📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….

    ಮೊನ್ನೆ ಲೋಕಸಭೆಯ ಸದನದಲ್ಲಿ ಅತ್ಯಂತ ಗಂಭೀರವಾದಂತಹ ಮಸೂದೆಯೊಂದನ್ನು ಮಂಡಿಸಲಾಯಿತು. ಆ ಮಂಡನೆಯು ಲೋಕಸಭೆಯಲ್ಲಿ ಸೋಲನ್ನು ಅನುಭವಿಸಿತು. ಇದು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಇವೆರಡಕ್ಕೂ ಮೊದಲೇ ತಿಳಿದ ವಿಚಾರವಾಗಿತ್ತು . ಇಲ್ಲಿ ಮಹಿಳಾ ಮೀಸಲು ವಿಚಾರವಾಗಿ ಯಾವುದೇ ಗೊಂದಲಗಳಿರಲಿಲ್ಲ. ಬದಲಿಗೆ ಅದರ ಜೊತೆ ಸೇರಿಸಲಾದ ಕ್ಷೇತ್ರ ಪುನರವಿಂಗಡಣೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದೆ ಇತ್ತು. ಆದರೂ ಆಡಳಿತ ಪಕ್ಷವು ತನ್ನ ಮಸೂದೆಯನ್ನು ಗೆಲ್ಲಿಸುವದಕ್ಕೋಸ್ಕರ ಯೋಗ್ಯ ಪ್ಲಾಟ್ ಫಾರ್ಮನ್ನು ನಿರ್ಮಿಸಿಕೊಳ್ಳದೆ, ಮಸೂದೆಯನ್ನು ಮಂಡಿಸಿರುವದರ ಹಿಂದೆ ಬೇರೆಯದೆ ಅಜೆಂಡ ಇದ್ದಂತೆ ಕಾಣುತ್ತದೆ.

    ಹೌದು ಯಾವಾಗ ಅಧಿವೇಶನದ ಒಳಗೆ  ಈ ಮಂಡನೆಯು ಸೋಲನ್ನು ಅನುಭವಿಸುತ್ತದೆಯೋ, ಅಲ್ಲಿ ಏನನ್ನು ಮಾತನಾಡದ ಆಡಳಿತ ಪಕ್ಷದ ನಾಯಕರು, ಸದನದ ಹೊರಗೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಬೆನಿಫಿಟ್ ಪಡೆಯುವದಕ್ಕೆ ಅದ್ಭುತವಾದಂತಹ ಪ್ಲಾನ್ ರೂಪಿಸುತ್ತಿದ್ದಾರೆ ಅನ್ನುವುದು ಅವರ ಬಾಯಿಂದಲೇ ಹೊರಬಂದಿದೆ.

    ಒಂದು ರಾಜಕೀಯ ಪಕ್ಷವಾಗಿ ಇಂತಹ ತಂತ್ರ -ಕುತಂತ್ರಗಳು ಅನಿವಾರ್ಯ, ಆಗುತ್ತಿರುತ್ತದೆ. ವಿರೋಧ ಪಕ್ಷಗಳು ಈ ತಂತ್ರ ಕುತಂತ್ರ ಗಳಿಗೆ ಪ್ರತ್ಯಸ್ತ್ರವನ್ನು  ಕಂಡುಕೊಳ್ಳದಿದ್ದರೆ ಅದರ ಪರಿಣಾಮವನ್ನು ಎದುರಿಸುತ್ತಾರೆ ಅಷ್ಟೇ. ಇಲ್ಲಿ ನಾನು ಹೇಳಲು ಹೊರಟಿದ್ದು ಬೇರೆ ವಿಚಾರ. ಮಹಿಳಾ ಮೀಸಲಾತಿಯ ವಿಚಾರ ಮಾತ್ರ, ಆ ಮಸೂದೆಯಲ್ಲಿ ಇರಲಿಲ್ಲ ಅನ್ನೋದು ವಿರೋಧ ಪಕ್ಷದವರ ಆರೋಪ. ಕೇವಲ ಮಹಿಳಾ ಮೀಸಲು ವಿಚಾರದ ಮಸೂದೆಯನ್ನು ಮಂಡಿಸಿದ್ದರೆ ಕ್ಲೀನ್ ಸ್ವೀಪಿನಲ್ಲಿ ಈ ಮಸೂದೆ ಪಾಸ್ ಆಗುತ್ತಿತ್ತು ಎನ್ನುವುದು ವಿರೋಧ ಪಕ್ಷದ ಮುಖಂಡರುಗಳ ಪ್ರತಿಕ್ರಿಯೆ. ಸರ್ಕಾರವು, ಇಲ್ಲಿ ಮಹಿಳಾ ಮೀಸಲು ಜೊತೆಜೊತೆಗೆನೇ ದೇಶದಲ್ಲಿ ಲೋಕಸಭಾ ಕ್ಷೇತ್ರದ ಸಂಖ್ಯೆಯನ್ನ ಹೆಚ್ಚಿಸುವ ತಂತ್ರವನ್ನು ಈ ಮಸೂದೆಯ ಜೊತೆಗೇನೆ ಸೇರಿಸಿದ ಕಾರಣದಿಂದ  ಈ ಮಸೂದೆಯನ್ನು ಪ್ರತಿಪಕ್ಷಗಳು ವಿರೋಧಿಸಲು ಕಾರಣವಾಯಿತು. ಆಡಳಿತ ಪಕ್ಷವು, ಈ ಸತ್ಯ ವಿಚಾರವನ್ನು ಮುಚ್ಚಿಟ್ಟು, ಕೇವಲ ಮಹಿಳಾ ಮೀಸಲಾತಿ ವಿಚಾರಕ್ಕೆ ಪ್ರತಿಪಕ್ಷಗಳು ಅಡ್ಡಿ ಮಾಡಿದವು ಎಂದು ಭಾವನಾತ್ಮಕ ವಿಚಾರವನ್ನು  ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಪ್ಲಾನ್ ರೂಪಿಸುತ್ತಿದೆ.

