📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ರಾಜ್ಯವ್ಯಾಪಿ ಖೋಟಾ ನೋಟು ಜಾಲ ಭೇದಿಸಿದ ಖಾಕಿಯ ಚಾಣಾಕ್ಷ ಕಾರ್ಯಾಚರಣೆ..!

    ತುಮಕೂರು: ಕೇವಲ ಒಂದೇ ಒಂದು 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಸುಳಿವನ್ನು ಹಿಡಿದು ರಾಜ್ಯವ್ಯಾಪಿ ಕಾರ್ಯಾಚರಣೆ ನಡೆಸಿದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರ ಕಾರ್ಯಕ್ಷಮತೆಗೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದೆ. ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಬೃಹತ್ ಖೋಟಾ ನೋಟು ಜಾಲವನ್ನು ಭೇದಿಸಿದ ಖಾಕಿ ಪಡೆ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇರೂರಿದ್ದ ಜಾಲವನ್ನು ಮಟ್ಟಹಾಕಿ ಆರು ಆರೋಪಿಗಳನ್ನು ಬಂಧಿಸಿದೆ.

    ಹುಳಿಯಾರಿನ ಅಂಗಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸಿಗರೇಟ್ ಖರೀದಿಸಿ 500 ರೂಪಾಯಿಯ ನಕಲಿ ನೋಟು ನೀಡಿ ಪರಾರಿಯಾಗಿದ್ದರು. ಅಂಗಡಿ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹುಳಿಯೂರು ಹಾಗೂ ಚಿಕ್ಕನಾಯಕನಹಳ್ಳಿ ಪೊಲೀಸರು, ಸಣ್ಣ ಪ್ರಕರಣವೆಂದು ನಿರ್ಲಕ್ಷ್ಯ ಮಾಡದೇ ಪ್ರತಿಯೊಂದು ಸುಳಿವನ್ನೂ ಬೆನ್ನಟ್ಟಿ ತನಿಖೆ ನಡೆಸಿದರು. ಇದೇ ತನಿಖೆ ಕೊನೆಗೆ ರಾಜ್ಯವ್ಯಾಪಿ ಖೋಟಾ ನೋಟು ಜಾಲದ ಭಂಡಾಫೋಡಕ್ಕೆ ಕಾರಣವಾಯಿತು.

    Also Read  ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು

    ತನಿಖೆಯ ವೇಳೆ ಆರೋಪಿಗಳು ಅತ್ಯಾಧುನಿಕ ತಂತ್ರಗಳನ್ನು ಬಳಸಿ ನೋಟುಗಳ ಮುದ್ರಣ, ವಿತರಣೆ ಹಾಗೂ ಚಲಾವಣೆಗೆ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ವ್ಯವಸ್ಥಿತವಾಗಿ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇವರ ನೆಟ್‌ವರ್ಕ್ ವಿಸ್ತರಿಸಿತ್ತು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

    ಈ ಕಾರ್ಯಾಚರಣೆಯ ಮೂಲಕ ಸಾಮಾನ್ಯ ಪ್ರಕರಣವನ್ನೇ ದೊಡ್ಡ ಯಶಸ್ಸಾಗಿ ಪರಿವರ್ತಿಸಿದ ಚಿಕ್ಕನಾಯಕನಹಳ್ಳಿ ಪೊಲೀಸರ ಕಾರ್ಯವೈಖರಿ ಖಾಕಿಯ ತನಿಖಾ ಸಾಮರ್ಥ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಒಂದು ನಕಲಿ ನೋಟಿನ ಸುಳಿವಿನಿಂದಲೇ ರಾಜ್ಯವ್ಯಾಪಿ ಅಪರಾಧ ಜಾಲವನ್ನು ಭೇದಿಸಿದ ಈ ಕಾರ್ಯಾಚರಣೆ, ಅಪರಾಧಿಗಳಿಗೆ ಕಠಿಣ ಎಚ್ಚರಿಕೆಯ ಸಂದೇಶವಾಗಿದ್ದು, ಸಾರ್ವಜನಿಕರ ವಿಶ್ವಾಸವನ್ನೂ ಮತ್ತಷ್ಟು ಬಲಪಡಿಸಿದೆ.

