📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಚಾಮನಗರದಲ್ಲೊಂದು ಅನಿಷ್ಠದ ಕ್ರೈಂ

    ಬಹಳ ಹಿಂದೆ ಸಂವಿಧಾನ ಕಾನೂನು ಸುವ್ಯವಸ್ಥೆಯ ಅಂದಾಜಿಲ್ಲದ ಸಮಯದಲ್ಲಿ ಉಳ್ಳವರು ಸಾಮಾಜಿಕ ಬಹಿಷ್ಕಾರದಂತಹ ದೌರ್ಜನ್ಯಗಳನ್ನು ಬಡವರ ಮೇಲೆ ಹೇರುತ್ತದೆ ಬಂದಿದ್ದರು. ಅದಕ್ಕೆಲ್ಲ ಇವತ್ತು ಜಾಗವಿಲ್ಲ ಅಂತ ಅಂದುಕೊಂಡಿದ್ದು ತಪ್ಪು ಅಂತ ಪ್ರೂ ಮಾಡುತ್ತಿದೆ ಈ ಎರಡು ಘಟನೆ.

    ಒಂದು ಅನಿಷ್ಟ ಪ್ರಕರಣವು  ಇತ್ತ ಚಾಮರಾಜನಗರದ ಜಂಗಲ್ ಪ್ರದೇಶದಲ್ಲಿ ನಡೆದರೆ, ಮತ್ತೊಂದು ಪ್ರಕರಣವು  ಯಾದಗಿರಿ ಜಿಲ್ಲೆಯಂತಹ ಬಿಸಿಲ ನಾಡಿನಲ್ಲಿ ನಡೆದಿದೆ. ಇದರ ಪೈಕಿ  ಒಂದು ಪ್ರಕರಣದಲ್ಲಿ ಜೀವ ಹಾನಿಯೂ ಆಗಿದೆ.

    ಅದು ಚಾಮರಾಜನಗರ ಜಿಲ್ಲೆ ಹುನೂರು ತಾಲೂಕಿನ ಹೊಂಗ್ಯಾ ಗ್ರಾಮ. ಈ ಗ್ರಾಮದ ಕೆಂಚಮ್ಮ ಎಂಬ ಹೆಂಗಸುಹಾಗೂ ಅವಳ ಈಡಿ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾಳೆ. ಅಷ್ಟಕ್ಕೂ ಈ ಬಹಿಷ್ಕಾರ ಯಾಕೆ? ಅಂತಹ ತಪ್ಪನ್ನು ಅವಳು ಏನು ಮಾಡಿದಳು? ಊರಿನವರು, ಕುಟುಂಬದವರು, ಸಮಾಜದವರು ತಲೆತಗ್ಗಿಸುವಂತಹ ತಪ್ಪನ್ನು ಆಕೆ ಏನು ಮಾಡಿದಳೇ? ಕೇಳಿದರೆ ನಕ್ಕು ಬಿಡುತ್ತೀರಾ. ಕೇವಲ ತನ್ನ ತಾಯಿಯು ಅನಾರೋಗ್ಯದಿಂದ ನರಳುತ್ತಿದ್ದಾಳೆ ಎನ್ನುವ ಕಾರಣಕ್ಕೆ, ಆರೈಕೆ ಮಾಡಲು ತವರು ಮನೆಗೆ ಹೋಗಿದ್ದಕ್ಕೆ ಈ ಸಾಮಾಜಿಕ ಬಹಿಷ್ಕಾರ. ಊರಿನ ಮುಖಂಡನ ಈ ದೌರ್ಜನ್ಯದ ವಿರುದ್ಧ ಕೆಂಚಮ್ಮ ಈಗ ಸೆಟೆದು ನಿಂತಿದ್ದಾಳೆ. ಈ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾಳೆ.