    ಮಹಿಳಾ ಮೀಸಲಾತಿಗೂ ಲೋಕಸಭೆಯ ಸ್ಥಾನಗಳ ಏರಿಕೆಗೂ ಏನು ಸಂಬಂಧ? ಈಗ ಜನಗಣತಿ ಆಗುತ್ತಿದೆ ಅದು ಪ್ರತಿ 10 ವರ್ಷಕ್ಕೊಮ್ಮೆ ಆದರೆ ಒಳ್ಳೆಯದೇ. ಆದರೆ ಅನವಶ್ಯಕವಾಗಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯತೆ ಏನಿದೆ?

    ಲೋಕಸಭಾ ಕ್ಷೇತ್ರಗಳ ಹೆಚ್ಚಳದಿಂದ ಯಾರಿಗೆ ಏನು ಲಾಭ? ಕ್ಷೇತ್ರಗಳ ಸಂಖ್ಯೆ ಹೆಚ್ಚಿದಂತೆ, ಅಷ್ಟೇ ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಕತ್ತರಿಯೇ. ಹೆಚ್ಚಿನ ಖರ್ಚನ್ನು ನಿಭಾಯಿಸಬೇಕಾಗುತ್ತದೆ. ಆ ಖರ್ಚು, ಸಹಜವಾಗಿ ಜನಸಾಮಾನ್ಯರ ತಲೆಯ ಮೇಲೆ ಬರುತ್ತದೆ. ಆ ಹೆಚ್ಚುವರಿ ಸದಸ್ಯರುಗಳಿಂದ ನಾವು ಏನನ್ನು ನಿರೀಕ್ಷಿಸಬಹುದು? ಈಗಿರುವ ಸದಸ್ಯರುಗಳಿಂದ ಏನನ್ನ ನಿರೀಕ್ಷಿಸುತ್ತಿದ್ದೇವೆಯೋ ಅದನ್ನೇ ತಾನೇ? ಅನವಶ್ಯಕವಾಗಿ ದುಂದು ವೆಚ್ಚಕ್ಕೆ ಈ ಕ್ಷೇತ್ರಗಳ ಹೆಚ್ಚಳವು ಕಾರಣವಾಗುತ್ತಿದೆ. ಇದು ಖರ್ಚು ಹೆಚ್ಚು ಮಾಡುವ ಟೈಮ್ ಅಲ್ಲ. ಜನಸಾಮಾನ್ಯರು ಸಾಕಷ್ಟು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ದೇಶದ ಎಲ್ಲಾ ವಿಭಾಗವೂ ಆರ್ಥಿಕ ಮುಗ್ಗಟ್ಟಿನಿಂದ ಜಜ್ಜರಿತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚುಕಡಿಮೆ ಮುನ್ನುರಕ್ಕೂ ಹೆಚ್ಚು  ಆದರೆ ಅದರ ಹೊರೆ ಯಾರ ಹೆಗಲಿಗೆ?   ಹೀಗೆ ಸದಸ್ಯರ ಸಂಖ್ಯೆ ಹೆಚ್ಚಿಸುವ ಮೂಲಕ, ಮತ್ತೊಂದಿಷ್ಟು ಆರ್ಥಿಕ ಹೊರೆಯನ್ನು ದೇಶದ ಮೇಲೆ ಹೋರಿಸುವುದು ಎಷ್ಟು ಸರಿ?

    Also Read  7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!

    ಖಂಡಿತವಾಗಿಯೂ ಇದಕ್ಕೆ ಪ್ರತ್ಯುತ್ತರವಿದೆ ಅವರ ಬಳಿ. ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ಹೆಚ್ಚಳ ಆಗುತ್ತಿದೆ ಅನ್ನುವುದು ಅವರವಾದ ಆಗಿರುತ್ತದೆ. ಸಣ್ಣ ಕ್ಷೇತ್ರಗಳು ಆದಷ್ಟು, ಅಭಿವೃದ್ಧಿ ಜಾಸ್ತಿ ಆಗುತ್ತದೆ ಅನ್ನುವುದೂ ಸಹ ಅವರ ವಾದವಾಗಿರುತ್ತದೆ. ಆದರೆ ಅದೇ ಅಭಿವೃದ್ಧಿಯನ್ನು ಈಗಲೂ ಮಾಡಬಹುದಲ್ವಾ ಅನ್ನೋದಕ್ಕೆ ಉತ್ತರ ಖಂಡಿತವಾಗಿಯೂ ಇಲ್ಲ.   ಹೆಚ್ಚಳವಾಗುವ ಲೋಕಸಭಾ ಸದಸ್ಯರ ಪಂಡುಗಳನ್ನು ಈಗಿರುವ ಸಂಸದರುಗಳಿಗೆ ಸರಿಸಮಾನವಾಗಿ ಹಂಚಿದರೆ, ಅದಕ್ಕಿಂತಲೂ ಹೆಚ್ಚಿನ ಅಭಿವೃದ್ಧಿಯಾಗುತ್ತದೆ. ಯಾಕಾಗುವುದಿಲ್ಲ ಹೇಳಿ? ಹೆಚ್ಚುವರಿಯಾಗುವ ಸಂಸದರ ಬತ್ಯೆ, ಕಚೇರಿಯ ಖರ್ಚು, ಪ್ರಯಾಣದ ಖರ್ಚು, ವೆಚ್ಚ, ಸಿಬ್ಬಂದಿಗಳ ಖರ್ಚು, ವೆಚ್ಚ ಹಾಗೂ ಅವರಿಗೆ ನೀಡಲಾಗುವ ಸಂಬಳವೂ ಸಹ ಖಜಾನೆಯಲ್ಲಿ ಸಪಾಗಿ ಉಳಿಯುತ್ತದೆ ತಾನೇ? ಇಷ್ಟೇ ಅಲ್ಲ, ಚುನಾವಣೆಯನ್ನು ನಡೆಸಲು ಖರ್ಚು ಎಷ್ಟು ಬರುತ್ತದೆ? ಒಂದು ಕ್ಷೇತ್ರದ ಚುನಾವಣೆಗೆ ಸರ್ಕಾರವು ಎಷ್ಟು ಹಣವನ್ನು ವ್ಯಯಿಸುತ್ತದೆ? ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಿದಂತೆ ಚುನಾವಣೆಯಲ್ಲೂ ಸಹ ಖರ್ಚು ವೆಚ್ಚಗಳು ಏರುತ್ತ ಸಾಗುತ್ತದೆ. ಇವತ್ತಿನ ಸಂದರ್ಭದಲ್ಲಿ ಈ ವೆಚ್ಚಗಳ ಏರಿಕೆಯ ಅವಶ್ಯಕಥೆ ಇದೆಯೇ? ದುರ್ದೈವ ಅಂದರೆ, ಲೋಕಸಭೆಯಲ್ಲಿ ಈ ವಿಚಾರವು ಈ ಯಾಂಗಲ್ಲಿನಲ್ಲಿ ಚರ್ಚೆಗೆ ಬರಲಿಲ್ಲ ನೋಡಿ. ಒಬ್ಬನೇ ಒಬ್ಬ ಸಂಸದನೂ, ಕಾಳಜಿಯನ್ನು ತೋರಿಸುವ ಕೆಲಸ ಮಾಡಿಲ್ಲ. ಕೇವಲ ರಾಜಕೀಯ ಹಗ್ಗ ಜಗ್ಗಾಟ, ಪಕ್ಷಗಳ ನಡುವಿನ ವೈಯಕ್ತಿಕ ಗುದ್ದಾಟಕ್ಕೆ ನಮ್ಮ ಪ್ರಜಾಪ್ರಭುತ್ವದ ದೇಗುಲ ಬಳಕೆಯಾಗುತ್ತಿರುವುದು ದುರ್ದೈವ. ಇದು ಸಾಮಾನ್ಯ ಜನರಿಗೆ, ಅಂದರೆ ದೇಶದ ಪ್ರಜೆಗಳಿಗೆ ಮಾಡುತ್ತಿರುವ ದ್ರೋಹ ಅನ್ನುವುದರಲ್ಲಿ ಎರಡು ಮಾತೇ ಇಲ್ಲ.

    ಹೌದು, ದಕ್ಷಿಣ ಭಾರತದ ತಮಿಳನಾಡು ಆಂಧ್ರ ಕೇರಳದ ಕೆಲವು ಪಕ್ಷದ ನಾಯಕರು  ಇದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರ ಪ್ರಕಾರ, ದಕ್ಷಿಣ ರಾಜ್ಯಗಳ ಲೋಕಸಭಾ ಸದಸ್ಯರ ಸಂಖ್ಯೆಯು ಗಣನೀಯವಾಗಿ ಇಳಿಕೆಯಾಗುತ್ತದೆ. ಅತಿ ಹೆಚ್ಚು ಲೋಕಸಭಾ ಸದಸ್ಯರು ಉತ್ತರ ಹಾಗೂ ನಾರ್ತ್ ಈಸ್ಟ್ ಭಾಗದಲ್ಲಿಯೇ ಇರುತ್ತಾರೆ. ಇದರಿಂದ ಕೇಂದ್ರ ಸರ್ಕಾರದಲ್ಲಿ ದಕ್ಷಿಣ ಭಾರತದವರ ಬೇಡಿಕೆಗೆ ಮಾನ್ಯತೆ ಸಿಗುವುದು ಕಡಿಮೆಯಾಗುತ್ತದೆ ಅನ್ನುವುದು ಅವರವಾದ.

