📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ದುರಂತ ಸಂಭವಿಸುವ ಮುನ್ನ ಮೆಸ್ಕಾಂ ಎಚ್ಚೆತ್ತುಕೊಳ್ಳುವುದೇ? ಮಂಗಳೂರಿನ PVS ರಸ್ತೆಯಲ್ಲೇ ಮೆಸ್ಕಾಂ ಟ್ರಾನ್ಸ್‌ಫಾರ್ಮರ್ ಅಡಿಯಲ್ಲೇ ಸುತ್ತಲೂ ಒಣ ಕಸದ ಪ್ಲಾಸ್ಟಿಕ್ ಟಾರ್ಪಾಲಿನ್ ಮತ್ತು ಬಾಕ್ಸ್ ರಾಶಿ!

    ಪಿ.ವಿ.ಎಸ್ ಸರ್ಕಲ್‌ನ ಸಿಟಿ ಪ್ಲಾಜಾ ಮುಂಭಾಗದಲ್ಲಿ ದಿನದ 24 ಗಂಟೆಯೂ ಭಾರಿ ಪ್ರಮಾಣದ ವಿದ್ಯುತ್ ಲೋಡ್ ಹೊಂದಿರುವ ಮೆಸ್ಕಾಂ (MESCOM) ಟ್ರಾನ್ಸ್‌ಫಾರ್ಮರ್ ಇದೆ. ಈ ಟ್ರಾನ್ಸ್‌ಫಾರ್ಮರ್‌ನ ತಳಭಾಗದಲ್ಲಿ ಮತ್ತು ಅದರ ಮುಂಭಾಗದ ಜಾಗದಲ್ಲೇ ಖಾಸಗಿ ಬಸ್ ಏಜೆನ್ಸಿಗಳು ಪಾರ್ಸೆಲ್ ಪ್ಯಾಕಿಂಗ್‌ಗೆ ಬಳಸುವ ಒಣ ಕಾರ್ಡ್‌ಬೋರ್ಡ್ ಬಾಕ್ಸ್‌ಗಳು (Carton Boxes), ಪ್ಲಾಸ್ಟಿಕ್ ಟಾರ್ಪಾಲಿನ್ ಪೇಪರ್‌ಗಳು ಮತ್ತು ಥರ್ಮಕೋಲ್ ಕಸದ ರಾಶಿಯನ್ನು ಬೇಜವಾಬ್ದಾರಿತನದಿಂದ ಸುರಿಯುತ್ತಿದ್ದಾರೆ.

    “ಪಿ.ವಿ.ಎಸ್ ಸರ್ಕಲ್ ಅಂದ್ರೆ ಮಂಗಳೂರಿನ ಹಾರ್ಟ್ ಇದ್ದ ಹಾಗೆ…ಇದೆ ಜಾಗದಲ್ಲಿ ಸದಾ ನೂರಾರು ಜನ ಓಡಾಡುತ್ತಿರುತ್ತಾರೆ. ಹಾಗೇನೆ ಹತ್ತಾರು ಬಹುಮಹಡಿ ಕಟ್ಟಡಗಳೂ ಇವೆ…ಇಂತಹ ಪ್ರೈಮ್ ಕ್ರೌಡ್ ಏರಿಯಾದಲ್ಲಿ ಹಗಲು-ರಾತ್ರಿ ವಿದ್ಯುತ್ ಏರಿಳಿತ (Fluctuations) ಅಥವಾ ಶಾರ್ಟ್ ಸರ್ಕ್ಯೂಟ್ ಆಗಿ ಟ್ರಾನ್ಸ್‌ಫಾರ್ಮರ್‌ನಿಂದ ಸಣ್ಣದೊಂದು ಕಿಡಿ ಕೆಳಗೆ ಬಿದ್ದರೂ ಸಾಕು,ಕ್ಷಣಾರ್ಧದಲ್ಲಿ ಅವಘಡ ಸಂಭವಿಸುವ ಲಕ್ಷಣಗಳು ಕಾಣಿಸ್ತದೆ !”

