📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕರಾವಳಿಯಲ್ಲಿ ಶುರುವಾಯ್ತು MESCOM ಮಹಾಸಮರ!ಬಯಲಾಗುತ್ತಾ “ಬ್ರಹ್ಮಾಂಡ ಭ್ರಷ್ಟಾಚಾರ”..!?

    ಮೆಸ್ಕಾಂ ಖಾಸಗೀಕರಣದ ಹಿಂದೆ ಅಡಗಿದೆಯೇ ಬ್ರಹ್ಮಾಂಡ ಲಂಚಾವತಾರ? ನಿಗಮ ಮಂಡಳಿಗಳ ರಾಜಕೀಯಕ್ಕೆ ಸಾರ್ವಜನಿಕರ ಜೇಬಿಗೆ ಕತ್ತರಿ!”ಜನರ ಮನೆಯ ಮೀಟರ್ ಮೇಲೆ ರಾಜಕೀಯ ‘ಚಕ್ರಬಡ್ಡಿಮೇಲೆ ಬಡ್ಡಿ’ ಲೂಟಿ! ಮೆಸ್ಕಾಂ ಬ್ರಹ್ಮಾಂಡ ಹಗರಣ ಸ್ಫೋಟಕ್ಕೆ ಮುಹೂರ್ತ ಫಿಕ್ಸ್….!??!

    ಮಂಗಳೂರು: ಮೆಸ್ಕಾಂನ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಟಾಟಾ ಕಂಪನಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಕರಾವಳಿಯಲ್ಲಿ ತೀವ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೆಡೆ ಖಾಸಗೀಕರಣದ ವಿರುದ್ಧ ನೌಕರರು ಬೀದಿಗಿಳಿದು ಹೋರಾಡುತ್ತಿದ್ದರೆ, ಇನ್ನೊಂದೆಡೆ ಸದ್ಯದ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ರಾಜಕೀಯ ಹಿತಾಸಕ್ತಿಗಳಿಂದ ಬೇಸತ್ತಿರುವ ಸಾರ್ವಜನಿಕರು ಖಾಸಗೀಕರಣದ ಪರವಾಗಿ ತೀವ್ರ ಆಕ್ರೋಶದ ಧ್ವನಿ ಎತ್ತುತ್ತಿದ್ದಾರೆ.

    ನೌಕರರಿಗೆ ಉದ್ಯೋಗದ ಆತಂಕ, ಜನರಿಗೆ ಭ್ರಷ್ಟಾಚಾರದ ಜಿಗುಪ್ಸೆ! ಮೆಸ್ಕಾಂ ಖಾಸಗೀಕರಣದ ಹಿಂದೆ ಅಡಗಿದೆಯೇ ಬ್ರಹ್ಮಾಂಡ ಹಗರಣ?”

    ಮಂಗಳೂರಿನ ಬಿಜೆಯ ಮೆಸ್ಕಾಂ ಪ್ರಧಾನ ಕಚೇರಿ ಎದುರು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಟಾಟಾ ಕಂಪನಿಗೆ ಹಸ್ತಾಂತರಿಸುವ ಕೆಇಆರ್‌ಸಿ ಪ್ರಸ್ತಾಪದ ವಿರುದ್ಧ ಮೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆ ನೌಕರರು ಒಟ್ಟಾಗಿ ಬೃಹತ್ ಪ್ರತಿಭಟನಾ ದ್ವಾರ ಸಭೆ ನಡೆಸಿದರು. ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಬಲರಾಮ್ ಅವರು ಖಾಸಗೀಕರಣದ ವಿರುದ್ಧ ಜೂನ್ 23ರ ಒಳಗೆ ಗ್ರಾಹಕರು, ರೈತರು ಮತ್ತು ಶಾಸಕರು ಆಕ್ಷೇಪಣೆ ಸಲ್ಲಿಸಬೇಕೆಂದು ಕರೆ ನೀಡಿದರು. ಎಂಜಿನಿಯರ್‌ಗಳ ಸಂಘದ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಪೈ ಮಾತನಾಡಿ, ಖಾಸಗೀಕರಣದಿಂದ ಹೊಸ ಸಿಬ್ಬಂದಿ ನೇಮಕಾತಿ ನಿಲ್ಲಲಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳ ಸೇವೆಯಲ್ಲಿ ತಾರತಮ್ಯ ಉಂಟಾಗಲಿದೆ ಹಾಗೂ ಸರ್ಕಾರದ ಉಚಿತ ಸೌಲಭ್ಯಗಳು ರದ್ದಾಗಿ ಇಡೀ ವ್ಯವಸ್ಥೆ ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

