📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!

    ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ನಿವಾಸಿ ಯಶೋಧರ ಸಿಂಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಸಮಾಜದವರು ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೋರಿ ಸಂದೇಶಗಳನ್ನು ಹಂಚಿಕೊಂಡಿದ್ದರು. 

    ಈ ಘಟನೆ ಓದಿದಾಗ ಮೊದಲಿಗೆ ಮೂಡುವ ಭಾವನೆ , ಬೇಸರ ಮತ್ತು ಅಸಹನೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಸಹಾಯ ಕೇಳಿದಾಗ, ಅದನ್ನೇ ಅವಕಾಶ ಮಾಡಿಕೊಂಡು ವಂಚನೆ ಮಾಡುವವರು ಯಾವ ಮಟ್ಟದ ಮನೋಭಾವ ಹೊಂದಿರಬಹುದು ಎಂಬುದು ಪ್ರಶ್ನೆಯಾಗಿದೆ. ದುರ್ಬಲ ಸ್ಥಿತಿಯಲ್ಲಿ ಇದ್ದಾಗ, ಅವರ ಮಾನಸಿಕ ಸ್ಥಿತಿಯನ್ನು ಬಳಸಿಕೊಂಡು ವಂಚನೆ ಮಾಡಲಾಗಿದೆ. ಮಠ”, “ಧಾರ್ಮಿಕ ಸಂಸ್ಥೆ” ಎಂಬ ಹೆಸರು ಬಳಸುವುದು ಜನರ ವಿಶ್ವಾಸವನ್ನು ನಂಬಿಕೆಯನ್ನ ಸುಲಭವಾಗಿ ಗೆಲ್ಲಲು ಆದ್ದರಿಂದ ಆದಷ್ಟು ಎಚ್ಚರ ವಾಗಿರಬೇಕು.

    Also Read  ಒಂದೆಡೆ ‘ನಶಾ ಮುಕ್ತ ಯುವ ಭಾರತ’ ಅಭಿಯಾನ; ಮತ್ತೊಂದೆಡೆ ಪಬ್ ಸಂಸ್ಕೃತಿಯ ಸೆಳೆತ..! ಮಣಿಪಾಲದಲ್ಲಿ ಅಪ್ರಾಪ್ತರ ಮದ್ಯಪಾನ ಬಯಲು

    ಉಪ್ಪಿನಂಗಡಿ: ಅನಾರೋಗ್ಯದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಸಹಾಯದ ನೆಪದಲ್ಲಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ನಿವಾಸಿ ಯಶೋಧರ ಸಿಂಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಸಮಾಜದವರು ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಕೋರಿ ಸಂದೇಶಗಳನ್ನು ಹಂಚಿಕೊಂಡಿದ್ದರು.

    ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಅಪರಿಚಿತ ವಂಚಕರು, ಯಶೋಧರ ಸಿಂಗ್ ಅವರ ಪುತ್ರ ಸುಧಾನುಷ್ ಅವರನ್ನು ಸಂಪರ್ಕಿಸಿ, “ಮಂತ್ರಾಲಯದ ಮಠದಿಂದ 3 ಲಕ್ಷ ರೂಪಾಯಿ ಸಹಾಯ ನೀಡಲಾಗುವುದು. ಆದರೆ ಸರ್ಕಾರದ ನಿಯಮದಂತೆ 10% ತೆರಿಗೆ ಮೊದಲು ಪಾವತಿಸಬೇಕು” ಎಂದು ನಂಬಿಸಿದ್ದಾರೆ.

    Also Read  ಸೈಡ್ ಕೊಡಲಿಲ್ಲ ಎಂಬ ಸಣ್ಣ ವಿಚಾರ... ದೊಡ್ಡ ಜಗಳದ ವೈರಲ್ ವಿಡಿಯೋ... ಪೊಲೀಸ್ ಕೇಸ್... ಕೊನೆಗೆ ಬಂಧನ!

