📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬೇಕಾದಾಗ, ಬೇಕಾದಂಗೆ ಸಂವಿಧಾನದ ಜಪ

    ರಾಜ್ಯಪಾಲರು

    ವರ್ಷದ ಮೊದಲ ಕಲಾಪಕ್ಕೆ ರಾಜ್ಯಪಾಲರ ಆಗಮನ ಹಾಗೂ ಜಂಟಿ ಅಧಿವೇಶನದ ಭಾಷಣವು ತತ್ಸಸಂಪ್ರದಾಯ. ಆ ಒಂದು ಸಂಪ್ರದಾಯವನ್ನು ಮುರಿದು ಹಾಕುವ ನಿಟ್ಟಿನಲ್ಲಿ ಸಾಗಲು ಅಡಿಗಲ್ಲನ್ನು ಇಟ್ಟಿದ್ದಾರೆ ಎನ್ನುವುದು  ಇತ್ತೀಚಿಗಿನ ದಿನದಲ್ಲಿನ ಕೆಲವು ಘಟನೆಗಳಿಂದ ನೇರಾನೇರವಾಗಿ ಕಾಣಲು ಸಾಧ್ಯವಾಗುತ್ತಿದೆ. ಕರ್ನಾಟಕದ ವಿಧಾನ ಮಂಡಲ ಜಂಟಿ ಅಧಿವೇಶನವು ಜನವರಿ 22ರಂದು ನಡೆಯಿತು. ಅಲ್ಲಿ ಗೊಂದಲವಾಯಿತು, ವಿವಾದದ ಕಾವು ಎದ್ದಿತು, ರಾಷ್ಟ್ರಮಟ್ಟದಲ್ಲಿ ಈ ವಾರಕ್ಕೆ ಆಗುವಷ್ಟು ಬಿಸಿಬಿಸಿ ಚರ್ಚೆಗೆ ಕಾರಣವೂ ಆಯಿತು. ಅನವಶ್ಯಕವಾದಂತಹ ವಿವಾದ ಇದು. ಎರಡು ಕಡೆಯಿಂದಲೂ ನಡೆದ ತಪ್ಪು ಮತ್ತು, ತಮ್ಮದೇ ನಡೆಯಬೇಕೆಂಬ ಹಠದ ಕಾರಣಕ್ಕೆ ಕರ್ನಾಟಕದ ವಿಧಾನಸಭೆಯ ವಿಚಾರ ರಾಷ್ಟ್ರದಲ್ಲಿ ಕಪ್ಪು ಲೈನಿನಲ್ಲಿ ಚರ್ಚೆಯಾಗಲು ಕಾರಣವಾಗಿದೆ.

    ಪ್ರತಿ ವರ್ಷ ನಡೆಯುವ ಜಂಟಿ ಅಧಿವೇಶನದ ಭಾಷಣವನ್ನು ಸನ್ಮಾನ್ಯ ರಾಜ್ಯಪಾಲರು, ಸರ್ಕಾರ ಬರೆದುಕೊಟ್ಟಿರುವುದನ್ನೇ, ಓದುವುದು ಸಾಮಾನ್ಯವಾದಂತಹ ಪ್ರಕ್ರಿಯೆ ಮತ್ತು ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ. ಸರ್ಕಾರವು ತನ್ನ ಆಡಳಿತದ ಕಾರ್ಯವೈಖರಿಯನ್ನು, ತನ್ನ ಅಭಿವೃದ್ಧಿಯ ಯೋಜನೆಯನ್ನು ಈ ಸಂದರ್ಭದಲ್ಲಿ ಆ ಒಂದು ಭಾಷಣದಲ್ಲಿ ಸೇರಿಸುವುದು ಮತ್ತು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದಕ್ಕೆ ರಾಜ್ಯಪಾಲರ ಮೂಲಕ ಭಾಷಣವನ್ನು ಮಾಡಿಸುವ ಪರಿಪಾಠ ಮೊದಲಿಂದಲೂ ರೂಢಿಯಲ್ಲಿದೆ. ಅದು ಸರಿ ತಪ್ಪು ಅನ್ನುವುದು ಬೇರೆ ವಿಚಾರ. ಆದರೆ ರಾಜ್ಯಪಾಲರು ಕೇಂದ್ರದಿಂದ ನೇಮಕರಾಗಿ ಬರುವಂತವರು. ಅವರ ಬಾಯಿಂದ ಕೇಂದ್ರ ಸರ್ಕಾರದ ನಡೆ ಹಾಗೂ ಯೋಜನೆಯನ್ನು ವಿರೋಧಿಸುವ ಹಠಕ್ಕೆ ರಾಜ್ಯ ಸರ್ಕಾರ ಬಿದ್ದರೆ, ಇನ್ನೇನು ಆದಿತು?

