📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ವಿಶ್ವಸಂಸ್ಥೆಗೆ ಜೀವ ಬಂತು ನೋಡಿ…

ಕಳೆದ 10 ದಿನದಿಂದ ನಡೆಯುತ್ತಿರುವ ವಿದ್ಯಮಾನಗಳು ಇಡೀ ಜಗತ್ತು ನೋಡುತ್ತಿದೆ. ಅಮೇರಿಕಾ ಹಾಗೂ ಇಸ್ರೇಲ್ ಪ್ರತಿಷ್ಠೆಗಾಗಿ ಇರಾನ್ ಮೇಲೆ ಕಾಲು ಕೆರೆದುಕೊಂಡು ದಾಳಿ ಮಾಡಿದ್ದು ಜಗತ್ ಜಾಹಿರಾಗಿದೆ. ಅದರ ಪರಿಣಾಮ ಇರಾನಿನಲ್ಲಿ ಮಕ್ಕಳು ಹೆಂಗಸರು ಎನ್ನದೆ ಸಾಮಾನ್ಯ ಜನರು ದೊಡ್ಡ ಪ್ರಮಾಣದಲ್ಲಿ ಹತರಾಗಿದ್ದಾರೆ. ಹಾಗೆಯೇ ಮಧ್ಯಪ್ರಾಚ್ಚದ ದೇಶಗಳ ಮೇಲೆ ಇರಾನ್ ಪ್ರತಿಕಾರದ ದಾಳಿ ಮಾಡಿದ್ದರಿಂದ ಅಲ್ಲಿಯೂ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದರು. ಇಷ್ಟು ದಿನಗಳ ಕಾಲ ವಿಶ್ವ ಸಂಸ್ಥೆಯು ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಅನ್ನೋದೇ ಗೊತ್ತಿರಲಿಲ್ಲ. ಅಷ್ಟು ಸೈಲೆಂಟಾಗಿತ್ತು ಈ ಸಂಸ್ಥೆ. ಅಂತಹ ವಿಶ್ವ ಸಂಸ್ಥೆ ಈಗ ನಾನಿದ್ದೇನೆ ಎಂದು ತೋರ್ಪಡಿಸಿದೆ. ಅದರ ತೋರ್ಪಡಿಸುವಿಕೆ ಒನ್ ಸೈಡೆಡ್ ರೀತಿಯಲ್ಲಿದೆ.

ಬೆಹರೆನ್, ಸೌದಿ,ಓಮನ್, ಕತಾರ್, ಜೋರ್ಡಾನ್ ಸೇರಿದಂತೆ ಸುತ್ತಮುತ್ತಲಿನ ರಾಷ್ಟ್ರದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುತ್ತಿರುವುದು ಅಕ್ಷಮ್ಯ ಹಾಗೂ ವಾಣಿಜ್ಯ ಹಡಗುಗಳು ಸಂಚರಿಸುವ ಹರ್ಮುಜ್  ಜಲಸಂದಿಯನ್ನು ಮುಚ್ಚಿರುವುದು ಕಾನೂನಿನ ವಿರುದ್ಧ ಆಗಿದೆ. ತಕ್ಷಣವೇ ಇರಾನ್ ಈ ಜಲಸಂಧಿಯನ್ನು ಅಂತರರಾಷ್ಟ್ರೀಯ ಸಂಚಾರಕ್ಕೆ ಮುಕ್ತ ಮಾಡಬೇಕು ಎಂಬ ಖಡಕ್ ಸಂದೇಶ ನೀಡಿದೆ.

ವಿಶ್ವಸಂಸ್ಥೆಯಲ್ಲಿ ನಡೆದ ಆ ಸಭೆಯಲ್ಲಿ, ನೆರಾನೇರವಾಗಿ ಅಮೆರಿಕನ್ ಪರ ನಿರ್ಣಯ ತೆಗೆದುಕೊಳ್ಳಲಾಗಿರುವುದು ವಿಶ್ವಸಂಸ್ಥೆಯ ದ್ವಂದ್ವನಿಲುವಿಗೆ ಕನ್ನಡಿಯಾಗಿ ಕಾಣಿಸುತ್ತಿದೆ.   

