📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ಧುರಂಧರ್” ನಟ ರಣವೀರ್ ಸಿಂಗ್‌ ವಿರುದ್ಧ ಇಡೀ ಬಾಲಿವುಡ್ ಒಕ್ಕೂಟವೇ ತಿರುಗಿಬಿದ್ದಿದ್ದೇಕೆ? shocking ₹45 ಕೋಟಿ ವಿವಾದದ ಅಸಲಿ ಕಥೆ ಇಲ್ಲಿದೆ!

    ಬಾಲಿವುಡ್ ಅಂಗಳದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಸೂಪರ್‌ಸ್ಟಾರ್ ರಣವೀರ್ ಸಿಂಗ್ ಮತ್ತು ‘ಡಾನ್ 3’ (Don 3) ಚಿತ್ರತಂಡದ ನಡುವಿನ ವಿವಾದ ಏನಿದು..,

    ಬಾಲಿವುಡ್‌ನಲ್ಲಿ ರಣವೀರ್ ಸಿಂಗ್‌ಗೆ ಬಿಗ್ ಶಾಕ್: ‘ಡಾನ್ 3’ ಚಿತ್ರದಿಂದ ಔಟ್ ಬೆನ್ನಲ್ಲೇ ನಟನಿಗೆ ಬಿತ್ತು ಅಸಹಕಾರ ಬ್ಯಾನ್!

    ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಫ್ರಾಂಚೈಸಿ ‘ಡಾನ್ 3’ (Don 3) ಚಿತ್ರೀಕರಣ ಆರಂಭಕ್ಕೂ ಮುನ್ನವೇ ಭಾರಿ ವಿವಾದದ ಸುಳಿಗೆ ಸಿಲುಕಿದೆ. ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದ ಸೂಪರ್‌ಸ್ಟಾರ್ ರಣವೀರ್ ಸಿಂಗ್ (Ranveer Singh) ಅವರು ಕೊನೆಯ ಕ್ಷಣದಲ್ಲಿ ಸಿನಿಮಾದಿಂದ ದಿಢೀರ್ ಹೊರನಡೆದಿದ್ದು, ಈಗ ಅವರ ವಿರುದ್ಧ ಇಡೀ ಚಿತ್ರರಂಗವೇ ತಿರುಗಿಬೀಳುವಂತೆ ಮಾಡಿದೆ. ಮುಂಬೈನ ಪ್ರಭಾವಿ ಸಿನಿಕಾರ್ಮಿಕರ ಒಕ್ಕೂಟವಾದ FWICE (Federation of Western India Cine Employees) ರಣವೀರ್ ಸಿಂಗ್ ವಿರುದ್ಧ ‘ಅಸಹಕಾರ ನಿರ್ದೇಶನ’ (Non-Cooperation Directive) ಹೊರಡಿಸುವ ಮೂಲಕ ಬಾಲಿವುಡ್‌ನಲ್ಲಿ ಅವರಿಗೆ ಅಘೋಷಿತ ಬ್ಯಾನ್ ಬಿಸಿ ಮುಟ್ಟಿಸಿದೆ!

    ₹45 ಕೋಟಿ ನಷ್ಟದ ಕ್ಲೈಮ್ ಮತ್ತು ಇಲಾಖೆಯ ಎಂಟ್ರಿ

    ಸಿನಿಮಾ ಶೂಟಿಂಗ್‌ಗಾಗಿ ಕಳೆದ ಮೂರು ವರ್ಷಗಳಿಂದ ಪ್ರೀ-ಪ್ರೊಡಕ್ಷನ್ (Pre-production) ಕೆಲಸಗಳು ನಡೆಯುತ್ತಿದ್ದವು. ರಣವೀರ್ ಅವರ ದಿಢೀರ್ ಎಕ್ಸಿಟ್‌ನಿಂದಾಗಿ ತಮಗೆ ಅಂದಾಜು ₹45 ಕೋಟಿ ನಷ್ಟವಾಗಿದೆ ಎಂದು ನಿರ್ಮಾಪಕ ಫರ್ಹಾನ್ ಅಖ್ತರ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ನಿರ್ದೇಶಕರ ಸಂಘಕ್ಕೆ (IFTDA) ದೂರು ನೀಡಿದ್ದರು, ಬಳಿಕ ಈ ಮ್ಯಾಟರ್ 4 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಹೊಂದಿರುವ FWICE ಒಕ್ಕೂಟದ ಕೈ ಸೇರಿತು.

    Also Read  ವೈರಲ್ ‘Reservation Hatao Movement’ ಹಿಂದೆ ಏನಿದೆ? 7 ಗಂಟೆಗಳಲ್ಲಿ 90 ಸಾವಿರದಿಂದ 4 (40ಲಕ್ಷ) ಮಿಲಿಯನ್ ಫಾಲೋವರ್ಸ್‌! ಮೀಸಲಾತಿ ವಿರುದ್ಧದ ಅಭಿಯಾನಕ್ಕೆ ದೇಶಾದ್ಯಂತ ಭಾರೀ ಬೆಂಬಲ..

