📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..

    ಕಳೆದ ಎರಡು ಸಂಚಿಕೆಯಲ್ಲಿ ಸತತವಾಗಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ವಿಚಾರಕ್ಕೆ ಸಂಬAಧಿಸಿದ ಅಪರಾಧದ ಬಗ್ಗೆ ವರದಿ ಪ್ರಕಟಿಸಿದೆ ಕರಾವಳಿ ಮಾರುತ. ಈ ವರದಿಯನ್ನು ಸಂಬAಧಪಟ್ಟವರು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನುವುದಕ್ಕೆ ಯಾವುದೇ ಪುರಾವೆಗಳು ಸಿಗುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ಹತ್ತಾರು ಬೆಟ್ಟರ್ಸ್ಗಳು ಕೇವಲ ಜಿಲ್ಲೆಯ ಜನರಷ್ಟನ್ನಸ್ಟೇ ಅಲ್ಲ, ರಾಜ್ಯ ಹಾಗೂ ಹೊರರಾಜ್ಯಗಳ ಜನರನ್ನು ಜೂಜಿನ ಮಾಯಾಲೋಕಕ್ಕೆ ಬರುವ ಹಾಗೆ ಮಾಡುತ್ತಿದ್ದಾರೆ. ಆ ಮೂಲಕ ಕೋಟಿ-ಕೋಟಿ ಕಮಾಯಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಕತ್ತಲೆಯ ಕೂಪಕ್ಕೆ ತಳ್ಳಲ್ಪಡುತ್ತಿದೆ. ಈ ಒಂದು ಹಡಬೆ ದುಡ್ಡಿನ ಮದದಲ್ಲಿ ಯಾರನ್ನು ಬೇಕಾದರೂ ಕೊಂಡುಕೊಳ್ಳುತ್ತೇವೆ ಎಂಬ ದರ್ಪದಲ್ಲಿ ತಾವು ಆಡಿದ್ದೆ ಆಟ ಎಂಬAತೆ ವರ್ತಿಸುತ್ತಿರುವ ಈ ಬೆಟ್ಟರ್ಸ್ಗಳನ್ನು ಮಟ್ಟ ಹಾಕಲು ಯಾರೂ ತಯಾರಿಲ್ಲ… ಈ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳ ಬಳಿಗೆ ದೂರು ಕೂಡ ಹೋಗಿದೆ. ಈಗ ಸ್ವತಃ ಆ ಹಿರಿಯ ಅಧಿಕಾರಿಗಳೇ ಉಡುಪಿ ಜಿಲ್ಲೆಯನ್ನು ಈ ಬೆಟ್ಟರ್ಸ್, ಗ್ಯಾಂಬ್ಲರ್ಸ್ಗಳಿAದ ಬಚಾವ್ ಮಾಡುವ ಕಾರ್ಯಕ್ಕೆ ಅಣಿಯಾಗಬೇಕು ಎಂಬAತಹ ವಾತಾವರಣವಿದೆ. ಈ ಬಗ್ಗೆ ಉಡುಪಿ ಎಸ್‌ಪಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹಾಗೂ ಉಸ್ತುವಾರಿ ಅಧಿಕಾರಿ ಮುರುಗನ್ ಸಾಹೇಬರ ಕಾಳಜಿ ಇಲ್ಲಿ ಅತ್ಯವಶ್ಯಕ…

    ಸತತ ಮೂರನೇ ಸಂಚಿಕೆಯಲ್ಲೂ ಪತ್ರಿಕೆಯ ಪ್ರಮುಖ ವರದಿಯಾಗಿ ಪ್ರಕಟವಾಗುತ್ತಿದೆ ಅಡ್ಡ ಕಸುಬಿಗಳ ಗ್ಯಾಂಬ್ಲರ್ ಸ್ಟೋರಿ. ಇದು, ಯಾರಾದರೂ ನಾಚಿಕೆ ಪಡುವಂತಹ ವಿಚಾರ. ಸತತವಾಗಿ ವರದಿ ಪ್ರಕಟವಾಗುತ್ತಿದ್ದರೂ ಉಡುಪಿ ಜಿಲ್ಲೆಯ ಪೊಲೀಸರು ಅವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಅಂದ್ರೆ ಏನು ಅರ್ಥ?