    Also Read  ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ….!!!!

    ಸರ್ಕಾರ ಯಾವುದೇ ಪಕ್ಷದ್ದಿರಲಿ, ಸದ್ಯಕ್ಕೆ ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಯಕ್ತಿಕ ಹೋಯ್ದಾಟ ಮತ್ತು ಹಾವು ಮುಂಗಿಸಿ ಆಟಕ್ಕೆ ರಾಜ ಭವನವನ ಬಳಕೆಯಾಗುತ್ತಿರುವುದು ದುರದಷ್ಟಕರ ವಿಚಾರ. ಜನವರಿ 22ರ ಜಂಟಿ ಅಧಿವೇಶನದ ರಾಜ್ಯಪಾಲರ ಭಾಷಣದಲ್ಲಿ ಏನೆಲ್ಲಾ ಇರಲಿದೆ ಎಷ್ಟು ಪುಟಗಳಿವೆ ಎಲ್ಲವೂ ಮೊದಲಿಗೆ ಗೊತ್ತಿತ್ತು. ಅದರಲ್ಲಿನ 11 ಅಂಶಗಳನ್ನು ರಾಜ್ಯಪಾಲರಾದ ತಾವರ್ಚಂದ್ ಗೆಲ್ಲೋಟ್ ಅವರು ತೆಗೆದುಹಾಕಿ ಎಂದು ಸರ್ಕಾರದ ಅಧಿಕೃತ ವಕ್ತಾರರಿಗೆ ತಿಳಿಸಿದರಂತೆ. ಅದಕ್ಕೆ ಸರ್ಕಾರವು ಚಾನ್ಸೇ ಇಲ್ಲ ಅನ್ನುವಂತೆ ನಡೆದುಕೊಂಡಿತು.

    ಪರಿಣಾಮ ರಾಜ್ಯಪಾಲರು ಸಮಯಕ್ಕೆ ಸರಿಯಾಗಿ ವಿಧಾನಸಭೆಯ ಅಧಿವೇಶನದ ಹಾಲ್ ಗೆ ಬರುತ್ತಾರೆ. ಅವರನ್ನು ಕ್ರಮಬದ್ಧವಾಗಿ ಸಂಪ್ರದಾಯದಂತೆಯೇ ಸ್ವಾಗತಿಸಲಾಗುತ್ತದೆ. ಇದೆಲ್ಲವೋ ಸುಗಮವಾಗಿ ನಡೆದಿದೆ. ಸದನದಲ್ಲಿ ಒಂದೇ ಮಾತರಂ ಗೀತೆಯು ಮೊಳಗಿದೆ.  ನಂತರ ರಾಜ್ಯಪಾಲರು ಎಲ್ಲರಿಗೂ ನನ್ನ ನಮಸ್ಕಾರ ಅಂತ ಭಾಷಣವನ್ನು ಶುರು ಮಾಡಿದ್ದ ಕೆಲವೇ ಸೆಕೆಂಡುಗಳಲ್ಲಿ ನಾಲ್ಕೈದು ಶಬ್ದಗಳನ್ನಷ್ಟೇ ಓದಿ ಜೈ ಹಿಂದ್ ಅಂತ ಭಾಷಣವನ್ನು ಮುಗಿಸುತ್ತಾರೆ. ಹಾಗೆ ಭಾಷಣವನ್ನು ಮುಗಿಸಿ ಎದ್ದು ಹೊರ ನಡೆಯುತ್ತಾರೆ.