    ವಿವಾದದ ಕಿಡಿ ಹೊತ್ತಿಕೊಂಡಿದ್ದು ಹೇಗೆ?

    ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ನಟಿಸಿ ಸೈ ಎನಿಸಿಕೊಂಡಿದ್ದ ಐಕಾನಿಕ್ ‘ಡಾನ್’ ಪಾತ್ರಕ್ಕೆ, 2023ರಲ್ಲಿ ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ನಿರ್ಮಾಪಕ ರಿತೇಶ್ ಸಿಧ್ವಾನಿ (ಎಕ್ಸೆಲ್ ಎಂಟರ್‌ಟೈನ್‌ಮೆಂಟ್) ಹೊಸ ಡಾನ್ ಆಗಿ ರಣವೀರ್ ಸಿಂಗ್ ಅವರನ್ನು ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಚಿತ್ರದ ಶೂಟಿಂಗ್ ಆರಂಭವಾಗಲು ಕೇವಲ 3 ವಾರಗಳು ಬಾಕಿ ಇರುವಾಗ, ರಣವೀರ್ ಸಿಂಗ್ ಚಿತ್ರಕಥೆಯಲ್ಲಿ ಬದಲಾವಣೆ ಮಾಡುವಂತೆ ಪಟ್ಟು ಹಿಡಿದರು ಎನ್ನಲಾಗಿದೆ. ಇದಕ್ಕೆ ಮೇಕರ್ಸ್ ಒಪ್ಪದಿದ್ದಾಗ, ರಣವೀರ್ ದಿಢೀರನೆ ಸಿನಿಮಾದಿಂದ ಹೊರನಡೆದಿದ್ದಾರೆ.

    ಈಗ ‘ಡಾನ್ 3’ ಕಥೆ ಏನಾಗುತ್ತೆ?

    ಸದ್ಯಕ್ಕೆ ರಣವೀರ್ ಸಿಂಗ್ ಹೊರನಡೆದಿರುವುದರಿಂದ ‘ಡಾನ್ 3’ ಚಿತ್ರದ ಭವಿಷ್ಯ ಅನಿಶ್ಚಿತತೆಯಲ್ಲಿದೆ. ರಣವೀರ್ ಜಾಗಕ್ಕೆ ಮತ್ತೊಬ್ಬ ಸ್ಟಾರ್ ನಟ ಹೃತಿಕ್ ರೋಷನ್ ಬstatusರಬಹುದು ಎಂಬ ವದಂತಿ ಇತ್ತಾದರೂ, ಹೃತಿಕ್ ಅದನ್ನು ನಿರಾಕರಿಸಿದ್ದಾರೆ. ಇತ್ತ ಚಿತ್ರದ ನಾಯಕಿಯಾಗಿದ್ದ ಕಿಯಾರಾ ಅಡ್ವಾಣಿ ಕೂಡ ಹೊರನಡೆದಿದ್ದು, ಕೃತಿ ಸನೂನ್ ಹೆಸರು ಕೇಳಿಬರುತ್ತಿದೆ. ಒಟ್ಟಿನಲ್ಲಿ ರಣವೀರ್ ಸಿಂಗ್ ಅವರ ಈ ಒಂದು ನಿರ್ಧಾರ ಬಾಲಿವುಡ್‌ನಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದೆ.

    Also Read  ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಬರೆ ಹಾಕಿದ ರಾಜ್ಯ ಸರ್ಕಾರ!

    FWICE ಬ್ಯಾನ್‌ನ ಅಸಲಿ ಕಥೆಯೇನು?

    FWICE ಸಂಘಟನೆಯು ರಣವೀರ್ ಸಿಂಗ್‌ಗೆ ತಮ್ಮ ವಾದ ಮಂಡಿಸಲು ಮೂರು ಬಾರಿ ನೋಟಿಸ್ ನೀಡಿತ್ತು. ಆದರೆ ರಣವೀರ್ ಸಿಂಗ್, “ಇದು ಕರಾರು ಒಪ್ಪಂದಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಇದಕ್ಕೆ ಉತ್ತರಿಸಲು FWICE ಸರಿಯಾದ ವೇದಿಕೆಯಲ್ಲ“ ಎಂದು ಇಮೇಲ್ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದರು.

