📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 

    ಬಳ್ಳಾರಿ ವಸತಿ ಶಾಲೆ ದುರಂತ: ಮಕ್ಕಳ ಮನೋವೈಜ್ಞಾನಿಕ ಸ್ಥಿತಿ, ಒಂದು ದೊಡ್ಡ ಪ್ರಶ್ನೆ

    ಬಳ್ಳಾರಿ: ಆಸ್ಪತ್ರೆ ಆವರಣದಲ್ಲಿ ಮೃತ ವಿದ್ಯಾರ್ಥಿಯ ತಾಯಿ ಕಣ್ಣೀರಿಟ್ಟು ಅಳುತ್ತಿರುವ ದೃಶ್ಯ ಎಲ್ಲರ ಮನಸ್ಸನ್ನು ಕಲುಕಿದೆ. ಮಗನನ್ನು ಓದಲು ದೂರದ ಊರಿಗೆ ಕಳುಹಿಸಿದ್ದ ಪೋಷಕರಿಗೆ ಇದು ಭಾರೀ ಆಘಾತವಾಗಿದೆ.

    ಮಾರ್ಚ್ 7ರ ರಾತ್ರಿ ಸಾಮಾನ್ಯ ದಿನದಂತೆ ಆರಂಭವಾಗಿತ್ತು. ಬಳ್ಳಾರಿ ಹೊರವಲಯದ ತಾಳೂರು ರಸ್ತೆಯಲ್ಲಿರುವ ಖಾಸಗಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳು ರಾತ್ರಿ ಊಟ ಮುಗಿಸಿ ಸುಮಾರು 9:30ರ ವೇಳೆಗೆ ಮಲಗಿದ್ದರು. ಹಾಸ್ಟೆಲ್‌ನಲ್ಲಿ ಒಟ್ಟು 9 ವಿದ್ಯಾರ್ಥಿಗಳು ವಾಸವಾಗಿದ್ದರು – 7 ಗಂಡು ಮಕ್ಕಳು ಮತ್ತು 2 ಹೆಣ್ಣು ಮಕ್ಕಳು.

    ರಾತ್ರಿ ಸುಮಾರು 11 ಗಂಟೆ ವೇಳೆಗೆ, 9ನೇ ತರಗತಿಯ 15 ವರ್ಷದ ಬಾಲಕನೊಬ್ಬ ತನ್ನ ಕೊಠಡಿಯಿಂದ ಹೊರಬಂದು, ಮಲಗಿದ್ದ ಸಹಪಾಠಿಗಳ ಮೇಲೆ ಕಬ್ಬಿಣದ ರಾಡ್ ಹಾಗೂ ಇತರೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ವಿದ್ಯಾರ್ಥಿಗಳು ಮಲಗಿದ್ದ ಸ್ಥಿತಿಯಲ್ಲೇ ಹೊಟ್ಟೆ, ತಲೆ ಹಾಗೂ ಎದೆ ಭಾಗಗಳಿಗೆ ಗಂಭೀರ ಗಾಯಗಳನ್ನು ಮಾಡಿದ್ದಾರೆ.

    ವಿದ್ಯಾರ್ಥಿಗಳ ಕೂಗಾಟ ಕೇಳಿ ಹಾಸ್ಟೆಲ್ ವಾರ್ಡನ್ ಬ್ಲೆಸ್ಲಿ ಕುರಿಕೋಸ್ ಸ್ಥಳಕ್ಕೆ ಬಂದಾಗ, ಅವರ ಮೇಲೂ ಬಾಲಕ ದಾಳಿ ನಡೆಸಿದ್ದಾನೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

    ಈ ದಾಳಿಯಲ್ಲಿ ಡಿ. ಹೇಮಂತ್ (15) ಎಂಬ ವಿದ್ಯಾರ್ಥಿ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾನೆ. ಹೇಮಂತ್ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಸಮಗಿರಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

    Also Read  ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..