    Also Read  ಗೃಹಿಣಿ ಅಲ್ಲ, ರಾಷ್ಟ್ರ ನಿರ್ಮಾಣಕಾರಿ"ಮನೆಯ ಕೆಲಸ ಕೆಲಸವೇ ಅಲ್ಲ ಎನ್ನುವವರೇ... ಈ ಸುದ್ದಿ ಒಮ್ಮೆ ಓದಿ!ಆಕೆಯ ಶ್ರಮಕ್ಕೆ-₹30,000 ಮೌಲ್ಯ!– ಸುಪ್ರೀಂ ಕೋರ್ಟ್ ಮಹತ್ವದ ಸಂದೇಶ

    ರಾಜಕೀಯ ದಂಧೆ ಮತ್ತು ಲಂಚ ಸಾಮ್ರಾಜ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ!

    ನೌಕರರು ತಮ್ಮ ಉದ್ಯೋಗ ರಕ್ಷಣೆಗಾಗಿ ಹೋರಾಡುತ್ತಿದ್ದರೆ, ಇತ್ತ ಸಾರ್ವಜನಿಕರು ಮೆಸ್ಕಾಂನ ಸದ್ಯದ ದುಸ್ಥಿತಿ ಮತ್ತು ಅದರ ಹಿಂದಿರುವ ರಾಜಕೀಯ ಲೂಟಿಯ ವಿರುದ್ಧ ಕಟು ಸತ್ಯಗಳನ್ನು ಬಿಚ್ಚಿಡುತ್ತಿದ್ದಾರೆ:


    • ನಿಗಮ ಮಂಡಳಿಗಳ ‘ರಾಜಕೀಯ ಸಾಕುಪ್ರಾಣಿಗಳನ್ನು’ ಸಲಹಲು ಸಾರ್ವಜನಿಕರೇ ಬಲಿಪಶು! ಮೆಸ್ಕಾಂ ಕದನದ ಕಟು ಸತ್ಯ!”
       “ಆಡಳಿತ ನಡೆಸುವ ರಾಜಕೀಯ ಪಕ್ಷಗಳು ತಮ್ಮದೇ ಆದ ಪ್ರಭಾವಿ ವ್ಯಕ್ತಿಗಳನ್ನು ಸಮಾಧಾನಪಡಿಸಲು ‘ನಿಗಮ ಮಂಡಳಿ’ಗಳ ಅಧ್ಯಕ್ಷ, ಸದಸ್ಯ ಸ್ಥಾನ ಎಂದು ಒಂದೊಂದು ಪೋಸ್ಟ್ ಹಂಚುತ್ತವೆ. ತಮಗೆ ಬೇಕಾದವರ ಅಕ್ರಮ ಕೆಲಸಗಳನ್ನು ಮಾಡಿಸಿಕೊಳ್ಳಲು ಈ ರಾಜಕೀಯ ನೇಮಕಾತಿಗಳನ್ನು ಬಳಸಿಕೊಳ್ಳಲಾಗುತ್ತದೆ. ಇಂತಹ ರಾಜಕೀಯ ಮುಖಂಡರನ್ನು ಮತ್ತು ಅವರ ಐಷಾರಾಮಿ ವ್ಯವಸ್ಥೆಯನ್ನು ಸಾಕಿ ಸಲಹಲು ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಈ ಖರ್ಚು ಭರಿಸಲು ಇವರು ಮಾಡುವ ತಂತ್ರವೇ ಸಾರ್ವಜನಿಕರ ವಿದ್ಯುತ್ ಬಿಲ್ ಹೆಚ್ಚಳ!”
    • ನಮ್ಮ ಮನೆಯ ಮೀಟರ್ ಮೇಲೆ ‘ಚಕ್ರಬಡ್ಡಿ’ಯ ಪ್ರಹಾರ: “ರಾಜಕೀಯ ಲೂಟಿಕೋರರನ್ನು ಸಾಕೋಕೆ ಖರ್ಚಾಗುವ ಹಣವನ್ನು ಸಾಮಾನ್ಯ ಜನರಿಂದ ವಸೂಲಿ ಮಾಡಲಾಗುತ್ತಿದೆ. ನಮ್ಮ ಮನೆಯ ವಿದ್ಯುತ್ ಮೀಟರ್ ಮೇಲೆ ತಿರುಗುವ ಚಕ್ರಗಳು ಬರೀ ರೀಡಿಂಗ್ ತೋರಿಸುತ್ತಿಲ್ಲ, ಬದಲಿಗೆ ಸಾರ್ವಜನಿಕರ ರಕ್ತ ಹೀರುವ ‘ಚಕ್ರಬಡ್ಡಿ’ಯ ದರಗಳನ್ನು ನಮ್ಮ ತಲೆಗೆ ಕಟ್ಟುತ್ತಿವೆ! ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಈ ವ್ಯವಸ್ಥೆಗೆ ಮದ್ದರಿಯುವವರು ಯಾರು?!”
    • ದುಡ್ಡು ಕೊಟ್ಟರೆ ಮಾತ್ರ ಫೈಲ್ ಮೂವ್: “ಇಂದು ಮೆಸ್ಕಾಂನಲ್ಲಿ ದುಡ್ಡು ಕೊಟ್ಟರೆ ಏನೂ ಬೇಕಾದರೂ ಮಾಡುತ್ತಾರೆ, ದುಡ್ಡು ಕೊಡದಿದ್ದರೆ ಕಾನೂನುಬದ್ಧ ಕೆಲಸವೂ ಆಗಲ್ಲ. ಒಂದು ಖಾಸಗಿ ಟ್ರಾನ್ಸ್‌ಫಾರ್ಮರ್ (Transformer) ಹಾಕಿಸಬೇಕಾದರೆ ಲಕ್ಷ ಲಕ್ಷ ರೂಪಾಯಿಗಳ ‘ಕವರ್’ ಕೊಟ್ಟರೆ ಮಾತ್ರ ಸಾಹೇಬರ ಸಹಿ ಆಗುತ್ತದೆ. ಒಂದೊಂದು ಪರ್ಮಿಷನ್‌ಗೆ ಅವರದ್ದೇ ಆದ ಫಿಕ್ಸ್ ರೇಟ್ ಕಾರ್ಡ್ ಇದೆ.”
    • ಬಡವರ ಜಾಗದಲ್ಲಿ ಅಕ್ರಮ ಕಂಬಗಳು: “ಯಾವುದೇ ಪವರ್ ಇಲ್ಲದ ಪಾಪದ ಬಡವರ ಖಾಸಗಿ ಜಾಗಗಳಲ್ಲಿ ಎಗ್ಗಿಲ್ಲದೆ ಸಾಲು ಸಾಲು ವಿದ್ಯುತ್ ಕಂಬಗಳನ್ನು ನೆಡಲಾಗುತ್ತದೆ. ಅದೇ ಸಾರ್ವಜನಿಕರೊಬ್ಬರು ದಪ್ಪನೆಯ ‘ಲಂಚದ ಕವರ್’ ಕೊಟ್ಟರೆ, ಅವರಿಗೆ ಅನುಕೂಲ ಮಾಡಿಕೊಡಲು ಬೇರೆಯವರ ಜಾಗದಲ್ಲಿ ಕಾನೂನುಬಾಹಿರವಾಗಿ ಲೈನ್ ಕಂಬಗಳನ್ನು ನಿಲ್ಲಿಸಲಾಗುತ್ತದೆ. ಹಣಕ್ಕೋಸ್ಕರ ಪಾಪದ ಜನರನ್ನು ಆಟ ಆಡಿಸುವ ಈ ವ್ಯವಸ್ಥೆಗೆ ಮುಕ್ತಿ ಬೇಡವೇ?”
    Also Read  ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!

    ಖಾಸಗೀಕರಣವೇ ಇದಕ್ಕೆ ಕೊನೆಯ ಮದ್ದೇ?

    ಮೆಸ್ಕಾಂನಲ್ಲಿ ಭ್ರಷ್ಟಾಚಾರ ಮತ್ತು ಭ್ರಷ್ಟ ಅಧಿಕಾರಿಗಳು ತುಂಬಿ ತುಳುಕುತ್ತಿದ್ದು, ಸದ್ಯದಲ್ಲೇ ಮೆಸ್ಕಾಂನ ‘ಬ್ರಹ್ಮಾಂಡ ಭ್ರಷ್ಟಾಚಾರದ ಹಗರಣ’ ಸಾಕ್ಷಿ ಸಮೇತ ಹೊರಬರಲಿದ್ದು, ದೊಡ್ಡ ದೊಡ್ಡ ಕುಳಗಳು ಸಿಕ್ಕಿಬೀಳಲಿವೆ ಎಂದು ನೊಂದ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಹಣದ ಹಪಹಪಿಗೆ ಬಿದ್ದು ಬಡವರನ್ನು ಸತಾಯಿಸುವ ಮತ್ತು ರಾಜಕೀಯ ನಾಯಕರ ಸ್ವಾರ್ಥಕ್ಕೆ ಬಳಕೆಯಾಗುತ್ತಿರುವ ಈ ಸರ್ಕಾರಿ ವ್ಯವಸ್ಥೆ ಖಾಸಗೀಕರಣವಾದರೆ ಮಾತ್ರ ಇಂತಹ ಲಂಚಾವತಾರ ಮತ್ತು ಅಕ್ರಮಗಳಿಗೆ ಬ್ರೇಕ್ ಬೀಳಬಹುದು ಎನ್ನುವುದು ಸಾರ್ವಜನಿಕರ ತರ್ಕಬದ್ಧ ದೂರಾಲೋಚನೆಯಾಗಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸಂಸತ್ತಿನಲ್ಲಿ ಇತಿಹಾಸ ಸೃಷ್ಟಿಸುವ ಚರ್ಚೆ-ಮಹಿಳಾ ಮೀಸಲು ಬಿಲ್ಲಿನ ಸುತ್ತ ಕಂಗೊಳಿಸಿದ ಸಂಸತ್ !
    ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳಿಗೆ heartattack !!!..ಐಸಿಯು ಮತ್ತು ಸಿಸಿಟಿವಿ ದೃಶ್ಯಗಳಲ್ಲಿದೆ ಕ್ಲಾರಿಟಿ!
    ಶಿರಾಡಿ ಗ್ರಾ.ಪಂ PDO ಸಹಿ ನಕಲು ….6 ತಿಂಗಳಾದರೂ ದೂರು ದಾಖಲಾಗಿಲ್ಲ!
    ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
    “ಅಮ್ಮನ ನೋವು ನೋಡಲಾಗಲಿಲ್ಲ…” ನಾಲ್ಕನೇ ಮಹಡಿಯಿಂದ ತಳ್ಳಿದ ಮಗ …
    ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
    ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
    AI ವಿಶ್ವವಿದ್ಯಾಲಯಕ್ಕೂ ಮೊದಲು AI ಪರಿಣಾಮಗಳ ಅಧ್ಯಯನ ಅಗತ್ಯವೇ?
    ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ… ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!
    ಪತ್ರ ಕಳುಹಿಸುವ ಅಂಚೆ ಕಚೇರಿ ಈಗ ಜೀವವಿಮೆಗೂ ಆಸರೆ ..!ಅಂಚೆ ಕಚೇರಿಯಲ್ಲೇ ಕುಟುಂಬದ ಭವಿಷ್ಯಕ್ಕೆ ಭದ್ರತೆ!
    ಜಾರ್ಖಂಡ್‌ನಲ್ಲಿ 16 ದಿನಗಳ ಉಪವಾಸಕ್ಕೆ ಫಲ!ವಿದ್ಯಾರ್ಥಿಗಳ ಹೋರಾಟಕ್ಕೆ ಮಹತ್ವದ ಜಯ —ಒತ್ತಡಕ್ಕೆ ಮಣಿದ ಸರ್ಕಾರ? ಬೇಡಿಕೆಗಳ ಮೇಲೆ ಮಹತ್ವದ ಒಪ್ಪಂದಗಳೇನು..?
    ಬಾಲ್ಯದಲ್ಲೇ ಕಲಿಯಲಿ ಹಣದ ಲೆಕ್ಕ!ಮಕ್ಕಳಿಗಿನ್ನು ಪುಸ್ತಕದ ಜೊತೆ ‘ಹಣದ ಜ್ಞಾನ’! 956 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ಪಾಠ
    ನದಿಯಲ್ಲ ರಸ್ತೆ..!ಕೈಕಂಬದ ಕಂದಾವರದ ಈ ರಸ್ತೆ ಕೆರೆಯಾಗಿ ನೀರಿನಲ್ಲಿ ಮುಳುಗಿದೆ!ಶಾಲಾ ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಜೀವಭಯ!
    ಅಮೆರಿಕದ ಭೀಕರ ವಾಯು ದಾಳಿ: ಇರಾನ್‌ನ ಆರ್ಥಿಕ ಹೃದಯ ‘ಖಾರ್ಗ್ ದ್ವೀಪ’ದ ಸೇನಾ ನೆಲೆಗಳು ಧ್ವಂಸ – ಪ್ರತಿದಾಳಿ ಮಾಡಿದರೆ ತೈಲ ಕೇಂದ್ರಗಳೇ ಮುಂದಿನ ಗುರಿ ಎಂದು ಟ್ರಂಪ್ ಕಠಿಣ ಎಚ್ಚರಿಕೆ
    ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
    ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ
    ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.
    ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
    ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್…!ಅಪ್ಲಿಕೇಶನ್ ಬ್ಯಾನ್ ಅಲ್ಲ, ವ್ಯವಸ್ಥೆ ಸರಿಪಡಿಸಿ! ಸರ್ಕಾರಕ್ಕೆ ನಿಸರ್ಗ ಅಧಿಕಾರಿಯ ಸಲಹೆ
    ಸೋಶಿಯಲ್ ಮೀಡಿಯಾದ ವೈರಲ್ ವಿಡಿಯೋದಿಂದ ಕೋರ್ಟ್ ತನಕ..!ರಸ್ತೆ ರೇಜ್ ಪ್ರಕರಣದಲ್ಲಿ ಹೊಸ ತಿರುವು
    ಸಿವಿಲ್ ಕೇಸ್‌ನಲ್ಲಿ ಬಂಧನ..!ಎಸ್‌ಐಗೆ ₹3 ಲಕ್ಷ ದಂಡ — ACP, DCP ವಿರುದ್ಧವೂ ತನಿಖೆ!
    ಕಾಂಗ್ರೆಸ್‌ಗೆ ಹೊಸ ತಲೆನೋವು? ಅಹಿಂದ ಸಂಘಟನೆಯಿಂದ ‘ಪಕ್ಷ ವಿಭಜನೆ’ ಎಚ್ಚರಿಕೆ!
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    ಕಾರ್ಕಳದಲ್ಲಿ 2027ರ ಬಾಹುಬಲಿ ಮಹಾ ಮಜ್ಜನದ ಮಹೋತ್ಸವಕ್ಕೆ ದಿನ ಘೋಷಣೆ!
    ವಿವಾಹಿತ ದಂಪತಿಗಳಿಗೆ ಜಂಟಿ ITR ವ್ಯವಸ್ಥೆ ತರಲು- ಸಂಸತ್ತಿನಲ್ಲಿ Raghav Chadha ಆಗ್ರಹ.
    ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ 1.85 ಲಕ್ಷ ವಂಚನೆ – ಸೈಬರ್ ವಂಚಕರ ಜಾಲ ಪತ್ತೆ
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!
    ಅಮಿತ್ ಶಾ- “UCC ಜಾರಿಗೆ ತಂದು ನಾಲ್ಕು ಮದುವೆ ಪದ್ಧತಿ ನಿಷೇಧ” — ಪಶ್ಚಿಮ ಬಂಗಾಳದಲ್ಲಿ ದೊಡ್ಡ ಘೋಷಣೆ