📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಯುವ ಜನಾಂಗದ ಹೋರಾಟ ಕಿಚ್ಚಾಗದಂತೆ ನೋಡಿಕೊಳ್ಳಿ

ಉದ್ಯೋಗ ಕೊಡಿ ಪ್ರಾರಂಭವಾಗಿದೆ ಹೋರಾಟ. ಸರ್ಕಾರಗಳ ಬೇಜವಾಬ್ದಾರಿಯೇ ನಡವಳಿಕೆ ಹಾಗೂ ದುರಾಡಳಿತದ ಪರಮಾವಧಿಯಿಂದಾಗಿ ಇವತ್ತು ಯುವ ಸಮುದಾಯ ಉದ್ಯೋಗಕ್ಕಾಗಿ ಬೀದಿಗೆ ಇಳಿಯುವಂತಾಗಿದೆ.
ಎಸ್ ಯಾವ ಅನುಮಾನವೂ ಇಲ್ಲ, ಸರ್ಕಾರವು ಅನ್ನುವುದಕ್ಕಿಂತ ಸರ್ಕಾರವನ್ನು ನಡೆಸುವುದಕ್ಕಾಗಿ ಅಂದರೆ ಅಧಿಕಾರಕ್ಕಾಗಿ ಜನರನ್ನು ಹಾದಿ ತಪ್ಪಿಸುತ್ತಿರುವ ರಾಜಕೀಯ ಪಕ್ಷಗಳ ನಾಯಕರುಗಳು ಜನರ ಮೂಗಿಗೆ ತುಪ್ಪ ಒರೆಸೆ ತಮ್ಮ ಕಾರ್ಯವನ್ನು ಸಿದ್ಧಿಸಿಕೊಳ್ಳುತ್ತಿರುವುದು ತಿಳಿಯದ ಸಂಗತಿಯಲ್ಲ ಅದರ ಭಾಗವೇ ಈ ಗ್ಯಾರಂಟಿ ಯೋಜನೆಗಳು. ಕರ್ನಾಟಕ ರಾಜ್ಯವಷ್ಟೇ ಅಲ್ಲ ರಾಷ್ಟ್ರದ ಅನೇಕ ರಾಜ್ಯಗಳಲ್ಲಿ ಇಂತಹ ಯೋಜನೆಗಳನ್ನ ಅನುಷ್ಠಾನಕ್ಕೆ ತರುತ್ತಿರುವುದು ದುಃಖಕರವಾದ ಅಂತಹ ವಿಚಾರ. ಇವುಗಳನ್ನು ಜನಪ್ರಿಯ ಯೋಜನೆ ಅಂತ ಬಿಂಬಿಸಲಾಗುತ್ತಿರುವುದು ಸಹ ಖೇದಕರ. ಇವುಗಳ ಬಗ್ಗೆ ಯಾವ ಪಕ್ಷವು ಹಿಂದೆ ಬಿದ್ದಿಲ್ಲ. ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ರೈತರಿಗೆ 2000 ಕೊಡುವ ಯೋಜನೆಯು ಸಹ ಈ ಒಂದು ಜನರನ್ನು ವಂಚಿಸುವ ಭಾಗವೇ ಅದೇ ರೀತಿ ಈಗಿನ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯು ಸಹ ಸೇಮ್ ಅದರ ಭಾಗವೇ. ಯಾವುದೇ ಯೋಜನೆಗಳು ಬರಲಿ ಸರ್ಕಾರವು ನೀಡುವ ಸವಲತ್ತುಗಳು ಯೋಜನೆಗಳು ಸರಿಸಮಾನವಾಗಿರಬೇಕು ಅದರಲ್ಲಿ ಜಾತಿ ಧರ್ಮ ಬಡವ ಸೀಮಂತ ಯಾವ ಭೇದ ಭಾವವು ಇರಬಾರದು ಹಾಗಾದರೆ ಮಾತ್ರ ಸಮಾನತೆ ಬರಲು ಸಾಧ್ಯ. ಆದರೆ ಬಡವರನ್ನು ಆರ್ಥಿಕವಾಗಿ ಸಬಲ ರನ್ನಾಗಿಸುವ ಜನಪ್ರಿಯ ಘೋಷಣೆ ಮಾಡುವ ಅಧಿಕಾರಸ್ಥರು ನೈಜ ವಾಗೆ ಜನರನ್ನು ಬಡತನದ ಕೂಪ ದಿಂದ ಮೇಲೆ ಎತ್ತುವ ಯಾವ ಇಲಾಖೆಯನ್ನು ಹೊಂದಿರುವುದಿಲ್ಲ. ಸರ್ಕಾರ ನಡೆಸುವವರು ನಿಜವಾಗಿಯೂ ಈ ನೆಲದ ಅಭಿವೃದ್ಧಿಯ ಬಗ್ಗೆ ಕನಸು ಕಾಣುತ್ತಿದ್ದರೆ ಈ ಜನರ ಹಿತಕ್ಕಾಗಿ ಮಿಡಿಯುತ್ತಿದ್ದರೆ ಅವರು ಜನರ ಕೈಗೆ ಉದ್ಯೋಗ ಕೊಡಬೇಕು