    ಇನ್ನೂ ಒಬ್ಬ ವಿದ್ಯಾರ್ಥಿನಿ ಮತ್ತು ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸ್ಟೆಲ್ ವಾರ್ಡನ್ ಕೂಡ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯ ರೂಪಿಸುವ ಪವಿತ್ರ ಸ್ಥಳಗಳೆಂದು ನಾವು ನಂಬುತ್ತೇವೆ. ಆದರೆ ಬಳ್ಳಾರಿ ಹೊರವಲಯದ ಖಾಸಗಿ ವಸತಿ ಶಾಲೆಯಲ್ಲಿ ನಡೆದ ಘಟನೆ ಆ ನಂಬಿಕೆಯನ್ನು ತತ್ತರಗೊಳಿಸಿದೆ. 9ನೇ ತರಗತಿಯ 15 ವರ್ಷದ ಬಾಲಕನೊಬ್ಬ ತನ್ನ ಸಹಪಾಠಿಗಳ ಮೇಲೆ ನಡೆಸಿದ ಉನ್ಮಾದಿತ ದಾಳಿಯಲ್ಲಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಕೇವಲ ಒಂದು ಅಪರಾಧ ಪ್ರಕರಣವಲ್ಲ; ಇದು ಮಕ್ಕಳ ಮನೋಸ್ಥಿತಿ, ಹಾಸ್ಟೆಲ್ ಸುರಕ್ಷತೆ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲಿನ ದೊಡ್ಡ ಪ್ರಶ್ನೆಯನ್ನು ಸಮಾಜದ ಮುಂದೆ ತಂದಿದೆ.

    ಆರೋಪಿ ಪರಾರಿ: ಪೊಲೀಸ್ ತಂಡಗಳ ಶೋಧ ಘಟನೆ ಬಳಿಕ ದಾಳಿ ನಡೆಸಿದ ಬಾಲಕ ಪರಾರಿಯಾಗಿದ್ದು, ಪೊಲೀಸರು ಅವನ ಪತ್ತೆಗಾಗಿ ಎರಡು ಪಿಐ ಹಾಗೂ ಐದು ಪಿಎಸ್‌ಐಗಳ ನೇತೃತ್ವದಲ್ಲಿ ಏಳು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಬಾಲಕ ಓಡಾಡುತ್ತಿದ್ದ ಮಾರ್ಗಗಳು ಮತ್ತು ಪರಿಚಯದ ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡು ಶೋಧ ಕಾರ್ಯ ಮುಂದುವರಿಸಲಾಗಿದೆ.

    ಪೊಲೀಸರ ಪ್ರಕಾರ, ಬಾಲಕ ಪತ್ತೆಯಾದ ನಂತರವೇ ದಾಳಿಯ ನಿಖರ ಕಾರಣ ಸ್ಪಷ್ಟವಾಗಲಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸಣ್ಣ ವಿಚಾರದ ವಿವಾದ ಅಥವಾ ವೈಯಕ್ತಿಕ ಅಸಮಾಧಾನ ಈ ದಾಳಿಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    Also Read  ಸಚಿನ್ ತೆಂಡೂಲ್ಕರ್ ಮಗಳ ಜಪಾನೀಸ್ ಕನೆಕ್ಷನ್ ಈಗ ದೇಶದ ಗಮನ ಸೆಳೆಯುತ್ತಿದೆ…ಸಾರಾ ಹೊಸ ಒಪ್ಪಂದ ಚರ್ಚೆಯಲ್ಲಿ

    ಮತ್ತೊಂದು ದೊಡ್ಡ ಅಚ್ಚರಿ: ಹಾಸ್ಟೆಲ್‌ಗೆ ಅನುಮತಿ ಇರಲಿಲ್ಲ

    ಘಟನೆ ಬಳಿಕ ಹೊರಬಂದ ಮತ್ತೊಂದು ವಿಚಾರ ಇನ್ನಷ್ಟು ಆತಂಕಕಾರಿ. ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಸಲ್ಲಿಸಿದ ವರದಿ ಪ್ರಕಾರ, ಈ ಖಾಸಗಿ ಹಾಸ್ಟೆಲ್ ರಾಜ್ಯ ಶಿಕ್ಷಣ ಇಲಾಖೆಯಿಂದ ಅಧಿಕೃತ ಅನುಮತಿ ಪಡೆದಿರಲಿಲ್ಲ.ಮಕ್ಕಳ ಮೇಲ್ವಿಚಾರಣೆಗೆ ಯಾವುದೇ ಪುರುಷ ಸಿಬ್ಬಂದಿ ನೇಮಕವಾಗಿರಲಿಲ್ಲ,ಹಾಸ್ಟೆಲ್‌ನ CCTV ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ

    ಘಟನೆ ಬಳಿಕ ಶಾಲೆಯ ಆಡಳಿತ ಮಂಡಳಿ ಕಾಣೆಯಾಗಿದ್ದಾರೆ

    ಶಾಲೆಯಲ್ಲಿ ಒಟ್ಟು 158 ವಿದ್ಯಾರ್ಥಿಗಳು ಓದುತ್ತಿದ್ದರೂ, ಹಾಸ್ಟೆಲ್‌ನಲ್ಲಿ ಕೇವಲ 9 ವಿದ್ಯಾರ್ಥಿಗಳು ಮಾತ್ರ ವಾಸವಾಗಿದ್ದರು.