    ಇದರಿಂದ ಆಕ್ರೋಶಗೊಂಡ FWICE ಅಧ್ಯಕ್ಷ ಬಿ.ಎನ್. ತಿವಾರಿ ಮತ್ತು ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಸುದ್ದಿಗೋಷ್ಠಿ ನಡೆಸಿ, “ಯಾವೊಬ್ಬ ಸೂಪರ್‌ಸ್ಟಾರ್ ಕೂಡ ಚಿತ್ರರಂಗದ ನಿಯಮಗಳಿಗಿಂತ ದೊಡ್ಡವನಲ್ಲ. ಇನ್ಮುಂದೆ ನಮ್ಮ ಒಕ್ಕೂಟದ ಯಾವುದೇ ಕ್ಯಾಮೆರಾಮನ್, ಲೈಟ್‌ಮ್ಯಾನ್, ಸ್ಪಾಟ್ ಬಾಯ್ ಅಥವಾ ತಂತ್ರಜ್ಞರು ರಣವೀರ್ ಸಿಂಗ್ ಸಿನಿಮಾಗಳಿಗೆ ಕೆಲಸ ಮಾಡುವುದಿಲ್ಲ”ಎಂದು ಘೋಷಿಸಿದ್ದಾರೆ.

    ಮೌನ ಮುರಿದ ರಣವೀರ್ ಸಿಂಗ್!

    ಈ ವಿವಾದ ಇಡೀ ದೇಶಾದ್ಯಂತ ದೊಡ್ಡ ಸುದ್ದಿಯಾಗುತ್ತಿದ್ದಂತೆ ನಟ ರಣವೀರ್ ಸಿಂಗ್ ಅವರ ವಕ್ತಾರರು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

    “ರಣವೀರ್ ಸಿಂಗ್ ಅವರಿಗೆ ಚಿತ್ರರಂಗ ಹಾಗೂ ‘ಡಾನ್’ ಫ್ರಾಂಚೈಸಿ ಮೇಲೆ ಅಪಾರ ಗೌರವವಿದೆ. ವೃತ್ತಿಪರ ಚರ್ಚೆಗಳನ್ನು ಗೌರವ ಮತ್ತು ಪ್ರಬುದ್ಧತೆಯಿಂದ ಬಗೆಹರಿಸಿಕೊಳ್ಳಬೇಕು ಎಂದು ಅವರು ನಂಬಿರುವುದರಿಂದಲೇ ಈವರೆಗೆ ಮೌನವಾಗಿದ್ದಾರೆ. ಸೋಷಿಯಲ್ ಮೀಡಿಯಾದ ಊಹಾಪೋಹಗಳಿಗೆ ಉತ್ತರಿಸುವ ಅಗತ್ಯ ಅವರಿಗೆ ಅನಿಸಿಲ್ಲ. ಅವರು ತಮ್ಮ ಮುಂದಿನ ಸಿನಿಮಾಗಳತ್ತ ಗಮನ ಹರಿಸಿದ್ದಾರೆ” ಎಂದು ತಿಳಿಸಿದ್ದಾರೆ.