    ಸಿಟಿ ಪ್ಲಾಜಾ ಫ್ರಂಟ್ ಸೈಡ್ ಕಾದಿದೆ ಆಕಸ್ಮಿಕ ಬೆಂಕಿಯ ಅಪಾಯ..!

    ಸಿಟಿ ಪ್ಲಾಜಾದ ಫ್ರಂಟ್ ಸೈಡ್‌ನಲ್ಲಿ ಪಾರ್ಸೆಲ್ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮಾಡುವ ಕಾರ್ಮಿಕರು ಹಾಗೂ ಅಲ್ಲಿಗೆ ಬರುವ ಸಾರ್ವಜನಿಕರು ಅಜಾಗರೂಕತೆಯಿಂದ ಧೂಮಪಾನ (Smoking) ಮಾಡಿ ಎಸೆಯುವ ಸಿಗರೇಟ್ ತುಂಡುಗಳು ಅಥವಾ ಕಿಡಿಗಳು ಈ ಪ್ಲಾಸ್ಟಿಕ್ ಟಾರ್ಪಾಲಿನ್ ಹಾಗೂ ಕಾರ್ಟನ್ ಬಾಕ್ಸ್‌ಗಳ ರಾಶಿಗೆ ತಗುಲುವ ಸಾಧ್ಯತೆ ದಟ್ಟವಾಗಿದೆ. ಬಸ್ ಮಾಲೀಕರು ಕೇವಲ ತಮ್ಮ ಪಾರ್ಸೆಲ್ ಲಗೇಜ್ businessವ್ಯಾಪಾರದ ಹಣ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ವಿನಃ, ಟ್ರಾನ್ಸ್‌ಫಾರ್ಮರ್ ಮುಂಭಾಗ ಇಷ್ಟೊಂದು ಕಸ ಹಾಕಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    Also Read  ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು

    ತಕ್ಷಣದ ಕ್ರಮಕ್ಕಾಗಿ ಆಗ್ರಹ (Immediate Call to Action)

    ದೊಡ್ಡದೊಂದು ಭೀಕರ ದುರಂತ ಸಂಭವಿಸಿ ಅಮಾಯಕ ಸಾರ್ವಜನಿಕರು ಬಲಿಯಾಗುವ ಮುನ್ನ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ಕೆಳಗಿನ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು:

    • ಮೆಸ್ಕಾಂ (MESCOM) ಕಠಿಣ ಮುನ್ನೆಚ್ಚರಿಕೆ: ಪಿ.ವಿ.ಎಸ್ ಸರ್ಕಲ್‌ನ ಸಿಟಿ ಪ್ಲಾಜಾ ಮುಂದಿರುವ ತನ್ನ ಟ್ರಾನ್ಸ್‌ಫಾರ್ಮರ್ ಸುತ್ತಲೂ ಯಾವುದೇ ಒಣ ಕಸ, ಪ್ಲಾಸ್ಟಿಕ್ ಮತ್ತು ಕಾರ್ಟನ್ ಬಾಕ್ಸ್ ಜಮೆಯಾಗದಂತೆ ಮೆಸ್ಕಾಂ ತಕ್ಷಣವೇ ಅಲ್ಲಿ ಭದ್ರತಾ ಬೇಲಿ ಅಳವಡಿಸಬೇಕು ಹಾಗೂ ಕಸ ಹಾಕುವ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
    • ಮಹಾನಗರ ಪಾಲಿಕೆ ಮತ್ತು ಸಾರಿಗೆ ಇಲಾಖೆ ದಾಳಿ: ಸಿಟಿ ಪ್ಲಾಜಾ ಮುಂಭಾಗದ ರಸ್ತೆಯನ್ನೇ ಪಾರ್ಸೆಲ್ ಯಾರ್ಡ್ ಮಾಡಿಕೊಂಡಿರುವ ಖಾಸಗಿ ಬಸ್ ಆಫೀಸ್‌ಗಳ ಮೇಲೆ ತಕ್ಷಣ ರಿಯಾಲಿಟಿ ಚೆಕ್ ನಡೆಸಿ, ಅಲ್ಲಿನ ಒಣ ಕಸವನ್ನು ವಿಲೇವಾರಿ ಮಾಡಿಸಿ ಭಾರಿ ದಂಡ ವಿಧಿಸಬೇಕು.
    Also Read  ‘ಮೈ ಭಾರತ್’-ದಕ್ಷಿಣ ಕನ್ನಡದ ಯುವ(ಕ/ತಿ)ಯರೇ, ರಾಷ್ಟ್ರಮಟ್ಟದ ವೇದಿಕೆಗೆ ಇದು ನಿಮ್ಮ ಅವಕಾಶ!