    Also Read  ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು

    ಹೌದು , ಈ ಕೆಂಚಮ್ಮ ಜಿಲ್ಲೆಯ ಕರಂಬಾರಿ  ಮೂಲದವಳು ರಾಮು ಎಂಬ ವ್ಯಕ್ತಿಯನ್ನು ಮದುವೆಯಾದ ನಂತರ ಹೊಂಗೆ ಗ್ರಾಮಕ್ಕೆ ಬರುತ್ತಾಳೆ. ಕಳೆದ ಕೆಲವು ಸಮಯದಿಂದ ಹೆತ್ತ ತಾಯಿ ಅನಾರೋಗ್ಯಕ್ಕೆ ಈಡಾಗುತ್ತಾಳೆ. ಅವಳನ್ನು ಆರೈಕೆ ಮಾಡಲು ಕರಂಬಾರಿಯ ತವರಿಗೆ  ಹೋಗಿದ್ದಾಳೆ. ಹಾಗೆ ಹೋದವಳು ಸರಿ ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನ ತಾಯಿಯ ಹಾರೈಕೆಯಲ್ಲಿ ಕಳೆಯುತ್ತಾಳೆ. ಇದು ಊರಿನ ಮುಖಂಡನ ಪಿತ್ತವನ್ನು ನೆತ್ತಿಗೇರಿಸಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು, ಆ ಊರಿನ ಮುಖಂಡ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದಾನೆ. ಕೇವಲ ಕೆಂಚಮ್ಮನಿಗಷ್ಟೇ ಅಲ್ಲ, ಅವಳ ಇಡೀ ಕುಟುಂಬಕ್ಕೆ ಈ ಬಹಿಷ್ಕಾರದ ಬಿಸಿ ತಟ್ಟಿದೆ. ಅಷ್ಟೇ ಅಲ್ಲ, ಈ ಬಹಿಷ್ಕಾರವನ್ನು ವಾಪಸ್ ಪಡೆಯಬೇಕು ಎಂದರೆ ಲಕ್ಷಾಂತರ ರೂ ಹಣದ ಬೇಡಿಕೆಯನ್ನು ಇಟ್ಟಿದ್ದಾನೆ ಸಮಾಜದ ಮುಖಂಡ.

    Also Read  ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ

    ಇದರಿಂದ ರೊಚ್ಚಿಗೆದ್ದಿರುವ ಕೆಂಚಮ್ಮ, ರಾಮಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾಳೆ. ಹಾಗೆಯೇ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಹೋರಾಟಕ್ಕೆ ಧುಮುಕಿದ್ದಾಳೆ.

    ಇತ್ತ ಇನ್ನೊಂದು ಪ್ರಕರಣ ಯಾದಗಿರಿ ಜಿಲ್ಲೆಯ ಗಿರಿಯಾರ ಎಂಬಲ್ಲಿ ನಡೆದಿದೆ. ಇಲ್ಲಿನ ಕಮಲಮ್ಮ ಎಂಬ ಕುಟುಂಬದ ಮೇಲೆಯೇ ಸಾಮಾಜಿಕ ಬಹಿಷ್ಕಾರದ ಹೊರೆಯನ್ನು ಹೊರಿಸಲಾಗಿದೆ. ಸಿಳ್ಳೆಖ್ಯಾತ ಸಮುದಾಯಕ್ಕೆ ಸೇರಿರುವ ಕಮಲಮ್ಮ  ಹಾಗೂ ಅವರ ಇಡೀ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಒಳಪಡಿಸಿರುವುದು ಇವತ್ತಿನ ಸುಶಿಕ್ಷಿತ ಜನರು ತಲೆತಗ್ಗಿಸುವಂತಹ ವಿಚಾರವಾಗಿದೆ. ಈ ಒಂದು ಸಾಮಾಜಿಕ ಬಹಿಷ್ಕಾರದಿಂದ ತೀವ್ರ ಅವಮಾನಕ್ಕೆ ಒಳಗಾದ ಕಮಲಮ್ಮ, ಕೃಷ್ಣಾ ನದಿಯ ಸೇತುವೆಯೊಂದರ ಮೇಲೆ ನಿಂತು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತ ದೇಹವನ್ನು ಹೊರಗೆ ತೆಗೆದಿದ ನಂತರವೇ ಗ್ರಾಮದಲ್ಲಿ ನಡೆದ ಈ ಪ್ರಕರಣವು ಹೊರಕ್ಕೆ ಬಂದಿದೆ.

    Also Read  ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!

    ಕರ್ನಾಟಕದಲ್ಲಿ ನಡೆದಂತಹ ಈ ಎರಡು ಪ್ರಕರಣಗಳು ಯಾವತ್ತೋ ನಡೆದಿದ್ದಲ್ಲ. ಜಸ್ಟ್ ಇವಾಗಷ್ಟೇ ನಡೆದ ಪ್ರಕರಣ. ಆಧುನಿಕವಾಗಿ ಸಮಾಜವು ಎಷ್ಟೇ ಬೆಳೆದರು, ಸುಶಿಕ್ಷಿತ ನಾಡಾಗುತ್ತಿದ್ದರೂ ಅನಿಷ್ಠ ಪದ್ಧತಿ, ದೌರ್ಜನ್ಯ ಹಾಗೂ ಆಚರಣೆ ಇನ್ನೂ ಅಲ್ಲಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತಿದೆ ಅನ್ನೋದಕ್ಕೆ ಇವೆರಡು ಪ್ರಕರಣಗಳೇ ಸಾಕ್ಷಿ. ರಾಜಕೀಯ ಲಾಭ ನಷ್ಟ ಇವೆಲ್ಲವನ್ನೂ ಬಿಟ್ಟು, ಇಂತಹ ಅನಿಷ್ಟ ಪ್ರಕರಣಕ್ಕೆ ಕಾರಣರಾದವರ ಮೇಲೆ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸ್ಪಷ್ಟವಾದಂತ ಮೆಸೇಜನ್ನು ನೀಡುವ ಕೆಲಸ ಆಗಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
    ಸಂಸತ್ ಕಾರಿಡಾರ್‌ನಲ್ಲಿ ವಿವಾದಿತ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ರೇಣುಕಾ ಚೌಧರಿ ತರಾಟೆ
    ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ: ಹಣ ಕ್ರೆಡಿಟ್ ಆಗ್ಬೇಕಾದ್ರೆ ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ!
     ಇಂದಿನ ಪೋಷಕರ ಅತಿಮುದ್ದು…ಕೇಳಿದ್ದನ್ನೆಲ್ಲ ಕೊಡಿಸುವ ಪೋಷಕರು ಒಳ್ಳೆಯವರೇ…???ಇದೇ ಮಕ್ಕಳ ಭವಿಷ್ಯಕ್ಕೆ ದೊಡ್ಡ ಅಪಾಯವೇ?
    ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
    ಬರೋಬ್ಬರಿ ₹50 ಲಕ್ಷ ಲಂಚ! ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
    ಸಾಲು ಸಾಲು ಹೀನ ಕೃತ್ಯದ ಆರೋಪಿ….ಸೈನೈಡ್ ಮೋಹನ್ ಖುಲಾಸೆ! ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್ ವಿಫಲ
    ಕುಂದಾಪುರದಲ್ಲಿ ಶಾಕಿಂಗ್ ಘಟನೆ..ಪತ್ನಿಗೆ ವಿಷ ನೀಡಿ ಬಳಿಕ ಪ್ರೇಮಿಯೊಂದಿಗೆ ಆತ್ಮಹತ್ಯೆ..!
    ಸಾಮಾಜಿಕ ಜಾಲತಾಣದ ಹೊಸ ಆತಂಕ!ಕೆಲಸ ಕಡಿಮೆ, Entertainment ಹೆಚ್ಚು! Kids‌ನಿಂದ Adultsವರೆಗೆ Phone ಜಾಲ…!
