರ್ ಅವರನ್ನು ನೇರವಾಗಿ ವಿರೋಧಿಸಲು ಸಾಧ್ಯವಾಗದೆ, ಅವರ ಆ ಒಂದು ಹೇಳಿಕೆಯ ವಿಚಾರವನ್ನು ತಮಗೆ ಬೇಕಾದ ಹಾಗೆ ಕಲ್ಪಿಸಿಕೊಂಡು, ತಮಗೆ ಬೇಕಾಗಿದ್ದನ್ನು ಮಾತ್ರ ಆಯ್ಕೆ ಮಾಡಿಕೊಂಡು, ಆ ವಿಚಾರವನ್ನೇ ಮುಂದಿಟ್ಟುಕೊಂಡು, ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಅಕ್ಷಮ್ಯ. ಅಷ್ಟೇ ಅಲ್ಲ, ಅಂಥವರನ್ನು ಕ್ರಿಮಿನಲ್ ಪರವಾಗಿ ನಿಂತವರು ಅನ್ನಲು ಯಾವುದೇ ಅಭ್ಯಂತರವಿಲ್ಲ ಅನ್ನಬಹುದು.


    ಅಷ್ಟಕ್ಕೂ ಯುಟಿ ಖಾದರ್ ಹೇಳಿದ್ದೇನು?

    ಕ್ರಿಮಿನಲ್ ಗಳನ್ನು ಹತೋಟಿಯಲ್ಲಿಡಬೇಕು ಎಂದರೆ, ಅಂತವರಲ್ಲಿ ವ್ಯವಸ್ಥೆಯ ವಿಚಾರವಾಗಿ ಭಯವಿರಬೇಕು. ಹಾಗೆ ಭಯ ಹುಟ್ಟಿಸಬೇಕು ಎಂದರೆ ಕೆಲವೊಮ್ಮೆ (ಆಗಾಗ)ಕಠಿಣ ಕ್ರಮ ಅನಿವಾರ್ಯವಾಗಿರುತ್ತದೆ. ಕ್ರಿಮಿನಲ್ಲ್ಸ್ ಗಳ ಮೇಲೆ ಗುಂಡುಗಳನ್ನು ಹಾರಿಸಿಯಾದರೂ ಅವರನ್ನು ಕಂಟ್ರೋಲ್ ಗೆ ತರಬೇಕು ಅಂತ ಹೇಳುತ್ತಲೇ, ಹಾಗಂತ ಈಗ ಗುಂಡು ಹೊಡೆಯಲು ಆಗುವುದಿಲ್ಲ ಅಂತಲೂ ಹೇಳುತ್ತಾರೆ ಸಚಿವ ಯು ಟಿ ಖಾದರ್.

    Also Read  ಪ್ರಶಸ್ತಿಗಾಗಿ ಹಂಬಲಿಸಿದ ಟ್ರಂಪ್‌ಗೆ ನಿರಾಸೆ; ನ್ಯಾಯಕ್ಕಾಗಿ ಹೋರಾಡಿದ ನವಿ ಪಿಳ್ಳೆಗೆ ನೊಬೆಲ್!


    ಇದರಲ್ಲಿ ತಪ್ಪೇನಿದೆ ಹೇಳಿ? ದೇಶದಲ್ಲಿ ಕ್ರಿಮಿನಲ್ ಆಕ್ಟಿವಿಟೀಸ್ ವಿಪರೀತವಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಅಪರಾಧ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದ್ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ ಈಗ ಖಾದರ್ ರವರ ವಿರುದ್ಧ ಧ್ವನಿ ಎತ್ತುತ್ತಿರುವ ಮಹಾನುಭಾವರು. ಎಲ್ಲವುದಕ್ಕೂ ಪೊಲೀಸರನ್ನು ಹೊಣೆಗಾರರನ್ನಾಗಿಸುವುದು ಇವತ್ತು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ.

