📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ

ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ವಾಕ್ಯ ನಮ್ಮ ದೇಶದ ಪವರ್ಫುಲ್ ಘೋಷಣೆಯಾಗಿದೆ. ಹೀಗಿರುವಾಗ ಸೈನಿಕ ಹಾಗೂ ರೈತ ಇವರಿಬ್ಬರಿಗೂ ಇಡೀ ದೇಶವು ಗೌರವ ಕೊಡಲೇಬೇಕು. ಆದರೆ ಇಲ್ಲಿ ಒಂದು ಕಂಪನಿಯು ಅತ್ಯಂತ ಅಗೌರವಯುತವಾಗಿ ಮತ್ತು ದಬ್ಬಾಳಿಕೆ ನಡೆಯನ್ನು ತೋರಿಸಿ ತನ್ನ ಹೀನಾತಿ ಹೀನ ನಡವಳಿಕೆಯನ್ನು ತೋರ್ಪಡಿಸಿದೆ. ಅಂತಹ ಕಂಪನಿಯ ವಿರುದ್ಧ ರಾಜ್ಯ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಆ ಸಂಸ್ಥೆಯ ಜೊತೆಗಿನ ಒಪ್ಪಂದವನ್ನು ಮುರಿದು ಹಾಕುವುದರತ್ತ ಗಮನ ಹರಿಸ ಬೇಕಿದ್ದ ಜಿಲ್ಲಾ ಆಡಳಿತ ಇನ್ನೂ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಸಮೀಪದ ನಿಡ್ಡೋಡಿ ಪರಿಸರದ ವ್ಯಾಪ್ತಿಯಲ್ಲಿ ಸ್ಟೇರ್ ಲೈಟ್ ಕಂಪನಿಯು ಪೈಪ್ ಲೈನ್ ಜೋಡಣೆಯನ್ನು ಮಾಡುತ್ತಿದೆ ಈ ಒಂದು ಪೈಪ್ಲೈನ್ ಹಾಕುವ ಕಾರ್ಯವು ಏಕಾಏಕಿ ನಡೆಯಬಾರದು ತಾನೇ? ಮೊದಲನೆಯದಾಗಿ ಪೈಪ್ಲೈನ್ ಹಾದು ಹೋಗುವ ಜಾಗದಲ್ಲಿನ ಮಾಲೀಕರಲ್ಲಿ ಮಾತುಕತೆಯನ್ನು ನಡೆಸಬೇಕು ಅವರನ್ನು ಕನ್ವಿನ್ಸ್ ಮಾಡಿ ಅವರ ಒಪ್ಪಿಗೆಯನ್ನು ಪಡೆದು ಆನಂತರ ಪೈಪ್ ಲೈನ್ ಹಾಕುವ ಕಾಮಗಾರಿಯನ್ನು ಪ್ರಾರಂಭಿಸಬೇಕು. ಅದು ನಿಯಮವು ಹೌದು. ಆದರೆ ಇಲ್ಲಿ ಆ ನಿಯಮ ಪಾಲನೆ ಯಾಗಿಲ್ಲ ಸ್ಥಳೀಯ ರೈತ ಕಿಸಾನ್ ಸಂಘದ ಕಾರ್ಯಕರ್ತ ಅಲ್ಫೋನ್ ಡಿಸೋಜ ಎಂಬ ವ್ಯಕ್ತಿಯ ಜಾಗದಲ್ಲಿ ಬೆಳೆದು ನಿಂತಿರುವ ಭತ್ತ ಇರುವಾಗಲೂ ಮೊನ್ನೆ ಏಕಾಏಕಿ ಪೊಲೀಸರನ್ನು ಕರೆದುಕೊಂಡು ಬಂದು ಯಾವುದೇ ನೋಟಿಸು ಕೊಡದೆ ಗದ್ದೆಗೆ ನುಗ್ಗಿ ಮರಗಳನ್ನು ಕಡಿದು ಬತ್ತದ ಗದ್ದೆಯಲ್ಲಿನ ನನ್ನ ನಾಶ ಮಾಡಿ ಹಾಕುವ ಮೂಲಕ ಬತ್ತದ ಬೆಳೆಗೆ ಹಾನಿಯನ್ನು ಉಂಟು ಮಾಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ. ಪ್ರಕರಣ ದಾಖಲಾಗುತ್ತದೆ..