    ದೇವರ ಮುಂದೆ ಸಾಲಿನಲ್ಲಿ ನಿಲ್ಲಲೇಬೇಕು! ಮಂತ್ರಿ ಇರಲಿ, ಸೆಲೆಬ್ರಿಟಿ ಇರಲಿ…ಅಧಿಕಾರ ಇರಲಿ, ಅಂತಸ್ತು ಇರಲಿ…”ವಿಐಪಿ ದರ್ಶನ”ಕ್ಕೆ ಹೈಕೋರ್ಟ್ ಕೊಟ್ಟ ಚಾವಟಿ ಏಟು!
    ದವಳ ಕೋ- ಆಪರೇಟಿವ್ನ ಈ ಸಾಲಿನ ವ್ಯವಹಾರ ಎರಡುನೂರು ಕೋಟಿ
    “ಐಡಿ ಇಲ್ಲ ಅಂದ್ರೆ ಎಂಟ್ರಿಯೇ ಇಲ್ಲ! ಎಲ್ಲಿಗೆ…..!?ಯುವಕರ ಭವಿಷ್ಯಕ್ಕಾಗಿ ಖರ್ಗೆಯ ಕಠಿಣ ಎಚ್ಚರಿಕೆ.”
    ನೀವೂ ತಿಳಿದಿರಬೇಕಾದ ವಿಷಯ:ಬರುವ ಆರ್ಥಿಕ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ!
    ಕುಂದಾಪುರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ. ಸ್ನೇಹಿತರ ಜೊತೆಯಲ್ಲಿ ಹೋಗಿರುವ ಶಂಕೆ
    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”
    ಇಡುಕ್ಕಿಯಲ್ಲಿ Landslide ಆರ್ಭಟ!ಇಬ್ಬರು ಸಾವು, ಮಹಿಳೆಗೆ ಗಂಭೀರ ಗಾಯ
    ಪೊರಕೆ ಹಿಡಿದ ಕೈಯಲ್ಲಿ ಫಾರ್ಚೂನರ್ ಕನಸು! SI ಬೆಳ್ಳಿಯಪ್ಪ ,ಸೇಸಪ್ಪನ ಬದುಕಿಗೆ ಹೊಸ ತಿರುವು….?!!!
    ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಬ್ಲ್ಯಾಕ್‌ಮೇಲ್: 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ ನರ್ಸ್‌ ಬಂಧನ
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    ಕುಂದಾಪುರದಲ್ಲಿ ಯುವತಿ ಆತ್ಮಹತ್ಯೆಗೆ ಪ್ರಿಯಕರನ ಕುಮ್ಮಕ್ಕು
    ಕಾರ್ಕಳದ ವಂಚನೆ ಪ್ರಕರಣ, ದೂರುದಾರನ ಮೇಲೂ ಶಂಕೆ
    ನಿರ್ಮಾಣ ಹಂತ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು-  ಶಣೈ ಮೇಲೆ ಕೇಸು
    ಕರಾವಳಿಯಲ್ಲಿ ಅಕ್ರಮ 109 ಹೋಂಸ್ಟೇಗಳು, 21ರೆಸಾರ್ಟ್‌ಗಳಿಗೆ ಶಾಕ್ ಲೋಕಾಯುಕ್ತ ಬೀಗ!ರೆಸಾರ್ಟ್‌ಗಳು ಬಂದ್!
    ಆದಾಯ ತೆರಿಗೆ ಬದಲಾವಣೆಗಳನ್ನು ತಿಳಿದುಕೊಳ್ಳಿ, ತಪ್ಪುಗಳನ್ನು ತಪ್ಪಿಸಿ…ಹೊಸ ITR ನಿಯಮಗಳು
    ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಬರ್ಬರ ಹತ್ಯೆ: ಗಲಾಟೆ ವಿಕೋಪಕ್ಕೆ ತಿರುಗಿ ಚೂರಿ ಇರಿತ…!
    ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?