📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪುತ್ತೂರು ಗ್ರಾಮಾಂತರದಲ್ಲಿ ಭೂ ವಿವಾದದ ಗಲಾಟೆ ತೀವ್ರತೆ: ಪರಸ್ಪರ ಹಲ್ಲೆ – ಎರಡು ಪ್ರಕರಣಗಳು ದಾಖಲು

    ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣಗಳು ವರದಿ

    ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಸ್ಪರ ಸಂಬಂಧಿತ ಭೂ ವಿವಾದದಿಂದ ಉದ್ಭವಿಸಿದ ಎರಡು ಪ್ರತ್ಯೇಕ ಹಲ್ಲೆ ಪ್ರಕರಣಗಳು ದಾಖಲಾಗಿವೆ.

    ಮೊದಲ ಪ್ರಕರಣದಲ್ಲಿ, ಪಿರ್ಯಾದಿದಾರರಾದ ಅಬ್ದುಲ್ ರಹಿಮಾನ್ (29) ಅವರು 2023ರಲ್ಲಿ ಖರೀದಿಸಿದ 0.36 ಸೆಂಟ್ಸ್ ಜಾಗದ ವಿಚಾರದಲ್ಲಿ ಪಿ. ಮಹಮ್ಮದ್ ಅವರೊಂದಿಗೆ ನಡೆಯುತ್ತಿದ್ದ ತಕರಾರಿನ ಹಿನ್ನೆಲೆ, 26.04.2026 ರಂದು ಜಾಗಕ್ಕೆ ತೆರಳಿದಾಗ ಮಹಮ್ಮದ್ ಮತ್ತು ಅವರ ಕೆಲಸದಾಳುಗಳು ಅಕ್ರಮವಾಗಿ ತಡೆಗೋಡೆ ನಿರ್ಮಿಸುತ್ತಿದ್ದರೆಂದು ಆರೋಪಿಸಲಾಗಿದೆ. ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು ಎಸೆದಿದ್ದು, ಪಿರ್ಯಾದಿದಾರರ ತಾಯಿಗೆ ಗಾಯವಾಗಿದೆ ಎಂದು ತಿಳಿಸಲಾಗಿದೆ. ನಂತರ ಕತ್ತಿಯಿಂದ ದಾಳಿ ಮಾಡುವ ಯತ್ನವೂ ನಡೆದಿದ್ದು, ಸ್ಥಳೀಯರು ಮಧ್ಯಪ್ರವೇಶಿಸುವಷ್ಟರಲ್ಲಿ ಆರೋಪಿತರು ಜೀವ ಬೆದರಿಕೆ ನೀಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಅ.ಕ್ರ: 66/2026 ಕಲಂ 352, 351(2), 126(2) ಅಡಿ ಪ್ರಕರಣ ದಾಖಲಾಗಿದೆ.

    ಇನ್ನೊಂದು ಪ್ರಕರಣದಲ್ಲಿ, ಪಿರ್ಯಾದಿದಾರ ಮಹಮ್ಮದ್ (56) ಅವರ ಮೇಲೆ ಅದೇ ದಿನ ಮಧ್ಯಾಹ್ನ 2.30ಕ್ಕೆ ಆರೋಪಿತರಾದ ಅಬ್ದುಲ್ ರಹೆಮಾನ್, ಸಾವುಲ್ ಹಮೀದ್, ಮಿಖ್ದಾದ್, ರಶೀದ್ ಮತ್ತು ಮೊಯಿದು ಎಂಬವರು ಮನೆ ಬಳಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜಾಗದ ವಿವಾದ ಹಾಗೂ ಹಣಕಾಸು ವಿಚಾರ ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು ಹಾಗೂ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಹಲ್ಲೆಯಿಂದ ಪಿರ್ಯಾದಿದಾರರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅ.ಕ್ರ: 67-2026 ಕಲಂ 115(2), 118(1), 351(2), 325 ಬಿಎನ್ ಎಸ್ ಅಡಿ ಪ್ರಕರಣ ದಾಖಲಾಗಿದೆ.