    ##RanveerSingh #Don3Controversy #FarhanAkhtar #FWICEBan #BollywoodNews #RanveerSinghBanned #Don3Movie #KannadaCinemaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸೂರತ್‌ನಲ್ಲಿ ಮಳೆಯ ರೌದ್ರನರ್ತನ: 200ಕ್ಕೂ ಹೆಚ್ಚು ಅಂಗಡಿಗಳಿಗೆ ನೀರು ನುಗ್ಗಿ ₹200 ಕೋಟಿ ನಷ್ಟ – ಕಣ್ಣೀರಿನಲ್ಲಿ ಮುಳುಗಿದ ವ್ಯಾಪಾರಿಗಳು
    ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
    ದೆಹಲಿ ಹೋಟೆಲ್ ಭೀಕರ ಅಗ್ನಿ ದುರಂತ!ಹೊತ್ತಿ ಉರಿದ ಹೋಟೆಲ್‌ನಲ್ಲಿ 21 ಮಂದಿ ಸಜೀವ ದಹನ..
    ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
    Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’
    ಕ್ಲೌಡ್ ಮಾರುಕಟ್ಟೆಗೆ ಮಾರ್ಕ್ ಜುಕರ್‌ಬರ್ಗ್ ಎಂಟ್ರಿ!?ಇಡೀ ಟೆಕ್ ಪ್ರಪಂಚವೇ ಬೆಚ್ಚಿಬೀಳುವಂತಿದೆ ಜುಕರ್‌ಬರ್ಗ್ ಮುಂದಿನ ನಡೆ!
    ಭೀಕರ ಅಪಘಾತ ಮಹಿಳೆ ಬಲಿ
    ಇಂಧನ ಬೆಲೆ ಏರಿಕೆ ಹೊಡೆತ Air India ಹೊಸ ತೀರ್ಮಾನ ಶಾಕಿಂಗ್ …!
    ಜಿಲ್ಲಾ ಸರ್ಜನ್ ಡಾ. ಅಶೋಕ್ರನ್ನು ತಕ್ಷಣವೇ ಅಮಾನತು ಮಾಡಿ- ದ.ಸಂ.ಸ. ಆಗ್ರಹ
    ಸುರ್ಜೆವಾಲ ಸಿಎಂ ಡಿಕೆಶಿ ಗುಪ್ತ ಮಾತುಕತೆ
     ಡಿಗ್ರಿಗೂ ಮುನ್ನ ಹ್ಯಾಕರ್ ಗೆ IIT ಉದ್ಯೋಗ! ಪ್ರತಿಭೆ ಇದ್ದರೆ ಅವಕಾಶವೇ ನಿಮ್ಮ ಮನೆ ಬಾಗಿಲು ತಟ್ಟುತ್ತದೆ!” ಅನ್ನೋದಕ್ಕೆ ಸ್ಫೂರ್ತಿ ಈ ನಿಸರ್ಗ ಅಧಿಕಾರಿ..
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    ಬೆಳಗಾವಿ ಮಾಜಿ ಯೋಧನ ಸಾವಿನ ಹಿಂದೆ ಬೆಚ್ಚಿಬೀಳಿಸುವ ಸತ್ಯ ₹2 ಕೋಟಿ ವಿಮೆ..!? ಸಿನೆಮಾವನ್ನೂ ಮೀರಿಸಿದ ಕ್ರೈಂ ಸ್ಟೋರಿ!
    ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
    ಬ್ರಹ್ಮಾವರ ಅಪಾರ್ಟ್‌ಮೆಂಟ್ ರೂಮಿನಲ್ಲಿ ಯುವತಿಯ ನಿಗೂಢ ಸಾವು
    ಗಂಡನನ್ನು ಕೊಂದ ಪತಿವ್ರತೆ… ಮೂರು ವರ್ಷದ ಮಗು ಅನಾಥ
    ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ FIR ..!ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ರಾಜಕೀಯ ಕಾವು ಏರಿಕೆ!
    ಮಳೆ ಬರುತ್ತದೆ ಎಂದಾಗ ರಜೆ ಇಲ್ಲ… ರಜೆ ಕೊಟ್ಟ ದಿನ ಮಳೆಯೇ ಇಲ್ಲ!ಹವಾಮಾನ ಮುನ್ಸೂಚನೆನಾ? ಖಚಿತ ಭವಿಷ್ಯವಾಣಿಯಾ? ಮಳೆ–ರಜೆ ಗೊಂದಲಕ್ಕೆ ಕಾರಣವೇನು?
    ಕಾಕ್ರೋಜ್ ಎಫೆಕ್ಟ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಮುಖ  ಬದಲಾವಣೆ.
    ಹೋಟೆಲ್ ಉದ್ಯಮ ಉಳಿಸಲು ಜಿಎಸ್‌ಟಿ ಕಡಿತ ಅಗತ್ಯ-ಕರ್ನಾಟಕ ಹೋಟೆಲ್ ಸಂಘದ ಆಗ್ರಹ
    ವಾಯುಪಡೆಯ ಇತಿಹಾಸದಲ್ಲಿ ಹೊಸ ಅಧ್ಯಾಯ: ಮೊದಲ ಮಹಿಳಾ ಏರ್ ವೈಸ್ ಮಾರ್ಷಲ್ ಆದ ಶಕ್ತಿ ಶರ್ಮಾ
    ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಭಾರತದ 7 ಶಾಲೆಗಳು …!ವಿಶ್ವದ ಗಮನ ಸೆಳೆದ ಸಾಧನೆ ಅಂಥದ್ದೇನಿದೆ!?
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ಡಿಕೆಶಿ ಸಿಡಿದೆದ್ದೇಕೆ?
    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
    ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
    “ವಕೀಲರೇ ಎಚ್ಚರ! ಕೋರ್ಟ್‌ನಲ್ಲಿ ನಕಲಿ AI ರೆಫರೆನ್ಸ್ ನೀಡಿದರೆ ಕಠಿಣ ಶಿಸ್ತು ಕ್ರಮ: BCIಗೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ”
    ಮಂಗಳೂರಿಗೆ ಮತ್ತೊಂದು ದೊಡ್ಡ ಯೋಜನೆ: 17.5 ಲಕ್ಷ ಮೆಟ್ರಿಕ್ ಟನ್ ತೈಲ ಸಂಗ್ರಹಾಗಾರಕ್ಕೆ ಅನುಮೋದನೆ – ಕರಾವಳಿಗೆ ಅಭಿವೃದ್ಧಿಯ ಹೊಸ ಅಧ್ಯಾಯ
    ಏಳು ವರ್ಷದ ನಂತರ ಮಂಗಳೂರಿಗೆ “ಅಮ್ಮ” ಬರುತ್ತಿದ್ದಾರೆ…. 50ಸಾವಿರ ಜನರ ನಿರೀಕ್ಷೆ
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!