📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!

    ಆರೋಗ್ಯ ಇಲಾಖೆಯಲ್ಲೋಬ್ಬ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡನ್ನು ಫೇಕ್ ಮಾಡಿ ಸಿಕ್ಕಾಕಿಕೊಂಡಿದ್ದಾನೆ. ಹಾಗೆ ಫೇಕ್ ಮಾಡಿ ಸಿಕ್ಕಾಕಿಕೊಂಡ ವ್ಯಕ್ತಿಯು, ಸಣ್ಣ ಅವಧಿಯಲ್ಲಿಯೇ ಮೆಡಿಕಲ್  ಹೆಸರಿನಲ್ಲಿ ಬರೋಬ್ಬರಿ 24 ಲಕ್ಷ ಕ್ಲೈಮ್ ಮಾಡಿಕೊಂಡು ದುಂಡಗಾಗಿದ್ದಾನೆ. ಅಂತಹ ವಂಚಕನನ್ನು ಕಾಪಾಡುವ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಈಗ ಉರುಳಾಗುತ್ತಿದೆ. ಅಷ್ಟೇ ಅಲ್ಲ, ಈ ಅಧಿಕಾರಿಯ ಮೇಲೆ ಕಪ್ಪು ಚುಕ್ಕೆ ಬಾರದಂತೆ ತಡೆಯಲು ಹೋದ ಮಾಹಿತಿ ಆಯುಕ್ತರಿಗೂ ಈಗ ಅವಮಾನದ ಭೀತಿ ಶುರುವಾಗಿದೆ.
    ರಾಜ್ಯ ಮಾಹಿತಿ ಆಯುಕ್ತರಾದ ಎಸ್. ರಾಜಶೇಖರ್ ಇದೀಗ  ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಧಿಕಾರಿಗಳಿಗೆ ಫೇವರೆಬಲ್ ಮಾಡಿ ಇದೀಗ ಆರ್‌ಟಿಐ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೇವಲ ಕೆಂಗಣ್ಣಿಗೆ ಗುರಿಯಾಗಿದ್ದಲ್ಲ, ಅವರ ಕೋಪಕ್ಕೆ ತುತ್ತಾಗಿ ವಜಾಗೊಳ್ಳುವ ಭೀತಿಯಲ್ಲಿದ್ದಾರೆ. ಅಷ್ಟಕ್ಕೂ ಎಸ್. ರಾಜಶೇಖರ್ ಮಾಡಿದ ತಪ್ಪಾದರೂ ಏನು? ಒಂದುವರೆ ವರ್ಷದ ಹಿಂದಷ್ಟೇ ಮಾಹಿತಿ ಆಯೋಗದ ಆಯುಕ್ತರಾಗಿ ಬಂದು ಕುಳಿತಿರುವ ಇವರು, ಇನ್ನು ಎರಡು ವರ್ಷದ ಅವಧಿಯನ್ನು ಹೊಂದಿದ್ದಾರೆ.
    ರಾಜಶೇಖರ್ ಮಾಹಿತಿ ಆಯೋಗದ ಆಯುಕ್ತರಾಗಿ ಮಾಡಿದ ತಪ್ಪಾದರೂ ಏನು? ಅಧಿಕಾರಿಗಳ ಮೇಲೆ ಸಣ್ಣನೆಯ ಅನುಕಂಪವನ್ನು ತೋರಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಆರ್‌ಟಿಐ ಅಡಿ ದೇಶದ ಯಾವುದೇ ನಾಗರಿಕನು ಸರ್ಕಾರಿ ಇಲಾಖೆಗೆ ಸಂಬAಧಪಟ್ಟ ದಾಖಲೆಗಳನ್ನು ಪಡೆದುಕೊಳ್ಳಬಹುದು. ಅದರ ವಿವರಗಳನ್ನು ತಿಳಿದುಕೊಳ್ಳಬಹುದು. ನೈಜತೆಯನ್ನು ಅರಿಯಬಹುದು. ಈ ಒಂದು ಕಾಯ್ದೆಯಿಂದಾಗಿಯೇ ಹಲವು ಭ್ರಷ್ಟಾಚಾರಗಳು ಹೊರಬಂದಿವೆ. ಹಲವು ಹೆಗ್ಗಣಗಳು ಬಲೆಗೆ ಬಿದ್ದು ಪರದಾಡಿವೆ. ಅಷ್ಟೊಂದು ಪವರ್ ಫುಲ್ ವೆಪನ್ ಈ ಆರ್‌ಟಿಐ.