    ಈ ಸಂದರ್ಭದಲ್ಲಿ ರಾಜ್ಯಪಾಲರು ಸರ್ಕಾರ ಬರೆದುಕೊಟ್ಟ ಭಾಷಣವನ್ನು ಸಂಪೂರ್ಣವಾಗಿ ಓದಿಲ್ಲ ಎಂಬ ಕಾರಣಕ್ಕೆ ಆಡಳಿತ ಪಕ್ಷದ ಸದಸ್ಯರುಗಳಲ್ಲಿ ಕೆಲವರು ಅತಿರೇಕವಾಗಿ ನಡೆದುಕೊಂಡದ್ದು ಸುಳ್ಳಲ್ಲ. ರಾಜ್ಯಪಾಲರ ನಡೆಯನ್ನು ವಿರೋಧಿಸುವ ಬರದಲ್ಲಿ, ಅವರಿಗೆ ತಮ್ಮ ಪ್ರತಿಭಟನೆಯನ್ನು ತೋರಿಸುವ ಭರದಲ್ಲಿ ವ್ಯಕ್ತಪಡಿಸಿದ ಕೆಲವು ಸಂಜ್ಞೆಗಳು ಅಸಂಪ್ರದಾಯಕವಾಗಿತ್ತು ಮತ್ತು ಅದು ಆಡಳಿತ ಪಕ್ಷಕ್ಕೆ ಶೋಭೆ ತರುವ ರೀತಿಯಲ್ಲಿ ಇರಲಿಲ್ಲ.