ಜನರಿಗೆ ಒಂದೇ ತೆರನಾದ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉಚಿತ ಆರೋಗ್ಯಭದ್ರತೆಯನ್ನು ಕಲ್ಪಿಸಬೇಕು. ಶ್ರೀಮಂತನಿರಲಿ ಬಡವನಿರಲಿ ಅಧಿಕಾರ ಸ್ಥಳಿರಲಿ ಸಾಮಾನ್ಯ ಪ್ರಜೆ ಇರಲಿ ಉದ್ಯಮಿ ಇರಲಿ ಕೃಷಿಕನಿರಲಿ ಕಾರ್ಪೊರೇಟ್ ನೌಕರರ ಇರಲಿ ಕೂಲಿ ಕಾರ್ಮಿಕ ನಿರಲಿ ಅವರೆಲ್ಲರಿಗೂ ಒಂದೇ ತೆರನಾದ ವೈದ್ಯಕೀಯ ಚಿಕಿತ್ಸೆ ಸೌಲಭ್ಯಗಳು ದೊರಕಬೇಕು ಯಾವುದೇ ಮೇಲು ಕೀಳು ಇರಬಾರದು ಅಂತಹ ವ್ಯವಸ್ಥೆಯ ಕಡೆಗೆ ಕೊಂಡೊಯ್ಯುವ ಆಡಳಿತದ ಬಗ್ಗೆ ಯಾರು ಯೋಚಿಸುತ್ತಿಲ್ಲ ಹೆಜ್ಜೆ ಇಡುತ್ತಿಲ್ಲ. ಹಾಗಾಗಿಯೇ ಜನಸಾಮಾನ್ಯರು ಆಡಳಿತ ವ್ಯವಸ್ಥೆಯ ವಿರುದ್ಧ ಆಗಾಗ ತಿರುಗಿ ಬೀಳುವುದು. ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು. ಇಲ್ಲಿ ಹೋರಾಟಗಾರರ ತಪ್ಪಿಲ್ಲ ಅದರ ಒಂದು ಭಾಗವೇ ಧಾರವಾಡದಲ್ಲಿ ಮೊಳಗಿದ ಗ್ಯಾರಂಟಿ ಬೇಡ ನೌಕರಿ ಕೊಡಿ ಘೋಷಣೆ.
ಎಸ್ ಇಂತದೊಂದು ಘೋಷಣೆಗೆ ಹಾಗೂ ಹೋರಾಟಕ್ಕೆ ದೊಡ್ಡ ಬೆಂಬಲ ವ್ಯಕ್ತವಾಗಿದೆ ದೊಡ್ಡ ಶಕ್ತಿಯು ತುಂಬುತ್ತಿದೆ. ರಾಜ್ಯವನ್ನು ಆಳಿದ ಎಲ್ಲಾ ಮೂರು ಪಕ್ಷಗಳು ಕೇಂದ್ರವನ್ನು ಆಳಿದ ಎಲ್ಲಾ ಪಕ್ಷಗಳು ಈ ನಿಟ್ಟಿನಲ್ಲಿ ತಪ್ಪಿತಸ್ಥರೇ ಆಗಿದ್ದಾರೆ.
ಆಡಳಿತ ನಡೆಸುತ್ತಿರುವವರು ಬೇರೆ ಬೇರೆ ವಿಭಾಗದಲ್ಲಿ ಬೇರೆ ಬೇರೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನವನ್ನೇ ಮಾಡುತ್ತಿಲ್ಲ ಅದೆಷ್ಟೋ ವರ್ಷದಿಂದ ಕಾಲಿ ಇರುವ ಹುದ್ದೆಗಳು ಬಿಕರಿಯಾಗಿದೆ ಇತ್ತೀಚೆಗಿನ ದಿನದಲ್ಲಿ ಸರ್ಕಾರವು ಅನೇಕ ವಿಭಾಗದಲ್ಲಿ ಅಭ್ಯರ್ಥಿಗಳನ್ನು ಮಾಡಿಕೊಳ್ಳುತ್ತಿದೆ ನೇರವಾಗಿ ಸರ್ಕಾರವು ನೌಕರಿಗೆ ತೆಗೆದುಕೊಳ್ಳುತ್ತಿಲ್ಲ ಇದಕ್ಕೆಲ್ಲ ಕಾರಣ ಏನು? ಮಧ್ಯವರ್ತಿಗಳಿಗೆ ಲಾಭ ಮಾಡಿಕೊಡುವುದಕ್ಕಾಗಿ? ಏನೇ ಇರಲಿ ಸರ್ಕಾರವು ಆರೋಗ್ಯ ಭದ್ರತೆ ಶಿಕ್ಷಣ ಭದ್ರತೆ ಮತ್ತು ಉದ್ಯೋಗ ಭದ್ರತೆಯನ್ನ ಒದಗಿಸುವ ಮೂಲಕ ಉಳಿದಿಲ್ಲ ಕೊಡುಗೆಗಳನ್ನ ನಿಲ್ಲಿಸಿದರೆ ಸರ್ಕಾರದ ಬೊಕ್ಕಸ ತುಂಬಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ ಏನಂತೀರಿ