    ಜೂನ್ 27, 2026 ರ ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ “5 ಬಸ್ ಹತ್ತಿ ಉಂಟಾದ್ರೆ ಮಾಲೀಕರಿಗೆ ಬಿಸಿ ತಟ್ಟಲ್ಲ!” ಎಂಬ ರಿಯಾಲಿಟಿ ಚೆಕ್ ವರದಿ ಖಾಸಗಿ ಬಸ್‌ಗಳ ಅಕ್ರಮ ಪಾರ್ಸೆಲ್ bussiness ನ್ನು ಬಯಲಿಗೆಳೆದಿದೆ. ಆದರೆ, ಈ ದಂಧೆಯ ಬೆನ್ನಲ್ಲೇ ಮಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶವಾದ ಪಿ.ವಿ.ಎಸ್ ಸರ್ಕಲ್ (PVS Circle) ಹತ್ತಿರವಿರುವ ‘ಸಿಟಿ ಪ್ಲಾಜಾ’ (City Plaza) ಕಟ್ಟಡದ ಮುಂಭಾಗ ಮತ್ತು ಅದರ front ಸೈಡ್‌ನಲ್ಲಿ ಸೃಷ್ಟಿಯಾಗಿರುವ ಅಗ್ನಿ ಆಪತ್ತು ಸ್ಥಳೀಯ ನಾಗರಿಕರ ಮತ್ತು ವ್ಯಾಪಾರಿಗಳ ನಿದ್ದೆ ಗೆಡಿಸಿದೆ. ಅಲ್ಲಿನ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುತ್ತಲೂ ಖಾಸಗಿ ಕಾರ್ಗೊ ಸಂಸ್ಥೆಗಳು ಎಸೆಯುತ್ತಿರುವ ಒಣ ಕಸದ ರಾಶಿ, ನಗರದ ಹೃದಯಭಾಗದಲ್ಲೇ ದೊಡ್ಡದೊಂದು ದುರಂತಕ್ಕೆ ಆಹ್ವಾನ ನೀಡುತ್ತಿದೆ.

    Also Read  ಅಜ್ಜಿಯ ಚಿನ್ನಕ್ಕೇ ಕನ್ನ! ಮೊಮ್ಮಗ ಅರೆಸ್ಟ್….

    ಈ ಅಪಾಯ ಕಣ್ಣಮುಂದೆ ಕಾಣಿಸುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತರೆ, ಪಿ.ವಿ.ಎಸ್ ಸರ್ಕಲ್‌ನಲ್ಲಿ ನಡೆಯುವ ಅಗ್ನಿ ದುರಂತಕ್ಕೆ ನೇರ ಹೊಣೆಯಾಗಬೇಕಾಗುತ್ತದೆ. ಅಧಿಕಾರಿಗಳೇ ತಕ್ಷಣ ಎಚ್ಚೆತ್ತುಕೊಳ್ಳಿ, ಸಂಬಂಧಪಟ್ಟ ಇಲಾಖೆಗಳು ಎಲ್ಲಾ ಕಡೆ ನಿರಂತರ ಕಣ್ಗಾವಲಿನಲ್ಲಿ ನಿಯಮಿತ ತಪಾಸಣೆ ನಡೆಸುವುದು ಅನಿವಾರ್ಯವೂ ಹೌದು..ಸದ್ಯ PVS ಸುತ್ತಮುತ್ತ ಪರಿಸರವನ್ನ ಅಪಾಯದಿಂದ ಮುಕ್ತಗೊಳಿಸಿ!”