    Also Read  ಹಾಸನದಲ್ಲಿ ಮೀಸಲಾತಿ ವಿಚಾರಕ್ಕೆ ವಾಕ್ಸಮರ: ರೇವಣ್ಣ–ಶಿವಲಿಂಗೇಗೌಡ ತಿರುಗೇಟು

    ಖಂಡಿತವಾಗಿಯೂ ಆಡಳಿತ ಪಕ್ಷಕ್ಕೆ ತನ್ನ ಸರ್ಕಾರದ ನೀತಿ ರೀತಿ ನಡೆ ಎಲ್ಲವನ್ನು ಗಟ್ಟಿಯಾಗಿ ಹೇಳುವ ಹಕ್ಕು ಇದೆ ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಇಲ್ಲಿ ರಾಜ ಭವನದ ಜೊತೆ ಬಹಿರಂಗವಾಗಿ ಕಿತ್ತಾಟ ನಡೆಸುವಂಥದ್ದು ಯಾವುದೇ ಸರ್ಕಾರಕ್ಕೂ ಶೋಭೆಯಲ್ಲ. ಹಾಗೆಯೇ ರಾಜ್ಯಪಾಲರು ಸಹ ತಮ್ಮ ಕುರ್ಚಿಯ ಘನತೆಯನ್ನು  ಕುಂದಿಸುವ ಪ್ರೀತಿಯಲ್ಲಿ ನಡೆದುಕೊಳ್ಳುವುದು ಅಕ್ಷಮ್ಯವೂ ಹೌದು. ಯಾವುದೇ ಸರ್ಕಾರ ಇರಲಿ, ಸರ್ಕಾರ, ರಾಜ್ಯಭವನ, ಕೇಂದ್ರ ಸರ್ಕಾರ, ರಾಷ್ಟ್ರಪತಿ ಭವನ ಇದೆಲ್ಲವುದರ ಜೊತೆಯೂ ನಿಕಟ ವಾದಂತಹ ಬಾಂಧವ್ಯ ಆರೋಗ್ಯಕರವಾದಂತಹ ಹೆಜ್ಜೆ ಹೊಂದಿರಬೇಕು. ಆದರೆ ಇತ್ತೀಚೆಗಿನ ದಿನದಲ್ಲಿ ಆಗುತ್ತಿರುವುದೇ ಬೇರೆ. ಈ ಹಿಂದೆ ಪಂಜಾಬ್ ರಾಜ್ಯದಲ್ಲಿ ರಾಜ್ಯಪಾಲರು ಮತ್ತು ಅಲ್ಲಿನ ಸರ್ಕಾರದ ನಡುವೆ ನಡೆದ ಬಹಿರಂಗ ಕದನವು ನ್ಯಾಯಾಲಯದ ಮೆಟ್ಟಿಲನ್ನು ಹತ್ತಿತ್ತು. ಅವತ್ತು ನ್ಯಾಯಾಲಯದಲ್ಲಿ ಕೂಡ ರಾಜ್ಯಪಾಲರಿಗೆ ಇರಿಸು ಮುರು ಸಾಗುವಂತಹ ಆರ್ಡರ್ ಬಂದಿತ್ತು. ಅದೇ ರೀತಿ ಪಕ್ಕದ ತಮಿಳ್ ನಾಡು ಮತ್ತು ಕೇರಳದಲ್ಲೂ, ಅಲ್ಲಿನ ಸರ್ಕಾರ ಹಾಗೂ ರಾಜಭವನದ ನಡುವೆ ಸಮರ ವೇರ್ಪಟ್ಟಿತ್ತು. ಈಗ ಕರ್ನಾಟಕದಲ್ಲೂ ಅದೇ ರೀತಿಯ ಸಮರ ಕಾಣಿಸಿಕೊಂಡಿದೆ. ಈ ಸಮರವನ್ನು ರಾಜ್ಯ ಸರ್ಕಾರವು ಈಜಿಯಾಗಿ ತಟಸ್ಥ ಗೊಳಿಸಬಹುದಿತ್ತು. ಆದರೆ ಸರ್ಕಾರವು ಹಠಕ್ಕೆ ಬಿದ್ದು ವಿವಾದಕ್ಕೆ ತುಪ್ಪ ಸುರಿತು ಅಂದ್ರೆ ತಪ್ಪಿಲ್ಲ. ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಬಾರದೇ ಇದ್ದಿದ್ದರೆ ಅದು ಅಕ್ಷಮ್ಯ ಅಂತ ಅನ್ನಿಸಿಕೊಳ್ಳುತ್ತಿತ್ತು. ಆದರೆ ಅವರು ಆಗಮಿಸಿ  ಸರ್ಕಾರವು ಬರೆದುಕೊಟ್ಟ  ಭಾಷಣದಲ್ಲಿ ಕೇವಲ ಎರಡು ಸಾಲನ್ನಷ್ಟೇ ಓದಿ ಕೈ ಮುಗಿದು ಹೊರಟುಬಿಟ್ಟರು. ಆದರೆ ರಾಜ್ಯಪಾಲರು ಒಂದು ಅಕ್ಷರ ಓದಿದರೂ ಸಹ ಆ ಒಂದು ಭಾಷಣದ ಪ್ರತಿಯನ್ನು ರಾಜ್ಯಪಾಲರು ಓದಿದ ಹಾಗೆಯೇ ಅನ್ನುವುದು ಪ್ರತಿತಿ. ಹಾಗಾಗಿ ಸರ್ಕಾರವು ಬರೆದುಕೊಟ್ಟ ಭಾಷಣವು ಆಗಲೇ ಅಕ್ಸೆಪ್ಟೆಬಲ್ ಆಗಿದೆ ಹೀಗಿರುವಾಗ ರಾಜ್ಯಪಾಲ ರೊಟ್ಟಿಗೆ ಸರ್ಕಾರದ ಭಾಗವಾಗಿದ್ದುಕೊಂಡು ಗುದ್ದಾಟಕ್ಕಿಳಿಯುವ ಅಗತ್ಯತೆ ಇತ್ತೆ, ಎಂಬುದು ಪ್ರಶ್ನೆ.

    Also Read  ಕನ್ನಡದ ನೆಲದಲ್ಲಿ ಕನ್ನಡಕ್ಕೇ ಗೇಟ್ ಪಾಸ್: ಇವರು ಕರ್ನಾಟಕದ ಸಚಿವರೊ⁉️ಇಂಗ್ಲೆಂಡಿನ ಪ್ರತಿನಿಧಿಯೋ?

    ಈ ಹಿಂದೆ ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗಲೂ ಅವತ್ತಿನ ಯಡಿಯೂರಪ್ಪ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಾಕಷ್ಟು ಬಿಸಿಬಿಸಿ ವಾತಾವರಣ ಸೃಷ್ಟಿಯಾಗಿತ್ತು. ಅವತ್ತಿನ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಭಾರದ್ವಾಜ್ ಅವರ ಮೂಲಕ ರಾಜ್ಯ ಸರ್ಕಾರವನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದ್ದು ಸುಳ್ಳಲ್ಲ. ಈಗ ಅದೇ ಕೆಲಸವು ಈಗ  ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಕಡೆಯಿಂದ ಆಗುತ್ತಿರಬಹುದು. ಅವತ್ತಿಂದು ಅಂದರೆ ಹಂಸರಾಜ್ ಭಾರದ್ವಾಜ್ ರವರ ನಡೆ ಎಷ್ಟು ತಪ್ಪು ಅಂತ ಹೇಳಲಾಗುತ್ತದೆಯೋ ಅಷ್ಟೇ ತಪ್ಪು ತವಾರ್ ಚಂದೆಲೋಟ್ರವರ ನಡೆ ಅಂತಲೂ ಹೇಳಬೇಕಾಗುತ್ತದೆ. ಆದರೆ ಆವತ್ತು ಯಡಿಯೂರಪ್ಪ ಸರ್ಕಾರ ತೀರ ಈ ಮಟ್ಟಕ್ಕೆ ಅಗೌರವ ಕೊಟ್ಟಿರಲಿಲ್ಲವೇನೋ. ಬಿಕೆ ಹರಿಪ್ರಸಾದ್ ರಂತಹ ಹಿರಿಯ ನಾಯಕರು ನಡೆದುಕೊಂಡ ರೀತಿಯು ಅವರ ಹಿರಿತನಕ್ಕೆ ಯೋಗ್ಯವಾಗಿರಲಿಲ್ಲ. ಸದನದ ಎಲ್ಲಾ ಕಿರಿಯ ಸದಸ್ಯರುಗಳಿಗೆ ಮಾದರಿ ಯಾಗಿ ಇರಬೇಕಾಗಿದ್ದ ಹರಿಪ್ರಸಾದರು ತೀರ ಈ ಮಟ್ಟದಲ್ಲಿ ಕಾಣಿಸಿಕೊಳ್ಳಬಾರದಿತ್ತು ಏನಂತೀರಿ?

