📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಜಗಳ ನಿಲ್ಲಿಸಲು ಹೋದವನ ಜೀವ ಹರಣ: ಮಾನವೀಯತೆ ಕುಸಿದರೆ ಸಮಾಜದ ನೆಮ್ಮದಿ ಎಲ್ಲಿ?”


ದೊಡವಾಡ (ಬೆಳಗಾವಿ):ಬೀದಿ ಜಗಳ ಮಧ್ಯ ಪ್ರವೇಶವೇ ಕೊಲೆಯಲ್ಲಿ ಅಂತ್ಯವಾಗಿದೆ . ಅನಾಗರಿಕತೆ ಅಮಾನವೀಯತೆ ರಾರಾಜಿಸುತ್ತಿದೆ..

 ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ನಡೆದ ಬೀದಿ ಜಗಳ ಒಂದು ದುರ್ಘಟನೆಯಾಗಿ ಮಾರ್ಪಟ್ಟು, ನಿರಪರಾಧಿಯೊಬ್ಬರ ಜೀವವನ್ನು ಕಿತ್ತುಕೊಂಡಿದೆ.

ಫೋಟೋಗ್ರಾಫರ್ ಮಹೇಶ ಬಸಯ್ಯ ಉಜನಿಮಠ (33) ಅವರು ಜಗಳವನ್ನು ನಿಲ್ಲಿಸಲು ಮಧ್ಯ ಪ್ರವೇಶಿಸಿದದ್ದು ಅವರ ಜೀವಕ್ಕೆ ಮುಳುವಾಯಿತು. ಸಂಬಂಧಿಕನಾದ ರುದ್ರಯ್ಯ ಉಜನಿಮಠ (30) ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಮಹೇಶ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟರು.

ಮನೆ ಮುಂದಿನ ದಾರಿ ವಿಚಾರವಾಗಿ ಆರಂಭವಾದ ವೈಮನಸ್ಸು, ಆಕ್ರೋಶದ ತುದಿಗೆ ತಲುಪಿದಾಗ, ಸಮಾಧಾನ ಮಾಡಲು ಬಂದ ವ್ಯಕ್ತಿಯೇ ಬಲಿಯಾಗಿರುವುದು ದುರಂತ.


ಮಾನವೀಯತೆಯ ಮೇಲೆ ಪ್ರಶ್ನೆ

— ಇದು ಸಮಾಜದ ಮಾನವೀಯತೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ. ಜಗಳ ನಿಲ್ಲಿಸಲು ಹೋದ ವ್ಯಕ್ತಿಯೇ ಕೊಲೆಯಾಗಿದ್ದರೆ, ಮುಂದೆ ಯಾರು ಸಹಾಯ ಮಾಡಲು ಧೈರ್ಯ ಮಾಡುತ್ತಾರೆ?

ಘಟನೆಗಳು ಜನರಲ್ಲಿ ಭಯ ಮತ್ತು ನಿರಾಸಕ್ತಿ ಮೂಡಿಸಿ, “ಇತರರ ವಿಚಾರದಲ್ಲಿ ತಲೆ ಹಾಕಬೇಡ” ಎಂಬ ಮನೋಭಾವವನ್ನು ಬೆಳೆಸುವ ಅಪಾಯವಿದೆ. ಅದು ಮುಂದುವರಿದರೆ, ಕ್ರೂರತೆ ವಿಜೃಂಭಿಸಿ, ಸಮಾಜದ ನೆಮ್ಮದಿ ನಿಧಾನವಾಗಿ ಹಾಳಾಗುವ ಸಾಧ್ಯತೆ ಇದೆ.


ಒಬ್ಬ ವ್ಯಕ್ತಿ ಶಾಂತಿಗಾಗಿ ಮಾಡಿದ ಪ್ರಯತ್ನವೇ ಅವನ ಸಾವಿಗೆ ಕಾರಣವಾಗಿರುವುದು ಸಮಾಜಕ್ಕೆ ಕಹಿ ಪಾಠ. ಈ ಘಟನೆ ನಮ್ಮನ್ನು ಯೋಚಿಸಲು ಪ್ರೇರೇಪಿಸುತ್ತದೆ — ಸಹಾಯ ಮಾಡುವ ಮನಸ್ಸು ಉಳಿಯಬೇಕಾದರೆ, ಸಮಾಜದಲ್ಲಿ ಸಹಿಷ್ಣುತೆ ಮತ್ತು ಕಾನೂನಿನ ಭಯ ಎರಡೂ ಬಲವಾಗಿರಬೇಕು.


#crime#Karnataka news

COMMENTS

Login with Gmail to comment

ಇನ್ನಷ್ಟು ಸುದ್ದಿ

ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ
ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
ತೈಲ, ಯುದ್ಧ ಮತ್ತು ಆರ್ಥಿಕತೆ: ಭಾರತದ ಮುಂದೆ ಹೊಸ ಸವಾಲು
ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ – 10 ರೋಗಿಗಳ ದುರ್ಮರಣ-11 ಸಿಬ್ಬಂದಿಗೆ ಗಾಯ
ಹೈಕೋರ್ಟ್ ತೀರ್ಪಿನಿಂದ ದಕ್ಷಿಣ ಕನ್ನಡ ಇ-ರಿಕ್ಷಾ ಚಾಲಕರಿಗೆ favour
ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
ಮಂಗಳೂರು ನೀರಿನ ಸಂಕಷ್ಟ:ಮಳೆಯಿಲ್ಲದೆ ಮುಂದಿನ 1–2 ತಿಂಗಳು ಗಂಭೀರ ನೀರಿನ ಕೊರತೆ ಸಂಭವ ಸಾಧ್ಯತೆ.
ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
“ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
ಕೊಲೆ ಆರೋಪಿಯ ದೂರುದಾರನ ವಿಷ ಸೇವನೆಯ ಬಗ್ಗೆ  ಸ್ಪಷ್ಟನೆ
ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
ಭಾರತದ ಹಡಗಿಗೆ ಗ್ರೀನ್ ಸಿಗ್ನಲ್ ನೀಡಿದ ಇರಾನ್ 
ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
“ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
🔥 ಮಧ್ಯಪ್ರಾಚ್ಯ ಯುದ್ಧ: 17ನೇ ದಿನಕ್ಕೆ- ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ!