📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಂಗಳೂರು: ಖಚಿತ ಮಾಹಿತಿಗೆ ಖಾಕಿ ಆಕ್ಷನ್! ಮುಕ್ಕದ ಕಟ್ಟಡದಲ್ಲಿ 8 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಬಂಧನ

    ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣೆ ಪೊಲೀಸರು ಖಚಿತ ಮಾಹಿತಿಯ ಆಧಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ 8 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆಹಚ್ಚಿದ್ದಾರೆ. ಜುಲೈ 9, 2026ರಂದು ಮುಕ್ಕ ಸಮೀಪದ ನಿರ್ಮಾಣ ಹಂತದ ಕಟ್ಟಡದ ಮೇಲೆ ದಾಳಿ ನಡೆಸಿದ ವೇಳೆ ಈ ಬೆಳವಣಿಗೆ ಬೆಳಕಿಗೆ ಬಂದಿದೆ.

    ಪೊಲೀಸರು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 54 ಮಂದಿ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿದಾಗ, ಅವರಲ್ಲಿ 8 ಮಂದಿ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿಗಳಾಗಿರುವುದು ದೃಢಪಟ್ಟಿದೆ. ಪ್ರಾಥಮಿಕ ವಿಚಾರಣೆಯಲ್ಲಿ, ಇವರು ಸುಮಾರು ಮೂರು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಗಡಿ ದಾಟಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತ ಪ್ರವೇಶಿಸಿದ್ದಾಗಿ ತಿಳಿದುಬಂದಿದೆ.

    Also Read  ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಹೈಪ್ ನಡುವೆ ಮಂಧಾನಾ ಮಾತು ವೈರಲ್…

    ತನಿಖೆ ವೇಳೆ ಮತ್ತೊಂದು ಮಹತ್ವದ ಸಂಗತಿ ಬಹಿರಂಗವಾಗಿದ್ದು, ಪಶ್ಚಿಮ ಬಂಗಾಳದ ವಿಳಾಸ ಹೊಂದಿದ್ದ ಆಧಾರ್ ಕಾರ್ಡ್‌ಗಳ ಮೇಲೆ ತಮ್ಮ ಭಾವಚಿತ್ರಗಳನ್ನು ಅಂಟಿಸಿ ಕಲರ್ ಜೆರಾಕ್ಸ್ ಪ್ರತಿಗಳನ್ನು ಸಿದ್ಧಪಡಿಸಿಕೊಂಡು, ಕಳೆದ ಎರಡು ತಿಂಗಳಿಂದ ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಬಂಧಿತರಿಂದ ರಾಷ್ಟ್ರೀಯ ಗುರುತಿನ ಚೀಟಿ (National ID Card), ಜನನ ಪ್ರಮಾಣಪತ್ರ ಹಾಗೂ ಕುಟುಂಬದ ದಾಖಲಾತಿಗಳನ್ನು ಪರಿಶೀಲಿಸಿದಾಗ, ಅವರು ಬಾಂಗ್ಲಾದೇಶದ ಪ್ರಜೆಗಳೇ ಎಂಬುದು ಖಚಿತವಾಗಿದೆ. ಭಾರತ ಪ್ರವೇಶಿಸಲು ಅಗತ್ಯವಿರುವ ಪಾಸ್‌ಪೋರ್ಟ್ ಹಾಗೂ ವೀಸಾ ಇಲ್ಲದೆ ಅಕ್ರಮವಾಗಿ ದೇಶದ ಗಡಿ ದಾಟಿ ಬಂದಿರುವುದನ್ನೂ ಅವರು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಬಂಧಿತ ವಿದೇಶಿ ಪ್ರಜೆಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಆರಂಭಿಸಲಾಗಿದ್ದು, ಮುಂದಿನ ಪ್ರಕ್ರಿಯೆಗಾಗಿ ಪ್ರಕರಣದ ಸಂಪೂರ್ಣ ವರದಿಯನ್ನು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಗೆ ಸಲ್ಲಿಸಲಾಗಿದೆ.

    Also Read  ಮೊಬೈಲ್ ನೋಡುತ್ತಿದ್ದ ಉಡುಪಿ ಡಿಸಿ ವಿರುದ್ಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿ

    ಈ ಯಶಸ್ವಿ ಕಾರ್ಯಾಚರಣೆಯನ್ನು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಪಿಎಸ್ಐ ರಘು ನಾಯಕ ಹಾಗೂ ಠಾಣೆಯ ಎಎಸ್‌ಐ ರಾಜೇಶ್ ಆಳ್ವ ಸೇರಿದಂತೆ ಪೊಲೀಸ್ ಸಿಬ್ಬಂದಿಗಳ ತಂಡ ನಡೆಸಿತು. ಖಚಿತ ಮಾಹಿತಿ ಆಧಾರದಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರ ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಅಕ್ರಮ ವಲಸಿಗರನ್ನು ಪತ್ತೆಹಚ್ಚುವಲ್ಲಿ ಯಶಸ್ಸು ದೊರೆತಿದೆ.