    ಪೊಲೀಸರು ಅಪರಾಧಿಗಳನ್ನು ಬಂಧಿಸಿದರು, ಅವರಿಗೆ ಜಾಮೀನು ಸುಲಭವಾಗಿ ಸಿಗುತ್ತದೆ ಹೇಗೆ? ಇದರ ಬಗ್ಗೆ ಚಕಾರವಿಲ್ಲ. ಇವತ್ತು ಅನೇಕ ಪ್ರಕರಣಗಳಿಗೆ ಅದರಲ್ಲೂ ಗಂಭೀರ ಪ್ರಕರಣಗಳಿಗೂ ಮೇಲಿನ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಸಿಗುತ್ತಿವೆ. ಹೀಗೆ ಹತ್ತು ಹಲವು ಸಂಗತಿಗಳು ಇವೆಯಾದರೂ, ಅದ್ಯಾವುದರ ಬಗ್ಗೆಯೂ ಚಕಾರವೆತ್ತದ ಈ ಮನುಷ್ಯರು, ಕೇವಲ ಖಾದರ್ ಹೇಳಿದ ಆ ಒಂದು “ಗುಂಡಿನ” ಮಾತಿಗೋಸ್ಕರ ವಿಪರೀತವಾಗಿ ಟೀಕಿಸುತ್ತಿರುವುದು, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ?
    ಯುಟಿ ಖಾದರ್ ಯಾವ ತಪ್ಪೂ ಮಾಡಿಲ್ಲ. ಪೊಲೀಸ್ ವ್ಯವಸ್ಥೆಗೆ ಬಲ ತುಂಬುವ ಕೆಲಸವನ್ನು ಮಾಡಬೇಕಾದದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ, ಜನಸಾಮಾನ್ಯರ ಕೆಲಸವೂ ಆಗಿದೆ. ಇವತ್ತು ಪೊಲೀಸ್ ವ್ಯವಸ್ಥೆ ಇಲ್ಲ ಅಂದರೆ, ಸಮಾಜದಲ್ಲಿ ಈಗ ಮಾತನಾಡುತ್ತಿರುವವರಿಗೂ ಅಷ್ಟು ಈಜಿಯಾಗಿ ಮಾತನಾಡಲಾಗದು ಎನ್ನುವುದನ್ನು ಗಮನದಲ್ಲಿಡಬೇಕಾಗುತ್ತದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವವರಿಗೆ ಕೆಲವು ಅಧಿಕಾರಗಳು ಅವಶ್ಯವಾಗಿ ಬೇಕು. ಆ ಕಾರಣಕ್ಕಾಗಿ ಅವರಿಗೆ ಆಯುಧಗಳನ್ನು ನೀಡಲಾಗಿದೆ.

    Also Read  ಮಂಗಳೂರಿಗೆ ಮತ್ತೊಂದು ದೊಡ್ಡ ಯೋಜನೆ: 17.5 ಲಕ್ಷ ಮೆಟ್ರಿಕ್ ಟನ್ ತೈಲ ಸಂಗ್ರಹಾಗಾರಕ್ಕೆ ಅನುಮೋದನೆ – ಕರಾವಳಿಗೆ ಅಭಿವೃದ್ಧಿಯ ಹೊಸ ಅಧ್ಯಾಯ

    ಕೆಲವು ಬದಲಾಗದ ಅಪರಾಧಿಗಳ ಮೇಲೆ “ದಂಡಂ ದಶಗುಣಂ” ಅನಿವಾರ್ಯ. ಅವರ ಅಪರಾಧಕ್ಕೆ ಶಿಕ್ಷೆ ನೀಡಬೇಕಾದ್ದು ನ್ಯಾಯಾಲಯವೇ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಕಾನೂನು ಹಾಗೂ ವ್ಯವಸ್ಥೆ ಇವೆರಡರ ಮೇಲೆ ಅಪರಾಧಿ ಪ್ರವೃತ್ತಿಯರಲ್ಲಿರುವವರಿಗೆ ಭಯ ಇಲ್ಲ ಅಂದರೆ, ಆಗ ಅವರಿಂದ ಜನಸಾಮಾನ್ಯರು ಭಯಪಡಬೇಕಾಗುತ್ತದೆ, ಅವರಿಂದ ಇಡೀ ಸಮಾಜದ ಪರಿಸ್ಥಿತಿ ಬಿಗಡಾಯಿಸುತ್ತದೆ, ಅವರಿಂದ ಸಮಾಜದ ಶಾಂತಿ ಕದಾಡುತ್ತದೆ. ಶಾಂತಿ ಕದಡುವುದರಿಂದ ಪ್ರದೇಶದ ಭದ್ರತೆ ಅಭದ್ರವಾಗುತ್ತದೆ.


