📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?

ಬ್ರಹ್ಮಾವರ ತಾಲೂಕಿನ ಕೋಟ ಹೆರಾಡಿ ಪರಿಸರದ ಹೊಸಾಳ ಗ್ರಾಮ ವ್ಯಾಪ್ತಿಯ ನಾಗರಮಠ ಎಂಬಲ್ಲಿ ಸೀತಾನದಿ ಪಾತ್ರದಲ್ಲಿನ, ಮರಳು ತೆಗೆಯಲು ಜಿಲ್ಲಾಡಳಿತವು ಅವೈಜ್ಞಾನಿಕವಾಗಿ ಸ್ಥಳೀಯರ ಗಮನಕ್ಕೂ ತಾರದೆ ಮರಳು ತೆಗೆಯಲು ಪರ್ಮಿಷನ್ ನೀಡುವ ಮೂಲಕ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು  ಆರೋಪಿಸುತ್ತಿದ್ದಾರೆ ಸ್ಥಳೀಯ ಜನರು.

ಸ್ವತಃ ಜಿಲ್ಲಾಧಿಕಾರಿಗಳೇ ಖುದ್ದಾಗಿ ಬಂದು ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಜನರ ಅಳಲನ್ನು ಆಲಿಸಿ  ಆನಂತರ ಮರಳು ತೆಗೆಯಲು ಪರ್ಮಿಷನ್ ಕೊಡಬೇಕೇ ಬೇಡವೇ ಎಂದು ಆಲೋಚಿಸಲಿ. ಅದು ಬಿಟ್ಟು ಸ್ಥಳೀಯ ಪರಿಸರದ ಬಗ್ಗೆ ಗಂಧ ಗಾಳಿಯೂ ಗೊತ್ತಿಲ್ಲದ, ಯಾರದೋ ಅಣತಿಯಂತೆ ಜಿಲ್ಲಾ ಕೇಂದ್ರದಲ್ಲಿ ಕುಳಿತು ಪರ್ಮಿಷನ್ ಕೊಡುವ ಮೂಲಕ ಜನರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ನೋವಿನಿಂದಲೇ ಆಗ್ರಹಿಸುತ್ತಿದ್ದಾರೆ ಇಲ್ಲಿನ ಜನರು.

ನಾಗರಮಠದ ನಾಗರಿಕರು ಬಹಳ ಸಮಯದಿಂದ ಈ ಒಂದು ಅಕ್ರಮದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅವರ ಧ್ವನಿಯನ್ನು ಸ್ವತಹ ಮರಳು ವ್ಯಾಪಾರಸ್ಥರು ಮತ್ತು ಆಡಳಿತ ವ್ಯವಸ್ಥೆಯು ಒಟ್ಟಾಗಿ ಸೇರಿ ಬಲವಂತವಾಗಿ ಅಡಗಿಸುವ ಪ್ರಯತ್ನವನ್ನು ಮಾಡುತ್ತಿರುವುದು ಅಕ್ಷಮ್ಯ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.

ಸೀತಾ ನದಿಯ ಅಕ್ಕ ಪಕ್ಕದಲ್ಲಿ ನೂರಾರು ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಯುತ್ತದೆ. ಸ್ಥಳೀಯ ಕೃಷಿಕರ ಭೂಮಿಯಲ್ಲಿ ಯಾರ ಪರ್ಮಿಷನ್ ಇಲ್ಲದೆ ತಾತ್ಕಾಲಿಕ ರಸ್ತೆಯನ್ನು ಮಾಡಿಕೊಂಡು ಮರಳನ್ನು ಹೊತ್ತೊಯ್ಯುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಓಡಾಡಲು ಕಷ್ಟವಾಗುತ್ತಿದೆ. ದಬ್ಬಾಳಿಕೆ ಪ್ರಶ್ನಿಸಿದವರ  ಮೇಲೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಿಸಲು ಹೋದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿಲ್ಲ. ಬದಲಿಗೆ ಊರಿನ ನಾಗರಿಕರ ವಿರುದ್ಧವೇ ದೂರು ದಾಖಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಈ ಮರಳುಗಾರಿಕೆಯಿಂದಾಗಿ ಸ್ಥಳೀಯ ಕುಡಿಯುವ ನೀರಿನ ಬಾವಿಗಳಲ್ಲಿ ಉಪ್ಪು ನೀರುಗಳ ಶೇಖರಣೆ ಜಾಸ್ತಿ ಆಗುತ್ತಿದೆ ಎನ್ನುವುದು ಸ್ಥಳೀಯ ಮಹಿಳೆಯರ ಆರೋಪ. ಆ ಮಹಿಳೆಯರು ಖುದ್ದಾಗಿ, ನಮ್ಮ ಮೇಲೆ ಇಷ್ಟೆಲ್ಲ ದೌರ್ಜನ್ಯ ನಡೆಸುತ್ತಿರುವ ಜಿಲ್ಲಾಡಳಿತ,  ನಮ್ಮನ್ನೆಲ್ಲರನ್ನು ಮುಗಿಸಿ ಮರಳನ್ನು ತೆಗೆದುಕೊಂಡು ಹೋಗಲಿ ಎಂದು ನೋವಿನಿಂದ ಆಗ್ರಹಿಸುತ್ತಿದ್ದಾರೆ. ನಮ್ಮ ವಿರುದ್ಧ, ಸ್ಥಳೀಯರಲ್ಲದವರು ಎಂಬ ಆರೋಪ ಮಾಡುತ್ತಿದ್ದಾರೆ. ನಾವು ಇಲ್ಲಿಯವರೆ ಅನ್ನುವುದಕ್ಕೆ ಸಾಕಷ್ಟು ಪುರಾವೆಗಳಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ನೀಡಿದ ಪುರಾವೆಗಳೇ ಇದೆ. ಆದರೂ ನಮ್ಮ ವಿರುದ್ಧ ಸ್ಥಳೀಯರಲ್ಲದವರು ಎಂಬ ಲೇಬಲ್ ಅಂಟಿಸಿ ನಮ್ಮನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸುತ್ತಿರುವುದು ಮರಳು ಮಾಫಿಯಾ, ಜೊತೆಗೆ ವ್ಯವಸ್ಥೆಯೂ ಕೈಜೋಡಿಸಿದೆ ಎನ್ನುತ್ತಾರೆ.

