📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!

    ರಾಜಸ್ಥಾನದ ಜೈಪುರದಲ್ಲಿ ನಡೆದ ಈ ಭೀಕರ ಮತ್ತು ರಕ್ತಸಿಕ್ತ ಘಟನೆ ಇಡೀ ಮಾನವ ಕುಲವೇ ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರಿ ಕೆಲಸ ಮತ್ತು ಆಸ್ತಿಗಾಗಿ ಹೆತ್ತ ಮಗಳೇ ತನ್ನ ತಾಯಿಯನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಈ ದುರಂತ ಜೈಪುರದ ಪ್ರತಾಪ್ ನಗರದಲ್ಲಿ ಜುಲೈ 3 ರಂದು ನಡೆದಿದೆ. 

    ನ್ಯಾಯಾಲಯದಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (LDC) ಆಗಿ ಕೆಲಸ ಮಾಡುತ್ತಿದ್ದ 45 ವರ್ಷದ ನೀರಜ್ ಶರ್ಮಾ ಎಂಬಾಕೆಯನ್ನು ಆಕೆಯ 23 ವರ್ಷದ ಮಗಳು ಆಯುಷಿ ಶರ್ಮಾ ಹಂತಕರಿಗೆ 7 ಲಕ್ಷ ರೂಪಾಯಿ ಸುಪಾರಿ ನೀಡಿ, ಸ್ಕಾರ್ಪಿಯೋ ಕಾರ್‌ನಿಂದ ಗುದ್ದಿಸಿ ಬಲಿ ಪಡೆದಿದ್ದಾಳೆ.

    ಘಟನೆಯ ಹಿನ್ನೆಲೆ ಮತ್ತು ಕ್ರೂರ ಸಂಚು

    ಮೃತ ನೀರಜ್ ಶರ್ಮಾ ಅವರ ಪತಿ ವಿಜಯ್ ಕುಮಾರ್ ಶರ್ಮಾ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಪತಿಯ ಸಾವಿನ ನಂತರ ಅನುಕಂಪದ ಆಧಾರದ ಮೇಲೆ (Compassionate Grounds) ನೀರಜ್ ಶರ್ಮಾ ಅವರಿಗೆ ಕೋರ್ಟ್‌ನಲ್ಲಿ ಸರ್ಕಾರಿ ಕೆಲಸ ಸಿಕ್ಕಿತ್ತು. ಆದರೆ ಈ ಸರ್ಕಾರಿ ಕೆಲಸ ತನಗೇ ಸಿಗಬೇಕೆಂದು ಮಗಳು ಆಯುಷಿ ಪಟ್ಟು ಹಿಡಿದಿದ್ದಳು. ತಾಯಿ ತನಗೆ ಕೆಲಸ ಬಿಟ್ಟುಕೊಡದಿದ್ದಕ್ಕೆ ಆಕೆ ತಾಯಿಯ ಮೇಲೆಯೇ ತೀವ್ರ ದ್ವೇಷ ಸಾಧಿಸಲು ಶುರುಮಾಡಿದ್ದಳು. ಇದರೊಂದಿಗೆ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಿವಾದವೂ ಇವರಿಬ್ಬರ ನಡುವೆ ಇತ್ತು. ಹೇಗಾದರೂ ಮಾಡಿ ತಾಯಿಯನ್ನು ಮುಗಿಸಿದರೆ ಅನುಕಂಪದ ಆಧಾರದ ಮೇಲೆ ಆ ಕೆಲಸ ಮತ್ತು ಆಸ್ತಿ ಎರಡೂ ತನಗೆ ಸಿಗುತ್ತದೆ ಎಂದು

    Also Read  ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?

    ಅಪಘಾತದಂತೆ ಬಿಂಬಿಸಲು ಯತ್ನ

    ತಾಯಿಯ ಹತ್ಯೆಯನ್ನು ಯಾರಿಗೂ ಅನುಮಾನ ಬಾರದಂತೆ ಕೇವಲ ಒಂದು “ಹಿಟ್ ಅಂಡ್ ರನ್” ರಸ್ತೆ ಅಪಘಾತ ಎಂದು ಬಿಂಬಿಸಲು ಆಯುಷಿ ಯೋಜಿಸಿದ್ದಳು. ಇದಕ್ಕಾಗಿ ಆಕೆ ಭರತ್‌ಪುರದ ಹೇಮಂತ್ ಶರ್ಮಾ ಎಂಬ ಹಂತಕನಿಗೆ 7 ಲಕ್ಷ ರೂ. ಸುಪಾರಿ ನೀಡಿದ್ದಳು. ಜುಲೈ 3 ರಂದು ಸಂಜೆ 4:45 ಕ್ಕೆ ನೀರಜ್ ಶರ್ಮಾ ಅವರು ತಮ್ಮ ವಿಕಲಚೇತನ ಮಗನನ್ನು ಕೋಚಿಂಗ್ ಕ್ಲಾಸ್‌ಗೆ ಬಿಟ್ಟು ವಾಪಸ್ ಮನೆಗೆ ನಡೆದುಕೊಂಡು ಬರುತ್ತಿದ್ದಾಗ, ಸುಮಾರು 130 ಕಿಮೀ ವೇಗದಲ್ಲಿ ಬಂದ ಸ್ಕಾರ್ಪಿಯೋ ಎಸ್‌ಯುವಿ ಆಕೆಗೆ ಜೋರಾಗಿ ಡಿಕ್ಕಿ ಹೊಡೆದಿದೆ.