    ##LuxuryBusParcel#Tags) #PVSCircleFireHazard #MescomTransformerDanger

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ಕೆಸರೆರಚಾಟದ ನಡುವೆ SIR-ಪ್ರಜಾಪ್ರಭುತ್ವದ ಹಬ್ಬವೋ, ರಾಜಕೀಯ ಗೊಂದಲದ ಗೂಡೋ?
    ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಅವಹೇಳನ ಜಾತಿ ನಿಂದನೆ  ಆರೋಪದಲ್ಲಿ ಕಾರ್ಕಳ ವ್ಯಕ್ತಿಯ ಬಂಧನ !
    ಮಂಗಳೂರು ದಸರಾ ರಜೆ ಇಲ್ಲ : ಕಾಲೇಜು ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು! ಪೊಲೀಸ್ ಕ್ರಮಕ್ಕೆ ವಿಎಚ್‌ಪಿ ಖಂಡನೆ!
    ನಾಹೀದಾ( ‘ರಾಮಕ್ಕ’)ಗೆ ಧರ್ಮ ಮೀರಿದ ಸೀಮಂತ! ಹಾರೈಸಿದ ಮುಸ್ಲಿಂ ಸಮುದಾಯ!ಜನರ ಪ್ರೀತಿಯ ಉಡುಗೊರೆ…
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
    ‘ಪೊಲೀಸರಿಗೆ ದೂರು ಕೊಡ್ತೀಯಾ?’… ಗಾಂಜಾ ವ್ಯಸನಕ್ಕೆ ಸೈಜು ಕಲ್ಲಿನಿಂದ ಅಜ್ಜಿಯ ತಲೆ ಪುಡಿ ಮಾಡಿದ ಮೊಮ್ಮಗ!ಅಜ್ಜಿಯೇ ಬಲಿ!
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
    ಮೂಗಿನಿಂದ ಸೋರಿದ್ದು ಶೀತವಲ್ಲ…ಮೆದುಳಿನ ದ್ರವ! 2 ವರ್ಷ ಕಾಡಿದ ಸಮಸ್ಯೆ…10 ವರ್ಷದ ಬಾಲಕನಿಗೆ ಬೆಂಗಳೂರಿನಲ್ಲಿ ಅಪರೂಪದ skull ಡಿಫೆಕ್ಟ್ ಚಿಕಿತ್ಸೆ…!
    ಹೊಸ ಸಂಸತ್ ಭವನದ ವಿನ್ಯಾಸಕ್ಕೆ ಶಶಿ ತರೂರ್ ಅಸಮಾಧಾನ: “ಆತ್ಮ ರಹಿತ ಸಮಾವೇಶ ಕೇಂದ್ರ”
    “ಒಂದು ಫಾರ್ವರ್ಡ್… ಒಂದು ಎಫ್‌ಐಆರ್!”ಲಾವಣ್ಯ ಕೊಲೆ ಪ್ರಕರಣ ಆರೋಪಿಗೆ ಕೋಮು ಬಣ್ಣ ಹಚ್ಚಿದ – 6 ಸಾಮಾಜಿಕ ಜಾಲತಾಣ ಖಾತೆಗಳು/ಗ್ರೂಪ್‌ಗಳ ವಿರುದ್ಧ FIR..!
    ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ಉಡುಪಿ ಮಹಿಳೆಗೆ ಮುಂಬೈನಲ್ಲಿ ಕಂಬಿ! ₹3.10 ಕೋಟಿ ವಂಚನೆ ಉಡುಪಿ ಮೂಲದ ಮಹಿಳೆ ಅರೆಸ್ಟ್!
    ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
    ಚಕ್ರಬಡ್ಡಿ ಹೆಸರಿನಲ್ಲಿ ಮಹಿಳೆಗೆ ಕಿರುಕುಳ: ₹9.37 ಲಕ್ಷ ಬಾಕಿ ಎಂದು ಬೆದರಿಕೆ ಆರೋಪ
    2027ರಲ್ಲಿ ರಸ್ತೆಗಿಳಿಯಲಿರುವ EV ಕಾರ್ Avinya X ನೋಡಿದರೆ ಸಾಮಾನ್ಯ SUVಗಳನ್ನೇ ಮರೆತುಬಿಡುತ್ತಿರಾ…ಬರುತ್ತಿದೆ ಟಾಟಾದ ಅತ್ಯಂತ ದುಬಾರಿ ಕನಸು!
    ಮಂಗಳೂರು ಹಂಪನಕಟ್ಟೆಯಲ್ಲಿ ಶೂ ಅಂಗಡಿಗೆ ಬೆಂಕಿ; ಅಪಾರ ನಷ್ಟ, ಅವಘಡದಿಂದ ಎಚ್ಚೆತ್ತ ವ್ಯಾಪಾರಿಗಳು…!
    ಮಂಗಳೂರಲ್ಲಿ ಮಳೆಯ ಅಬ್ಬರ… ಗುಡುಗು-ಮಿಂಚಿನ ಆಟ ದಕ್ಷಿಣ ಕನ್ನಡದಲ್ಲಿ ಮತ್ತೆ pre-ಮಾನ್ಸೂನ್ ಮ್ಯಾಜಿಕ್!?
    ಮರಣದಂಡನೆಗೆ ಗುರಿಯಾದ ಅಪರಾಧಿಯಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ಏಕಾಏಕಿ ಹಲ್ಲೆ: ಸ್ಥಳದಲ್ಲಿ ಕೆಲಕಾಲ ಉದ್ವಿಗ್ನತೆ
    ಕ್ಲೀನ್ ಮಂಗಳೂರು ಕನಸು ನಿಮ್ಮದಾಗಿದ್ದರೆ ಇಲ್ಲಿದೆ ದಾರಿ…ಸ್ವಚ್ಛ ಮಂಗಳೂರು ಅಭಿಯಾನ: ನಾಗರಿಕರ ಕೈಗೆ ಸಿಕ್ಕಿತು ವಾಟ್ಸಾಪ್ ಅಸ್ತ್ರ….!
    ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿಕೆ: ಜುಲೈ 2ಕ್ಕೆ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್, ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
    ಅಣ್ಣಾ ಹಜಾರೆಗೆ ಲೈವ್, ಸೋನಂ ವಾಂಗ್ಚುಕ್‌ಗೆ ಮೌನವೇಕೆ?”  ದ್ವಂದ್ವ ನೀತಿಯ ಬಗ್ಗೆ ಪ್ರಶ್ನೆ
    ದಸರಾ ರಜೆಯಲ್ಲೂ ಶಾಲೆ! ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿ
    ಇದು ಕಾಕ್ರೋಚ್ ಪವರ್, ಯಾರು ಮಾಡಲಾಗದ್ದನ್ನು ಮಾಡಿದ  ಸ್ಟೂಡೆಂಟ್ಸ್
    ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಎಬಿವಿಪಿ, ಎನ್ ಎಸ್ ಯು ಐ ವಿದ್ಯಾರ್ಥಿಗಳ ಘರ್ಷಣೆ 
    ಕರ್ನಾಟಕದಲ್ಲಿ ಹೈ ಅಲರ್ಟ್: ಕರಾವಳಿಯಲ್ಲಿ ಸತತ 4 ದಿನ ಭಾರೀ ಮಳೆ – ಮಕ್ಕಳು, ಮೀನುಗಾರರು ಮತ್ತು ನದಿ ಪಾತ್ರದ ಜನರು ವಿಶೇಷ ಎಚ್ಚರಿಕೆ ವಹಿಸಿ
    ಅಮ್ಮನ ಅಂತ್ಯಕ್ರಿಯೆಯಲ್ಲಿ ಗಳಗಳನೇ ಕಣ್ಣೀರಿಟ್ಟು,ಚಿತೆಯ ಮುಂದೆ ಕುಸಿದುಬಿದ್ದ ಚಿನ್ಮಯ್ ದಾಸ್!ಐದು ಗಂಟೆಯ ಪೆರೋಲ್… ಜೈಲಿನಿಂದ ಬಂದ ಸನ್ಯಾಸಿ ಮಗ…