    ಮೈಸೂರು ಹೆಲ್ತ್ ಡಿಪಾರ್ಟ್ಮೆಂಟ್ನಲ್ಲಿ ಸೆಕೆಂಡ್ ಡಿವಿಜನ್ ಕ್ಲರ್ಕ್ ಆಗಿ ನೇಮಕಗೊಳ್ಳುತ್ತಾನೆ ಮಜೀಬ್ ಎಂಬಾತ. ಈತ ಎಸ್‌ಎಸ್‌ಎಲ್‌ಸಿ ಫೇಲ್ ಆಗಿರುವಂತಹ ವ್ಯಕ್ತಿ. ಆದರೆ ತಾನು ಎಸ್ಸೆಸ್ಸೆಲ್ಸಿ ಪಾಸಾಗಿದ್ದೇನೆ ಎಂಬ ಸರ್ಟಿಫಿಕೇಟ್ ಅನ್ನು ತಂದು ಇಲ್ಲಿ ಜಾಬಿಗೆ ಸೇರಿಕೊಳ್ಳುತ್ತಾನೆ. ಈ ಮಜೀಬ್‌ಗೆ ಕನ್ನಡ ಮಾತನಾಡಲು ಬರುವುದಿಲ್ಲ ಸರಿಯಾಗಿ ಬರೆಯಲು ಬರುವುದಿಲ್ಲ ಕೇವಲ ಸಹಿ ಮಾತ್ರ ಪರ್ಫೆಕ್ಟ್ ಆಗಿ ಮಾಡುತ್ತಾನೆ. ಅಂತಹ ಮಜೀಬ್ ನೀಡಿದಂತಹ ಎಸ್‌ಎಸ್‌ಎಲ್‌ಸ್ಸಿ ಮಾರ್ಕ್ಸ್ ಕಾರ್ಡಿನಲ್ಲಿ ಕನ್ನಡ ಸಬ್ಜೆಕ್ಟ್ ೧೨೫ ಅಂಕಕ್ಕೆ ಬರೋಬ್ಬರಿ ೧೧೦ ಅಂಕ ಪಡೆದಿರುತ್ತಾನೆ. ಹೇಗೆ ಸಾಧ್ಯ? ಕೆಲಸಕ್ಕೆ ತೆಗೆದುಕೊಳ್ಳುವಾಗ ಯಾವ ಅನುಮಾನವೂ ಆ ಅಧಿಕಾರಿಗಳಿಗೆ ಬಂದಿಲ್ಲ ನೋಡಿ. ಹಾಗಾಗಿ ಈ ಮಜೀಬ್ ಅಧಿಕೃತವಾಗಿ ಸರ್ಕಾರಿ ಉದ್ಯೋಗಿಯಾಗಿ ಬಿಡುತ್ತಾನೆ.
    ಆದರೆ ದುರ್ದೈವ ನೋಡಿ ಕೆಲವೇ ವರ್ಷದಲ್ಲಿ ಯಾವುದೋ ಪುಣ್ಯಾತ್ಮ ಅಧಿಕಾರಿಗೆ ಈತನ ಮೇಲೆ ಡೌಟ್ ಬಂದಿದೆ. ಹಾಗಾಗಿ ಈತನ ವಿವರವನ್ನು ತೆಗೆದಾಗ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಕನ್ನಡಕ್ಕೆ ೧೧೦ ಅಂಕ ಬಂದಿರುವುದು ಕಾಣಿಸುತ್ತದೆ. ತಕ್ಷಣವೇ ಆ ಅಧಿಕಾರಿಯು ರಾಜ್ಯದ ಎಸ್‌ಎಸ್‌ಎಲ್ ಸಿ ಬೋರ್ಡ್ಗೆ ಈ ಮಾರ್ಕ್ಸ್ ಕಾರ್ಡನ ಅಸಲಿಯತ್ತಿನ ಬಗ್ಗೆ ಪ್ರಶ್ನೆ ಕೇಳಿ ಬರೆಯುತ್ತಾರೆ. ಅಲ್ಲಿಂದ ಬಂದ ಉತ್ತರ ನೋಡಿ ಆ ಅಧಿಕಾರಿ ‘ಶಾಕ್’ಗೆ ಒಳಗಾಗುತ್ತಾರೆ. ಅಲ್ಲಿಂದ ಬಂದ ಉತ್ತರ ಇಷ್ಟೇ, ‘ಇಂತಹ ಯಾವುದೇ ಮಾರ್ಕ್ಸ್ ಕಾರ್ಡ್ ನಮ್ಮಲ್ಲಿಂದ ಕೊಡಲಾಗಿಲ್ಲ, ಇದು ಅಸಲಿ ಮಾಸ್ ಕಾರ್ಡ್ ಅಲ್ಲ’ ಅಂತ ಉತ್ತರ ಬರುತ್ತದೆ. ತತ್‌ಕ್ಷ್ಷಣವೇ ಈ ಬಗ್ಗೆ ಆಂತರಿಕ ತನಿಖೆಯು ಆಗುತ್ತದೆ, ತನಿಖೆಯಲ್ಲಿ ಈ ಮಜೀಬ್‌ನ ಮೋಸ ಸಾಬೀತಾಗುತ್ತದೆ. ಹಾಗಾಗಿ ಆತನನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ.
    ಈ ಮಧ್ಯೆ ಈ ಮಜೀದ್ ಆರೋಗ್ಯ ಇಲಾಖೆಗೆ ಸಂಬAಧಪಟ್ಟAತೆ ೨೪.೦೦ ಲಕ್ಷ ದಷ್ಟು ದೊಡ್ಡ ಮೊತ್ತವನ್ನು ಕ್ಲೈಮ್ ಮಾಡಿಕೊಳ್ಳುತ್ತಾನೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆ ಬಗ್ಗೆ ಯೋಚನೆ ಮಾಡುವುದಿಲ್ಲ ಆ ದೊಡ್ಡ ಮೊತ್ತವನ್ನು ಮಜೀಬ್‌ನಿಂದ ವಾಪಸ್ ಪಡೆಯುವ ನಿಟ್ಟಿನಲ್ಲಿ ಯಾವುದೇ ನಡೆಯನ್ನು ಇಡುವುದಿಲ್ಲ. ಇದು ಮೈಸೂರಿನ ಆರೋಗ್ಯ ಇಲಾಖೆಯ ಒಳಗೆ ಸಾಕಷ್ಟು ಗುಸು-ಗುಸುಗೆ ಕಾರಣವಾಗುತ್ತದೆ. ಈ ಆಂತರಿಕ ಬೇಗುದಿಯು ನಿಧಾನವಾಗಿ ಸ್ಪ್ರೆಡ್ ಆಗಲಾರಂಭಿಸುತ್ತದೆ.
    ಯಾವಾಗ ಇಂತಹದೊAದು ಫ್ರಾಡ್ ನಡೆದಿದೆ ಅನ್ನುವುದು ಗೊತ್ತಾಗುತ್ತದೆ ಆಗ ಮೈಸೂರಿನವರೇ ಆದ ನಿವೃತ್ತ ಶಿಕ್ಷಕರು ಹಾಗೂ ಸ್ವಚ್ಛ ಆಡಳಿತದ ಕಲ್ಪನೆಯನ್ನು ಹೊಂದಿರುವAತಹ ಸತ್ಯನಾರಾಯಣರವರು ಅಧಿಕೃತವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ವೀಣಾರವರಲ್ಲಿ ಈ ಒಂದು ವಿಚಾರವಾಗಿ ಮಾಹಿತಿ ಹಕ್ಕು ಅಧಿನಿಯಮ ೨೦೦೫ ಅಡಿಯಲ್ಲಿ ಮಜೀಬ್‌ನ ವಿಚಾರವಾಗಿ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಕೋರುತ್ತಾರೆ.
    ಈ ಒಂದು ಆರ್‌ಟಿಐ ಅರ್ಜಿಯನ್ನು ೧೩ ಜೂನ್ ೨೦೨೪ರಂದು ಸಲ್ಲಿಸಿರುತ್ತಾರೆ. ಎರಡು ತಿಂಗಳಾದರೂ ಯಾವುದೇ ಮಾಹಿತಿಯು ಅಥವಾ ಹಿಂಬರಹವು ಬಾರದೇ ಇರುವುದರಿಂದಾಗಿ ಸತ್ಯನಾರಾಯಣರವರು ೨೯ ಆಗಸ್ಟ್ ೨೦೨೪ರಂದು ಮಾಹಿತಿ ಹಕ್ಕು ಅದಿನಿಯಮದ ಅಡಿಯಲ್ಲೇ ೧೯(೧) ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸುತ್ತಾರೆ. ಈ ಎರಡನೆಯ ಮೇಲ್ಮನವಿಗೂ ಯಾವುದೇ ಉತ್ತರ ಅಥವಾ ಮಾಹಿತಿಯು ಬಾರದ ಕಾರಣ ಅರ್ಜಿದಾರರು ರಾಜ್ಯ ಮಾಹಿತಿ ಆಯೋಗದ ಮೊರೆ ಹೋಗುತ್ತಾರೆ. ಮಾಹಿತಿ ಆಯೋಗಕ್ಕೆ ೨೦೨೫ರ ಜನವರಿ ೧೫ರಂದು ೧೯(೩)ಅಡಿಯಲ್ಲಿ ಅರ್ಜಿ ಸಲ್ಲಿಸುತ್ತಾರೆ.
    ಈ ಒಂದು ಅರ್ಜಿಗೆ ಮಾರ್ಚ್ ೬, ಏಪ್ರಿಲ್ ೧೬ ಹಾಗೂ ಮೇ ೧೫ ಹೀಗೆ ಮೂರು ಬಾರಿ ಬೆಂಗಳೂರಿನ ಮಾಹಿತಿ ಆಯೋಗದ ಕಚೇರಿಯ ಐದನೇ ಪೀಠದಲ್ಲಿ ವಿಚಾರಣೆ ನಡೆಯುತ್ತದೆ. ಹೀಗೆ ವಿಚಾರಣೆ ನಡೆಸಿದ ಆಯುಕ್ತರಾದ ಎಸ್. ರಾಜಶೇಖರ್‌ರವರು ಅರ್ಜಿದಾರರಿಗೆ ಬೇಕಾದಂತಹ ಮಾಹಿತಿಯನ್ನು ತೆಗೆಸಿಕೊಡುವಲ್ಲಿ ಸಫಲರಾಗುತ್ತಾರೆ. ಆದರೆ ಕೆಳಗಿನ ಪಿಐಒ ಮತ್ತು ಡೈರೆಕ್ಟರ್ ಈ ಎರಡು ಕಡೆಯಲ್ಲೂ ಮಾಹಿತಿಯನ್ನು ಪಡೆಯಲು ಸಾಧ್ಯವಾಗದ ಕಾರಣಕ್ಕೆ ಈ ಒಂದು ಸಹಾಯಕ ಆಡಳಿತ ಅಧಿಕಾರಿ ಮತ್ತು ಡೈರೆಕ್ಟರ್ ಇಬ್ಬರಿಗೂ ಯೋಗ್ಯ ಜುಲ್ಮಾನೆಯನ್ನು ಹಾಕುವುದಷ್ಟೇ ಅಲ್ಲ ಅರ್ಜಿದಾರರಿಗೆ ಆದ ನಷ್ಟವನ್ನು ಪರಿಹಾರ ರೂಪದಲ್ಲಿ ಕೊಡಿಸದೇ ಇರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
    ಈ ಒಂದು ಮಾಹಿತಿಯನ್ನು ಮೊದಲ ಹಂತದಲ್ಲೇ ಪಡೆಯಲು ಸಾಧ್ಯವಾಗಿದ್ದರೆ ಅರ್ಜಿದಾರರಿಗೆ ಸಾಕಷ್ಟು ಸಮಯ ಮತ್ತು ಹಣವು ಉಳಿತಾಯವಾಗುತ್ತಿತ್ತು. ಅಲ್ಲಿ ಮಾಹಿತಿಯನ್ನು ಕೊಡದೆ ಇರುವ ಕಾರಣದಿಂದಾಗಿ ಅರ್ಜಿದಾರರಿಗೆ ಮಾನಸಿಕವಾಗಿಯೂ, ದೈಹಿಕವಾಗಿಯೂ ಮತ್ತು ಆರ್ಥಿಕವಾಗಿಯೂ ನಷ್ಟ ಉಂಟಾಗಿದೆ ಅನ್ನುವುದು ಅರ್ಜಿದಾರರ ಆರೋಪವಾಗಿತ್ತು. ಆದರೆ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಮಾಹಿತಿ ಆಯುಕ್ತರು ಕೇವಲ ಮಾಹಿತಿಯನ್ನಸ್ಟೇ ಕೊಡಿಸಿ, ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ, ವಾಗ್ದಂಡನೆಯನ್ನು ವಿಧಿಸದೆ, ದಂಡವನ್ನು ಹಾಕದೆ, ಅರ್ಜಿದಾರರಿ ಗಾದ ನಷ್ಟ ಪರಿಹಾರವನ್ನು ಕೊಡಿಸದೇ ಇರುವುದು ಆಯುಕ್ತರು ತಪ್ಪು ಮಾಡಿದ ಅಧಿಕಾರಿಗಳ ಪರವಾಗಿ ಸಿಂಪತಿ ಹೊಂದಿದ್ದಾರೆ ಎಂಬ ಭಾವನೆಯು ಬರಲು ಕಾರಣವಾಗಿದೆ. ಇದರ ಹಿಂದೆ ಭ್ರಷ್ಟಾಚಾರದ ವಾಸನೆಯೂ ಬರುತ್ತಿದೆ ಅನ್ನುವುದು ಅರ್ಜಿದಾರರು ಮತ್ತು ಹಲವು ಅರ್ಜಿದಾರರು ಮತ್ತು ಹಲವು ಆರ್‌ಟಿಐ ಕಾರ್ಯಕರ್ತರ ಅನುಮಾನ ಹಾಗೂ ಆರೋಪ ಎರಡು ಹೌದು.
    ಮಾಹಿತಿ ಆಯುಕ್ತರಾದ ಎಸ್. ರಾಜಶೇಖರ್ ಯಾಕೆ ಹೀಗೆ ಮಾಡಿದರೂ? ನೋ ಡೌಟ್, ಅವರು ಭ್ರಷ್ಟಾಚಾರದಲ್ಲಿ ಪಾಲುದಾರರು ಅನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆದರೆ ತಪ್ಪು ಮಾಡಿದ ಅಧಿಕಾರಿಗಳ ಮೇಲೆ ದಂಡ ಹಾಕುವಲ್ಲಿ ಅವರು ವಿಫಲರಾಗಿರುವುದು, ಅನೇಕ ಅನುಮಾನಕ್ಕೆ ಕಾರಣವಾಗುತ್ತದೆ. ಅಧಿಕಾರಿಗಳ ಮೇಲೇನೆ ಪ್ರೀತಿಯಿಂದ ಹಾಗೆ ಮಾಡಿದರೋ? ಅನವಶ್ಯಕವಾಗಿ ಅಧಿಕಾರಿಗಳ ಪ್ರಮೋಷನ್ ಇಂಕ್ರಿಮೆಂಟ್‌ಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ದಂಡ ಹಾಕದೆ ಬಿಟ್ಟುಬಿಟ್ಟರೋ ಅರ್ಥವಾಗುತ್ತಿಲ್ಲ.
    ಅದೇನೆ ಇರಲಿ, ಈಗ ಸಹಾಯಕ ಆಡಳಿತ ಅಧಿಕಾರಿ ಹಾಗೂ ಡೈರೆಕ್ಟರ್ ಇಬ್ಬರೂ ಮಜೀಬ್‌ನ ವಂಚನೆ ದುಡ್ಡಿನ ಬಗ್ಗೆ ಮಾಹಿತಿ ನೀಡದೇ, ಎಲ್ಲೋ ಒಂದು ಕಡೆ ತಮ್ಮ ಕೊರಳಿಗೆ ಉರುಳು ಹಾಕಿ ಕೊಳ್ಳುತ್ತಿದ್ದಾರೆ ಅಂತಲೇ ಅನ್ನಿಸುತ್ತದೆ. ಹಾಗೆಯೆ ಈ ಇಬ್ಬರು ಅಧಿಕಾರಿಗಳ ಮೇಲೆ ಸಿಂಪತಿ ವ್ಯಕ್ತಪಡಿಸಿದ ಹಾಗೆ ನಡೆದುಕೊಂಡ ಎಸ್. ರಾಜಶೇಖರ್‌ರವರಿಗೂ ತಲೆ ದಂಡದ ಭೀತಿ ಎದುರಾಗಿದೆ.
