📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!

ಮಂಗಳೂರು | ದಕ್ಷಿಣ ಕನ್ನಡ

ಪ್ರೆಸ್ ಮೀಟ್‌ನಲ್ಲಿ ಸಹೋದರಿಯ ಸ್ಪೋಟಕ ಹೇಳಿಕೆ”ಮೂಡಬಿದಿರೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂದೇಶ್ ಬಿ.ಜಿ. ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳದ ಗಂಭೀರ ಆರೋಪ ಇದೀಗ ಹೊಸ ತಿರುವು ಪಡೆದಿದ್ದು, ದೂರು ನೀಡಿದ ಮಹಿಳೆಯ ಕುಟುಂಬದಲ್ಲೇ ಭಿನ್ನಾಭಿಪ್ರಾಯ ಬಹಿರಂಗವಾಗಿದೆ.

ಈ ವಿವಾದದ ಮಧ್ಯೆ, ಆರೋಪ ಮಾಡಿದ ಮಹಿಳೆಯ ಸಹೋದರಿ ಪ್ರಫುಲ್ಲಾ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ, ಪ್ರಕರಣಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ತಂಗಿ ಮಾಡಿರುವ ಆರೋಪ ಸಂಪೂರ್ಣ ಸುಳ್ಳು. ಅವಳು ಯಾವುದೇ ಸ್ಥಿರ ಉದ್ಯೋಗವಿಲ್ಲದೆ ವೈಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆ. ಆದರೂ, ಸುಮಾರು 75 ಲಕ್ಷ ರೂ. ಮೌಲ್ಯದ ಮನೆ ಕಟ್ಟಿರುವುದು ಅನುಮಾನಾಸ್ಪದ,” ಎಂದು ಹೇಳಿದ್ದಾರೆ.

ಇದಲ್ಲದೆ, “ಮೂಡಬಿದಿರೆ ಇನ್‌ಸ್ಪೆಕ್ಟರ್ ಒಬ್ಬ ಒಳ್ಳೆಯ ಅಧಿಕಾರಿ. ನಮ್ಮ ಕುಟುಂಬದ ಒಳಗಿನ ಸಮಸ್ಯೆಗೆ ನ್ಯಾಯ ಒದಗಿಸಲು ಅವರು ಮುಂದಾಗಿದ್ದರು. ಅದನ್ನು ತಪ್ಪಾಗಿ ಅರ್ಥೈಸಿಕೊಂಡು, ವೈಯಕ್ತಿಕ ದ್ವೇಷದಿಂದ ನನ್ನ ತಂಗಿ ಈ ರೀತಿಯ ಷಡ್ಯಂತ್ರ ರೂಪಿಸಿದ್ದಾಳೆ,” ಎಂದು ಪ್ರಫುಲ್ಲಾ ಗಂಭೀರ ಆರೋಪ ಮಾಡಿದ್ದಾರೆ.

ಈ ಹೇಳಿಕೆ ಪ್ರಕರಣದ ದಿಕ್ಕನ್ನೇ ಬದಲಿಸುವಂತಾಗಿದ್ದು, ಈಗ ಇದು ಕೇವಲ ಪೊಲೀಸ್ ಅಧಿಕಾರಿಯ ವಿರುದ್ಧದ ಆರೋಪವಾಗಿರದೇ, ಕುಟುಂಬದ ಒಳಗಿನ ಸಂಘರ್ಷ ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ.

ಒಂದು ಕಡೆ ಮಹಿಳೆಯ ಗಂಭೀರ ಆರೋಪ, ಮತ್ತೊಂದು ಕಡೆ ಅವಳದೇ ಸಹೋದರಿಯ ಪ್ರತಿರೋಧ—ಇವುಗಳ ನಡುವೆ ಸತ್ಯ ಏನು ಎಂಬುದು ಈಗ ತನಿಖೆಯಲ್ಲೇ ಹೊರಬರಬೇಕಿದೆ. ಪೊಲೀಸ್ ಆಯುಕ್ತರ ಆದೇಶದಂತೆ ನಡೆಯುತ್ತಿರುವ ತನಿಖೆ ಇದೀಗ ಇನ್ನಷ್ಟು ಸೂಕ್ಷ್ಮತೆಯಿಂದ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಬೈಟ್ (ಪ್ರಫುಲ್ಲಾ):
“ನನ್ನ ತಂಗಿ ಮಾಡಿರುವ ಆರೋಪ ಸುಳ್ಳು. ಇನ್‌ಸ್ಪೆಕ್ಟರ್ ಒಳ್ಳೆಯವರು. ನಮ್ಮ ಕುಟುಂಬದ ಸಮಸ್ಯೆಯನ್ನು ಬಗೆಹರಿಸಲು ಅವರು ಪ್ರಯತ್ನಿಸಿದ್ದರು. ವೈಯಕ್ತಿಕ ಕಾರಣಗಳಿಂದ ನನ್ನ ತಂಗಿ ಈ ಆರೋಪ ಮಾಡಿದ್ದಾಳೆ.”

ಈ ಪ್ರಕರಣವು ಸಾರ್ವಜನಿಕರಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಅಂತಿಮವಾಗಿ ನ್ಯಾಯ ಯಾರ ಪಾಲಾಗುತ್ತದೆ ಎಂಬುದನ್ನು ಎಲ್ಲರೂ ಕಾದು ನೋಡುತ್ತಿದ್ದಾರೆ.

#BreakingNews#DakshinaKannada#FamilyDispute#InspectorCase#LatestNews#SexualHarassmentAllegation#ಮೂಡಬಿದಿರೆ

COMMENTS

Login with Gmail to comment

ಇನ್ನಷ್ಟು ಸುದ್ದಿ

ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!
ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
ಮಂಗಳೂರಿನಲ್ಲಿ ವಕೀಲರೊಬ್ಬರ ನಕಲಿ ದುಷ್ಕೃತ್ಯ ಬಯಲಿಗೆ?
ವಿಶ್ವದ ನಂಬರ್ ವನ್ ಜನನಾಯಕನಾದ ಪ್ರಧಾನಿ ಮೋದಿ
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ₹50 ಸಾವಿರ ಮಾಸಾಶನ: ಆಸಿಡ್ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
ಇರಾನ್ ದಾಳಿಗೆ ಬೆಂಜಿಮನೇತನ್ಯಹೋ ಕೊಲ್ಲಲ್ಪಟ್ಟಿದ್ದಾರಾ?
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ
ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan