📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಘರ್ ವಾಪ್ಸಿ ಯಾದ ಯೋಗೇಶ್ ಶೆಟ್ಟಿ ಜೆಪ್ಪು

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಮತ್ತು ಶಶಿರಾಜ್ ಶೆಟ್ಟಿ ಇವರಿಬ್ಬರೂ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಮಗದೊಮ್ಮೆ ಸೇರ್ಪಡೆಗೊಂಡಿದ್ದಾರೆ 

ಯೋಗೇಶ್ ಶೆಟ್ಟಿ ಜೆಪ್ಪು ಹಾಗೂ ಶಶಿ ರಾಜ್ ಶೆಟ್ಟಿ ಇಬ್ಬರು ಜೆಡಿಎಸ್ ನಲ್ಲಿ ಈ ಹಿಂದೆ ಕೆಲಸ ಮಾಡಿದವರೇ ಆಗಿದ್ದಾರೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಸಕ್ರಿಯರಾಗಿದ್ದವರು, ಕಾರಣಾಂತರಗಳಿಂದ ಪಕ್ಷದಿಂದ ಹೊರಬಂದು ರಾಜಕಿಯೇತರ  ಸಂಘಟನೆಗಳಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದರು.

ಯೋಗೀಶ್ ಶೆಟ್ಟಿ ಜೆಪ್ಪು ತುಳುನಾಡ ರಕ್ಷಣಾ ವೇದಿಕೆ ಎಂಬ ಸಂಘಟನೆಯನ್ನು ಅವಳಿ ಜಿಲ್ಲೆಯಾದ್ಯಂತ ಅಂದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಾತ್ಯಂತ ಸಂಘಟಿಸಿ ಸಮಾಜದ ವಿವಿಧ ಸ್ಥರದ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ಮಾಡುತ್ತಾ ಸಾರ್ವಜನಿಕವಾಗಿ ಚಾಲ್ತಿಯಲ್ಲಿದ್ದಂತಹ ವ್ಯಕ್ತಿಯನ್ನು ಜೆಡಿಎಸ್ ಪಕ್ಷದ ನಾಯಕರು, ಇವರ ಮನವೊಲಿಸಿ  ವಾಪಾಸ್ ಪಕ್ಷದ ಅಂಗಳಕ್ಕೆ ಕರೆದುಕೊಂಡು ಬಂದಿದ್ದಾರೆ.

ಮಾಜಿ ಜಿಲ್ಲಾಧ್ಯಕ್ಷ ಎಂ ಬಿ ಸದಾಶಿವ್ ಈ ಇಬ್ಬರು ನಾಯಕರನ್ನು ವಾಪಾಸ್ ಪಕ್ಷದ ಅಂಗಳಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಇವರನ್ನು ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯಲ್ಲಿ ಸ್ವತಹ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಘರ್ ವಾಪ್ಸಿಯನ್ನಾಗಿ ಮಾಡಿಕೊಂಡಿದ್ದಾರೆ.

ಇವರು ಪಕ್ಷಕ್ಕೇನೋ ವಾಪಸ್ ಹೋಗಿದ್ದಾರೆ. ಪಕ್ಷದಲ್ಲಿ ಈಗಿರುವ ನಾಯಕರುಗಳಲ್ಲಿ ಬಹುತೇಕರು ಚೈತನ್ಯ ರಹಿತರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾವುದೇ ಜನಪರ ಹೋರಾಟ, ಜನರ ಪರವಾಗಿ ಧ್ವನಿ ಎತ್ತುವುದು, ವಿವಿಧ ಜನೋಪಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇದು ಯಾವುದರಲ್ಲೂ ಕಾಣಿಸಿಕೊಳ್ಳದಂತವರು, ಕೇವಲ ಲೆಟರ್ ಹೆಡ್ ನಾಯಕರುಗಳಾಗಿ ಇರುವುದರಿಂದಾಗಿ ಜಿಲ್ಲೆಯಲ್ಲಿ ಪಕ್ಷಕ್ಕೆ ಆಕ್ಸಿಜನ್ನೇ ಇಲ್ಲದಂತಹ ಸ್ಥಿತಿ ಇದೆ. ಅವಳಿ ಜಿಲ್ಲೆಯಲ್ಲಿ ಮೂರನೇ ಪಕ್ಷದ ಅವಶ್ಯಕತೆ ಖಂಡಿತವಾಗಿಯೂ ಇದೆ ಎನ್ನುವುದು ಹಲವರ ಅಭಿಪ್ರಾಯ. ಆದರೆ ಇಲ್ಲಿನ ನಾಯಕರ  ನಿದ್ದಂಡಿತನ ಹಾಗೂ ರಿಸ್ಕ್ ತೆಗೆದುಕೊಳ್ಳುವಲ್ಲಿನ ಹಿಂಜರಿಕೆ ಇದೆಲ್ಲವುದರ ಪರಿಣಾಮ ಪಕ್ಷವು ಐಸಿಯು ನಲ್ಲಿದೆ. ಕಾರ್ಯಕರ್ತರಲ್ಲಿ ಹಿಂಜರಿಕೆ ಹಾಗೂ ಬ್ರಮನಿರಸನವಾದ ಕಾರಣ ಅನೇಕ ಕಾರ್ಯಕರ್ತರು ತಟಸ್ಥರಾಗಿದ್ದಾರೆ. ಇನ್ನು ಕೆಲವರು ಇತರ ಪಕ್ಷಗಳ ಬಾವುಟದಡಿಗೆ ಸಾಗಿ ಹೋಗಿದ್ದಾರೆ.