    ಇವತ್ತಿನ ದಿನ ಆವಾದವು ಪ್ರಸ್ತುತ ವೆನಿಸಿಕೊಳ್ಳಬಹುದು. ಆದರೆ ಇಡೀ ದೇಶದ ಸರ್ಕಾರವದಾಗಿರುತ್ತದೆ. ಆ ಸರ್ಕಾರವು  ನಮ್ಮದೇ ಆಗಿರುತ್ತದೆ. ಸರ್ಕಾರದ ಮುಖ್ಯಸ್ಥ  ಯಾರೇ ಆಗಿರಲಿ, ಯಾವುದೇ ರಾಜ್ಯದಿಂದ ಬಂದವರಾಗಿರಲಿ, ಅವರು  ಭಾರತದ ಸರ್ಕಾರದ ಮುಖ್ಯಸ್ಥರಾಗಿರುತ್ತಾರಯೇ ಹೊರತು ಅವರ ಮೂಲ ರಾಜ್ಯದ ಪ್ರಧಾನಿಯಾಗಿರುವುದಿಲ್ಲ. ಈಗ ಉದಾಹರಣೆಗೆ ನಮ್ಮ ರಾಜ್ಯವನ್ನೇ ತೆಗೆದುಕೊಳ್ಳಿ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಕಡೆಯವರಿಗೆ ಮುಖ್ಯಮಂತ್ರಿಯ ವಿಚಾರದಲ್ಲಿ ಅವಕಾಶಗಳು ಹೆಚ್ಚು ದೊರೆಯುತ್ತಿಲ್ಲ ಅನ್ನುವ  ಹುಳವನ್ನು ಯಾರಾದರೂ ಬಿಟ್ಟರೆ, ಅದು ಎಷ್ಟು ಸರಿ? ವಿಷಯ, ಸರ್ಕಾರದ ಮುಖ್ಯಸ್ಥರು ಯಾರಾಗುತ್ತಾರೆ ಎನ್ನುವುದು ಮುಖ್ಯವಲ್ಲ. ಮುಖ್ಯಸ್ಥರಾದವರು ಹೇಗೆ ಇಡೀ ದೇಶವನ್ನು ಒಂದೇ ತಕ್ಕಡಿಯಲ್ಲಿ ನೋಡುತ್ತಾರೆ, ಎಲ್ಲರನ್ನು ಸರಿಸಮಾನವಾಗಿ ಹೇಗೆ ಕೊಂಡೋಯುತ್ತಾರೆ ಅನ್ನುವುದು ಮುಖ್ಯವಾಗ್ತದೆ. ಹಾಗೆಯೇ ಫೇಸ್ ವ್ಯಾಲ್ಯೂ ಹೇಗಿದೆ, ಪ್ರಾದೇಶಿಕತೆ ಹಾಗೂ ಜಾತಿ ಸಮುದಾಯವನ್ನು ಮೀರಿದ ನಾಯಕತ್ವದ ಗುಣ ಮುಖ್ಯವಾಗಬೇಕು. ಇದೆಲ್ಲವೂ ಸರ್ಕಾರದ ಮುಖ್ಯಸ್ಥರಾಗುವವರಿಗೆ ಇರಬೇಕಾದದ ಅರ್ಹತೆ. ಅದು ಬಿಟ್ಟು ಪ್ರಾದೇಶಿಕತೆ, ಜಾತಿ ಧರ್ಮ ಇದ್ಯಾವುದೂ ಮುಖ್ಯವಲ್ಲ. ದಕ್ಷಿಣದ ಅನೇಕ ಪಕ್ಷಗಳ ಮುಖಂಡರು ಈ ರೀತಿಯ ವಿಚಾರವನ್ನು ಇಟ್ಟುಕೊಂಡು ಈ ಮಸೂದೆಯನ್ನು ವಿರೋಧಿಸಿದ್ದು ಸರಿಯಲ್ಲ. ಪ್ರಾದೇಶಿಕತೆಯ ಕೂಗುಗಳು ಒಳ್ಳೆಯದೂ ಅಲ್ಲ. ದೇಶದ ವಿಚಾರ ಬಂದಾಗ ರಾಷ್ಟ್ರಪ್ರಜ್ಞೆಯು ನಮ್ಮದಾಗಿರಬೇಕು. ರಾಜ್ಯದ ವಿಚಾರಕ್ಕೆ ಬಂದಾಗ ಇಡೀ ನಾಡಿನ ಬಗ್ಗೆ ಹೆಮ್ಮೆ ಇರಬೇಕು. ಅದು ಬಿಟ್ಟು ಯಾವುದೇ ಪ್ರಾದೇಶಿಕತೆಯ ವಿಚಾರವನ್ನು ಇಟ್ಟುಕೊಂಡು ಸರ್ಕಾರದ ಮುಖ್ಯಸ್ಥರನ್ನು ನೇಮಿಸುವುದರ ಬಗ್ಗೆ ಚಿಂತನೆಗಳು ಆಗಬಾರದು. ಅಂತಹ ಆಗ್ರಹಗಳೂ ಬರಬಾರದು. ದುರ್ದೈವದ ವಿಚಾರ ಏನಂದರೆ, ಇವತ್ತು ರಾಜ್ಯಗಳಲ್ಲಿ ಇಂತಹ ಆಗ್ರಹಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ನಮ್ಮ ಜಾತಿಯವ ಮುಖ್ಯಮಂತ್ರಿ ಆಗಬೇಕೆಂಬ ಆಗ್ರಹವನ್ನು ಅದೇ ಜಾತಿಯ ಮುಖಂಡರೇ ಜನರ ಮೂಲಕ ಎಬ್ಬಿಸುತ್ತಾರೆ. ಅದಕ್ಕೆ ಕೆಲವು ಸ್ವಾಮೀಜಿಗಳು ಕೂಡ ತಮ್ಮ ಕೆಲಸ ಬೊಗಸೆ ಬಿಟ್ಟು ಇನ್ವಾಲ್ ಆಗುತ್ತಿದ್ದಾರೆ. ರಾಷ್ಟ್ರದ ವಿಚಾರದಲ್ಲಿ ಇನ್ನೂ ಅಂತಹ ಆಟಗಳು ಶುರುವಾಗಿಲ್ಲ. ಆದರೆ ಸಣ್ಣನೆಯದಾಗಿ ಪ್ರಾದೇಶಿಕ ವಿಚಾರಗಳು ಶುರುವಾಗುತ್ತಿರುವುದು ಅತ್ಯಂತ ಅಪಾಯಕಾರಿ. ಅರ್ಥ ಮಾಡಿಕೊಳ್ಳ ಬೇಕಾದ್ದೇನೆಂದರೆ, ಒಂದು ರಾಜ್ಯವಿರಲಿ, ದೇಶವಿರಲಿ, ಮುಖ್ಯಸ್ಥರಾಗುವವರಿಗೆ ಫೇಸ್ ವ್ಯಾಲ್ಯೂ ಇರಲೇಬೇಕು. ದೇಶದ ಪ್ರಧಾನಿಯಾಗುವವರು ದೇಶದ ಮೂಲೆ ಮೂಲೆಗೂ ಗೊತ್ತಿರುವವರಾಗಿರಬೇಕು. ಅಂತಹ ನಾಯಕತ್ವವನ್ನು  ಪಡೆದ ನಂತರವೇ ಅವರು ಪ್ರಧಾನಿ ರೇಸಿಗೆ ಬರುವಂತಾಗಬೇಕು. ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುವ ಎಬಿಲಿಟಿ ಹೊಂದಿರುವವರಿಗೆ ಮಾತ್ರ ಆ ಸ್ಥಾನ ದಕ್ಕಬೇಕು. ಅದೇ ನಿಯಮ  ರಾಜ್ಯಕ್ಕೂ ಅನ್ವಯವಾಗಬೇಕು. ಹಾಗಿಲ್ಲದಿದ್ದರೆ, ಯಾರು ಬೇಕಾದರೂ ಆಕಾಂಕ್ಷಿಯಂತೆ ಮಾತನಾಡಲು ಶುರು ಮಾಡುತ್ತಾರೆ. ಉದಾಹರಣೆಗೆ ಈಗ ನಮ್ಮ ರಾಜ್ಯದಲ್ಲಿ ನಡೆಯುತ್ತಿದೆಯಲ್ಲ ಹಾಗೆ. ಈಗಿರುವ ಮುಖ್ಯಮಂತ್ರಿಗಳು ಫೇಸ್ ವ್ಯಾಲ್ಯೂ ಇರುವಂತಹ ನಾಯಕರು ಹೌದು. ಡಿಕೆ ಶಿವಕುಮಾರ್ ಅವರಿಗೂ ಆ ಒಂದು ಫೇಸ್ ವ್ಯಾಲ್ಯೂ ಇದೆ. ಇಬ್ಬರನ್ನು ಬಿಟ್ಟರೆ ಕಾಂಗ್ರೆಸ್ಸಿನಲ್ಲಿ ಇನ್ಯಾರಿಗೂ ಮುಖ್ಯಮಂತ್ರಿ ಆಗುವಂತಹ ಫೇಸ್ ವ್ಯಾಲ್ಯೂ ಇಲ್ಲ. ಆದರೂ ಡಜನ್ಗಟ್ಟಲೆ ನಾಯಕರು ನಾನೂ ಆಕಾಂಕ್ಷಿ ಅಂತ ಹೇಳಿಕೊಳ್ಳುತ್ತಿದ್ದಾರೆ. ಅದೆಲ್ಲವೂ ಅರಾಜಕತೆಯ ಭಾಗವಾಗುತ್ತದೆ. ಪಕ್ಷ ಮತ್ತು ಸರ್ಕಾರ ಎರಡೂ ಇಲ್ಲಿ ದುರ್ಬಲವಾಗಿದೆ ಎಂಬ ಸಂಕೇತವನ್ನು  ಅದು ಸೂಚಿಸುತ್ತದೆ. 

    Also Read  ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ

    ಈಗಿನ ಕೇಂದ್ರ ಸರ್ಕಾರವನ್ನು ಒಮ್ಮೆ ನೋಡಿ, ಅಲ್ಲಿ ಇಂತವುಗಳಿಗೆ ಅವಕಾಶವೇ ಇಲ್ಲ. ಮೋದಿಯವರನ್ನು ಹೊರತುಪಡಿಸಿ ಇನ್ನೊಬ್ಬರು ನೇರವಾಗಿ ಅಂತಹ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಿಲ್ಲ. ವ್ಯಕ್ತಪಡಿಸಲು ಯಾರಿಗೂ ಧೈರ್ಯವೂ ಇಲ್ಲ. ಅಂತಹ ನಾಯಕತ್ವ ಬೇಕು. ರಾಜ್ಯಕ್ಕಿರಲಿ, ದೇಶಕ್ಕಿರಲಿ ಗಟ್ಟಿ ನಾಯಕತ್ವ ಅತ್ಯವಶ್ಯಕ.

    ಆದಿರಲಿ, ಈಗ ವಾಪಸ್ ಮಹಿಳಾ ಮೀಸಲಾತಿ ಹಾಗೂ ಲೋಕಸಭಾ ಕ್ಷೇತ್ರದ ಸಂಖ್ಯೆ ಹೆಚ್ಚಳದ ವಿಚಾರಕ್ಕೆ ಬರುವ. ವಿಪಕ್ಷಗಳಿಗೆ ಸಂಖ್ಯೆಯ ವಿಚಾರದ ಬಗ್ಗೆ ಯಾವುದೇ ತಕರಾರು ಇದ್ದಂತೆ ಕಾಣುತ್ತಿಲ್ಲ. ಆದರೆ ಈಗಿನ ಸರ್ಕಾರವು, ಪುನರ್ ವಿಂಗಡಣೆಯ ನೆಪದಲ್ಲಿ ವಿಪಕ್ಷಗಳ ಪರ ಒಲವಿರುವ ಮತದಾರರನ್ನು ಒಡೆಯುವ ಹಾಗೆ ಕ್ಷೇತ್ರಗಳನ್ನು ಪುನರ್ವಿಂಗಡನೆ ಮಾಡಬಹುದು ಎಂಬ ಭಯ ಇದೆ. ಅವರು ನೇರವಾಗಿ ಹೇಳುತ್ತಿಲ್ಲ ಅಷ್ಟೇ. ಹಾಗಾಗಿ ಈಗಿನ ಜನಗಣತಿಯ ರಿಸಲ್ಟ್ ಬರಲಿ, ಅದು ಸಂಪೂರ್ಣವಾಗಲಿ ಎಂಬ ಮಾತುಗಳನ್ನು ವಿಪಕ್ಷಗಳು ಆಡುತ್ತಿವೆ.   ಈಗಾಗಲೇ ಹೇಳಿದಂತೆ, ವಿಪಕ್ಷಗಳಿಗೆ ಲೋಕಸಭಾ ಸದಸ್ಯರ ಹೆಚ್ಚಳದಿಂದಾಗುವ ಖರ್ಚುಗಳ ವಿಚಾರವಾಗಲಿ ಅಥವಾ ಇನ್ನಿತರ ವಿಚಾರವಾಗಲಿ ಅಷ್ಟೊಂದು ಮುಖ್ಯ ಅಂತ ಅನ್ನಿಸುತ್ತಿಲ್ಲ. 

    Also Read  ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಇಳಿದ ಚಿನ್ನದ ಬೆಲೆ….!ಖರೀದಿದಾರರಿಗೆ ಬಂಪರ್ ರಿಲೀಫ್.

    ಖರ್ಚಿಗೆ ರಹಧಾರಿಯಾಗುತ್ತಿರುವ ಸಂಸದರ ಸಂಖ್ಯೆಯ ಹೆಚ್ಚಳದ ವಿಚಾರ ಅವರಿಗೆ ಅಪ್ರಸ್ತುತ, ಅದು ಸರಿಯಲ್ಲ ಅನ್ನೋದು ನನ್ನವಾದ. ಆದರೆ, ಕ್ಷೇತ್ರಗಳ ಪುನರ್ವಿಂಗಡಣೆ ಮಾಡಬಹುದು. ಅದು ಹೇಗೆ? ಯಾಕಾಗಿ? ಕೆಲವು ಲೋಕಸಭೆ ಅಥವಾ ವಿಧಾನಸಭಾ ಕ್ಷೇತ್ರಗಳ ಭೂ ಪ್ರದೇಶಗಳು ಅವೈಜ್ಞಾನಿಕವಾಗಿ ಎಲ್ಲೆಲ್ಲೋ ಹೋಗಿ ಕೂತಿದೆ. ಉದಾಹರಣೆಗೆ, ಸಿರ್ಸಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬನವಾಸಿ ಬರಬೇಕಿತ್ತು, ಆದರೆ ಆ ಪ್ರದೇಶವು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲ್ಪಟ್ಟಿದೆ. ಚುನಾವಣಾ ಅಧಿಕಾರಿಗಳು ಇಂತಹ ಕ್ಷೇತ್ರಗಳನ್ನು, ರಚಿಸುವಾಗ ಆ ಕ್ಷೇತ್ರದ ಬಗ್ಗೆ ಗೊತ್ತಿರುವವರನ್ನು, ಸ್ಥಳೀಯರನ್ನು (ಕೇವಲ ಭೂ ಪ್ರದೇಶಗಳ ವಿಚಾರಕ್ಕೆಮತ್ರ) ಎದುರುಗಿಟ್ಟುಕೊಂಡು ಕ್ಷೇತ್ರವನ್ನು ರಚಿಸಿದರೆ ಇಂತಹ ತಪ್ಪುಗಳು ಆಗುವುದಿಲ್ಲ. ಕಾರವಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ, ಯಲ್ಲಾಪುರ ಮತ್ತು ಶಿರಸಿಯ ಮಧ್ಯೆ ಬರುವ ಕೆಲವು ಹಳ್ಳಿಗಳು ಸೇರಿಕೊಂಡು ಬಿಟ್ಟಿವೆ. ಇವರಿಗೆ ಆ ಶಾಸಕರ ಮುಖದರ್ಶನವೇ ಸಿಗುವುದಿಲ್ಲ. ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಸಿಗುತ್ತದೆಯೇ ಹೊರತು, ಉಳಿದ ಸಂದರ್ಭದಲ್ಲಿ ಸಿಗುವುದೇ ಇಲ್ಲ. ಇಂತಹ ಹಲವು ತಪ್ಪುಗಳು ಈಗಾಗಲೇ ರಚಿತವಾಗಿರುವ ಕ್ಷೇತ್ರಗಳಲ್ಲಿದೆ. ಇವೆಲ್ಲವುಗಳನ್ನು ಸರಿಪಡಿಸುವ ಕೆಲಸ ಮಾಡಬಹುದು. ಅದು ಬಿಟ್ಟು, ವಿಧಾನಸಭೆಯ ಹಾಗೂ ಲೋಕಸಭೆಯ ಸದಸ್ಯರುಗಳ ಸಂಖ್ಯೆ ಹೆಚ್ಚಿಸಲು ಹೋಗುವುದು ದೇಶದ ಮೇಲೆ ಹಾಗೂ ಜನರ ಮೇಲೆ ಹೊರೆಯಾಗುವುದಂತೂ ಖಂಡಿತ.