    ಹಾಗಾಗಿಯೇ ಹೇಳಿದ್ದು, ಈ ಒಂದು ಬೆಟ್ಟಿಂಗ್ ಗ್ಯಾಂಗ್ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರೆ ಉಡುಪಿ ಉಸ್ತುವಾರಿ ಹಾಗೂ ಎಡಿಜಿಪಿ ಮುರುಗನ್ ಸಾಹೇಬರು ಮತ್ತು ಐಜಿಪಿ ಅಮಿತ್ ಸಿಂಗ್ ಅವರ ಮಧ್ಯಪ್ರವೇಶ ಅನಿವಾರ್ಯ ಅಂತ. ಮುರುಗನ್ ಸಾಹೇಬರಿಗೆ ಇಡೀ ಉಡುಪಿ ಜಿಲ್ಲೆಯ ಚಿತ್ರಣ ಗೊತ್ತಿದೆ. ಇಲ್ಲಿಯ ಜನರ ಮೆಂಟಲಿಟಿಯೂ ಗೊತ್ತಿದೆ. ಹಾಗೆಯೇ ಅಮಿತ್ ಸಿಂಗ್ ಅವರು ಈ ಭಾಗಕ್ಕೆ ಹೊಸಬರಲ್ಲ. ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿಗಳು ಖಡಕಾಗಿದ್ದಂತವರೇ ಆದ್ರೂ ಸಹ ಯಾಕೆ ತಟಸ್ಥರಾಗಿದ್ದಾರೆ ಎಂಬ ಅನುಮಾನ ಹಲವರದ್ದು.
    ಇಡೀ ಪೊಲೀಸ್ ಇಲಾಖೆಯನ್ನು ಈ ವಿಚಾರದಲ್ಲಿ ತಟಸ್ಥವಾಗಿರುವಂತೆ ನೋಡಿಕೊಳ್ಳುತ್ತಿರುವವರು ಯಾರು ಎಂಬ ಪ್ರಶ್ನೆಯು ಇಲ್ಲಿ ಉದ್ಭವವಾಗುತ್ತದೆ. ಯಾವುದೋ ರಾಜಕೀಯ ಶಕ್ತಿಯು ಇವರನ್ನು ಬಚಾವ್ ಮಾಡುವ ಕೆಲಸ ಮಾಡುತ್ತಿರುವ ಕಾರಣವೇ ಪೊಲೀಸರ ಕೈ ಕಟ್ಟಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಅದೇನೇ ಇರಲಿ, ಉಡುಪಿ ಜಿಲ್ಲೆಗೆ ಕೆಟ್ಟ ಹೆಸರನ್ನು ತರುತ್ತಿರುವ ಈ ಬೆಟ್ಟಿಂಗ್ ಮಾಫಿಯಾವನ್ನು ಮಟ್ಟ ಹಾಕದಿದ್ದರೆ ಜಿಲ್ಲೆಯ ಹೆಸರಿಗೂ ಮಸಿ ಬಳಿಯುತ್ತದೆ, ಹಾಗೆಯೇ ಜಿಲ್ಲೆಯ ಆಡಳಿತ ವ್ಯವಸ್ಥೆಯ ಮೇಲು ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಈ ಬೆಟ್ಟಿಂಗ್ ದಂಧೆಗಳನ್ನು ಮಟ್ಟ ಹಾಕುವ ಕೆಲಸ ಪ್ರಾರಂಭವಾಗಲೇಬೇಕು. ಈಗಾಗಲೇ ಹಲವು ಸಾಮಾಜಿಕ ಕಾರ್ಯಕರ್ತರು ಈ ಒಂದು ಅಕ್ರಮ ಕೂಟದ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

    Also Read  ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ

    ಗ್ಯಾಂಗ್ ವಾರ್; ಬೆಟ್ಟಿಂಗ್ ಕಿಂಗ್ ಪಿನ್‌ಗಳ ನಡುವೆ ವೈಮನಸ್ಸು ಆಗಿದ್ಯಾ? ಆ ವೈಮನಸಿನ ಪರಿಣಾಮ ಒಬ್ಬರನ್ನೊಬ್ಬರು ಹಣಿದುಕೊಳ್ಳಲು ಪ್ಲಾನ್ ರೂಪಿಸುತ್ತಿದ್ದಾರಾ? ಇದರ ಪರಿಣಾಮ ಯಾರ್ಯಾರದೋ ಜೀವ ಹೋಗುವ ಸಂಭವ ಇದೆಯಾ?