    ಈಗ ಮಣಿಪುರದ ವಿಚಾರವನ್ನು ಒಮ್ಮೆ ನೋಡಿ. ಅಲ್ಲಿ ಪ್ರಾರಂಭವಾದದ್ದು ಸಹ ಅಪರಾಧದ ಕೃತ್ಯವೇ. ಅಪರಾಧ ಕೃತ್ಯದ ಮೇಲೆ ನಿಯಂತ್ರಣ ಹೇರುವುದರಲ್ಲಿ ವ್ಯವಸ್ಥೆ ಸೋಲುತ್ತಿದ್ದಂತೆಯೇ ಆ ಅಪರಾಧ ವಲಯವು ವ್ಯವಸ್ಥೆಯನ್ನು ಆವರಿಸಿಕೊಳ್ಳುತ್ತದೆ ಅನ್ನುವುದಕ್ಕೆ ಆ ರಾಜ್ಯದ ಹಿಂಸೆಯು ಸಾಕ್ಷಿಯಾಗುತ್ತಿದೆ. ಈ ಹಿಂದೆ ಕಾಶ್ಮೀರವೂ ಸಹ ಇದೆ ತರಹದಲ್ಲಿತ್ತು. ಸರ್ಕಾರ ಮತ್ತು ವ್ಯವಸ್ಥೆ ಎಡವಟ್ಟು ಮಾಡಿಕೊಂಡರೆ, ಸರ್ಕಾರ ಹಾಗೂ ವ್ಯವಸ್ಥೆಯ ಮೇಲೆಯೇ ಈ ಅಪರಾಧಿಗಳು ಸವಾರಿ ಮಾಡಲು ಪ್ರಾರಂಭಿಸುತ್ತಾರೆ. ಇದಾಗಬಾರದು ಎಂಬ ಕಾರಣಕ್ಕೆ, ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ.

    Also Read  ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಯು.ಟಿ. ಖಾದರ್ – ಕಳಪೆ ಆಹಾರಕ್ಕೆ ಕಟ್ಟುನಿಟ್ಟು,ಕರ್ನಾಟಕದ ಆಹಾರ ಸುರಕ್ಷತೆಗೆ ಜಾಗತಿಕ ಮಟ್ಟದ ಯೋಜನೆ!

    ಯು ಟಿ ಖಾದರ್, ಸರ್ಕಾರದ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕ್ರಿಮಿನಲ್ ಗಳ ಮೇಲೆ ಹಿಡಿತ ಸಾಧಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಗುಂಡು ಹೊಡೆಯುವ ಮಾತನಾಡಿದ್ದಾರೆ. ಅದನ್ನೂ ಸಹ, ಆಗಲೇ ಅವರು ಇವತ್ತಿನ ಸಮಯ ಗುಂಡನ್ನು ಡಿಫೆನ್ಸ್ ಹೊರತುಪಡಿಸಿ ಬೇರೆ ಸಮಯದಲ್ಲಿ ಹೊಡೆಯುವ ಹಾಗಿಲ್ಲ ಅಂತಲೂ ದನಿಗೂಡಿಸಿದ್ದಾರೆ. ಅದನ್ನು ಬಿಟ್ಟು, ತಮಗೆ ಬೇಕಾಗಿದ್ದನ್ನು ಮಾತ್ರ ಆರಿಸಿಕೊಂಡು ಸಚಿವ ಯುಟಿ ಖಾದರ್ ವಿರುದ್ಧ ಮಾತನಾಡುತ್ತಿರುವುದು, ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅಕ್ಷಮ್ಯವಲ್ಲದೆ ಮತ್ತಿನ್ನೇನು? ಅಷ್ಟೇ ಅಲ್ಲ ಅವರೆಲ್ಲರೂ ಇಂಡೈರೆಕ್ಟ್ ಆಗಿ ಕ್ರಿಮಿನಲ್ ಗಳಿಗೆ ಸಪೋರ್ಟ್ ಮಾಡುವವರು ಅಂತ ತಾನೆ ಅರ್ಥ? ವ್ಯವಸ್ಥೆಯ ಭಾಗವಾಗಿರುವ ಪೊಲೀಸರನ್ನು ನಂಬದವರು, ಸಮಾಜ ಕಂಠಕರ ಮಾತನ್ನು ನಂಬುತ್ತಾರೆಂದರೆ ಅವರ ಹಿತ ಬಯಸುತ್ತಾರೆಂದರೆ ಮಹಾನುಭಾವರು ಎಂಥವರಿರಬಹುದು ಎಂಬ ಪ್ರಶ್ನೆಯು ಎದ್ದೇಳುತ್ತದೆ. ಏನೇ ಇರಲಿ, ಯುಟಿ ಖಾದರ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಪೊಲೀಸರಿಗೆ ಅಷ್ಟು ಸ್ವಾತಂತ್ರ್ಯ ಬೇಕು ಕೂಡ. ಪರಮನೆಂಟ್ ಅಪರಾಧಿಗಳಿಗೆ ಗುಂಡು ಅನಿವಾರ್ಯವಾಗಬೇಕು. ಏನಂತೀರಿ?
    -ದತ್ತು