    ##SurathkalPolice #Mangaluru #BangladeshiNationals #KarnatakaPolice #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
    ಮೊಬೈಲ್‌ಗಾಗಿ ಅಣ್ಣ-ತಮ್ಮನ ಜಗಳ; ಚಾಕುವಿನಿಂದ ಇರಿದು ಅಣ್ಣನನ್ನೇ ಕೊಂದ ತಮ್ಮ!
    ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
    ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಕುಟುಂಬದ ನಾಲ್ವರ ನಿಗೂಢ ಸಾವು…
    ಮಿಸೆಸ್ ಕೇರಳ ಈಗ ‘ಡ್ರಗ್ ಕ್ವೀನ್’…!?ಕೋಟಿ ಮೌಲ್ಯದ ಡ್ರಗ್ಸ್ ಜೊತೆ ಮಾಜಿ ‘ಮಿಸೆಸ್ ಕೇರಳ’ ಅರೆಸ್ಟ್!”
    ಭಾರತದ ಟ್ರಾಫಿಕ್ ಕಿರಿಕಿರಿಗೆ ಇದುವರೆಗೂ ಯಾರೂ ಯೋಚಿಸದ ಮಾಸ್ಟರ್ ಪ್ಲಾನ್!ಉಬರ್ ಡ್ರೈವರ್ ಕೊಟ್ಟ ಐಡಿಯಾ ಕೇಳಿದ್ರೆ ನೀವೂ ಹೌದಲ್ವಾ ಅಂತೀರಾ….
    ಬೆಳ್ತಂಗಡಿಯ ಹೆಮ್ಮೆಯ ಪುತ್ರಿ ಉಷಾರಾಣಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕರಾವಳಿಗೆ ಗೌರವದ ಗರಿ!
    ಮತದಾರರೇ…ಕರ್ನಾಟಕ SIR ನಲ್ಲಿ 47 ಲಕ್ಷ ಹೆಸರುಗಳು ಡಿಲೀಟ್…..‌! 2002ರ ಪಟ್ಟಿ ವಿವರ ಇಲ್ಲದಿದ್ದರೆ ನೋಟಿಸ್? ಮುಂದೆ ಏನು ಮಾಡಬೇಕು?
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ಬೆಳಗಾವಿ ₹4500 ಕೋಟಿ ವಂಚನೆ ಪ್ರಕರಣ – CID ತನಿಖೆಯಿಂದ ಹೊರಬರುತ್ತಿರುವ ಕತ್ತಲೆಯ ಜಾಲ – ಯಾರು ನಿಜವಾದ ಮಾಸ್ಟರ್ ಮೈಂಡ್?
    ಜಾನ್ಸನ್ & ಜಾನ್ಸನ್‌ನಿಂದ ₹52 ಸಾವಿರ ಕೋಟಿ ಪರಿಹಾರ? ಟಾಲ್ಕಮ್ ಪೌಡರ್ ಪ್ರಕರಣಕ್ಕೆ ಐತಿಹಾಸಿಕ ಒಪ್ಪಂದದ ಪ್ರಸ್ತಾವ
    ಮುಂಬೈನಲ್ಲಿ ಮಳೆ ರುದ್ರನರ್ತನ: ಕುರ್ಲಾದಲ್ಲಿ ಭೂಕುಸಿತ, ಇಬ್ಬರು ಬಲಿ!
    ಜೂನ್ 30,ಪ್ಲಾಸ್ಟಿಕ್ ನೋಟುಗಳು ಬರುತ್ತಿವೆಯೇ? – ವೈರಲ್ ಸುದ್ದಿಯ ಹಿಂದಿನ ವಿಷಯ
    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
    ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
    ಅಮೆರಿಕದಲ್ಲಿ ಭಾರತದ ಧ್ವಜಕ್ಕೆ ಅವಮಾನ…ವೈರಲ್ ವಿಡಿಯೋಗೆ ಕೇಂದ್ರದ ಆಕ್ರೋಶ!
    ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
    ಬಂಟ್ವಾಳದಲ್ಲಿ ವ್ಯಕ್ತಿಗಳ ಆರೋಪ–ಪ್ರತ್ಯಾರೋಪಕ್ಕಿಂತ “ರಾಜಕೀಯದೊಳಗಿನ ರಾಜಕೀಯ”ಬಿಸಿ…!ಲಾಭ ಯಾರಿಗೆ?
    ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
    ಪಡ್ಡೆ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ ಗ್ರಹಸಚಿವರೆ?
    ಹೃದಯವಿದ್ರಾವಕ ಘಟನೆ: ರಾಜಕಾಲುವೆಯಲ್ಲಿ ತೇಲಿ ಬಂದ ನವಜಾತ ಹಸುಗೂಸು
    ‘ಹೊಸ Form 6’ಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿಲ್ಲ! CJI ಸ್ಪಷ್ಟನೆ
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಬ್ಲ್ಯಾಕ್‌ಮೇಲ್: 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ ನರ್ಸ್‌ ಬಂಧನ
    ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
    ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು
    ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
    ಕಾರ್ಕಳದ ವೈದ್ಯಕೀಯ ವಿದ್ಯಾರ್ಥಿನಿ ಭೀಕರ  ಅಪಘಾತಕ್ಕೆ ಬಲಿ
    ಜನಪ್ರತಿನಿಧಿಗಳಿಗೆ ಕೆಲಸ ,ಜನಸೇವೆ ಬೇಡ ,ಪ್ಲೆಕ್ಸ್ ಮಾತ್ರ ಫುಲ್ ಸೈಜ್ …ಕಾನೂನು ಇದೆ… ಪಾಲನೆ ಮಾತ್ರ ಇಲ್ಲ!
    ಅರೆ ವಾ..! ಕರ್ನಾಟಕದ ಜನರಿಗೆ ಫ್ಯಾನ್ಸಿ ನಂಬರ್‌ಗಳೇ ಫೇವರಿಟ್…RTOಗೆ ₹118 ಕೋಟಿ ಆದಾಯ!