    ಎಸ್, ಸಾಮಾಜಿಕ ಕಾರ್ಯಕರ್ತ ರವಿ ಶೆಟ್ಟಿ ಬೈಂದೂರ್ ಎಂಬವರು ಈ ವಿಚಾರವನ್ನು ಸಾರ್ವಜನಿಕವಾಗಿ ಮುನ್ನಲೆಗೆ ತಂದಿದ್ದಾರೆ. ಅಷ್ಟೇ ಅಲ್ಲ, ಅವರು ಈ ಒಂದು ಬುಕ್ಕಿಗಳ ವಿರುದ್ಧ ಮಾತನಾಡಲು ಶುರುಮಾಡಿದಾಗಿನಿಂದ ಈ ಬುಕ್ಕಿಗಳ ಅನುಯಾಯಿಗಳ ಕಡೆಯಿಂದ ಜೀವ ಬೆದರಿಕೆಗಳು ಬರುತ್ತಿವೆ ಎಂಬ ವಿಚಾರವನ್ನು ಸ್ವತಹ ರವಿಶಟ್ಟಿಯವರೇ ಮೀಡಿಯಾಗಳ ಮೂಲಕ ಬಹಿರಂಗಪಡಿಸಿದ್ದಾರೆ. ರವಿ ಶೆಟ್ಟಿಯವರು ಈ ವಿಚಾರವಾಗಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ ಮತ್ತು ಕೆಲವು ದಾಖಲೆಗಳನ್ನು ನೀಡಿದ್ದಾರೆ ಎಂಬ ಮಾಹಿತಿಯನ್ನು ಸೋಶಿಯಲ್ ಮೀಡಿಯಾಗಳ ಮೂಲಕವೇ ರವಿಶೆಟ್ಟಿ ಬೈಂದೂರ್ ಹೇಳಿಕೊಂಡಿದ್ದಾರೆ.
    ಪೊಲೀಸ್ ಇಲಾಖೆಯು ಇಂತಹ ವಿಚಾರದಲ್ಲಿ ಯಾರ ದೂರನ್ನು ಕಾಯದೆ ತಾನಾಗಿಯೇ ಆಕ್ಷನ್‌ಗೆ ಇಳಿಯಬೇಕು. ಆದರೆ ಈ ವಿಚಾರದಲ್ಲಿ ಅದಾಗುತ್ತಿದ್ದಂತೆ ಕಾಣುತ್ತಿಲ್ಲ. ಈ ಹಿಂದೆ ದಿನೇಶ್ ಗಾಣಿಗ ಎಂಬ ಸಾಮಾಜಿಕ ಹೋರಾಟಗಾರ ಇದೆ ಬೆಟ್ಟಿಂಗ್ ಮಾಫಿಯಾದ ವಿರುದ್ಧ ಕೆಲವು ದಾಖಲೆಗಳ ಸಹಿತ ಮಾತನಾಡಿದ್ದರು. ಹಾಗೆಯೇ ಬೆಟ್ಟಿಂಗ್ ದಂಧೆಕೋರರÀ ಹೆಸರುಗಳನ್ನು ಅವರು ಮೆನ್ಷನ್ ಮಾಡಿದ್ದರು. ಆದರೆ ಏನಾಯ್ತು ಕೇಳಿದರೆ ಏನು ಇಲ್ಲ.
    ಇವತ್ತು ಈ ಬೆಟ್ಟರ್ಸ್ಗಳು ಹಣದ ಮದದಿಂದ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಹುಚ್ಚಾಟಕ್ಕೆ ಬಿದ್ದಿದ್ದಾರೆ. ಯಾವುದೇ ಅಧಿಕಾರಿಗಳನ್ನು ರಾಜಕಾರಣಿಗಳನ್ನ ಕೊಂಡುಕೊಳ್ಳುತ್ತೇವೆ, ಸಮಯ ಬಂದರೆ ರೌಡಿಗಳ ಮೂಲಕ ನಮ್ಮ ವಿರುದ್ಧ ಬರುವವರನ್ನು ಹೆದರಿಸುತ್ತೇವೆ, ಅವರನ್ನು ಪಕ್ಕಕ್ಕೆ ಸರಿಸುತ್ತೇವೆ ಎಂಬ ಅಹಂಕಾರ ಮತ್ತು ಧೈರ್ಯದಿಂದ ಮುನ್ನಡೆಯುತ್ತಿರುವುದು ಅವರ ಬಾಡಿ ಲಾಂಗ್ವೇಜ್‌ಗಳ ಮೂಲಕ ಗೊತ್ತಾಗುತ್ತದೆ. ಸಮಾಜದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಹಾಗೆಯೇ ಜೂಜಾಟವನ್ನು ಆಡಿಸುವುದು ಭಾರತದ ಅದರಲ್ಲೂ ಕರ್ನಾಟಕದ ಕಾನೂನಿನಲ್ಲಿ ಅಕ್ರಮ ಅಂತ ಮೆನ್ಷನ್ ಆಗಿದೆ, ಅದು ಕಠಿಣ ಶಿಕ್ಷಾರ್ಹ ಅಪರಾಧವೂ ಆಗಿದೆ.
    ಶಿಕ್ಷಾರ್ಹ ಅಪರಾಧ; ಯಾವುದೇ ತರಹದ ಜೂಜೇ ಇರಲಿ, ಹಣವೇ ನೇರವಾಗಿ ಹಣವನ್ನೇ ಹಾಕಬೇಕಾಗಿಲ್ಲ ಯಾವುದೇ ರೀತಿಯ ಪಣವನ್ನು ಕಟ್ಟಿ, ಆಟವಾಡುವುದನ್ನು ನಮ್ಮ ಕಾನೂನು ಶಿಕ್ಷಾರ್ಹ ಅಪರಾಧ ಅಂತ ಘೋಷಿಸಿದೆ. ಹೀಗಿರುವಾಗ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೇವಲ ರಾಜ್ಯ ಮಟ್ಟಕ್ಕಲ್ಲ, ಅಂತರಾಷ್ಟ್ರೀಯ ಮಟ್ಟದವರೆಗೆ ಜೂಜು ಆಡಿಸಿ ಹಣ ಮಾಡಿಕೊಳ್ಳುವವರ ಗುಂಪೆ ಇಲ್ಲಿದೆ ಅಂದರೆ ಏನು ಅರ್ಥ? ನಮ್ಮ ಕಾನೂನಿನ ಅಸಮರ್ಥತೆಯನ್ನು ಇದು ಬಿಂಬಿಸುವುದಿಲ್ಲವೇ? ಕಾನೂನು ಪಾಲನೆ ಮಾಡಬೇಕಾದವರು ಈ ವಿಚಾರದಲ್ಲಿ ಕೈಕಟ್ಟಿ ಕೂತಿದ್ದಾರೆ ಎಂದರ್ಥ ಬರುವುದಿಲ್ಲವೇ? ಅವರು ಕೈಕಟ್ಟಿ ಕೂರಲು ಕಾರಣ ಏನು? ಲೋಕಲ್ ಒತ್ತಡಕ್ಕೆ ಒಳಗಾದರೆ ಅಥವಾ ರಾಜಕಾರಣದ ಒತ್ತಡಕ್ಕೆ ಒಳಗಾದರೆ?
