📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ

    ಮಂಗಳೂರು ನಗರವು ರಾಷ್ಟ್ರಮಟ್ಟದಲ್ಲಿ ಕಲೆ ,ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಶಿಕ್ಷಣ ಸೇರಿದಂತೆ ಹಲವು ವಿಭಾಗಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ ಅಂದರೆ, ಅದು ಯಾವುದೇ ಇನ್ಫ್ಲುಯೆನ್ಸ್ ಅಥವಾ ಕೃತಕ ವ್ಯವಹಾರದಿಂದಲ್ಲ. ಇಲ್ಲಿಯವರ ಪ್ರತಿಭೆಯಿಂದ ಇದೆಲ್ಲವೂ ಸಾಧ್ಯವಾಗಿದೆ. ಅಂತಹ ಮಂಗಳೂರು ನಗರದ ವೈಭವಕ್ಕೆ ಮಾಜಿ ಸಚಿವ ಹಾಗೂ ಲ್ಯಾಂಡ್ ಲಿಂಕ್ಸ್ ಸಂಸ್ಥೆಯ ಸ್ಥಾಪಕರು ಆದಂತಹ ಕೃಷ್ಣ ಜೆ ಪಾಲೆಮರ್ ಅವರಿಂದ ಇನ್ನಷ್ಟು ಮೆರಗನ್ನು ಕೊಡುವಂತಹ ಕೊಡುಗೆ ಸಿಕ್ಕಿದೆ.

    ಮಂಗಳೂರು ನಗರದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮುದಾಯ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಉದ್ದೇಶದಿಂದ ಲ್ಯಾಂಡ್ ಲಿಂಕ್ಸ್ ಗ್ರೂಪ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರ ಕನಸಿನ ಯೋಜನೆಯಾದ “ಪಾಲೆಮಾರ್ ಕನ್ವೆನ್ಷನ್ ಸೆಂಟರ್” ಭವ್ಯವಾಗಿ ಉದ್ಘಾಟನೆಯಾಯಿತು. ಸಮಾಜ ಸೇವೆ, ಸಾಂಸ್ಕೃತಿಕ ಸೌಹಾರ್ದತೆ ಮತ್ತು ಸಾರ್ವಜನಿಕ ಉಪಯೋಗಕ್ಕೆ ವೇದಿಕೆಯಾಗುವ ಈ ಯೋಜನೆಯನ್ನು ಗಣ್ಯರು ಶ್ಲಾಘಿಸಿದರು.

    Also Read  ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….

    ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, “ನಿಜವಾದ ಯಶಸ್ಸು ಸಮಾಜ ಸೇವೆಯಲ್ಲಿದೆ. ಇಂತಹ ಕನ್ವೆನ್ಷನ್ ಕೇಂದ್ರಗಳು ಮುಂದಿನ ಪೀಳಿಗೆಗೆ ಅವಕಾಶಗಳನ್ನು ಸೃಷ್ಟಿಸುವ ಅಭಿವೃದ್ಧಿಯ ವೇದಿಕೆಗಳಾಗಬೇಕು” ಎಂದು ಹೇಳಿದರು.

    ಕೃಷ್ಣ ಜೆ ಪಾಲೆಮಾರ್ ಮಾತನಾಡಿ, “ಸಮಾಜಕ್ಕೆ ಮರಳಿ ಕೊಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ವಿಶೇಷವಾಗಿ ಸಾಮೂಹಿಕ ವಿವಾಹ ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಂದ ಕುಟುಂಬಗಳ ಮುಖದಲ್ಲಿ ಮೂಡುವ ಸಂತೋಷವೇ ನನ್ನ ದೊಡ್ಡ ಬಹುಮಾನ” ಎಂದರು.

    ಮುಖ್ಯ ಅತಿಥಿಯಾಗಿದ್ದ ಎಸ್. ಅಬ್ದುಲ್ ನಜೀರ್, ಪಾಲೆಮಾರ್ ಹಾಗೂ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಸಮಾಜಮುಖಿ ಸೇವೆಯನ್ನು ಪ್ರಶಂಸಿಸಿ, ಈ ಕೇಂದ್ರವು ಕರಾವಳಿ ಭಾಗದ ಪ್ರಮುಖ ಮದುವೆ, ಸಮಾವೇಶ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ತಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    Also Read  ಒಂದೆಡೆ ‘ನಶಾ ಮುಕ್ತ ಯುವ ಭಾರತ’ ಅಭಿಯಾನ; ಮತ್ತೊಂದೆಡೆ ಪಬ್ ಸಂಸ್ಕೃತಿಯ ಸೆಳೆತ..! ಮಣಿಪಾಲದಲ್ಲಿ ಅಪ್ರಾಪ್ತರ ಮದ್ಯಪಾನ ಬಯಲು

    ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿಕಾಸ್ ಎಜುಕೇಶನ್ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶ ಇದಾಗಿತ್ತು.