ಏನೇ ಇರಲಿ ಈಗ ಯೋಗೀಶ್ ಶೆಟ್ಟಿ ಜಪ್ಪುವಂತಹ ಚಟುವಟಿಕೆ ಯಲ್ಲಿರುವ ನಾಯಕರು ವಾಪಸ್ ಪಕ್ಷದ ಕಚೇರಿಗೆ ಬರುವಂತಾಗಿದ್ದಾರೆ. ಹಾಗಾಗಿ ಪಕ್ಷದ ಕಾರ್ಯಕರ್ತರಲ್ಲಿ ಏನೋ ಒಂದು ಆಶಾಭಾವನೆ ಮೂಡಿದೆ.

ಪಕ್ಷವು ಇಂತಹ ನಾಯಕರನ್ನು ಯೋಗ್ಯ ಕುರ್ಚಿಯಲ್ಲಿ ಕೂರಿಸುವ ಕೆಲಸ ಮಾಡಬೇಕು. ಗೌರವಯುತ ಸ್ಥಾನಮಾನ ನೀಡಿ ಅವರಿಂದ ಪಕ್ಷದ ಬೆಳವಣಿಗೆಯನ್ನು ನಿರೀಕ್ಷಿಸಬೇಕು. ಈ ಕೆಲಸ ರಾಜ್ಯ ಘಟಕವು ನಿರ್ವಹಿಸುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಆ ಕೆಲಸ ಮಾಡದಿದ್ದರೆ ಇಂತಹ ನಾಯಕರು ಪಕ್ಷಕ್ಕೆ ವಾಪಸ್ ಆಗಿಯೂ ಹೆಚ್ಚಿನ ಲಾಭ ಇರದು ಅನ್ನೋದನ್ನು, ಪಕ್ಷವು ಅರ್ಥ ಮಾಡಿಕೊಳ್ಳುತ್ತದೆ ಎನ್ನುವುದು ಜೆಡಿಎಸ್ ತಳ ಮಟ್ಟದ ಕಾರ್ಯಕರ್ತರ ನಂಬಿಕೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಮೂಡಬಿದ್ರೆ ಪೊಲೀಸ್ ಅಧಿಕಾರಿಯ ಮಾನ ಹರಾಜಿಗೆ ನಿಂತವರು ಯಾರು?
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
ಹಾವು ಮುಂಗುಸಿ ಅಂತಾಗಿದ್ದವರು ಒಂದಾದರು
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಫ್ರಿಡ್ಜ್ ರಿಪೇರಿಗೆ ಬಂದವ ಮನೆ ಲೂಟಿ ಪರಾರಿ…!ಬಿ ಅಲರ್ಟ್ ‼️
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
ಹವ್ಯಕ ಭಾಷಾ ಅಕಾಡೆಮಿ ಅಸ್ತಿತ್ವಕ್ಕೆ ಗ್ರೀನ್ ಸಿಗ್ನಲ್ 
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿಗೆ  ಪ್ರತಿದಾಳಿ ಯುಎಇ, ಬಹ್ರೇನ್, ಸೌದಿಯಲ್ಲಿ ಅಮೆರಿಕದ ನೆಲೆಗಳಿಗೆ ನಡುಕ.
ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
ಕೊನೆಗೂ ಸೋತ ಖಾಕಿ….!!!
ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …