📍 Karavali Maruta kannada News
LIVE CONTACT

ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು

ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು

ಇದು ಎರಡು ದಶಕಕ್ಕೂ ಹೆಚ್ಚು ಸಮಯದಿಂದ ನಡೆದುಕೊಂಡು ಬಂದಿರುವ೦ತಹ ವಿವಾದ. ಪ್ರಭಾವಿ ಮಠಗಳಲ್ಲಿ ಒಂದಾದ ಕಾಶಿ ಮಠದ ಸುಗುಣೇಂದ್ರ ತೀರ್ಥರ ಅವಧಿಯಲ್ಲಿ ಶುರುವಾದ ವಿವಾದವು ಈಗ ಅವರ ಶಿಷ್ಯರ ಕಾಲದಲ್ಲಿ ಶಮನ ಗೊಳ್ಳುವ ಹಂತಕ್ಕೆ ಬಂದಿದೆ ಇದು ಒಳ್ಳೆಯ ಬೆಳವಣಿಗೆ. ಸಮಾಜದ ಹಿತದೃಷ್ಟಿಯಿಂದ ಸಮಾಜದೊಳಗಿನ ಬಿರುಕನ್ನು ಒಗ್ಗೂಡಿಸಿ ಬಲಿಷ್ಠ ಸಮಾಜವನ್ನಾಗಿ ಜಿಎಸ್‌ಬಿಯನ್ನು ಕಾಣುವಂತೆ ಮಾಡಬೇಕು ಎಂಬ ಏಕೈಕ ಉದ್ದೇಶದೊಂದಿಗೆ ಎರಡು ದಶಕಗಳ ಹಿಂದಿನ ಕಹಿ ಘಟನೆಗಳನ್ನೆಲ್ಲ ಮರೆತು ಒಂದಾಗಿ ಸಾಗುವ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನು ಕಾಶಿ ಮಠದ ಅಧಿಕೃತವಾದ ಸ್ವಾಮೀಜಿ ಸಂಯಮೇ0ದ್ರ ತೀರ್ಥ ಸ್ವಾಮೀಜಿಯ ಫಾಲೋವರ್ಸ್ ಇಟ್ಟಿದ್ದಾರೆನ್ನುವ ಸ್ಪಷ್ಟವಾದಂತಹ ಮೆಸೇಜ್ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ.

ಕಾಶಿ ಮಠ ಅತ್ಯಂತ ಪ್ರಭಾವಿ ಮಠವು ಹೌದು ಶ್ರೀಮಂತ ಮಠವು ಹೌದು. ದೊಡ್ಡ ಪರಂಪರೆಯನ್ನು ಹೊಂದಿರುವ0ತಹ ಮಠ ಅದು. ಅಂತಹ ಮಠದಲ್ಲಿ ಎರಡುವರೆ ದಶಕಗಳ ಹಿಂದೆ ದೊಡ್ಡ ಪ್ರಮಾಣದಲ್ಲೇ ಬಿರುಕು ಮೂಡಿತ್ತು. ಅವತ್ತಿನ ಮಠದ ಮಠಾಧಿಪತಿಗಳಾದ ಸುಧೀಂದ್ರ ತೀರ್ಥ ಸ್ವಾಮೀಜಿಯವರು, ರಾಘವೇಂದ್ರ ತೀರ್ಥ ಸ್ವಾಮೀಜಿಯವರನ್ನು ಶಿಷ್ಯರನ್ನಾಗಿ ಸ್ವೀಕರಿಸಿರುತ್ತಾರೆ. ಹಾಗಾಗಿ ಸುಧೀಂದ್ರ ತೀರ್ಥರನ್ನು ದೊಡ್ಡ ಸ್ವಾಮೀಜಿ ಹಾಗೂ ರಾಘವೇಂದ್ರ ತೀರ್ಥರನ್ನು ಸಣ್ಣ ಸ್ವಾಮೀಜಿ ಅಂತ ಇಡೀ ಸಮಾಜವು ಆವತ್ತು ಕರೆಯುತ್ತಿತ್ತು. ಕೊನೆಗೆ ಅದೇ ದೊಡ್ಡ ಸ್ವಾಮಿ, ಸಣ್ಣ ಸ್ವಾಮಿ ನಡುವಿನ ವೈಮನಸ್ಸ, ವಿವಾದವು, ಭಾರೀ ವಿವಾದವನ್ನು ಎಬ್ಬಿಸಿತು ಸಮಾಜದ ಒಳಕ್ಕೂ ಸಾಕಷ್ಟು ಸಮಸ್ಯೆಯನ್ನು ಸೃಷ್ಟಿಸಿತು.
ಸುಧೀಂದ್ರ ತೀರ್ಥ ಸ್ವಾಮೀಜಿ ಕಾಶಿ ಮಠದ ಮಠಾಧಿಪತಿಗಳಾಗಿ ಆಡಳಿತ ನಡೆಸುತ್ತಿರುವಾಗಲೇ ದೊಡ್ಡ ಸ್ವಾಮಿಗಳಾದ ಸುಧೀಂದ್ರರು, ಚಿಕ್ಕಸ್ವಾಮಿ ರಾಘವೇಂದ್ರ ತೀರ್ಥರಿಗೆ ಕೆಲವು ಜವಾಬ್ದಾರಿಗಳನ್ನು ನೀಡಿರುತ್ತಾರೆ. ಹಾಗೆಯೇ ಕೆಲವು ವಿಚಾರದಲ್ಲಿ ಆಡಳಿತ ನಡೆಸಲು ಅವಕಾಶವನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ರಾಘವೇಂದ್ರತೀರ್ಥರು ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಿಲ್ಲ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡರು ಎಂಬ ನಿಲುವು ತಳೆದು ಹಿರಿಯ ಸ್ವಾಮೀಜಿ ಸುಧೀಂದ್ರ ತೀರ್ಥ ಸ್ವಾಮೀಜಿ ರಾಘವೇಂದ್ರ ತೀರ್ಥರ ವಿರುದ್ಧ ಸಿಡಿದು ನಿಲ್ಲುತ್ತಾರೆ. ಆಗ ರಾಘವೇಂದ್ರ ತೀರ್ಥ ಸ್ವಾಮೀಜಿ ಕೂಡ ಸುಧೀಂದ್ರ ತೀರ್ಥರ ವಿರುದ್ಧ ತೊಳೇರಿಸಿ ನಿಲ್ಲುತ್ತಾರೆ. ಅಲ್ಲಿಂದ ಶುರುವಾಗುತ್ತದೆ ವಿವಾದ.
ಅವತ್ತು ಸುಧೀಂದ್ರ ತೀರ್ಥರು ಸ್ಪಷ್ಟವಾಗಿ ರಾಘವೇಂದ್ರರಿಗೆ ಹೇಳುತ್ತಾರೆ, ನಿನಗೆ ಯಾವುದೇ ಕಾರಣಕ್ಕೂ ಮಠದ ಮುಖ್ಯಸ್ಥನನ್ನಾಗಿ ಮಾಡುವುದಿಲ್ಲ ನೀನು ನಿನ್ನ ದಾರಿ ನೋಡಿಕೋ ಅನ್ನುತ್ತಾರೆ. ಅದರಿಂದ ಸಿಟ್ಟಾದ ಚಿಕ್ಕಸ್ವಾಮಿ ರಾಘವೇಂದ್ರ ತೀರ್ಥರು, ಬಾ ಎಂದಾಗ ಬರಲು, ಹೋಗು ಎಂದಾಗ ಹೋಗಲು ನಾವೇನೂ ಭಿಕ್ಷೆ ಬೇಡಿ ಬಂದಿಲ್ಲ, ತಾವು ಕೂಡಾ ಕಾಶಿ ಮಠದ ಮಠಾಧಿಪತಿಗಳು ಎಂದು ಘೋಷಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಈ ಬಗ್ಗೆ ಕಾಶಿ ಮಠದ ಸ್ವಾಮೀಜಿ ಅಂತ ನ್ಯಾಯಾಲಯದಲ್ಲೂ ದಾವೆ ಹೂಡುತ್ತಾರೆ, ಇದು ಮಠದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಹಾಗಾಗಿ ಈ ದೊಡ್ಡಸ್ವಾಮಿ ಚಿಕ್ಕಸ್ವಾಮಿ ವಿವಾದವು ವಿವಿಧ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಕಡೆಗೂ ಅಲ್ಲಿನ ವಾತಾವರಣಕ್ಕೆ ಬೇಸತ್ತು, ರಾಘವೇಂದ್ರ ತೀರ್ಥರು ತಮ್ಮ ವಶದಲ್ಲಿದ್ದ ಶತಾಶತಮಾನದಷ್ಟು ಹಳೆಯದಾದ ಸಾಲಿಗ್ರಾಮವು ಸೇರಿದಂತೆ ಹಲವು ವಿಗ್ರಹಗಳು ಮತ್ತು ಅಮೂಲ್ಯವಾದ ವಸ್ತುಗಳನ್ನು ಪಡೆದುಕೊಂಡು ಮಠ ಬಿಟ್ಟು ಹೊರಡುತ್ತ್ತಾರೆ. ಹಾಗೆಯೇ ಮಠದ ಮುಖ್ಯಸ್ಥ ಸ್ಥಾನದ ವಿಚಾರವೂ ನ್ಯಾಯಾಲಯಲ್ಲಿ ಹೋರಾಟಕ್ಕೆ ಇಳಿಯುತ್ತದೆ. ಆಗ ಮಠದ ಭಕ್ತರು ಮತ್ತು ಸುಧೀಂದ್ರ ತೀರ್ಥರು ಈ ಬಗ್ಗೆ ಕಾನೂನು ಹೋರಾಟಕ್ಕೆ ಇಳಿಯುತ್ತಾರೆ ರಾಘವೇಂದ್ರತೀರ್ಥರ ಮೇಲೆ ಪ್ರಕರಣವು ದಾಖಲಾಗುತ್ತದೆ.
ನ್ಯಾಯಾಲಯದಲ್ಲಿ ಸುದೀರ್ಘವಾದಂತಹ ಹೋರಾಟ ನಡೆದು ಸುಧೀಂದ್ರ ತೀರ್ಥರೇ ಮಠದ ಮುಖ್ಯಸ್ಥರು ರಾಘವೇಂದ್ರ ತೀರ್ಥರಲ್ಲ ಅನ್ನೋದು ನಿರ್ಣಯವಾಗುತ್ತದೆ. ಅಷ್ಟಾದರೂ ರಾಘವೇಂದ್ರ ತೀರ್ಥ ಸ್ವಾಮೀಜಿಗಳ ಪರವಾಗಿಯೂ ಭಕ್ತರ ಗಣ ಇರುತ್ತದೆ. ಜಿಎಸ್‌ಬಿ ಸಮಾಜದ ಅನೇಕ ಖ್ಯಾತನಾಮರೂ ಸಹ ರಾಘವೇಂದ್ರ ತೀರ್ಥರ ಪರವಾಗಿ ನಿಂತಿರುತ್ತಾರೆ ಅನ್ನುವುದು ಸಹ ಇಲ್ಲಿ ಇಂಪಾಟೆðಟ್ ಅಂತ ಅನ್ನಿಸಿಕೊಳ್ಳುತ್ತದೆ. ಒಟ್ಟಾರೆಯಾಗಿ ಸುಧೀಂದ್ರ ತೀರ್ಥರು ಮತ್ತು ರಾಘವೇಂದ್ರ ತೀರ್ಥರ ನಡುವಿನ ಮಠದ ಪೀಠಾಧಿಪತಿ ಸ್ಥಾನದ ನಡುವಿನ ಗುದ್ದಾಟದಿಂದಾಗಿ ಜಿಎಸ್‌ಬಿ ಸಮಾಜದಲ್ಲಿ ಬಿರುಕು ಉಂಟಾಗಿದ್ದು ದುಃಖಕರ ವಿಚಾರ. ರಾಘವೇಂದ್ರ ತೀರ್ಥರನ್ನು ಮತ್ತು ಅವರ ಹಿಂಬಾಲಕರನ್ನು ಸಮಾಜದಿಂದಲೇ ಹೊರಗಿವ ನಿರ್ಣಯ ಕಾಶಿಮಠದಿಂದ ಹೊರ ಬೀಳುತ್ತದೆ. ಇದರಿಂದಾಗಿ ಸಮಾಜದ ಒಳಗೆ ಸಾಕಷ್ಟು ಮಾನಸಿಕ ಹಿಂಸೆಯ ಸನ್ನಿವೇಶ ಕ್ರಿಯೇಟ್ ಆಗುತ್ತದೆ. ಸಮಾಜದ ಸಾಮಾನ್ಯ ಜನರು ಇದರ ಬಿಸಿಯನ್ನು ಉಣ್ಣುತ್ತಾರೆ ಕೂಡ. ಒಂದು ಹಂತದಲ್ಲಿ ಹೆಣ್ಣು ಗಂಡು ಕೊಟ್ಟು ತಗಳುವುದಕ್ಕೂ ಇಲ್ಲಿ ನಿಶಿದ್ಧ ಎಂಬ0ತಹ ವಾತಾವರಣ ನಿರ್ಮಾಣವಾಗಿತ್ತು. ಅವರ ಮನೆ ಕರ‍್ಯಕ್ರಮಕ್ಕೆ ಹೋಗೂವೂದಕ್ಕೂ ನಿಷಿದ್ದವಿತ್ತು. ಇದನ್ನು ಹೋಗಲಾಡಿಸುವ ಪ್ರಯತ್ನವನ್ನು ಆವತ್ತಿನ ಸ್ವಾಮೀಜಿಗಳು ಯಾಕೆ ಮಾಡಿಲ್ಲವೋ ಅರ್ಥವಾಗುತ್ತಿಲ್ಲ.