    ಈ ಘಟನೆ ಮತ್ತೊಂದು ಪ್ರಮುಖ ವಿಷಯವನ್ನು ಸಮಾಜದ ಮುಂದೆ ತರುತ್ತದೆ – ಮಕ್ಕಳ ಮಾನಸಿಕ ಆರೋಗ್ಯ. ವಸತಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಕೆಲವೊಮ್ಮೆ ಹಲವು ರೀತಿಯ ಒತ್ತಡಗಳು ಎದುರಾಗುತ್ತವೆ.ಅವುಗಳಲ್ಲಿ ಪ್ರಮುಖವಾದವು,ಮನೆ ಮತ್ತು ಕುಟುಂಬದ ನೆನಪು,ಒಂಟಿತನ,ಸಹಪಾಠಿಗಳ ಕಿರುಕುಳ (Bullying),ಅಧ್ಯಯನದ ಒತ್ತಡ,ಶಿಕ್ಷೆ ಅಥವಾ ಅವಮಾನ ಭಯದಂತ ಸಮಸ್ಯೆ ಹೇಳಿಕೊಳ್ಳಲಾಗದೇ ಅದುಮಿಟ್ಟು ಇಟ್ಟು ಈ ರೀತಿ ಹೊರಹಾಕಬಹುದಾದ ಗಂಬೀರ ವರ್ತನೆಗಳು .

    ಈ ಸಮಸ್ಯೆಗಳು ಸರಿಯಾದ ಸಮಯದಲ್ಲಿ ಗಮನಕ್ಕೆ ಬರದಿದ್ದರೆ, ಕೆಲ ಸಂದರ್ಭಗಳಲ್ಲಿ ಅವು ಅಪಾಯಕಾರಿಯಾಗಿ ಪರಿಣಮಿಸ್ತವೆ.ಸಮಾಜಕ್ಕೆ, ಪೋಷಕರಿಗೆ, ವಿದ್ಯಾಸಂಸ್ಥೆ ಗಳು ಒಟ್ಟಾರೆಯಾಗಿ ಗಮನಿಸಬೇಕಾದ ವಿಷಯಗಳು ಮೊದಲನೆಯದಾಗಿ, ಮಕ್ಕಳ ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ಶಾಲೆಯಲ್ಲೂ ಕೌನ್ಸಿಲಿಂಗ್ ವ್ಯವಸ್ಥೆ ಇರಬೇಕು.

    Also Read  ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢

    ಎರಡನೆಯದಾಗಿ, ವಸತಿ ಶಾಲೆಗಳ ಭದ್ರತಾ ವ್ಯವಸ್ಥೆ ಕಡ್ಡಾಯವಾಗಬೇಕು. ಯಾವುದೇ ಹಾಸ್ಟೆಲ್ ಸರ್ಕಾರದ ಅನುಮತಿ ಇಲ್ಲದೆ ನಡೆಯಲು ಅವಕಾಶ ನೀಡಬಾರದು.

    ಮೂರನೆಯದಾಗಿ, ವಿದ್ಯಾರ್ಥಿಗಳ ನಡುವಿನ ಬುಲಿಯಿಂಗ್ ಅಥವಾ ಕಿರುಕುಳವನ್ನು ಕಟ್ಟುನಿಟ್ಟಾಗಿ ತಡೆಯಬೇಕು.

    ನಾಲ್ಕನೆಯದಾಗಿ, ಪೋಷಕರು ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸುವ ಮೊದಲು ಅದರ ಸುರಕ್ಷತೆ ಮತ್ತು ವ್ಯವಸ್ಥೆಯನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ.

    ಬಳ್ಳಾರಿಯ ಈ ದುರಂತ ಕೇವಲ ಒಂದು ಕ್ರಿಮಿನಲ್ ಪ್ರಕರಣವಲ್ಲ; ಇದು ಸಮಾಜಕ್ಕೆ ಎಚ್ಚರಿಕೆಯ ಘಂಟೆಯಾಗಿದೆ. ಒಂದು ಮಗುವಿನ ಜೀವ ಕಳೆದುಹೋಯಿತು. ಇನ್ನೂ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವಾರು ಕುಟುಂಬಗಳು ದುಃಖದಲ್ಲಿ ಮುಳುಗಿವೆ.

    ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಭದ್ರತೆ, ಮಾರ್ಗದರ್ಶನ ಮತ್ತು ಪ್ರೀತಿ ನೀಡಬೇಕಾದ ಸ್ಥಳಗಳು. ಆದರೆ ಆ ಸ್ಥಳದಲ್ಲೇ ಹಿಂಸಾಚಾರ ನಡೆದರೆ, ಅದು ಸಮಾಜದ ಒಟ್ಟಾರೆ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ.ಈ ಘಟನೆ ನಮಗೆ ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯವನ್ನು ನಾವು ನಿರ್ಲಕ್ಷಿಸಿದರೆ, ಅದರ ಪರಿಣಾಮವನ್ನು ಸಂಪೂರ್ಣ ಸಮಾಜವೇ ಅನುಭವಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶ ನೀಡುತ್ತದೆ

    ಮಕ್ಕಳ ಭವಿಷ್ಯ ನಿಜವಾಗಿಯೂ ಸುರಕ್ಷಿತವಾಗಿರಬೇಕಾದರೆ ಇಂತಹ ದುರಂತಗಳು ಮತ್ತೆ ನಡೆಯದಂತೆ ಸರ್ಕಾರ, ಶಾಲಾ ಆಡಳಿತ, ಶಿಕ್ಷಕರು, ಪೋಷಕರು ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಬೇಕಾಗಿದೆ..

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಇನ್‌ಸ್ಟಾಗ್ರಾಮ್ ಬ್ಲಾಕ್ ಆದ ಕ್ಷಣದಿಂದ ಹೊರಬಂತು ರಹಸ್ಯ!
    ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 400 ಬೆಡ್‌ಗಳ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್…!
    ರಷ್ಯಾದಲ್ಲಿ ಪ್ಲೇಗ್ ಆತಂಕ! ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿಗೆ ನಿಗಾ…!ರಷ್ಯಾದಲ್ಲಿ ಕಟ್ಟೆಚ್ಚರ!
    ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ… ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!
    ‘ಗಾರ್ಡನ್ ಸಿಟಿ’ ಈಗ ‘ಹಾಟ್ ಸಿಟಿ’!ದಾಖಲೆ ಮಟ್ಟಕ್ಕೆ ಏರಿದ ಬಿಸಿ…
    ತೊಕ್ಕೊಟ್ಟು ವಿನಮ್ರ ಬಾರ್‌ನಲ್ಲಿ ತಲವಾರು ಹಿಡಿದು ದಾಂಧಲೆ!
    ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
    ನೇಪಾಳದಲ್ಲಿ ಭೀಕರ ಫ್ಲ್ಯಾಶ್ ಫ್ಲಡ್: 95 ಮಂದಿ ಸಾವು, 384 ಪ್ರಯಾಣಿಕರು ನಾಪತ್ತೆ; 105 ಭಾರತೀಯರೂ ಸಂಪರ್ಕಕ್ಕೆ ಸಿಗದೆ ಆತಂಕ!
    ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
    ಮುಂಜಾನೆ ಹೊತ್ತಿ ಉರಿದ ಆಸ್ಪತ್ರೆ…ಜೀವ ಉಳಿಸಿಕೊಳ್ಳಲು ರೋಗಿಗಳ ಪರದಾಟ.ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ.
    ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
    “ಅಮ್ಮಾ… ಉಸಿರಾಡಲು ಆಗ್ತಿಲ್ಲ!” — 2 ಗಂಟೆಯ ಕೊನೆಯ ಕರೆ ಬಳಿಕ 4:30ಕ್ಕೆ ಶವ… ನಿಮಿಷಾಳಿಗೆ ಏನಾಯ್ತು?
    ಟೇಕಾಫ್‌ ಬಳಿಕ RAF ಯುದ್ಧವಿಮಾನ ಪತನ: ಪೈಲಟ್‌ಗಳು ಪಾರು
    ಕರ್ನಾಟಕದ 177 ತಾಲೂಕು ಬರಪೀಡಿತ… ಪರಿಹಾರ ಕೇಳಲು ಹೊರಟ ಸರ್ಕಾರಕ್ಕೆ BJP–JDS ಸಾಥ್ ಇಲ್ಲ!ಸರ್ವಪಕ್ಷ ನಿಯೋಗಕ್ಕೆ ಗೈರು!
    ಸ್ಟರ್ಲಿಂಗ್ ವಸತಿ ಶಾಲೆಯ ಶಿಸ್ತಿನ ಹೆಸರಲ್ಲಿ 12 ವರ್ಷದ ಮುಗ್ಧನ ಜೀವ ಕಸಿದ ಕ್ರೌರ್ಯ!ಅನುಮಾನಾಸ್ಪದ ಸಾವಿನ ಸುತ್ತ ಹರಡಿದ ಆಘಾತಕಾರಿ ಸತ್ಯ…ಇಲ್ಲಿದೆ
    ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
    ಕರ್ನಾಟಕ ಬಂದ್ LIVE: ಪ್ರತಿಭಟನಾಕಾರರು ವಶಕ್ಕೆ, ರಾಜ್ಯಾದ್ಯಂತ ಬಿಗಿ ಭದ್ರತೆ; ಶಾಲೆ, ಬ್ಯಾಂಕ್, ಬಸ್ ಸೇವೆ ಎಂದಿನಂತೆ….!
    ಒಂದು ಸಹಿ… ಲಕ್ಷಾಂತರ ರೂ. ಹೊಣೆಗಾರಿಕೆಯ ಶಾಕ್!ಸಹಕಾರ ಸಂಸ್ಥೆಯಲ್ಲಿ ನಡೆದ ಅಕ್ರಮದ ಸತ್ಯ ಬಯಲು..
    ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ
    ಕಾಂಗೋದಲ್ಲಿ ಎಬೋಲಾ ಅಟ್ಟಹಾಸ:ಜಗತ್ತಿಗೆ ಮತ್ತೆ ಸಾಂಕ್ರಾಮಿಕ ಭೀತಿಯ ಗಂಟೆ..!
    ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
    ಬೆಳಗ್ಗೆ ಲೈಟ್ ಆನ್ ಮಾಡಿದ್ರು… ಕ್ಷಣದಲ್ಲೇ PGಯಲ್ಲಿ ಸಿಲಿಂಡರ್ ಸ್ಫೋಟ…! 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ ಬೊಮ್ಮಸಂದ್ರದ ಶ್ರೀ ಸಾಯಿ ಕಂಫರ್ಟ್ PGಯಲ್ಲಿಮುಂಜಾನೆ ಅಗ್ನಿ ದುರಂತ
    ಮಂಗಳೂರು ಹೆದ್ದಾರಿಗಳಲ್ಲಿ ರಾತ್ರಿ ಟ್ರಾನ್ಸ್ಜೆಂಡರ್ ಕಿರುಕುಳಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಸೂಚನೆ..!
    ಬಂಗಾಳ ರಾಜಕೀಯದಲ್ಲಿ ಭಾರಿ ಟ್ವಿಸ್ಟ್ ಮೇಲೆ ಟ್ವಿಸ್ಟ್..! ಸುವೇಂದು ಪ್ರಮಾಣವಚನಕ್ಕೂ ಬ್ರೇಕ್ ಬೀಳುತ್ತಾ?ಸುಪ್ರೀಂ ಕೋರ್ಟ್ ಎಂಟ್ರಿ ಆಗುತ್ತಾ?
    ಮೂಗಿನಿಂದ ಸೋರಿದ್ದು ಶೀತವಲ್ಲ…ಮೆದುಳಿನ ದ್ರವ! 2 ವರ್ಷ ಕಾಡಿದ ಸಮಸ್ಯೆ…10 ವರ್ಷದ ಬಾಲಕನಿಗೆ ಬೆಂಗಳೂರಿನಲ್ಲಿ ಅಪರೂಪದ skull ಡಿಫೆಕ್ಟ್ ಚಿಕಿತ್ಸೆ…!
    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
    ತಪ್ಪೊಪ್ಪಿಕೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರೀಕ್…!ಶಿಕ್ಷೆ ಏನು?
    ಕಾರು ಸ್ಟೀರಿಂಗ್ ಹಿಡಿದ ಬಾಲಕಿ… ಪಕ್ಕದಲ್ಲೇ ಕುಳಿತಿದ್ದ ಪೊಲೀಸ್ ಅಧಿಕಾರಿ! ವೈರಲ್ ವಿಡಿಯೋ ಎಬ್ಬಿಸಿದ ದೊಡ್ಡ ಪ್ರಶ್ನೆ
    ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ… ಕಾರಣ ನಿಗೂಢ
    ಬೆಳಕು-ನೆರಳಿನ ಕಾವ್ಯ: ಕಾಲವನ್ನೇ ಕಟ್ಟಿಹಾಕುವ ಛಾಯಾಚಿತ್ರಗಳ ವೈಭವ