    ##TumakuruPolice #FakeCurrency #KarnatakaPolice #CrimeNews #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರಿನಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಗ್ಯಾಂಗ್ ಹಲ್ಲೆ:…ಕಾಲೇಜು ವಿದ್ಯಾರ್ಥಿಗಳ ರ‍್ಯಾಗಿಂಗ್ ಸಂಸ್ಕೃತಿಗೆ ಬ್ರೇಕ್ ಬೇಕು
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
    ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
    ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
    ಮರಣದಂಡನೆ ಶಿಕ್ಷೆಗೆ ಈಡಾದ  ತಮಿಳುನಾಡು   ಪೊಲೀಸರು
    ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
    ಅವಮಾನವೇ ಯಶಸ್ಸಿನ ಇಂಧನ: ಕೋಮಲ್ ಗನಾತ್ರಾ ಎಂಬ ಅದಮ್ಯ ಚೇತನ ಕೇವಲ 2 ವಾರಗಳ ಸಂಸಾರ, ನಂತರ ಜೀವಮಾನದ ಸಾಧನೆ!
    PoKನಲ್ಲಿ ರಕ್ತಪಾತ-ಪಾಕಿಸ್ತಾನದ ವಿರುದ್ಧ ಭಾರತದ ತೀವ್ರ ಆಕ್ರೋಶ!ಗುಂಡಿನ ಮಳೆಯ ನಡುವೆ ಜೀವ ಕಳೆದುಕೊಂಡ ಪ್ರತಿಭಟನಾಕಾರರು!
    “ಆ್ಯಕ್ಷನ್ ಸಿಎಂ” ಡಿಕೆ ಶಿವಕುಮಾರ್ ತಾಳ್ಮೆಯಿಂದ ತಾಕತ್ತಿನವರೆಗೆ…ಆಡಳಿತದ ಅಬ್ಬರ ಶುರು!ಏನೇನ್ ಹೇಳಿದ್ರು ?ಕರ್ನಾಟಕದಲ್ಲಿ ಹೊಸ ಆಡಳಿತ ಶೈಲಿಯ ಆರಂಭವೇ?
    ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
    ಮಂಗಳೂರು–ಉಡುಪಿಗೆ ಹೈಕೋರ್ಟ್ ಪೀಠ? ಅಧಿಕೃತ ಪರಿಶೀಲನೆಗೆ ಸಮಿತಿ ರಚನೆ
    ಯಾರದ್ದೋ ಹಠ, ಮತ್ತ್ಯಾರದೋ ಚಟ, ಹೆತ್ತವರ ಜಗಳಕ್ಕೆ ಬಲಿಯಾಯ್ತು ಮಗುವಿನ ಬಾಲ್ಯ -ಭವಿಷ್ಯ!
    ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ
    ರಾಜ್ಯ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಹೊಸ ಸಾರಥಿ!
    ಮೂಡಬಿದ್ರೆ ಪೊಲೀಸ್ ಅಧಿಕಾರಿಯ ಮಾನ ಹರಾಜಿಗೆ ನಿಂತವರು ಯಾರು?
    ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
    ಮನೆಯವರಿಂದಲೇ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಪೊಲೀಸರಿಗೆ ದೂರು 🚨
    ✈️ ಮಂಗಳೂರಿನ ಮುಡಿಗೆ ಮತ್ತೆರಡು ಚಿನ್ನದ ಗರಿ!
    ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
    ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
    ತೈಲ ಟ್ಯಾಂಕರ್ ಮೇಲೆ ಇರಾನ್ ಆತ್ಮಹತ್ಯಾ ದೋಣಿ ದಾಳಿ – ಭಾರತೀಯ ನಾವಿಕ ಸಾವು
    ED ₹2,178 ಕೋಟಿ ಆಸ್ತಿ ಜಪ್ತಿ ನಿರವ್ ಮೋದಿ–ವಿಜಯ್ ಮಲ್ಯ ಸೇರಿ 21 ಜನರ ಆರ್ಥಿಕ ಅಪರಾಧಿಗಳ ವಿರುದ್ಧ ದೊಡ್ಡ ಮಟ್ಟದ ಕ್ರಮ
    ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ:
    ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
    ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
    ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
    ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
    “ಮಂಗಳೂರಲ್ಲಿ ಡ್ರೈ ಡೇ ಘೋಷಣೆ -ಎರಡು ದಿನ ಬಾರ್‌ಗಳಿಗೆ ಲಾಕ್ ..!” ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಆದೇಶ