📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!

ಮಾಜಿ ಮುಖ್ಯಮಂತ್ರಿ ಒಬ್ಬರು ಪುಟ್ ಪಾತ್ ವ್ಯಾಪಾರದಲ್ಲಿ ತಲ್ಲೀನರಾಗುತ್ತಾರೆ ಅಂದ್ರೆ ನಂಬ್ತೀರಾ? ಅಷ್ಟಕ್ಕೂ ಅವರು ಬೀದಿಬದಿ ವ್ಯಾಪಾರ ಮಾಡಿದ್ದು  ಯಾಕೆ ಗೊತ್ತಾ?  ಆ ಮಾಜಿ ಮುಖ್ಯಮಂತ್ರಿಯಾದರೂ ಯಾರು? ಕಡುಬಡತನದ ಬೇಗೆಗೆ ಸಿಲುಕಿಕೊಂಡ್ರಾ?

ಭೂಪಾಲ್ : ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಟ್ಟರ್ ಹಿಂದೂವಾದಿಯಾಗಿ ಗುರುತಿಸಿಕೊಂಡಿದ್ದ ಸಾಧ್ವಿ ಉಮಾ ಭಾರತಿ, ಪ್ರದೇಶದ ನಗರದ ರಸ್ತೆ ಬದಿಯೊಂದರಲ್ಲಿ ಜಿಲೇಬಿಯನ್ನು ತಯಾರಿಸಿ ಮಾರುವುದರ ಮೂಲಕ ಅಲ್ಲಿನ ಸರ್ಕಾರದ ಧೋರಣೆಯ ವಿರುದ್ಧ  ಶಾಂತಿಯುತವಾಗಿ ವಿನೂತನ ಮಾದರಿಯಲ್ಲಿ  ಪ್ರತಿಭಟನೆ ಮಾಡಿದರು.

ಇಲ್ಲಿನ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್, ಬಡ ಬೀದಿಬದಿ ವ್ಯಾಪಾರಸ್ಥರ ವಿರುದ್ಧ ಗದಾ ಪ್ರಹಾರ ಮಾಡಲು ಹೊರಟಿದ್ದನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ, ಸ್ವತಹ ಆ ಬೀದಿಬದಿ ವ್ಯಾಪಾರಸ್ಥರ ಪರವಾಗಿ ಬೀದಿ ಬದಿಯಲ್ಲಿ ಜಿಲೇಬಿ ತಯಾರಿಸಿ ಮಾರಾಟ ಮಾಡುವುದರ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಬೀದಿ ಬದಿಯ ವ್ಯಾಪಾರದಿಂದಾಗಿ ದೇಶದ ಬಡಜನರು ದೊಡ್ಡ ಪ್ರಮಾಣದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅವರ ದೈನಂದಿನ ಬದುಕು ಸಾಗುವುದೇ ಬೀದಿಬದಿಯ ವ್ಯಾಪಾರದ ಮೂಲಕ. ಹಾಗೆಯೇ ಬೀದಿಬದಿ ವ್ಯಾಪಾರವನ್ನೇ ಮಧ್ಯಮ ವರ್ಗದ ಸಾಕಷ್ಟು ಜನರು ನೆಚ್ಚಿಕೊಂಡಿದ್ದಾರೆ. ಕೈಗೆಟಕುವ ಬೆಲೆಯಲ್ಲಿ ಖರೀದಿ ಮಾಡಬಹುದಾದಂತಹ ವಸ್ತುಗಳು ಸಿಗುವ ಕಾರಣ, ಮಾಧ್ಯಮ ವರ್ಗದ ದೊಡ್ಡ ಸಮುದಾಯವು ಈ ವ್ಯಾಪಾರಿಗಳ ಗ್ರಾಹಕರಾಗಿದ್ದಾರೆ. ಸರ್ಕಾರವು ಬೀದಿಬದಿ ವ್ಯಾಪಾರಸ್ಥರನ್ನು ಟಾರ್ಗೆಟ್ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಅದರ ಬದಲು ಸರ್ಕಾರಿ ಜಾಗಗಳನ್ನು, ಕೆರೆಗಳನ್ನು, ಮೈದಾನಗಳನ್ನು ಅತಿಕ್ರಮಿಸಿಕೊಂಡಿರುವಂತಹ ದೊಡ್ಡವರ ಮೇಲೆ- ಸ್ಥಿತಿವಂತರ ಮೇಲೆ ಕ್ರಮ ಕೈಗೊಳ್ಳಬೇಕು. ಸೌಂದರ್ಯ ಹಾಗೂ ಇನ್ನಿತರ ಹೆಸರುಗಳಲ್ಲಿ ಬೀದಿಬದಿ ವ್ಯಾಪಾರಸ್ಥರ ಮೇಲೆ ಪ್ರಹಾರವನ್ನು ಮಾಡುವುದರ ಹಿಂದೆ ಬಂಡವಾಳ ಶಾಹಿಗಳ ಕುಮ್ಮಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸುವ ಮೂಲಕ, ರಾಜ್ಯ ಸರ್ಕಾರದ ನಿರ್ಧಾರಕ್ಕೆ ಈ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ತಾವು ಬೀದಿ ಬದಿ ವ್ಯಾಪಾರಸ್ಥರ ಪರವಾಗಿ ನಿಲ್ಲುವುದಾಗಿಯೂ ಘೋಷಿಸಿದ್ದಾರೆ. ಇದರಿಂದ ಮಧ್ಯಪ್ರದೇಶದ ಬೀದಿಬದಿ ವ್ಯಾಪಾರಸ್ಥರಿಗೆ ಆನೆ ಬಲ ಬಂದಂತಾಗಿದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
“ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
ಅಕ್ರಮ ಡಿಸೇಲ್ ದಾಸ್ತಾನು ಪ್ರಕರಣ: 4,175 ಲೀಟರ್ ಡಿಸೇಲ್ ಕಂದಾಯ ಇಲಾಖೆಯಿಂದ ಹರಾಜು – ₹2.35 ಲಕ್ಷಕ್ಕೆ ಮಾರಾಟ!
ವಿಟ್ಲ ಪಟಾಕಿ ತಯಾರಿಕಾ ಘಟಕದಲ್ಲಿ ಪಟಾಕಿ ಸ್ಫೋಟ
ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
ಗ್ಯಾಸ್ ಪೈಪ್‍ಲೈನ್ ಸೋರಿಕೆ: ಅಣಕು ಪ್ರದರ್ಶನ
MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
ಮಂಗಳೂರಿನಲ್ಲಿ ವಕೀಲರೊಬ್ಬರ ನಕಲಿ ದುಷ್ಕೃತ್ಯ ಬಯಲಿಗೆ?
book ಮಾಡಿದ ನಿಮ್ಮ ಹೊಸ ಕಾರು-ಬೈಕ್ ಇನ್ನೂ ಬಂದಿಲ್ವಾ?ಪಶ್ಚಿಮ ಏಷ್ಯಾ ಯುದ್ಧದಿಂದ ಸರಬರಾಜು ವಿಳಂಬ…!
ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
ಹುಬ್ಬಳ್ಳಿ ಲವ್ ಜಿಹಾದ್..!?ಮೂರು ವರ್ಷದ ಸಂಬಂಧ, friendship, ಫ್ಯಾಮಿಲಿ closeness-ಕ್ಷಣದಲ್ಲೇ ಬಾರಿ ಸಂಘರ್ಷ..!
ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?
17ನೇ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬಾಲಗರ್ಭಿಣಿಯರ ಸಂಖ್ಯೆ 5975….!!
ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
ಮನೆಯ ಮೇಲೆ ಪೊಲೀಸರ  ದಾಳಿ  ಮಾರಾಟಕ್ಕೆ ಇಡಲಾದ ಮಾದಕ ವಸ್ತು ಹಾಗೂ ಮಾರಕ ಆಯುಧ ವಶ
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
ಹಳ್ಳಿಯಿಂದ ಡೆಲ್ಲಿ ತನಕ ಉರಿ ಬಿಸಿಲು, ಮಾರ್ಚ್ ಆರಂಭದಲ್ಲೇ ಜನ ತತ್ತರ”
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!