ನಂತರ ಸುಧೀಂದ್ರ ತೀರ್ಥ ಸ್ವಾಮೀಜಿ ಮರಣ ಹೊಂದಿದ ನಂತರ ಅವರ ಸ್ಥಾನಕ್ಕೆ ಅವರ ಇನ್ನೊಬ್ಬ ಶಿಷ್ಯ ಸಂಯಮೇ0ದ್ರ ತೀರ್ಥ ಸ್ವಾಮೀಜಿ ಬರುತ್ತಾರೆ. ಅವರು ಬಂದವರು ಸುಧೀಂದ್ರ ತೀರ್ಥ ಸ್ವಾಮೀಜಿ ಯಾವ ನ್ಯಾಯಾಂಗ ಹೋರಾಟ ನಡೆಸುತ್ತಿದ್ದರೋ ಅದನ್ನು ಮುಂದುವರೆಸುತ್ತಾರೆ.
ಈ ಸಂದರ್ಭದಲ್ಲಿ ಸ್ವತಃ ರಾಘವೇಂದ್ರ ತೀರ್ಥ ಸ್ವಾಮಿಗಳು ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸೇರಿದಂತೆ ಇಬ್ಬರು ಮೂವರ ಮೇಲೆ ಆರೋಪ ಹೊರಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ತಮ್ಮ ಹೆಸರಿನಲ್ಲಿದ್ದ ಎಫ್‌ಡಿ ಹಣವನ್ನು ಲಪಟಾಯಿಸಿದ್ದಾರೆ ಅಂತ ದೂರು ಕೊಡುವ ಮೂಲಕ ಹೊಸ ಸಂಚಲನವನ್ನು ಸೃಷ್ಟಿಸುತ್ತಾರೆ.

ಈ ರೀತಿಯ ಹಲವು ಏರಿಳಿತದ ಹೋರಾಟಗಳು ಒಬ್ಬರ ಮೇಲೆ ಒಬ್ಬರಂತೆ ಮಾಡುತ್ತಾ ಇರುವಂತೆಯೇ ಈಗ ಇದೆಲ್ಲದಕ್ಕೂ ಫುಲ್ ಸ್ಟಾಪ್ ಬೀಳುವಂತಹ ಒಂದು ವಾತಾವರಣ ನಿರ್ಮಿಸಿರುವಂತೆ ಕಾಣುತ್ತಿದೆ.
ಮಂಗಳೂರಿನ ಪ್ರತಿಷ್ಠಿತ ವ್ಯಕ್ತಿ ಒಬ್ಬರ ಮನೆಯಲ್ಲಿ ರಾಘವೇಂದ್ರ ತೀರ್ಥ ಸ್ವಾಮೀಜಿ ಮತ್ತು ಸಂಯಮೇ0ದ್ರ ತೀರ್ಥ ಸ್ವಾಮೀಜಿ ಎರಡು ಸ್ವಾಮೀಜಿಗಳ ಆಪ್ತ ಭಕ್ತರ ನಡುವೆ ಒಂದು ಮೀಟಿಂಗ್ ನಡೆಯುತ್ತದೆ.