    ಡಿಕ್ಕಿಯ ರಭಸಕ್ಕೆ ನೀರಜ್ ಅವರ ದೇಹ ಗಾಳಿಯಲ್ಲಿ 100 ಅಡಿ ದೂರಕ್ಕೆ ಹಾರಿ ಬಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಮೊದಲಿಗೆ ಇದು ಅಪಘಾತ ಎಂದು ಭಾವಿಸಲಾಗಿತ್ತಾದರೂ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಾರು ಉದ್ದೇಶಪೂರ್ವಕವಾಗಿ ವೇಗವನ್ನು ಹೆಚ್ಚಿಸಿ ಡಿಕ್ಕಿ ಹೊಡೆದಿರುವುದು ಪತ್ತೆಯಾಗಿ, ಇಡೀ ಜಾಲ ಬಯಲಾಗಿದೆ.

    Also Read  ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..

    ಆಯುಷಿ ಮಾನಸಿಕತೆ – ದುರಾಸೆಯ ಪರಮಾವಧಿ:

    ಪೊಲೀಸ್ ತನಿಖೆಯ ವೇಳೆ ಆಯುಷಿಯ ವಿಕೃತ ಮಾನಸಿಕತೆ ಮತ್ತು ಕ್ರೌರ್ಯ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ತನ್ನ ಹೆತ್ತ ತಾಯಿ ಸಾವನ್ನಪ್ಪಿದಾಗ ಪೊಲೀಸರು ಹಾಗೂ ಸಾರ್ವಜನಿಕರ ಮುಂದೆ ಆಕೆ ಸುಳ್ಳು ಕಣ್ಣೀರು ಸುರಿಸುತ್ತಾ ತನಗೇನೂ ತಿಳಿಯದಂತೆ ನಾಟಕವಾಡಿದ್ದಳು. ತನಿಖೆಯಲ್ಲಿ ತಿಳಿದುಬಂದಂತೆ ಆಕೆ ಕೊಲೆಗೂ ಮುನ್ನ ತಾಯಿಯನ್ನು ಮಾನಸಿಕವಾಗಿ ಕುಗ್ಗಿಸಲು ಮಾಟಮಂತ್ರಗಳ ಮೊರೆ ಕೂಡ ಹೋಗಿದ್ದಳು! ತನ್ನ ಸ್ವಂತ ವಿಕಲಚೇತನ ಸಹೋದರನ ಭವಿಷ್ಯದ ಬಗ್ಗೆಯೂ ಯೋಚಿಸದ ಆಯುಷಿ, ಕೇವಲ ಐಷಾರಾಮಿ ಜೀವನದ ಆಸೆ ಹಾಗೂ ದುರಾಸೆಯಿಂದ ಕುರುಡಿಯಾಗಿದ್ದಳು. “ತಾಯಿ ನನ್ನ ಸರ್ಕಾರಿ ಕೆಲಸವನ್ನು ಕಿತ್ತುಕೊಂಡು ನನ್ನ ಭವಿಷ್ಯ ಹಾಳು ಮಾಡಿದಳು” ಎಂದು ಆಕೆ ಕೊಲೆಯನ್ನು ಸಮರ್ಥಿಸಿಕೊಳ್ಳುವ ಮಟ್ಟಿಗೆ ಆಕೆಯ ಮನಸ್ಸು ವಿಕೃತಗೊಂಡಿತ್ತು. ಪ್ರಸ್ತುತ ಜೈಪುರ ಪೊಲೀಸರು ಆಯುಷಿ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.

    ##JaipurMurderCase #CrimeNewsKannada #SupariKilling #PropertyDispute #ShockingCrime