    ಈ ಬಗ್ಗೆ ಈಗ ಗವರ್ನರ್ ಕಚೇರಿಗೆ ಮಾಹಿತಿ ಆಯುಕ್ತರ ಮೇಲೆ ಕ್ರಮ ಕೈಗೊಳ್ಳುವಂತೆ ಕೊಡಲಾದ ದೂರಿನ ಪ್ರತಿಯು ತಲುಪಿದೆ. ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರ ಟೇಬಲ್ಲಿನ ಮೇಲೆ ಈ ದೂರಿನ ಅರ್ಜಿ ಹೋಗಿ ಕುಳಿತುಕೊಂಡಿದೆ. ಏನಾಗುತ್ತದೋ ಕಾದು ನೋಡಬೇಕು.
    ಇದು ರಾಜ್ಯದ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಪಾಠವಾಗಬೇಕಿದೆ. ಮಾಹಿತಿ ಅಧಿನಿಯಮದ ಅಡಿ ಕೇಳುವ ದಾಖಲೆಗಳನ್ನು ನಿಯಮಾನುಸಾರ ಅರ್ಜಿದಾರರಿಗೆ ಒದಗಿಸಬೇಕಾದ್ದು ಅಧಿಕಾರಿಗಳ ಆದ್ಯ ಕರ್ತವ್ಯವಾಗಬೇಕು. ಆ ಕರ್ತವ್ಯದಿಂದ ಹಿಂದೆ ಸರಿದವರ ಮೇಲೆ ಕಠಿಣ ಶಿಕ್ಷೆ ಆಗಲೇಬೇಕಾಗಿದೆ. ಅಂತಹುದೊಂದು ಸಂದೇಶವು ಎಲ್ಲಾ ಅಧಿಕಾರಿಗಳಿಗೆ ತಲುಪಲಿ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬೈಕಂಪಾಡಿಯಲ್ಲಿ ನಡುರಾತ್ರಿ ನಡೆದ ಸಿನೆಮಾ ಸ್ಟೈಲ್ ದರೋಡೆ: ಕೇರಳ ಉದ್ಯಮಿ ಕುಟುಂಬಕ್ಕೆ ಗನ್ ಪಾಯಿಂಟ್ ಶಾಕ್!
    ಪ್ರತಿಭಟನೆಯ ಹಕ್ಕು ಸಂವಿಧಾನ ನೀಡಿದೆ… ಆದರೆ ಅದರ ಹೆಸರಿನಲ್ಲಿ ನಡೆದ ಎಲ್ಲವನ್ನೂ ತನಿಖೆ ಮಾಡುವುದು ಸರ್ಕಾರದ ಕರ್ತವ್ಯ!
    ಅಕ್ರಮ ಮರಳುಗಾರಿಕೆ, ಕ್ರಮ ಕೈಗೊಂಡ ವೇಣೂರು ಪೊಲೀಸರು
    ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
    ಬಂಟ್ಸ್ ಹಾಗೂ ಬಿಲ್ಲವ ಸಮುದಾಯವನ್ನೇ ಅವಹೇಳಿಸಿ ಮಾತಾಡಿ ವಿಡಿಯೋ ವೈರಲ್ ರಾತ್ರೋರಾತ್ರಿ… ..ಫೇಮಸ್ ಆದ ಅನಿತಾಳ ಬಂಧನ ..!
    “ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
    30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ
    ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
    ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
    ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ… 
    Cocktail 2 ಸುತ್ತ ರಶ್ಮಿಕಾ ಮಂದಣ್ಣ ಕ್ರಿಯೇಟ್ ಮಾಡಿದ ಹೈಪ್ ಎಷ್ಟು ಗೊತ್ತಾ?ಅನ್ಟೋಲ್ಡ್ ಮಸಾಲೆ ಸ್ಟೋರಿಗಳು ಇಲ್ಲಿವೆ!
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    ಮಕ್ಕಳ ಕೈಗೆ AI ಕೊಡುವ ಮುನ್ನ ಸರ್ಕಾರ ಯೋಚಿಸಬೇಕಾದ ಗಂಭೀರ ವಿಷಯಗಳೇನು…?!!
    ಪತ್ರಿಕೋದ್ಯಮವೇ? ಪ್ರಚೋದನೆಯೇ? ಸುಳ್ಳು ಸುದ್ದಿಗೆ ಕೋಮು ಬಣ್ಣ ಆರೋಪದಲ್ಲಿ 7 ಮಾಧ್ಯಮಗಳ ವಿರುದ್ಧ FIR…!
    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
    ಚುನಾವಣಾ ಆಯೋಗ ಸರ್ವಾಧಿಕಾರಿಯಾಗುತ್ತಿದೆ ಎಂಬ ಅನುಮಾನದ ಸುತ್ತ….
    ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಭದ್ರತಾ ಪಡೆ ಮುಖ್ಯಸ್ಥರಿಗೆ ಗೃಹ ಸಚಿವ ‘ಶಾ’ ಸೂಚನೆ
    ವಿದ್ಯಾರ್ಥಿ ಪ್ರತಿಭಟನೆಗೆ ಬಿಗ್ ವಿಕ್ಟರಿ:ಧರ್ಮೇಂದ್ರ ಪ್ರಧಾನ್ ರಾಜೀನಾಮೆ! ಕೊನೆಗೂ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ಸರ್ಕಾರ…!?
    ದೆಹಲಿ ಜಂತರ್ ಮಂತರ್‌ನಲ್ಲಿ ಏನಾಗುತ್ತಿದೆ?ವಿದ್ಯಾರ್ಥಿಗಳ ಕೋಪದ ಸ್ಫೋಟಕ್ಕೆ ದೆಹಲಿ ಸಾಕ್ಷಿ!
    ₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
    ಕಾಂಗೋದಲ್ಲಿ ಭೀಕರ ವಿಮಾನ ಅಪಘಾತ: ಇಬ್ಬರು ಸೇನಾ ಲೆಫ್ಟಿನೆಂಟ್ ಜನರಲ್ ಸೇರಿ 14 ಮಂದಿ ಸಾವು
    ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತ್ತೊಂದು ಸೌಹಾರ್ದದ ಹೆಜ್ಜೆ
    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!
    ಕೊಡಗು ಬ್ರೇಕಿಂಗ್: ಮಾಜಿ ಸೈನಿಕನ ಮನೆಗೆ ನುಗ್ಗಿದ ಕಳ್ಳರು – ಚಿನ್ನ, ನಗದು ಸೇರಿ ಅಮೂಲ್ಯ ವಸ್ತುಗಳ ದೋಚಾಟ
    ಡಿಕೆ ಶಿವಕುಮಾರ್ ಪ್ರತಿಷ್ಠೆ ಪಣಕ್ಕಿಟ್ಟ ಪರಿಷತ್ ಚುನಾವಣೆ!
    ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
    ದಕ್ಷಿಣ ಕನ್ನಡದಲ್ಲಿ ಮಳೆ ದುರಂತ: ಎರಡು ಮೃತದೇಹಗಳು ನೀರಲ್ಲಿ ಪತ್ತೆ
    ಮೊಬೈಲ್ ನಂಬರ್ ದುರ್ಬಳಕೆ; ನಿವೃತ್ತ ಉದ್ಯೋಗಿಯ ವಿವಿಧ ಬ್ಯಾಂಕ್ ಖಾತೆಗಳಿಂದ ₹2.12 ಕೋಟಿ ಆನ್‌ಲೈನ್ ವಹಿವಾಟು
    ವಿಜಯ್ vs ಡಿಕೆಶಿ ಅಲ್ಲ… ಅಮಿತ್ ಶಾ ಮುಂದೆ ಸೌತ್ ಪವರ್!ದಕ್ಷಿಣದ ಹಕ್ಕಿಗಾಗಿ ಒಂದೇ ಧ್ವನಿ!
    ₹30 ಲಕ್ಷ ಖರ್ಚಿನ ಹೊಸ ಮನೆಯಡಿಯಲ್ಲಿ ಗುಹೆ ಪತ್ತೆ; ವಾಸಕ್ಕೆ ಯೋಗ್ಯವಲ್ಲ ಎಂದ ತಜ್ಞರು …!!!ಗೃಹಪ್ರವೇಶದ ಸಂಭ್ರಮದಲ್ಲೇ ಕುಟುಂಬಕ್ಕೆ ಆಘಾತ!