ವಿಚಾರ ಅದಲ್ಲ, ಒಂದು ಕಂಪನಿಯು ತನ್ನ ಕೆಲಸವನ್ನು ಸ್ಥಳೀಯ ಜನರ ಸಹಕಾರ ಅವರ ವಿಶ್ವಾಸವನ್ನು ಗಳಿಸಿ ಮಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ ಅದು ಬಿಟ್ಟು ದಬ್ಬಾಳಿಕೆಯ ಮೂಲಕ ಹಣದ ಪವರ್ ತೋರಿಸಲು ಹೋದರೆ ಅದರಿಂದ ಸಮಾಜದಲ್ಲಿ  ಗೊಂದಲಕ್ಕೆ ಕಾರಣವಾಗುತ್ತದೆ. ಗೊಂದಲವನ್ನು ಉಂಟುಮಾಡಿದ ಶ್ರೇಯಸ್ಸು ಆ ಕಂಪನಿಗೆ ದಕ್ಕುತ್ತದೆ. ಅದು ಶ್ರೇಯಸ್ ಅಲ್ಲ ಕಪ್ಪು ಚುಕ್ಕೆ ಅನ್ನೋದು ನೆನಪಿಡಬೇಕು.

ಜಿಲ್ಲಾಡಳಿತವು ಈ ವಿಚಾರವನ್ನು ನಿರ್ಲಕ್ಷ್ಯ ಮಾಡದೆ ಕೇವಲ ಒಬ್ಬ ರೈತನಿಗೆ ತೊಂದರೆಯಾಗಿದೆ ಎಂಬ ಕಾರಣಕ್ಕೆ ಗಪ್ ಚುಪ್ ಆಗಿ ಕೂರದೆ ಟೇರ್ಲೈಟ್ ಕಂಪನಿಯ ದಬ್ಬಾಳಿಕೆಗೆ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟನ್ನು ನೀಡದಿದ್ದರೆ ಜಿಲ್ಲಾಡಳಿತ ರೈತರ ಪರವಾಗಿ ಇಲ್ಲ ಎಂಬ ಮೆಸೇಜ್ ಹೋಗಲು ಕಾರಣವಾಗುತ್ತದೆ. ಇಲ್ಲಿ ಕಂಪನಿಯು ತನ್ನ ಇತಿಮಿತಿಯನ್ನು ಮೀರಿ ವರ್ತನೆ ನಡೆಸಿದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಭೂಮಿಯ ಮಾಲೀಕನ ಬಳಿ ಮಾತುಕತೆ ನಡೆಸದೆ ಅವನ ಬೆಳೆಯನ್ನು ನಾಶ ಮಾಡಿದ್ದು ಗೋರಾತಿ ಘೋರ ಅಪರಾಧವೇ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತವೂ ತಕ್ಷಣ ರೈತನ ಪರವಾಗಿ ನಿಲ್ಲುವ ಸಾಹಸ ಮಾಡಬೇಕಿತ್ತು , ಆ ಕೆಲಸವನ್ನು ಜಿಲ್ಲಾಡಳಿತ ಮಾಡಿಲ್ಲ ಆದರೆ ಸ್ಥಳೀಯ ಪೊಲೀಸರು ಮಾತ್ರ ಕಂಪನಿಗೆ ನಿಮ್ಮ ಕಾಮಗಾರಿಯನ್ನು ನಿಲ್ಲಿಸಿ ಮಾತುಕತೆ ಮಾಡಿ ವ್ಯವಹಾರ ಬಗೆಹರಿದ ನಂತರ ಕೆಲಸ ಮುಂದುವರಿಸಿ ಎಂಬ ಮೆಸೇಜ್ ನೀಡುತ್ತಾರೆ. ಆದರೆ ಕಂಪನಿಯು ಆ ಮೆಸೇಜಿಗೆ ಕ್ಯಾರೆ ಎನ್ನದೆ ತನ್ನ ಕೆಲಸ ಮಾಡುತ್ತದೆ ಮತ್ತು ದಬ್ಬಾಳಿಕೆ ಪ್ರದರ್ಶನ ಮಾಡುತ್ತದೆ. ಕಂಪನಿಯು ಸ್ಥಳೀಯ ಮಸಲ್ ಪವರ್ ಇರುವಂತಹ ವ್ಯಕ್ತಿಗಳ ಮೂಲಕವೇ ಈ ಕೆಲಸ ಮಾಡಿಸುತ್ತದೆ. ಇದನ್ನು ಜಿಲ್ಲಾಡಳಿತ ಅರ್ಥಮಾಡಿಕೊಳ್ಳಬೇಕು ಅಂತಹ ವ್ಯಕ್ತಿಗಳ ಹೆಡೆಮುರಿ ಕಟ್ಟುವ ಕೆಲಸ ಜಿಲ್ಲಾಡಳಿತದಿಂದ ಆಗದಿದ್ದರೆ ಈ ಜಿಲ್ಲಾಡಳಿತಕ್ಕೆ ಶ್ಯೆಮ್ ಸರ್ಟಿಫಿಕೇಟ್ ಸಿಗುವುದಂತೂ ನಿಶ್ಚಿತ. ರೈತ ಕೂಡ ಈ ಕಾಮಗಾರಿಗೆ ಜಾಗ ಕೊಡುವುದಿಲ್ಲ ಅಂದಿಲ್ಲ ಯೋಗ್ಯ ದರವನ್ನು ನೀಡಿದರೆ ಜಾಗ ಕೊಡುತ್ತೇನೆ ಅಂತಾನೆ ಹೇಳಿದ್ದಾನೆ. ಅಷ್ಟೇ ಅಲ್ಲ, ಇನ್ನು ಒಂದುವರೆ ತಿಂಗಳಿನಲ್ಲಿ ಭತ್ತದ ಕಟಾವು ಬರುತ್ತದೆ ಅದು ಮುಗಿದ ನಂತರ ಕಾಮಗಾರಿ ಮಾಡಿ ಅಂತನು ಮನವಿ ಮಾಡಿಕೊಂಡಿರುತ್ತಾನೆ . ಯಾವುದನ್ನು ಕೇಳದ ಕಂಪನಿಯು ತನ್ನ ತಾಕತ್ತನ್ನು ತೋರಿಸಲು ಹೋಗಿದ್ದು ಈ ಬಡ ರೈತನ ಮೇಲೆ. ಈತನ ಮೇಲೆ ತಾಕತ್ತು ತೋರಿಸಲು ಹೋಗಿದ್ದಕ್ಕೆ ಏನು ಮಾಡಬೇಕು ಅದನ್ನು ಜಿಲ್ಲಾಡಳಿತ ಮಾಡುತ್ತದೆ ಎಂಬ ನಿರೀಕ್ಷೆ ಇತ್ತು ಆ ನಿರೀಕ್ಷೆಗೆ ತಕ್ಕಂತೆ ಜಿಲ್ಲಾಡಳಿತ ನಡೆದುಕೊಂಡಿಲ್ಲ ಅನ್ನುವುದಂತೂ ಸುಸ್ಪಷ್ಟ. ಸ್ಥಳೀಯ ಶಾಸಕರು ಸಹ ಆ ಬಗ್ಗೆ ಧ್ವನಿ ಎತ್ತಬೇಕಿತ್ತು, ಧ್ವನಿಯನ್ನು ಎತ್ತಲಿಲ್ಲ ಪ್ರತಿಕ್ರಿಯೆಯನ್ನು ನೀಡಲಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿ ಬರುತ್ತಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್
ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
book ಮಾಡಿದ ನಿಮ್ಮ ಹೊಸ ಕಾರು-ಬೈಕ್ ಇನ್ನೂ ಬಂದಿಲ್ವಾ?ಪಶ್ಚಿಮ ಏಷ್ಯಾ ಯುದ್ಧದಿಂದ ಸರಬರಾಜು ವಿಳಂಬ…!
ಡ್ರೋನ್ ದಾಳಿಯ ನಂತರ ಬಹ್ರೇನ್‌ನಲ್ಲಿ ಕನಿಷ್ಠ 32 ಜನರಿಗೆ ಗಾಯ
ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
🚨 ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ – ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಅಪಘಾತ
ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ
ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!
ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ದಯಾ ಮರಣಕ್ಕೆ ಅನುಮತಿ
ಉದ್ಯಮಿ, ಕಾಲೇಜ್ topper,  ಕೋಟ್ಯದೀಶರೇ…ಕಠಿಣ ಜೈನ ಸನ್ಯಾಸದತ್ತ…!
ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
🚨 “ಮಂಗಳೂರು ಜಿಲ್ಲಾಕಾರಾಗೃಹದಲ್ಲಿ ಗಲಾಟೆ: ಜೈಲು ಅಧೀಕ್ಷಕರ ಮೇಲೆಯೇ ಕೈದಿಗಳ ಹಲ್ಲೆಯತ್ನ!”
🔴 ಯುದ್ಧದ ಹೊತ್ತಿನಲ್ಲಿ ಮಾನವೀಯ ರಾಜತಾಂತ್ರಿಕತೆ: ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವು:
ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