ಇರಾನ್ ಸರ್ಕಾರದ ಆಡಳಿತವು ಆಂತರಿಕವಾಗಿ ಹೇಗೆ ಇರಲಿ , ಅದನ್ನು ಆ ನಾಡಿನ ನಾಗರಿಕರಿಗೆ ಬಿಟ್ಟುಬಿಡಬೇಕು. ಅದರ ಮಧ್ಯೆ ಅಮೆರಿಕ ಇರಲಿ ಅಥವಾ ಇನ್ಯಾವುದೇ ದೇಶವಿರಲಿ ಹಸ್ತಕ್ಷೇಪ ಮಾಡುವುದು ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗುತ್ತದೆ.

ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಕಾಶ್ಮೀರದ ವಿಚಾರವಾಗಿ ಕಳೆದ ಆರೇಳು ದಶಕದಿಂದ ನಿರಂತರವಾಗಿ ಪಾಕಿಸ್ಥಾನವು ಭಾರತದ ವಿರುದ್ಧ ಷಡ್ಯಂತ್ರ ಮಾಡಿಕೊಂಡು ಬರುತ್ತಿರುತ್ತಿದೆ.  ಈ ಕಾರಣಕ್ಕೆ ಪಾಕಿಸ್ತಾನದ ಮೇಲೆ ಭಾರತವು ಅಮೆರಿಕ ಹಾಗೂ ಇಸ್ರೇಲ್ ಮಾದರಿಯಲ್ಲೇ ದಾಳಿ ಮಾಡಿದರೆ, ಇದೇ ವಿಶ್ವಸಂಸ್ಥೆ ಹಾಗೂ ಜಗತ್ತಿನ ಇತರ ದೇಶಗಳು ಒಪ್ಪುತ್ತವೆಯೇ? ಇಂತಹದೊಂದು ಪ್ರಶ್ನೆಯನ್ನು ಜಗತ್ತಿನ ಯಾವ ರಾಷ್ಟ್ರದವರೂ ವಿಶ್ವಸಂಸ್ಥೆಯ ಆ ಸಭೆಯಲ್ಲಿ ಪ್ರಶ್ನಿಸದಿರುವುದನ್ನು ಕಾಣಬಹುದು. ಇಲ್ಲಿ ವಿಶ್ವಸಂಸ್ಥೆ ಯಾರದೊ ಇಂಪ್ಲಯೇನ್ಸ್, ಅಥವಾ ಯಾವುದೋ ಶಕ್ತಿಯ ಇಶಾರೆಯಂತೆ ಕೆಲಸ ಮಾಡುತ್ತಿದೆ ಅಂತ ಮೇಲ್ನೋಟಕ್ಕೆ ತೋರಿಸುತ್ತದೆ.