    ಇದನ್ನು ನಂಬಿದ ಸುಧಾನುಷ್ ತಮ್ಮ ಬಳಿ ಇದ್ದ ₹28 ಸಾವಿರವನ್ನು ವಂಚಕರಿಗೆ ಕಳುಹಿಸಿದ್ದಾರೆ. ಆದರೆ ನಂತರ ಯಾವುದೇ ಸಹಾಯ ದೊರೆಯದೇ ಇರುವುದರಿಂದ ತಾವು ಮೋಸ ಹೋಗಿರುವುದು ತಿಳಿದುಬಂದಿದೆ.

    ಘಟನೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಧಾರ್ಮಿಕ ಸಂಸ್ಥೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸುತ್ತಿರುವ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಇದು ನಿಜಕ್ಕೂ ವಿಪರ್ಯಾಸ — ಸಹಾಯ ಬೇಕಿರುವ ವ್ಯಕ್ತಿಯನ್ನೇ ಗುರಿಯಾಗಿಸಿ ಮೋಸ ಮಾಡುವವರು, ಮಾನವೀಯತೆ ಕಳೆದುಕೊಂಡವರಂತೆ ಕಾಣುತ್ತಾರೆ.

    #crime news#Manthralaya Matt misused#online fraud#stay safe from online scam

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಗೃಹಲಕ್ಷ್ಮಿ ಹಣ ಪಡೆಯೋರೇ ಗಮನಿಸಿ! ಪತಿ ಆಧಾರ್‌ನಿಂದ ಬ್ಯಾಂಕ್ ಖಾತೆವರೆಗೆ ಹೊಸ ರೂಲ್ಸ್
    ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿಕೆ: ಜುಲೈ 2ಕ್ಕೆ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್, ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    🔥 ಬಿಸಿಲಿನ ಬಿಸಿ ತಾರಕ್ಕೇರಿದೆ, ಆದರೆ ಮಳೆ ಸಿಡಿಲು ಸರ್ಪ್ರೈಸ್ ಬರ್ತಿದೆ! 🌩️
    ದಸರಾ ರಜೆಯಲ್ಲೂ ಶಾಲೆ! ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿ
    ತುಳು ವಿಕಿಪೀಡಿಯಾಗೆ ದಶಮಾನೋತ್ಸವ ಸಂಭ್ರಮ
    ಅಲ್ಲಿ ಸೌಮೆಂದು ಅಧಿಕಾರಿ…. ಇಲ್ಲಿ ಸಾಮ್ರಾಟ್ ಚೌದರಿ, ಹೆಲ್ತ್ ಮಿನಿಸ್ಟರ್ ನಿಶಾಂತ್….
    ಮಂಗಳೂರಲ್ಲಿ 10ನೇ ತರಗತಿ ತಾಯಿಯಿಲ್ಲದ ಬಾಲಕಿ ಮೇಲೆ ಜಲೀಲ್ ಎಂಬಾತ 7 ತಿಂಗಳು ನಿರಂತರ ದೌರ್ಜನ್ಯ! 
    ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
    “ಟೀಕೆ ಮಾಡಿ, ತೇಜೋವಧೆ ಬೇಡ” – ಹೈಕೋರ್ಟ್‌ನಿಂದ ಗಿರೀಶ್ ಮಟ್ಟೆಣ್ಣನವರ್‌ಗೆ ಖಡಕ್ ಎಚ್ಚರಿಕೆ
    ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
    ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆಯ ಪ್ರಕರಣ ದಾಖಲು
    ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ಅವಮಾನವೇ ಯಶಸ್ಸಿನ ಇಂಧನ: ಕೋಮಲ್ ಗನಾತ್ರಾ ಎಂಬ ಅದಮ್ಯ ಚೇತನ ಕೇವಲ 2 ವಾರಗಳ ಸಂಸಾರ, ನಂತರ ಜೀವಮಾನದ ಸಾಧನೆ!
    ಅವಿವಾಹಿತಗೆ ಗರ್ಭ ದಾನ ಮಾಡಿದವ ಜೈಲಿಗೆ
    ಸೆಪ್ಟೆಂಬರ್‌ನಲ್ಲಿ ಚಿನ್ನ-ಬೆಳ್ಳಿ ಭಾರಿ ಕುಸಿತ: ಮುಂದಿನ ದಿನಗಳಲ್ಲೂ ಏರಿಳಿತ ಸಾಧ್ಯತೆ
    ”ಮೋದಿ ಭರವಸೆ ಪೊಳ್ಳು” : ನೀಟ್ ಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಕೇಜ್ರಿವಾಲ್ ವಾಗ್ದಾಳಿ
    ವಯನಾಡಿನ ಮೇಪ್ಪಾಡಿ ವಲಯದಲ್ಲಿ ಮರುಕಳಿಸಿದ 2024ರ ಭೂಕುಸಿತದ ಕರಾಳತೆ
    “ಮಹಿಳೆಯರು ಮನೆಯಲ್ಲೇ ಇರಬೇಕೇ? AP ಅಬೂಬಕರ್ ಕಾಂತಪುರಂ ಹೇಳಿಕೆ ಭಾರಿ ಚರ್ಚೆ!”
    ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
    ಅಕ್ರಮ ಭೂಕಬಳಿಕೆ: ಡಿಸಿ ಕೋರ್ಟ್ ಆದೇಶದ ವಿರುದ್ಧದ ರಿಟ್  ಹೈಕೋರ್ಟನಲ್ಲಿ ವಜಾ
    ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
    ಮದುವೆ -ಜೀವನ ಬೇಸರವಾಯ್ತು ಆಸಕ್ತಿ ಇಲ್ಲ ಅಂದ್ರೆ ವಿಚ್ಛೇದನ ಸಿಗುತ್ತಾ ..! ಮಗಳು18 ದಾಟಿದರೂ ಶಿಕ್ಷಣದ ಹೊಣೆ ಯಾರಿಗೆ?
    ಕರ್ನಾಟಕದ 177 ತಾಲೂಕು ಬರಪೀಡಿತ… ಪರಿಹಾರ ಕೇಳಲು ಹೊರಟ ಸರ್ಕಾರಕ್ಕೆ BJP–JDS ಸಾಥ್ ಇಲ್ಲ!ಸರ್ವಪಕ್ಷ ನಿಯೋಗಕ್ಕೆ ಗೈರು!
    ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಕಠಿಣ ಎಚ್ಚರಿಕೆ ದ್ವಿವೇದಿ ವಾರ್ನಿಂಗ್ ವೈರಲ್!” “ಭೂಗೋಳದ ಭಾಗವಾಗಿರಬೇಕೆ ಅಥವಾ ಇತಿಹಾಸದ ಭಾಗವಾಗಬೇಕೆ ?”
    ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
    108 ಆರೋಗ್ಯ ಕವಚ'”ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ಇನ್ಮುಂದೆ ಆಂಬ್ಯುಲೆನ್ಸ್ ನಿಮ್ಮ ಮನೆಬಾಗಿಲಿಗೆ! 
    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
    ಮಳೆ ಅಲರ್ಟ್ ನಡುವೆ ಕರ್ನಾಟಕಕ್ಕೆ ಬರದ ಬಿಸಿ: ಕೇಂದ್ರದ ನೆರವಿಗಾಗಿ ಸರ್ಕಾರದ ಮೊರೆ…!
    ಎಲಾನ್ ಮಸ್ಕ್: ವಿಶ್ವದ ಮೊದಲ ಟ್ರಿಲಿಯನೇರ್‌ನಿಂದ ಇನ್ನೂ ಎತ್ತರದತ್ತ!