    ##UTKhader#KarnatakaPolitics#Mangaluru#LawAndOrder#RowdySheeters

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸರ್ಕಾರಿ ಮಕ್ಕಳ ಶೂ ಕಳಪೆ…!ಸರ್ಕಾರಿ ಯೋಜನೆಗಳಲ್ಲಿ ಗುಣಮಟ್ಟ ಕೊರತೆಗೆ ಪರಿಹಾರವೇ ಇಲ್ವಾ ?
    ಮೂಗಿನಿಂದ ಸೋರಿದ್ದು ಶೀತವಲ್ಲ…ಮೆದುಳಿನ ದ್ರವ! 2 ವರ್ಷ ಕಾಡಿದ ಸಮಸ್ಯೆ…10 ವರ್ಷದ ಬಾಲಕನಿಗೆ ಬೆಂಗಳೂರಿನಲ್ಲಿ ಅಪರೂಪದ skull ಡಿಫೆಕ್ಟ್ ಚಿಕಿತ್ಸೆ…!
    ಬಿಜೆಪಿಯ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ready…!
    MRPL ಸ್ಫೋಟ FIR… ದಾಖಲು…MRPL ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ…!
    ಮದರಸಾದಲ್ಲಿ ದೌರ್ಜನ್ಯ ಮತ್ತು ಬಲವಂತದ ಕೂಲಿ ಆರೋಪ-24 ಮಕ್ಕಳ ರಕ್ಷಣೆ
    ಮೋದಿ ವಿಡಿಯೋ ಡಿಲೀಟ್ ವಿವಾದ: ಭಾರತಕ್ಕೆ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್!
    ಇನ್‌ಸ್ಟಾಗ್ರಾಮ್ ವ್ಯಾಮೋಹಕ್ಕೆ ಹೆತ್ತ ತಾಯಿಗೇ ವಿಷವಿಕ್ಕಿದ ಮಗಳು..ಪ್ರೀತಿಯ ಹೆಸರಲ್ಲಿ ಹಾದಿ ತಪ್ಪಿದ ಹದಿಹರೆಯ ಮುಂದೇನಾಯತು?
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
    ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳಿಗೆ ಸಮಸ್ಯೆ ಇಲ್ಲ – ನಿತಿನ್ ಗಡ್ಕರಿ
    ಹಂತಕರ ಹಿಂದೆ ಯಾರಿದ್ದಾರೆ? ಉಡುಪಿ ಪೊಲೀಸರ ನೆಕ್ಸ್ಟ್ ಟಾರ್ಗೆಟ್…?
    “ಯೋಗೇಶ್ ಗೌಡ ಪ್ರಕರಣದಲ್ಲಿ ಕಾನೂನು ಗರ್ಜನೆ!”ಕಾನೂನು ಕಾಯುವವರೇ ಬೂಟು ನೆಕ್ಕಿಕಾನೂನು ಮುರಿದಾಗ-7 ವರ್ಷಗಳ ಜೈಲು!ಕಾನೂನು ಇನ್ನೂ ಜೀವಂತ!”
    ಆಡುತ್ತಾ ಆಡುತ್ತಲೇ ಜೀವ ಬಿಟ್ಟ ಫಿಟ್ ಆಗಿದ್ದ ಯುವಕ್ರಿಕೆಟಿಗ… ನೀರು ಕುಡಿದ ತಕ್ಷಣವೇ ಕುಸಿದು ಬಿದ್ದ ರಣಜಿ ಆಟಗಾರ… 
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    ಎಲ್ಪಿಜಿ ಗ್ಯಾಸ್ ದರದಲ್ಲಿ ಏರಿಕೆ:  ಮಧ್ಯಮ ವರ್ಗದವರಲ್ಲಿ ಹತಾಶೆ
    ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ ‘ನೋ-ಫ್ಲೈ ಲಿಸ್ಟ್’ ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..
    ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!
    “ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
    5 ದಿನಗಳ ಬಿಡದಿ ಹೋರಾಟಕ್ಕೆ ಪೊಲೀಸರ ಬ್ರೇಕ್! ರೈತರು ವಶಕ್ಕೆ,“ಭೂಮಿ ಉಳಿಸಲು ಜೈಲಿಗೂ ಸಿದ್ಧ” ಎಂದ ದೇವೇಗೌಡ…!
    ಮಣಿಪಾಲ KMC ಆಸ್ಪತ್ರೆಯ 4ನೇ ಮಹಡಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ ಒಳರೋಗಿ ಬಿದ್ದು ಗಂಭೀರ ಗಾಯ…ವೀಡಿಯೋ ವೈರಲ್
    ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
    ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
    “ದಪ್ಪ, ಕಪ್ಪು ಎಂಬ ಅವಹೇಳನ… ವರದಕ್ಷಿಣೆ ಕಿರುಕುಳ… ಕೊನೆಗೆ ಕತ್ತು ಹಿಸುಕಿ ಹತ್ಯೆ! ಧಾರವಾಡದ ಘಟನೆ ಸಮಾಜದ ಮನಸ್ಸನ್ನೇ ನಡುಗಿಸಿದೆ”
    ಕ್ಲೀನ್ ಮಂಗಳೂರು ಕನಸು ನಿಮ್ಮದಾಗಿದ್ದರೆ ಇಲ್ಲಿದೆ ದಾರಿ…ಸ್ವಚ್ಛ ಮಂಗಳೂರು ಅಭಿಯಾನ: ನಾಗರಿಕರ ಕೈಗೆ ಸಿಕ್ಕಿತು ವಾಟ್ಸಾಪ್ ಅಸ್ತ್ರ….!
    ಬಾಲಗರ್ಭಿಣಿಯರ ಸಂಖ್ಯೆ 5975….!!
    ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ
    ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
    ರೀಲ್ಸ್ ನೋಡುವ ಕೈಗಳೇ… ದೇಶ ಕಟ್ಟುವ ಕೈಗಳಾಗಬಹುದು.ಡ್ರಗ್ಸ್ ,ಮೊಬೈಲ್ ,ವ್ಯಸನಗಳು ನಿಮ್ಮ ಕನಸುಗಳನ್ನು ಕದಿಯುವ ಮೊದಲು… ಯುವಕರೇ ಎಚ್ಚರಗೊಳ್ಳಿ!