  • ಮಾರುತ

COMMENTS

Login with Gmail to comment

ಇನ್ನಷ್ಟು ಸುದ್ದಿ

ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
ಎಲ್ಲರಿಗೂ ಯುಗಾದಿ ಹಬ್ಬ… ಆದರೆ ಈ ಗ್ರಾಮಗಳಲ್ಲಿ ಭಯ ಮೌನ…ಹಬ್ಬ ಇಲ್ಲ…!ಒಂದು ವಿಚಿತ್ರ ಕಥೆ!
ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
ಟಾಟಾ ಸನ್ಸ್ IPOಗೆ ಒತ್ತಾಯ: ಟ್ರಸ್ಟಿಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಳ…!
ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
ಕರ್ನಾಟಕದಲ್ಲಿ ಮಳೆ ಅಲರ್ಟ್! 13 ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ – ಜನರು ಎಚ್ಚರಿಕೆ ಅಗತ್ಯ
ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
“ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
ಐಟಿ ಕ್ಷೇತ್ರದಲ್ಲಿ ಮತ್ತೆ ಲೇಆಫ್ ಭೀತಿ!
ನಿಶ್ಚಿತಾರ್ಥ ಮಾಡಿಕೊಂಡು, ಫೈನಾನ್ಸಿಯಲ್ ವಂಚನೆ ದೂರು ದಾಖಲು
ಧೂಮಪಾನ ಮಾಡುತ್ತಿದ್ದೀರಾ? ನಿಮ್ಮ ಮುಖ ನಿಧಾನವಾಗಿ ನಾಶವಾಗುತ್ತಿದೆ…
165 ಹೆಣ್ಮಕ್ಕಳು ತಮ್ಮದಲ್ಲದ ತಪ್ಪಿಗೆ ಹತ್ಯೆಗೆ ಒಳಗಾದರು 
🚨 ಮಂಗಳೂರು ನಿವಾಸಿಗಳಿಗೆ ಮಹತ್ವದ ಮಾಹಿತಿ – 2026 ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮ  🚨
ದಕ್ಷಿಣಕನ್ನಡ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲುತ್ತಿಲ್ಲ ಎಂಬ ಅಸಮಾಧಾನ
ಅಮೆರಿಕಾ ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ” – ಕೆ.ಸಿ. ವೇಣುಗೋಪಾಲ್
ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
ಹೆಣ್ಣು ಎಂಬ ಕನಿಕರ, ಸಿಗದ ಹಾಗೆ ಮಾಡಿದ ಮಾಯಾಂಗನೇ…
ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
ಸೋಶಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಲ್ಲಿ ಭಯ ಸೃಷ್ಠಿ -45 ಜನರ ಬಂಧನ
ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
ಮಸೀದಿ ಹುಂಡಿಗೂ ಲಗ್ಗೆ ಇಟ್ಟ ಕಳ್ಳರು….!
ಸರ್ಕಾರಿ ಸ್ವಾಮ್ಯದ ಬೇಲಿ ಕಂಬ ಕಿತ್ತಾಕಲು DYFI ಕುಮ್ಮಕ್ಕು….!