    ಇನ್ನು ವಾಪಸ್ ಮಹಿಳಾ ವಿಚಾರಕ್ಕೆ ಬರುವ. ಈಗಾಗಲೇ ಮಹಿಳಾ ಮೀಸಲು ಮಸೂದೆಯನ್ನು ಭಾರತೀಯ ಜನತಾ ಪಕ್ಷವೂ ಒಪ್ಪಿಕೊಂಡಿದೆ ಅದನ್ನು ಜಾರಿಗೆ ತರುವ ಬಗ್ಗೆ ಬಹಳ ಹಿಂದಿನಿಂದಲೂ ಮಾತನಾಡುತ್ತಿದೆ. ಹಾಗಿರುವಾಗ ಆ ಪಕ್ಷವು, ತನ್ನ ಪಕ್ಷದ ರಾಷ್ಟ್ರೀಯ ಕಮಿಟಿಯೂ ಸೇರಿದಂತೆ, ಎಲ್ಲಾ ವಿಭಾಗದಲ್ಲೂ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನವನ್ನು ನೀಡುವುದರ ಜೊತೆಗೆ, ಮುಂಬರುವ ಎಲ್ಲಾ ಚುನಾವಣೆಯಲ್ಲೂ ದೇಶದಾದ್ಯಂತ ಸ್ಥಳೀಯ ಚುನಾವಣೆ ಇರಲಿ, ವಿಧಾನಸಭಾ ಚುನಾವಣೆ ಇರಲಿ ಅಥವಾ ಲೋಕಸಭಾ ಚುನಾವಣೆಯೇ ಇರಲಿ. ಅದು ಮೇಲ್ಮನೆ ಇರಲಿ ಕೆಳಮನೆ ಇರಲಿ ಎಲ್ಲಾ ವಿಭಾಗದಲ್ಲೂ ಮಹಿಳೆಯರಿಗೆ 33% ಮೀಸಲು ಕೊಡುವ ಮೂಲಕ ಮಾದರಿ ಯಾಕಾಗಬಾರದು? ಹಾಗೆ ಮಾಡುವ ಮೂಲಕ ಪ್ರತಿಪಕ್ಷಗಳನ್ನು ವಿಲನ್ ಅಂತ ಪ್ರೂವ್ ಮಾಡಲಿ. ಅದು ಬಿಟ್ಟು ಮಸೂದೆಯ ಕರಡು ಲೋಕಸಭೆಯಲ್ಲಿ ಬಿದ್ದು ಹೋಗಿರುವುದನ್ನೇ ನೆಪವಾಗಿಟ್ಟುಕೊಂಡು ಕೇವಲ ರಾಜಕೀಯ ಲಾಭ ಪಡೆಯಲು ಮುಂದಾಗುವುದು ಆಡಳಿತ ಪಕ್ಷಕ್ಕೆ ಶೋಭೆಯಲ್ಲ. ಏನಂತೀರಿ?