    ಉಡುಪಿ ಸಭ್ಯಸ್ತರ ಜಿಲ್ಲೆ ಹಾಗೆಯೇ ಧಾರ್ಮಿಕ ಪರಂಪರೆಯನ್ನು ಹೊಂದಿದ ಜಿಲ್ಲೆ. ಇಂತಹ ಜಿಲ್ಲೆಯಿಂದ ಬೆಟ್ಟಿಂಗ್ ಕಿಂಗ್ಪಿನ್‌ಗಳು ತಮ್ಮ ಚಟುವಟಿಕೆ ನಡೆಸುತ್ತಾರೆ ಎಂದರೆ ಜಿಲ್ಲೆಯ ಜನರಿಗೆಲ್ಲರಿಗೂ ಕಪ್ಪು ಚುಕ್ಕೆ ತಾನೇ? ಜಿಲ್ಲೆಗೂ ಕೆಟ್ಟ ಹೆಸರು ತಾನೆ? ಈಗಾಗಲೇ ಈ ಒಂದು ವಿಚಾರದಲ್ಲಿ ಸಾಮಾಜಿಕ ಹೋರಾಟಗಾರರು ಬಹಿರಂಗವಾಗಿ ಮಾತನಾಡಿದ್ದಾರೆ ಹಾಗೆಯೇ ಮಾಧ್ಯಮದಲ್ಲೂ ಈ ವಿಚಾರವೂ ಸವಿವರವಾಗಿ ಪ್ರಕಟವಾಗಿವೆ ಹಾಗಿದ್ದರೂ ನಮ್ಮ ಆಡಳಿತ ವ್ಯವಸ್ಥೆಯು ಇನ್ನೂ ಮೌನವಾಗಿದೆ ಅಂದರೆ ಸಂಥಿAಗ್ ಈಸ್ ರಾಂಗ್ ಅಂತ ಅನ್ನಿಸಿಕೊಳ್ಳುತ್ತದೆ. ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಹ ತಲೆಕೆಡಿಸಿಕೊಳ್ಳಬೇಕಾದೀತು. ಸರ್ಕಾರಿ ಇಲಾಖೆಯ ಪೈಕಿ ಪೊಲೀಸ್ ಇಲಾಖೆಯಲ್ಲಿ ತಕ್ಷಣದ ಆಕ್ಷನ್ ಕಾಣುತ್ತಿತ್ತು. ಆದರೆ ಈಗ ಪೊಲೀಸ್ ಇಲಾಖೆಯಲ್ಲೂ ಅದು ಕಾಣೆಯಾಗುತ್ತಿದೆ. ಇದು ಸ್ವಸ್ತ ಸಮಾಜಕ್ಕೆ ಒಳ್ಳೆಯದಲ್ಲ. ಪೊಲೀಸ್ ವ್ಯವಸ್ಥೆಯು ಅತ್ಯಂತ ಅವಶ್ಯಕ. ಹಾಗಾಗಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಅಣಿಗೊಳಿಸುವ ಕೆಲಸ ಜರೂರಾಗಿ ಆಗಬೇಕಿದೆ. ಆ ಕೆಲಸವನ್ನು ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಖುದ್ದಾಗಿ ಆಗುವಂತೆ ನೋಡಿಕೊಳ್ಳುತ್ತಾರೆ ಎಂಬ ಆಶಯವೂ ಇದೆ.
    ಸಮಾಜದಲ್ಲಿ ಸಣ್ಣಪುಟ್ಟ ಗಂಭೀರವಲ್ಲದAತಹ ಅಪವಾದಗಳು, ಅಪರಾಧಗಳು ನಡೆಯುತ್ತಿರುತ್ತವೆ. ಆದರೆ ಅವುಗಳ ಮೇಲೆಯೂ ಕಾನೂನು ಪಾಲಕರಿಗೆ ಹಿಡಿತ ಇರಲೇಬೇಕು. ಆದರೆ ತೀರ ಈ ಮಟ್ಟದಲ್ಲಿ ಗ್ಯಾಂಬ್ಲರ್ಸ್ಗಳಾಗಿ ಬೆಳೆದಿರುವಂತಹ ವ್ಯಕ್ತಿಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ ಅಂದ್ರೆ ಅದು ಶೇಮ್ ಅಂತ ಅನ್ನಿಸಿಕೊಳ್ಳುತ್ತದೆ. ಸಾರ್ವಜನಿಕವಾಗಿ ವ್ಯವಸ್ಥೆಯ ಮೇಲೆ ನಂಬಿಕೆಯು ಹೋಗಲು ಕಾರಣವಾಗುತ್ತದೆ. ಕೇವಲ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾರೆ ಎಂಬ ಸಾರ್ವಜನಿಕ ವಲಯದಲ್ಲಿರುವ ಮಾತುಗಳು ನಿಜವಾಗುತ್ತವೆ. ಅದು