    Also Read  ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ

    ಪೊಲೀಸರು ಎರಡೂ ಪ್ರಕರಣಗಳಲ್ಲಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

    ##Puttur #LandDispute #AssaultCase #PoliceCase #DakshinaKannada #CrimeNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
    ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಂಪನ್ಮೂಲ ಕೇಂದ್ರ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ
    ಕೇಂದ್ರ ಸಚಿವ ಸೋಮಣ್ಣರ ವಿರುದ್ಧ  ವಾಗ್ದಾಳಿ: “ನಡೆದು ಬಂದ ದಾರಿ ಮರೆತು ಮಾತನಾಡಬೇಡಿ”
    “ASDDO ಪಟ್ಟಿಯಲ್ಲಿ 1.11 ಕೋಟಿ ಮತದಾರರು…!ನಿಮ್ಮ ಹೆಸರು ಇದೆಯೇ? ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಮಿಸ್ಸಿಂಗ್?ಫಾರ್ಮ್-6 ಸಲ್ಲಿಸಲು ಮರೆಯಬೇಡಿ!
    ಗಾಯತ್ರಿ ಶಾಂತೇಗೌಡ ಸಚಿವ ಸ್ಥಾನ ವಿವಾದ: ರಾಜಕೀಯ ಚರ್ಚೆಗೆ ಹೊಸ ತಿರುವು…. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುರುತರ ಆರೋಪ
    ಪಂಚ ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಸಾಲದ ಸುಳಿಗೆ……..
    ಸಾಮಾಜಿಕ‌ ಕಾರ್ಯಕರ್ತರಿಗೆ ಹಾಗೂ ನಗರ ಸಭೆ ಪೌರಯುಕ್ತರಿಗೆ ಬಹಿರಂಗ ಸವಾಲು.ಶ್ರೀಮಂತರ ಅಕ್ರಮಗಳ ಬಗ್ಗೆ ಮೌನವೇಕೆ.‌‌?
    ತುಮಕೂರಿನಲ್ಲಿ 10 ಲಕ್ಷದ ವಜ್ರಾಭರಣ ಕದ್ದ ಈ ಮಹಾಚೋರನ ಕಥೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!”
    ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
    ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು… 
    ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಮೆಂಟ್ ಗಳನ್ನು ಹಾಕಿದ ಆರೋಪಿಯ ಬಂಧನ
    ಮೋದಿ ಪೋಸ್ಟ್‌ನಿಂದ ಮೆಟಾಗೆ ಸಮನ್ಸ್! ಡಿಜಿಟಲ್ ಸುರಕ್ಷತೆ ಕುರಿತು ಕೇಂದ್ರದ ಕಠಿಣ ಪ್ರಶ್ನೆಗಳು
    ₹30 ಲಕ್ಷ ಖರ್ಚಿನ ಹೊಸ ಮನೆಯಡಿಯಲ್ಲಿ ಗುಹೆ ಪತ್ತೆ; ವಾಸಕ್ಕೆ ಯೋಗ್ಯವಲ್ಲ ಎಂದ ತಜ್ಞರು …!!!ಗೃಹಪ್ರವೇಶದ ಸಂಭ್ರಮದಲ್ಲೇ ಕುಟುಂಬಕ್ಕೆ ಆಘಾತ!
    ಹೊಲದಲ್ಲಿ ಹೂತಿಟ್ಟ ₹5 ಲಕ್ಷ… ತೆರೆದಾಗ ಶಾಕ್!
    ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..
    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!
    ಷೇರು ವ್ಯವಹಾರದ ಲಾಭವೂ ಆದಾಯವೇ: ಜೀವನಾಂಶ ₹50 ಸಾವಿರದಿಂದ ₹1.20 ಲಕ್ಷಕ್ಕೆ ಏರಿಸಿದ ಹೈಕೋರ್ಟ್
    ಸುಮಂತ್ ನಿಗೂಢ ಸಾವು ಪ್ರಕರಣ: ತನಿಖೆಗೆ ಹೊಸ ತಿರುವು—ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್, ಮಂಪರು ಪರೀಕ್ಷೆ!
    ದೆಹಲಿಯನ್ನು ನಡುಗಿಸಿದ ಸೈಕೋಪಾತ್ ಘಟನೆಯ ಕ್ರೂರ ಸತ್ಯ…. ಆನ್‌ಲೈನ್ ಬೆಟ್ಟಿಂಗ್ ಮತ್ತು ಆಟಗಳ ಅಡಿಕ್ಟ್ – ಸಾಲ …ಮನೋವೈಕಲ್ಯ ಲಕ್ಷಣ!
    ಮುಂಬೈ ಬೀದಿಯಲ್ಲಿ ನಾರಿ ಶಕ್ತಿಯ ಸಿಡಿಲು!ಜನರ ಬದುಕು ಅಡ್ಡಗಟ್ಟಿದರೆ ಎದುರಿಸುವವರು ಹೀಗೆ ಒಬ್ಬೊಬ್ಬರೇ ಇನ್ನೂ ಹುಟ್ಟುತ್ತಾರೆ..
    ಕರ್ನಾಟಕದಲ್ಲಿ ಹೈ ಅಲರ್ಟ್: ಕರಾವಳಿಯಲ್ಲಿ ಸತತ 4 ದಿನ ಭಾರೀ ಮಳೆ – ಮಕ್ಕಳು, ಮೀನುಗಾರರು ಮತ್ತು ನದಿ ಪಾತ್ರದ ಜನರು ವಿಶೇಷ ಎಚ್ಚರಿಕೆ ವಹಿಸಿ
    ಬಿಲ್‌ಗಾಗಿ ಶವ ತಡೆದರೆ ಹುಷಾರ್! ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಕ್ರಮ?
    ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    ಮೊಬೈಲ್ ನಂಬರ್ ದುರ್ಬಳಕೆ; ನಿವೃತ್ತ ಉದ್ಯೋಗಿಯ ವಿವಿಧ ಬ್ಯಾಂಕ್ ಖಾತೆಗಳಿಂದ ₹2.12 ಕೋಟಿ ಆನ್‌ಲೈನ್ ವಹಿವಾಟು
    ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ಆಹಾರ ಬೆಲೆ ಏರಿಕೆ: ಸಾಮಾನ್ಯರ ಅಡಿಗೆ ಮನೆಗೆ ಮತ್ತೆ ಹೊರೆ?
    ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ, ಸದ್ಯಕ್ಕೆ ತಾಯಿ ಮಕ್ಕಳು ಸೇಫ್