ಮಂಗಳೂರಿನ ಚೇತನ್ ಕಾಮತ್ ಹಾಗೂ ಸಿದ್ದಾರ್ಥ ಪ್ರಭು ಎಂಬ ಹಿರಿಯರು ಹಾಗೂ ಗಣ್ಯ ವ್ಯಕ್ತಿಗಳು ಎಂದೆನ್ನಿಸಿಕೊ0ಡವರು ಇಂಥಹುದೊ0ದು ಮಾತುಕತೆಗೆ ಅಡಿಗಲ್ಲನ್ನು ಇಟ್ಟಿದ್ದಾರೆ ಎನ್ನುವುದು ಈ ಕ್ಷಣಕ್ಕೆ ಬಂದ ಮಾಹಿತಿ.
ಎಸ್ ಚೇತನ್ ಕಾಮತ್ ಮತ್ತು ಸಿದ್ದಾರ್ಥ್ ಪ್ರಭು ಇಬ್ಬರು ದೊಡ್ಡ ಸ್ವಾಮಿಗಳಾದ ಸಂಯಮೇ0ದ್ರ ತೀರ್ಥರ ಆಪ್ತ ಭಕ್ತರಲ್ಲಿ ಕಾಣಿಸಿಕೊಳ್ಳುವಂತವರು. ಅವರೇ ಖುದ್ದಾಗಿ ಇಂತಹದೊ0ದು ಪ್ರಯತ್ನವನ್ನು ಬಂಟ್ವಾಳದ ಜುವೆಲ್ಲರ್ಸ್ ಮಾಲೀಕರೊಬ್ಬರ ಮೂಲಕ ಮಾಡುತ್ತಾರೆ ಎಂದರೆ ಇಲ್ಲೊಂದು ಪ್ರಾಮಾಣಿಕವಾದಂತಹ ಕಾಳಜಿ ಇದೆ ಅಂತ ಅರ್ಥ.
ಯಾವುದೇ ರೀತಿಯ ಪ್ರತಿಷ್ಠೆಯನ್ನು ಮೆರೆಯಲು ಹೋಗದೆ, ಇಗೋವನ್ನು ತೋರಿಸಿಕೊಳ್ಳದೆ ಸಂಯಮೇAದ್ರ ತೀರ್ಥರ ಅನುಮತಿ ಪಡೆದೆ ಇಬ್ಬರು ಗಣ್ಯರು ಇಂತಹದೊ0ದು ಆರೋಗ್ಯಕರ ವಾದಂತಹ ಪ್ರಮುಖ ಹೆಜ್ಜೆಯನ್ನು ಇರಿಸಿದ್ದಾರೆ ಎಂದರೆ ತಪ್ಪಲ್ಲ. ಈ ವಿಚಾರ ಸಂಯಮೇ0ದ್ರ ತೀರ್ಥರ ಗಮನಕ್ಕೆ ಬಾರದೆ ಅವರ ಒಪ್ಪಿಗೆ ಇಲ್ಲದೆ ನಡೆಯಲು ಸಾಧ್ಯವೇ ಇಲ್ಲ. ಅದೇ ರೀತಿ ರಾಘವೇಂದ್ರ ತೀರ್ಥ ಸ್ವಾಮೀಜಿಯವರ ಅನುಯಾಯಿಗಳು ಸಹ ಈ ಒಂದು ಮೀಟಿಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆ ಅಲ್ಲೂ ಸಹ ರಾಘವೇಂದ್ರ ತೀರ್ಥರ ಗಮನಕ್ಕೆ ಬಂದೆ ಭಾಗವಹಿಸುತ್ತಾರೆ ಅಂತರ್ಥ. ಹಲವು ದಶಕಗಳಿಂದ ಒಂದೇ ಸಮಾಜದಲ್ಲಿ ಈ ರೀತಿಯ ಬಿಕ್ಕಟ್ಟು ಸೃಷ್ಟಿಯಾಗಿ ಒಬ್ಬರನ್ನೊಬ್ಬರು ದ್ವೇಷಿಸಿಕೊಳ್ಳುತ್ತಾ ಸಮಾಜದಲ್ಲಿ ಅಭದ್ರತೆ ಮಾಡಿಕೊಳ್ಳುವುದಕ್ಕಿಂತ ನಾವೆಲ್ಲರೂ ಒಂದಾಗಿ ಸಮಾಜವನ್ನು ಬಲಿಷ್ಠವಾಗಿ ನಿರ್ಮಿಸಿ ಪ್ರಭಾವಿ ಸಮಾಜವನ್ನಾಗಿಸಿಕೊಳ್ಳುವ ಎಂಬ ಸದುದ್ದೇಶದೊಂದಿಗೆ ಇಂತಹದೊ0ದು ಹೆಜ್ಜೆಯನ್ನು ಸ್ವತಹ ಕಾಶಿಮಠದ ಮಠಾಧಿಪತಿಗಳಾದ ಸಂಯಮೇ0ದ್ರ ತೀರ್ಥ ಸ್ವಾಮಿಗಳೇ ಖುದ್ದಾಗಿ ಚೇತನ್ ಕಾಮತ್ ಹಾಗೂ ಸಿದ್ದಾರ್ಥ ಪ್ರಭು ಅವರ ಮೂಲಕ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ಸದ್ಯಕ್ಕೆ ಬಂದ ಮಾಹಿತಿಯ ಪ್ರಕಾರ ಇವರಿಬ್ಬರು ರಾಘವೇಂದ್ರ ತೀರ್ಥ ಸ್ವಾಮೀಜಿಗಳ ಪ್ರಭಾವಿ ಭಕ್ತರನ್ನು ನೇರವಾಗಿ ಮಾತನಾಡಿಸಿದ್ದಾರೆ ಅವರ ಜೊತೆಗೆ ಒಂದೆರಡು ಸುತ್ತು ಸಿಟ್ಟಿಂಗ್ ನಡೆಸಿದ್ದಾರೆ ಆನಂತರ ಒಂದು ಮೀಟಿಂಗ್ ಮಂಗಳೂರು ನಗರದಲ್ಲಿ ನಡೆದಿದೆ. ಆ ಮೀಟಿಂಗ್ ಸಹ ರಾಘವೇಂದ್ರ ತೀರ್ಥರ ಪ್ರಭಾವಿ ಭಕ್ತರ ಮನೆಯಲ್ಲಿ ಆಗಿದೆ ಅನ್ನಲಾಗುತ್ತದೆ. ಮೀಟಿಂಗ್ ಎಲ್ಲಿಯೇ ನಡೆಯಲಿ ಹೇಗೆಯೇ ನಡೆಯಲಿ, ಕೊನೆಯಲ್ಲಿ ಸಂಯಮೇ0ದ್ರ ತೀರ್ಥರ ಆಶೆೆಯಂತೆ ಇಡೀ ಸಮುದಾಯವು ಒಂದಾಗಲಿ, ದೊಡ್ಡ ಸ್ವಾಮಿ-ಚಿಕ್ಕ ಸ್ವಾಮಿ ಎಂಬ ಭೇದ ಆದಷ್ಟು ಬೇಗ ನಶಿಸಿ ಹೋಗಲಿ ಎನ್ನುವುದು ಇಡೀ ಸಮುದಾಯದ ಒಕ್ಕೊರಲಿನ ಆಗ್ರಹಾವು ಹೌದು. ಹಿಂದೆ ನಡೆದಂತ ಘರ್ಷಣೆ ನೋವು ಮಾತಿಗೆ ಮಾತು ಎಲ್ಲವನ್ನು ಎಲ್ಲರೂ ಮರೆತು ಒಂದಾಗುವ0ತಹ ಕಾಲ ಸೃಷ್ಟಿಸಿ ಕೊಳ್ಳಬೇಕು. ಇದು ಅತ್ಯವಶ್ಯಕ ಕೂಡ. ಹಿಂದೆ ನಡೆದಂತಹ ಅವಘಡಗಳು ಅತ್ಯಂತ ಹೇಯವಾದಂತಹ ಕೃತ್ಯಗಳು ಇದೆಲ್ಲವನ್ನು ಮರೆತುಬಿಡಬೇಕು ಎರಡು ಕಡೆಯ ಭಕ್ತರು ಇದಕ್ಕೆ ಕಟಿಬದ್ಧರಾದರೆ ಸಂಯಮೇAದ್ರ ಹಾಗೂ ರಾಘವೇಂದ್ರ ತೀರ್ಥರ ಆಸೆ ಈಡೇರುತ್ತದೆ ಖಂಡಿತ.