ಇಷ್ಟಾದರೂ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ ಖುದ್ದಾಗಿ ಸ್ಥಳಕ್ಕೆ ಹೋಗಿ ನಾಗರಮಠದ ನಾಗರಿಕರ ಅಹವಾಲನ್ನು ಕೇಳುವ ಪ್ರಯತ್ನವನ್ನು ಮಾಡಿಲ್ಲ. ಇಡೀ ಜಿಲ್ಲೆ ನಮ್ಮದು ಎಂಬ ಅಹಂಕಾರದಲ್ಲಿ ನಡೆದುಕೊಳ್ಳುತ್ತಿದೆ ಜಿಲ್ಲಾಡಳಿತ ಎನ್ನುವುದು ಸ್ಥಳೀಯ ಯುವಕರ ಗಂಭೀರವಾದಂತಹ ಆರೋಪ. 

ಮರಳುಗಾರಿಕೆ ಅವೈಜ್ಞಾನಿಕ ವಾಗಿ ಆಗಕೂಡದು. ಅದರಿಂದ ಸ್ಥಳೀಯ ಪರಿಸರಕ್ಕೆ ಮಾರಕವಾಗುತ್ತದೆ. ನದಿ ಪಾತ್ರದ ಭೂಮಿಗಳು ಕುಸಿಯುವ ಅಪಾಯವಿರುತ್ತದೆ. ಹಾಗಾಗಿ ಆಯಾ ಪರಿಸರದ ಸ್ಥಳೀಯ ಜನರನ್ನು  ವಿಶ್ವಾಸಕ್ಕೆ ತೆಗೆದುಕೊಂಡು ಆ ನಂತರ ಪರ್ಮಿಷನ್ ನೀಡುವ ಕೆಲಸ ಮಾಡಬೇಕು. ಇದ್ಯಾವುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಡಿಲ್ಲ. ಪ್ರಕೃತಿದತ್ತ ವಾಗಿರುವಂತಹ ಪರಿಸರದ ಮೇಲೆ ಜಿಲ್ಲಾಡಳಿತಕ್ಕೆ ಎಷ್ಟು ಹಕ್ಕು ಇದೆಯೋ, ಅಷ್ಟೇ ಹಕ್ಕು ಪರಿಸರದ ನಾಗರಿಕರಿಗೂ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ವ್ಯವಸ್ಥೆಯ ಪವರ್ ಬಳಸಿಕೊಂಡು ಜನರನ್ನು ಹತ್ತಿಕ್ಕುವ ಕೆಲಸ ಈ ಹಿಂದೆ ಬ್ರಿಟಿಷ್ ಆಡಳಿತ ಮಾಡುತ್ತಿತ್ತು. ಅದು ಮುಂದುವರೆಯಬಾರದು ತಾನೇ? ಕೋಟ ಶ್ರೀನಿವಾಸ್ ಪೂಜಾರಿ ಸ್ಥಳೀಯ ನಾಯಕರಾಗಿದ್ದಾರೆ. ಜಯಪ್ರಕಾಶ್ ಹೆಗಡೆ ಈ ಭಾಗದ ನಾಯಕರು ಹಾಗೂ ಮಾಜಿ ಜನಪ್ರತಿನಿದಿ, ಸ್ಥಳೀಯ ಶಾಸಕರು ಹಾಗೂ ಅನೇಕ ನಾಯಕರುಗಳು ಇದ್ದರೂ ಅವರ್ಯಾರು ನಾಗರಮಠದ ನಾಗರಿಕರ ಪರವಾಗಿ ಇಲ್ಲಿಯವರೆಗೆ ಬಾರದಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ.

COMMENTS

Login with Gmail to comment

ಇನ್ನಷ್ಟು ಸುದ್ದಿ

ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
ಸಾರ್ವಜನಿಕ ಸ್ಥಳದಲ್ಲಿ ಕೈಕೈ ಮಿಲಾಯಿಸಿ ಜಗಳ ಮಾಡಿದ್ರೇ ಹುಷಾರ್…!
ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
ಸುಳ್ಯದಲ್ಲಿ ಚಿನ್ನಾಭರಣ ಕಳವು,  ಮಹಿಳೆಯ ಮೇಲೆ ಶಂಕೆ
165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
ನಾಟಕ ಕಲಾವಿದೆ ಸೌಮ್ಯ ಶೆಟ್ಟಿ ಬಂಧನ
ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಉಡುಪಿ ಜಿಲ್ಲೆಯಲ್ಲಿ  ಹೆಚ್ಚಾದ  ಚಿರತೆ ಉಪಟಳ : ತುರ್ತು ಕ್ರಮಕ್ಕೆ ತುರವೇ ಮನವಿ
ಭೀಕರ ಅಪಘಾತಕ್ಕೆ ಸ್ಥಳೀಯ ನಾಯಕ ಸೇರಿ ಇಬ್ಬರು ದುರ್ಮರಣ 
ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
 ಡೊನಾಲ್ಡ್ ಟ್ರಂಪ್ ಟೆರರ್ ನಡೆ      ವಿಶ್ವದ ಆರ್ಥಿಕತೆ ಪಾತಾಳದ ಕೆಡೆ
ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!