    –ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಉತ್ತರ ಕನ್ನಡಕ್ಕೆ ₹6,925 ಕೋಟಿ ಬಂದರು ಯೋಜನೆ: 15 MTPA ಸಾಮರ್ಥ್ಯದ ಮಂಕಿ ಬಂದರಿಗೆ ಸಚಿವ ಸಂಪುಟ ಒಪ್ಪಿಗೆ
    MRPL ಗೇಟ್‌ ಮುಂದೆ ಭಾರೀ ಪ್ರತಿಭಟನೆ- ಬೆಳ್ಳಂಬೆಳಗ್ಗೆ ಸೇರಿದ ಜನಸಮೂಹ
    ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ
    ಮಂಗಳೂರು ಇನ್ಸ್ಟಾಮಾರ್ಟ ಕುಂಟಿಕಾನದಲ್ಲಿ ಲಿಫ್ಟ್ ದುರಂತ: ಡೆಲಿವರಿ ಸಿಬ್ಬಂದಿ ದುರ್ಮರಣ
    ಬರದ ಭೀತಿ ಎದುರಿಸುತ್ತಿರುವ ಕರ್ನಾಟಕ ,ಮಳೆ ಇಲ್ಲ… ಬೆಳೆ ಇಲ್ಲ… ಅನ್ನ ಇಲ್ಲ!,ಕೇಂದ್ರಕ್ಕೆ ನೆರವಿಗಾಗಿ ಡಿ ಕೆ ಶಿ ಮನವಿ
    ಬಿಜೆಪಿಯ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ready…!
    ಸೋನಂ ವಾಂಗ್ಚುಕ್ ಹೋರಾಟ ಸರ್ಕಾರದತ್ತ ಹೆಚ್ಚುತ್ತಿರುವ ಒತ್ತಡ: “ಸಂಸತ್ತಿನಲ್ಲಿ ಶಿಕ್ಷಣದ ಹೊಣೆಗಾರಿಕೆ ಬಗ್ಗೆ ಭರವಸೆ ಸಿಕ್ಕರೆ ಉಪವಾಸ ಅಂತ್ಯ!”…?
    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಬಂಟ್ವಾಳ ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ!ಸಂಜೆ ಜನಸಂದಣಿಯಲ್ಲೇ ರಕ್ತದೋಕುಳಿ..ಬಸ್‌ಗಾಗಿ ಕಾಯುತ್ತಿದ್ದ ಯುವತಿ ಮೇಲೆ ಮಾರಕ ದಾಳಿ ಕೊಚ್ಚಿ ಕೊಲೆ..!
    ಇನ್ನೂ ಏಳು ದಿನ ಕರ್ನಾಟಕದ ಸಿಎಂ ಕುರ್ಚಿ ಕಾಲಿ… ಜೂನ್ 5 ರಂದು ಡಿಕೆ ಶಿವಕುಮಾರ್ ಪ್ರಮಾಣ ವಚನ!
    ಉಡುಪಿಯಲ್ಲಿ  ಬೆಟ್ಟಿಂಗ್ ಮಾಫಿಯಾದ ಚಟುವಟಿಕೆಯನ್ನು ಡೆತ್ ನೋಟ್ ರಿವಿಲ್ ಮಾಡಿತೇ?
    ಮಾರ್ಚ್ 7 ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ
    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
    “ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
    UPIಗೆ ಶುಲ್ಕ ಬರಲಿದೆಯೇ? – ಲೋಕಸಭೆಯಲ್ಲಿ ಅಂಗೀಕಾರವಾದ bill ಮಸೂದೆ ಏನು ಹೇಳುತ್ತದೆ?
    ಸರ್ಕಾರಿ ಮಕ್ಕಳ ಶೂ ಕಳಪೆ…!ಸರ್ಕಾರಿ ಯೋಜನೆಗಳಲ್ಲಿ ಗುಣಮಟ್ಟ ಕೊರತೆಗೆ ಪರಿಹಾರವೇ ಇಲ್ವಾ ?
    ವೃಷಣಗಳಿಗೆ ₹6 ಕೋಟಿ? ನಾ ರೀಲ್ ನಂಬಿ  16ರ ಬಾಲಕ ಹತ್ಯೆ!ಇದು ₹6 ಕೋಟಿ ಆಸೆಗೆ ನಡೆದ ಭೀಕರ ಕೃತ್ಯ…!
    ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?
    ಸರ್ಕಾರಕ್ಕೆ CJP ಸವಾಲು…ದೆಹಲಿ ಪ್ರತಿಭಟನೆಗೆ ಹಿಂಸಾತ್ಮಕ ತಿರುವು..ಲಾಠಿಚಾರ್ಜ್, ಅಶ್ರುವಾಯು, ಇಂಟರ್ನೆಟ್ ಶಟ್‌ಡೌನ್..
    ಮಂಗಳೂರು ಯೂಟ್ಯೂಬರ್‌ಗಳ ವಿರುದ್ಧ ಬಿಎನ್‌ಎಸ್ ಅಸ್ತ್ರ ಪ್ರಯೋಗಿಸಿದ ಖಾಕಿ!….
    ಮಕ್ಕಳ ಕೈಯಿಂದ ಮೊಬೈಲ್ ಕಸಿಯಲು ಮುಂದಾದ ಬ್ರಿಟನ್!ಯುಕೆಯ ನಿರ್ಧಾರಕ್ಕೆ ವಿಶ್ವದ ಗಮನ…
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು
    ತಿಮರೋಡಿ ಸೇರಿ ನಾಲ್ವರಿಗೆ ಕೇಸ್…
    ವೈರಲ್ ‘Reservation Hatao Movement’ ಹಿಂದೆ ಏನಿದೆ? 7 ಗಂಟೆಗಳಲ್ಲಿ 90 ಸಾವಿರದಿಂದ 4 (40ಲಕ್ಷ) ಮಿಲಿಯನ್ ಫಾಲೋವರ್ಸ್‌! ಮೀಸಲಾತಿ ವಿರುದ್ಧದ ಅಭಿಯಾನಕ್ಕೆ ದೇಶಾದ್ಯಂತ ಭಾರೀ ಬೆಂಬಲ..
    ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