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕರ್ನಾಟಕದಲ್ಲಿ ನೀರು–ವಿದ್ಯುತ್ ಬಿಕ್ಕಟ್ಟಿನ ಎಚ್ಚರಿಕೆ!
    ದಂಡ ಕಟ್ಟದವರಿಗೆ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ದಂಡ….! ಸುಪ್ರೀಂ ಕೋರ್ಟ್‌
    “ನಾವು ಭಾರತೀಯರು” ಎಂಬ ಹೋರಾಟಕ್ಕೆ ಗೆಲುವು
    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    ಹೃದಯವಿದ್ರಾವಕ ಘಟನೆ: ರಾಜಕಾಲುವೆಯಲ್ಲಿ ತೇಲಿ ಬಂದ ನವಜಾತ ಹಸುಗೂಸು
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ಕ್ಲೀನ್ ಮಂಗಳೂರು ಕನಸು ನಿಮ್ಮದಾಗಿದ್ದರೆ ಇಲ್ಲಿದೆ ದಾರಿ…ಸ್ವಚ್ಛ ಮಂಗಳೂರು ಅಭಿಯಾನ: ನಾಗರಿಕರ ಕೈಗೆ ಸಿಕ್ಕಿತು ವಾಟ್ಸಾಪ್ ಅಸ್ತ್ರ….!
    ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು… 
    “ನನ್ನ ಮಗಳನ್ನೂ ಅದೇ ಕೋಟೆಯಿಂದ ಕೆಳಗೆ ತಳ್ಳಿ!” – ನಿಶ್ಚಿತ ವರನ ಹತ್ಯೆಗೈದ ಸಿಯಾ ಹೆತ್ತವರ ಆಕ್ರೋಶದ ಹೇಳಿಕೆ
    ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
    ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
    ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
    ಕಾಂಗ್ರೆಸ್ ಜನರ ವಿಶ್ವಾಸದಿಂದ ದಿನದಿಂದ ದಿನಕ್ಕೂ ದೂರ ಹೋಗುತ್ತಿರುವುದಕ್ಕೆ ಸಾಕ್ಷಿನೇ ಇದು
    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
    ಮಂಗಳೂರು–ಉಡುಪಿಗೆ ಹೈಕೋರ್ಟ್ ಪೀಠ? ಅಧಿಕೃತ ಪರಿಶೀಲನೆಗೆ ಸಮಿತಿ ರಚನೆ
    ಜುಲೈ 1ರಿಂದ ದೇಶದಲ್ಲಿ ಹಲವು ಹೊಸ ನಿಯಮಗಳು ಜಾರಿ…ಪಾಸ್‌ಪೋರ್ಟ್, ರೈಲ್ವೆ, ಕ್ರೆಡಿಟ್ ಕಾರ್ಡ್, ಬ್ಯಾಂಕ್… ಒಂದೇ ದಿನದಲ್ಲಿ ಹಲವು ದೊಡ್ಡ ಬದಲಾವಣೆಗಳು
    ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
    ಇಬ್ಬರು ಮಕ್ಕಳ ಕಣ್ಣೆದುರೇ ಪತ್ನಿಯನ್ನು ಸುಮಾರು 20 ಬಾರಿ ಚಾಕುವಿನಿಂದ ಇರಿದು ಕೊಂದ ಪತಿ – ಕಾರಣ ಮೊಬೈಲ್‌ನಲ್ಲಿ ಆಟ
    ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
    “ನಿಮ್ಮ ಮಗಳನ್ನು ನಾನು ಸಾಯಿಸಿದ್ದೇನೆ…ನಾಳೆ ನನ್ನ ಹೆಣವನ್ನೂ ನೋಡುತ್ತೀರಿ” ಎಂದ ಚೇತನ್!ಲಾವಣ್ಯಳ ತಂದೆಗೆ ಕರೆ ಮಾಡಿ ಶಾಕ್ ನೀಡಿದ ಆರೋಪಿ ಚೇತನ್ ಪೊಲೀಸ್ ವಶಕ್ಕೆ..!
    ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
    ಪಶ್ಚಿಮ ಬಂಗಾಳ ಅಪ್ರಾಪ್ತೆಯ ಸಾವು, ಸಾರ್ವಜನಿಕರಿಂದ ಶಂಕಿತನ ಲಿಂಚಿಂಗ್ ..!ಬಾಲಕಿಯ ಹತ್ಯೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ;
    Side Income ಇಂದು ಆಯ್ಕೆ ಅಲ್ಲ, ಅಗತ್ಯ …ಹಣ ಗಳಿಸಿ… ನಿದ್ರೆಯಲ್ಲೂ!ಒಂದು ಸಂಬಳ ಸಾಕಾಗದ ಕಾಲ ಇದು.
    ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಚರ್ಚೆ-ಕಾನೂನು ಬರೋ ಮುನ್ನವೇ ಮತ್ತೊಂದು ಲೀಕ್!
    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಬೆಂಕಿ,15 ವಿದ್ಯಾರ್ಥಿಗಳು ಸಜೀವ ದಹನ ಹೃದಯವಿದ್ರಾವಕ ದುರಂತ
    MRPL ಗೇಟ್‌ ಮುಂದೆ ಭಾರೀ ಪ್ರತಿಭಟನೆ- ಬೆಳ್ಳಂಬೆಳಗ್ಗೆ ಸೇರಿದ ಜನಸಮೂಹ
    Cocktail 2 ಸುತ್ತ ರಶ್ಮಿಕಾ ಮಂದಣ್ಣ ಕ್ರಿಯೇಟ್ ಮಾಡಿದ ಹೈಪ್ ಎಷ್ಟು ಗೊತ್ತಾ?ಅನ್ಟೋಲ್ಡ್ ಮಸಾಲೆ ಸ್ಟೋರಿಗಳು ಇಲ್ಲಿವೆ!
    ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!