    -ದತ್ತು

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ನಾಸಿಕ್ TCS ಪ್ರಕರಣ-ಸತ್ಯ ಮರೆಮಾಚಿದವರಾರು?ಕಾರ್ಪೊರೇಟ್ ಜಗತ್ತಿನ ಕತ್ತಲೆ ಮುಖ:HRಮಹಿಳೆಯಾಗಿಯೂ…..
    ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ
    ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”
    ದವಳ ಕೋ- ಆಪರೇಟಿವ್ನ ಈ ಸಾಲಿನ ವ್ಯವಹಾರ ಎರಡುನೂರು ಕೋಟಿ
    ಉಡುಪಿಯ ಪ್ರತಿಷ್ಠಿತರನ್ನೇ ಟಾರ್ಗೆಟ್ ಮಾಡಿದ ಜೀನತ್ ವಿರುದ್ಧ ಮತ್ತೊಂದು ದೂರು? ₹15 ಲಕ್ಷ ಮೋಸದ ಹೊಸ ಆರೋಪ!?
    ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
    “ಮಾರಿಕೊಂಡ ಮಾಧ್ಯಮದವರು ಯಾರು?” ಪ್ರಶ್ನೆಗೆ ಪ್ರಕಾಶ್ ರಾಜ್ ನಿರುತ್ತರ”ಪತ್ರಿಕಾಗೋಷ್ಠಿಯಲ್ಲೇ ಶುರುವಾದ ಭಾರೀ ವಿವಾದ ಏನು?
    ಅಮೇರಿಕಾಕ್ಕೆ ಅಷ್ಟು ಧೈರ್ಯದಿಂದ ಎಲ್ಲಿಂದ ಬಂತು?
    ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
    ಕೋಟಿ ನಕಲಿ ಔಷಧ ಜಾಲದ ವಿರುದ್ಧ ಬಿಗಿ ಕ್ರಮ..ಕಿಂಗ್‌ಪಿನ್ ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿ ಪತ್ತೆ…!
    ತುರ್ತು ಎಚ್ಚರಿಕೆ ‼️ಹಿಪ್ನೋಟೈಸಿಂಗ್ ಸ್ವಾಮಿಗಳು ನಿಮ್ಮ ಬಳಿಯೂ ಬರಬಹುದು
    ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
    ಉತ್ತರ ಕನ್ನಡಕ್ಕೆ ₹6,925 ಕೋಟಿ ಬಂದರು ಯೋಜನೆ: 15 MTPA ಸಾಮರ್ಥ್ಯದ ಮಂಕಿ ಬಂದರಿಗೆ ಸಚಿವ ಸಂಪುಟ ಒಪ್ಪಿಗೆ
    ಬಂಗಾಳ ರಾಜಕೀಯದಲ್ಲಿ ಭಾರಿ ಟ್ವಿಸ್ಟ್ ಮೇಲೆ ಟ್ವಿಸ್ಟ್..! ಸುವೇಂದು ಪ್ರಮಾಣವಚನಕ್ಕೂ ಬ್ರೇಕ್ ಬೀಳುತ್ತಾ?ಸುಪ್ರೀಂ ಕೋರ್ಟ್ ಎಂಟ್ರಿ ಆಗುತ್ತಾ?
    ನೀವೂ ತಿಳಿದಿರಬೇಕಾದ ವಿಷಯ:ಬರುವ ಆರ್ಥಿಕ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ!
    ಲಾಲ್‌ಬಾಗ್ ಸಿಗ್ನಲ್ ಬಳಿ ಚಾಕು ಇರಿತದ ಘಟನೆ…!
    ಡಿಜಿಟಲ್ ದಿಗ್ಗಜರಿಗೆ ₹2 ಕೋಟಿ ಲೀಗಲ್ ನೋಟಿಸ್ ಶಾಕ್!ಯೂಟ್ಯೂಬ್ ಸ್ಟಾರ್ vs ಟಿವಿ ಸ್ಟಾರ್ ನಡುವಿನ ಕಾನೂನು ಸಮರ!
    ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
    ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    💊 ಜೀವರಕ್ಷಕ ಕ್ಯಾನ್ಸರ್ ಔಷಧಗಳು ದುಬಾರಿ: ಏಕೆ ಬೆಲೆ ಹೆಚ್ಚಳ ಅನಿವಾರ್ಯವಾಯಿತು?ಅಸಲಿ ಕಾರಣ ಗೊತ್ತೇ?
    ‘ಪೊಲೀಸರಿಗೆ ದೂರು ಕೊಡ್ತೀಯಾ?’… ಗಾಂಜಾ ವ್ಯಸನಕ್ಕೆ ಸೈಜು ಕಲ್ಲಿನಿಂದ ಅಜ್ಜಿಯ ತಲೆ ಪುಡಿ ಮಾಡಿದ ಮೊಮ್ಮಗ!ಅಜ್ಜಿಯೇ ಬಲಿ!
    ತಿರುಪತಿಗೆ ಹೋದ ಗಂಡ… ಗೋವಾಗೆ ಹೋದ ಯುವಕ…! ಮನೆಗೆ ಬಂದದ್ದು ಶವವಾಗಿ! ಪ್ರವಾಸವೇ ಭಯ ಹುಟ್ಟಿಸುತ್ತಿದೆಯೇ?
    ಗ್ರಾಹಕರ ಮಾತು ಕೇಳಿ, ₹900 ಕೋಟಿಯ ರೆಸ್ಟೋರೆಂಟ್ ಸಾಮ್ರಾಜ್ಯ ನಿರ್ಮಿಸಿದ ಉದ್ಯಮಿ..
    ಅಜ್ಜಿಯ ಚಿನ್ನಕ್ಕೇ ಕನ್ನ! ಮೊಮ್ಮಗ ಅರೆಸ್ಟ್….
     ಇಂದಿನ ಪೋಷಕರ ಅತಿಮುದ್ದು…ಕೇಳಿದ್ದನ್ನೆಲ್ಲ ಕೊಡಿಸುವ ಪೋಷಕರು ಒಳ್ಳೆಯವರೇ…???ಇದೇ ಮಕ್ಕಳ ಭವಿಷ್ಯಕ್ಕೆ ದೊಡ್ಡ ಅಪಾಯವೇ?
    ನಿತ್ಯ bus ಪ್ರಯಾಣಿಕರಿಗೆ ಶಾಕ್‌: ‌ ಟಿಕೆಟ್‌ ದರ 5 ರಿಂದ 8% ಹೆಚ್ಚಳ: ಇನ್ಮೇಲೆ ಓಡಾಟ ಮತ್ತಷ್ಟು ದುಬಾರಿ!