ಆಗಲೇಬಾರದು. ಯಾವುದೇ ರಾಜಕಾರಣಿಯ ಒತ್ತಡವಿರಲಿ ಅಥವಾ ಇನ್ಯಾರದೇ ಒತ್ತಡ ಇರಲಿ, ಉಡುಪಿ ಜಿಲ್ಲೆಯ ಪೊಲೀಸರು ಆ ಒತ್ತಡವನ್ನು ಮೆಟ್ಟಿ ನಿಲ್ಲಬೇಕು ಮತ್ತು ಮಟ್ಟ ಹಾಕಬೇಕು. ಜೊತೆಗೆ ಅವರ ಹಣದ ಮೂಲ ಇನ್ಕಮ್ ಸೋರ್ಸಸ್ ಹೇಗೆ ಬಂತು ಎಲ್ಲೆಲ್ಲಾ ಇನ್ವೆಸ್ಟ್ ಮಾಡಿದ್ದಾರೆ (ಅವ್ರದ್ದು ಮತ್ತು ಅವರ ಆಪ್ತರದ್ದು) ಅದೆಲ್ಲವೂ ಸಂಪೂರ್ಣ ತನಿಖೆಗೆ ಒಳಪಡಬೇಕು ಮತ್ತು ಮುಟ್ಟುಗೋಲು ಕಾರ್ಯ ಪ್ರಾರಂಭವಾಗಬೇಕು ಅದು ಆದಷ್ಟು ಬೇಗ ಪ್ರಾರಂಭವಾಗುತ್ತದೆ ಎಂಬ ಆಸೆಯನ್ನು ಜಿಲ್ಲೆಯ ಅನೇಕ ಸಾಮಾಜಿಕ ಕಾರ್ಯಕರ್ತರು ಹೊಂದಿದ್ದಾರೆ.

    Also Read  ಜೆಡಿಎಸ್  ಜನರಲ್ ಸೆಕ್ರೆಟರಿಯಾಗಿ ಯೋಗೇಶ್ ಶೆಟ್ಟಿ ಜಪ್ಪು ಆಯ್ಕೆಯ ಲೆಕ್ಕಾಚಾರವೇನು?


    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಫೈವ್ ಸ್ಟಾರ್ ಹೋಟೆಲ್‌ಗಳಲ್ಲೇ ಹಾಳಾದ ಹಾಲು, ಕೊಳೆತ ತರಕಾರಿ ಪತ್ತೆ!ಫುಡ್ ಸೇಫ್ಟಿ ದಾಳಿ ಅಧಿಕಾರಿಗಳೇ ಬೆಚ್ಚಿಬಿದ್ದರು….!
    ಆಂಬುಲೆನ್ಸ್ ಡ್ರೈವರ್ ನ ಸಮಾಜ ಸೇವೆಯ ಕಾರ್ಯ ಶ್ಲಾಘನಿಯ – ಸುದೇಶ್ ಕುಮಾರ್
    ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹೆಚ್‌ಐವಿ ಪ್ರಕರಣಗಳು..!ಯುವ ಪೀಳಿಗೆಯನ್ನು ಗುರಿಯಾಗಿಸಿ “ಹೈ-ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.”
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
    ‘ಕಾಕ್ರೋಚ್’ಗಳ ದಂಗೆಗೆ ದೆಹಲಿ ನಡುಗಿತೇ? ವಿದ್ಯಾರ್ಥಿಗಳ ‘ಸಂಸತ್ ಚಲೋ’ಗೆ ಲಾಠಿಚಾರ್ಜ್… ಸಂಸತ್ತಿನಲ್ಲೂ ಸದ್ದು!ಕಲಾಪ ಮುಂದೂಡಿಕೆ?!
    Cocktail 2 ಸುತ್ತ ರಶ್ಮಿಕಾ ಮಂದಣ್ಣ ಕ್ರಿಯೇಟ್ ಮಾಡಿದ ಹೈಪ್ ಎಷ್ಟು ಗೊತ್ತಾ?ಅನ್ಟೋಲ್ಡ್ ಮಸಾಲೆ ಸ್ಟೋರಿಗಳು ಇಲ್ಲಿವೆ!
    “ನನ್ನ ಮಗಳನ್ನೂ ಅದೇ ಕೋಟೆಯಿಂದ ಕೆಳಗೆ ತಳ್ಳಿ!” – ನಿಶ್ಚಿತ ವರನ ಹತ್ಯೆಗೈದ ಸಿಯಾ ಹೆತ್ತವರ ಆಕ್ರೋಶದ ಹೇಳಿಕೆ
    ಓವರ್‌ಟೇಕ್ ಮಾಡಲು ಹೋಗಿ ಯಮನ ಬಾಯಿಗೆ! ಕಬ್ಬಿಣದ ಸರಳುಗಳು ನುಗ್ಗಿ KSRTC ಬಸ್ ಚಾಲಕ ಸಾವು..
    ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
    ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
    ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
    ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ ತಾಯಿಯ ಜೊತೆಗೆ ಮಗಳನ್ನು ಕಳುಹಿಸಲು ಕೋರ್ಟ್ ನಕಾರ 
    ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    ಮಂಗಳೂರು: ಖಚಿತ ಮಾಹಿತಿಗೆ ಖಾಕಿ ಆಕ್ಷನ್! ಮುಕ್ಕದ ಕಟ್ಟಡದಲ್ಲಿ 8 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ಬಂಧನ
    ಮಂಗಳೂರು ಬೆಂಗಳೂರು ಮಧ್ಯೆ ಇನ್ನು ತಡರಾತ್ರಿಯೂ ವಿಮಾನ ಯಾನ
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್!
    ಬೆಳಗ್ಗೆ ಲೈಟ್ ಆನ್ ಮಾಡಿದ್ರು… ಕ್ಷಣದಲ್ಲೇ PGಯಲ್ಲಿ ಸಿಲಿಂಡರ್ ಸ್ಫೋಟ…! 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ ಬೊಮ್ಮಸಂದ್ರದ ಶ್ರೀ ಸಾಯಿ ಕಂಫರ್ಟ್ PGಯಲ್ಲಿಮುಂಜಾನೆ ಅಗ್ನಿ ದುರಂತ
    “ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
    ಲಖನೌ ಅಗ್ನಿ ದುರಂತದ ಕೊನೆ ಕ್ಷಣದ ಫೋನ್ ಕರೆಗಳು …”ಅಪ್ಪಾ,ಪ್ಲೀಸ್ ನನ್ನನ್ನು ಉಳಿಸು…” – “ನನ್ನ ಮಗನ ಬಳಿ ಹೋಗಲು ಬಿಡಿ…”
    ಒಂದು iPhoneಗಾಗಿ ಆರಂಭವಾದ ಮಗನ ಹಠ… ಕೊನೆಗೆ ಒಂದೇ ಕುಟುಂಬದ ಮೂವರ ಜೀವವೇ ಹೋಯ್ತು!
    ಗೋವಾದಲ್ಲಿ ಪ್ರವಾಸಿಗರ ಬೋಟ್ ಮುಳುಗಡೆ?!!??ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಗೋವಾ ಪೊಲೀಸರು!
    ರೀಲ್ಸ್ ನೋಡುವ ಕೈಗಳೇ… ದೇಶ ಕಟ್ಟುವ ಕೈಗಳಾಗಬಹುದು.ಡ್ರಗ್ಸ್ ,ಮೊಬೈಲ್ ,ವ್ಯಸನಗಳು ನಿಮ್ಮ ಕನಸುಗಳನ್ನು ಕದಿಯುವ ಮೊದಲು… ಯುವಕರೇ ಎಚ್ಚರಗೊಳ್ಳಿ!
    ಮಂಗಳೂರು–ಉಡುಪಿಗೆ ಹೈಕೋರ್ಟ್ ಪೀಠ? ಅಧಿಕೃತ ಪರಿಶೀಲನೆಗೆ ಸಮಿತಿ ರಚನೆ
    ದಿಲ್ಲಿಯಲ್ಲಿ ವಾಗ್ದಾಳಿ.. ಗಲ್ಲಿಯಲ್ಲಿ ಒಪ್ಪಂದ?! ದೇಶದ ಅತ್ಯಂತ ಕಾಂಟ್ರವರ್ಸಿಯಲ್ ಬಿಡ್ ತೆರೆಮರೆಯಲ್ಲಿ ನಡೆದ ಆ ಒಂದು ನಡೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯಾಕೆ?!
    ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
    ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ… ಕಾರಣ ನಿಗೂಢ
    ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ 60ರ ವಯಸ್ಸಿನಲ್ಲಿ  ಸಿಕ್ಕ ಪರ್ಫೆಕ್ಟ್ ಸಂಗಾತಿ……?!ಎಷ್ಟನೇ ಮದುವೆ?!