    ಹೊಸ ಕನ್ವೆನ್ಷನ್ ಕೇಂದ್ರದಲ್ಲಿ ಆಧುನಿಕ ಸಭಾಂಗಣ, ಅತಿಥಿ ಕೊಠಡಿಗಳು, ಪ್ರಾರ್ಥನಾ ಸೌಲಭ್ಯ ಹಾಗೂ ವಿಶಾಲ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ “ಗ್ರೀನ್ ವ್ಯಾಲಿ” ಎಂಬ ಬೃಹತ್ ಮುಕ್ತಾಂಗಣ ವೇದಿಕೆಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದಾಗಿ ತಿಳಿಸಲಾಯಿತು.

    ಈ ಯೋಜನೆ ಪಾಲೆಮಾರ್ ಕನ್ವೆನ್ಷನ್ ಸೆಂಟರ್, ಪಾಲೆಮಾರ್ ಗಾರ್ಡನ್, ಪಾಲೆಮಾರ್ ಫಾರ್ಮ್ಸ್ ಹಾಗೂ ನೆತ್ರಾವತಿ ಸಭಾಭವನ ಸೇರಿದಂತೆ ನಾಲ್ಕು ಪ್ರಮುಖ ಕಾರ್ಯಕ್ರಮ ಕೇಂದ್ರಗಳ ಸಮಗ್ರ ಯೋಜನೆಯ ಭಾಗವಾಗಿದೆ.

    ಸಾಮಾಜಿಕ ಸೇವೆಗೆ ಆದ್ಯತೆ ನೀಡಿರುವ ಈ ಕೇಂದ್ರಗಳಲ್ಲಿ ಸಾಮೂಹಿಕ ವಿವಾಹ ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಈ ಯೋಜನೆಯಿಂದ ಕಾರ್ಯಕ್ರಮ ನಿರ್ವಹಣೆ, ಆತಿಥ್ಯ, ಅಲಂಕಾರ, ಕ್ಯಾಟರಿಂಗ್, ಛಾಯಾಗ್ರಹಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಹಾಗೂ ಸ್ವಯಂ ಉದ್ಯೋಗ ಅವಕಾಶಗಳು ಹೆಚ್ಚಲಿವೆ.

    Also Read  ದಸರಾ ರಜೆಯಲ್ಲೂ ಶಾಲೆ! ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿ

    ಕಾರ್ಯಕ್ರಮದ ಅಂತ್ಯದಲ್ಲಿ ಶಿಕ್ಷಣ, ಸಂಸ್ಕೃತಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಕರೆ ನೀಡಲಾಯಿತು. ಈ ಯೋಜನೆ ಕೇವಲ ಕನ್ವೆನ್ಷನ್ ಕೇಂದ್ರವಲ್ಲ, ಸಾಮಾಜಿಕ ಸೌಹಾರ್ದತೆ ಮತ್ತು ಸಮಗ್ರ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವೈರಲ್ ವೀಡಿಯೊ ….ನಗು ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಹೆಣ್ಣುಮಗುವಿನ ಹೆಣದ ಮುಂದೆ ನಕ್ಕರೆ.. ಏನಂತಾರೆ?ತಮಿಳುನಾಡಿನ ಜನ ಕಣ್ಣೀರಲ್ಲಿರುವಾಗ ಇವರಿಗೆ ಜೋಕ್ಸ್‌ ನೆನಪಾಯ್ತಾ? ಏನದು ಅಂತ ಜೋಕ್ಸ್ …
    ಗ್ಯಾಸ್ ಸೋರಿಕೆ ಎಷ್ಟು ಅಪಾಯಕಾರಿ? ಕ್ಷಣದ ನಿರ್ಲಕ್ಷ್ಯ ಮನೆ ಸುಟ್ಟು, ಶೇ.60 ಸುಟ್ಟ ಗಾಯಾಳುವಿಗೆ ಶಾಸಕ ಭರತ್ ಶೆಟ್ಟಿ ನೆರವಿನ ಭರವಸೆ..
    ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಇ.ಡಿ. ಶಾಕ್: 21 ಕಡೆ ಏಕಕಾಲದ ದಾಳಿ
    ಡಾನ್ -3 ಸಿನಿಮಾ ಕಥೆ ಗೋವಿಂದ….!
    “ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಾನು ಅಧ್ಯಕ್ಷ ಸ್ಥಾನ ಬಿಡಲು ಸಿದ್ಧ”!-ಉದ್ಧವ್ ಠಾಕ್ರೆ ಕಣ್ಣೀರಿನ ಮನವಿ.
    ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
    ಅಪ್ರಾಪ್ತನ ಕ್ರೌರ್ಯಕ್ಕೆ ಬಳ್ಳಾರಿ ವಸತಿ ಶಾಲೆಯ ದೌರ್ಜನ್ಯವೇ ಸಾಕ್ಷಿ… ಈ ಕ್ರೌರ್ಯದ ಹಿಂದೆ ಮನೋರೋಗ ಅಡಗಿದೆಯಾ? 
    ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
    ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
    ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
    ಮೀನುಗಳ ಮಾರಣಹೋಮ, ಕಪ್ಪಾದ ನೀರು,ಉಸಿರುಗಟ್ಟಿಸುವ ದುರ್ವಾಸನೆ — ಜನರ ಬದುಕಿಗೆ ದೊಡ್ಡ ಎಚ್ಚರಿಕೆ!
    ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ PIL: SIR ವಿಚಾರಕ್ಕೆ ಹೊಸ ತಿರುವು
    ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
    ಕರ್ನಾಟಕದ ಮಾಜಿ ಸಚಿವರಿಗೆ ಜೈಲು ಜೈಲು ಶಿಕ್ಷೆಗೆ ಉಪಮುಖ್ಯಮಂತ್ರಿ ಡಿಕೆಯ ಶಾಕ್ ಸ್ಟೇಟ್ಮೆಂಟ್
    ಕುಮಾರಸ್ವಾಮಿ ನೆನೆದ ಗುಬ್ಬಿ ವಾಸು: ಮತ್ತೆ ಜೆಡಿಎಸ್ ಸೇರ್ಪಡೆಗೆ ಮುನ್ನುಡಿಯೇ ಈ ಹೇಳಿಕೆ?
    ಬಿಡದಿಯ ಭೂಮಿ ಯಾರಿಗೆ? ಹೋರಾಟಕ್ಕೆ ಹೊಸ ತಿರುವು.! ಭೂಸಮರದ ಒಳನೋಟ…!
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ಸಾಧನೆ ಇಲ್ಲದೆ ಸತ್ತರೆ ಸಾವಿಗೂ ಅಪಮಾನ!
    ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
    “ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
    ಲೈಫ್‌ಗಾರ್ಡ್ ಇಲ್ಲದ ಕಡಲಿಗೆ 14ರ ಬಾಲಕ…ಶ್ರೇಯಸ್ ಬಲಿ!
    ಡೇಟಾ ಬೇಡವೇ? ಕರೆ-SMS ಬಳಕೆದಾರರಿಗೆ ಟ್ರಾಯ್‌ನಿಂದ ಹೊಸ ಆಯ್ಕೆ
    ವರದಕ್ಷಿಣ ಪ್ರಕರಣ:5.5 ತಿಂಗಳ ಮಗುವಿಗೂ ದೈಹಿಕ ಹಿಂಸೆ….!
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ
    ದಂಡ ಕಟ್ಟದವರಿಗೆ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ದಂಡ….! ಸುಪ್ರೀಂ ಕೋರ್ಟ್‌
    ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
    ಕರ್ನಾಟಕದಲ್ಲಿ ತಾಪಮಾನ ಅಪಾಯ ಮಟ್ಟಕ್ಕೆ!ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ಸ್ಟ್ರೋಕ್ ರೂಮ್‌ಗಳು-ಆರೋಗ್ಯ ಇಲಾಖೆ ತುರ್ತು ಕ್ರಮ ಜಾರಿ
    ಒಂದೇ ಫ್ಲಾಟ್ ಇಬ್ಬಿಬ್ಬಿರ ಹೆಸರಲ್ಲಿ ..!ಡಬಲ್ ಡಾಕ್ಯುಮೆಂಟ್ ದಂಧೆ ಬಯಲು –ಕೋಟಿ ಕೋಟಿ ವಂಚನೆ ಮಾಡಿ ಆರೋಪಿ ಪರಾರಿ! ರಿಯಲ್ ಎಸ್ಟೇಟ್ ಶಾಕ್….
    ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್