ಅಮೇರಿಕಾ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಸವಾರಿ ಮಾಡಲು ಬಯಸುತ್ತಿದೆ. ಜಗತ್ತಿನ ಎಲ್ಲಾ ಕೆಟ್ಟ ದುದರ ಹಿಂದೆ ಅಮೇರಿಕಾದ ಕೈ ಇದ್ದೇ ಇದೆ. ಹಾಗೆಯೇ ಒಳ್ಳೆಯ ಮುಖವಾಡ ಗೊತ್ತು ಕೆಟ್ಟದು ದರ ಮುಂದೆ ನಿಲ್ಲುವ ಪ್ರಯತ್ನದಲ್ಲೂ ಅಮೆರಿಕ ಮುಂದಿರುತ್ತದೆ. ಈ ರೀತಿಯ ಡಬಲ್ ಸ್ಟಾಂಡ್ ನಡೆಯ ಮೂಲಕ ಜಗತ್ತಿನಲ್ಲಿ ತನ್ನದೇ ಆದ ಆಟವಾಡುತ್ತಿರುವ ದೇಶ ಅಮೆರಿಕ ಒಂದೇ. ವಿಶ್ವಸಂಸ್ಥೆಯು ಅದೇ ಅಮೇರಿಕಾಕ್ಕೇ ಶರಣಾದಂತಿದೆ. ಹಾಗಾಗಿಯೇ, ಈ ಎಂಟತ್ತು ದಿನ ಒಂದೇ ಒಂದು ಮಾತು ಆಡದಿರುವುದನ್ನು ನಾವು ನೋಡಿದ್ದೇವೆ. ಈಗ ಅಮೆರಿಕಾದ ತಲೆಗೆ ಇದರ ಬಿಸಿ ತಟ್ಟಲು ಪ್ರಾರಂಭವಾಗುತ್ತಿದ್ದಂತೆಯೇ, ವಿಶ್ವ ಸಂಸ್ಥೆಯು ಸಭೆಯನ್ನು ಮಾಡುತ್ತದೆ. ಸ್ಟೇಟ್ಮೆಂಟ್ ಅನ್ನು ನೀಡುತ್ತದೆ.

            -ದತ್ತು

COMMENTS

Login with Gmail to comment

ಇನ್ನಷ್ಟು ಸುದ್ದಿ

ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???
ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
“ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ನಡಿತಿರೋದೇನು?
ಎಸ್ ಪಿ ಅರುಣ್ ಕುಮಾರ್ ಗೆ ಮುಖ್ಯಮಂತ್ರಿ ಪದಕ
ಜೀವನ್ಮರಣ ಹೋರಾಟದಲ್ಲೂ ಗೆಳೆಯರ ಬದುಕಿಸಿದ 14ರ ಬಾಲಕನ ರೋಚಕ  ಸ್ಟೋರಿ 
ಬಾರ್ ಲೆಕ್ಕಾಚಾರ-ಚೂರಿ ದಾಳಿ – ಯುವಕನ ಕುತ್ತಿಗೆಗೆ ಕೊಯ್ದು ಕೊಲೆ ಯತ್ನ
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ಅಮೆರಿಕ–ಇಸ್ರೇಲ್ ದಾಳಿ ಬಳಿಕ ಇರಾನ್‌ನಲ್ಲಿ ಉದ್ವಿಗ್ನತೆ ತಾರಕಕ್ಕೆ
🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸಿದ್ದು vs ಕೃಷ್ಣ -ಸಿದ್ಧು ವಿರುದ್ಧ ನೇರ ಸವಾಲು: ‘ಬಿ’ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣನ ನಡೆ ಭ್ರಷ್ಟ ವ್ಯವಸ್ಥೆಗೆ ಬಿಗಿ ಹೊಡೆತ!”
ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
ಜೈನ ಸನ್ಯಾಸ ದೀಕ್ಷೆ ನಿಯಮಗಳು ಏನು ಗೊತ್ತಾ?
ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
BRICS ನ ಡಿಜಿಟಲ್ ಕರೆನ್ಸಿ ವಿಶ್ವ ಆರ್ಥಿಕತೆಯನ್ನೇ ಬೆರಗಾಗಿಸುತ್ತಾ..?
ನ್ಯಾಯಾಂಗಕ್ಕೆ ಕಳಂಕ ತರುವುದನ್ನು ನೋಡಿಯೂ ಕೈಕಟ್ಟಿ ಕೂರಲಾಗದು
🚨 ದೇಶಾದ್ಯಂತ ಉಗ್ರ ಜಾಲದ ಮೇಲೆ ದೊಡ್ಡ ದಾಳಿ: ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಂ ಸೇರಿದಂತೆ 7 ರಾಜ್ಯಗಳಲ್ಲಿ 12 ಮಂದಿ ಬಂಧನ — ಯುವಕರಿಗೆ ಎಚ್ಚರಿಕೆ!
ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
 “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
ಏಪ್ರಿಲ್ 1, 2026ರಿಂದಲೇ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
80 ಲಕ್ಷ ವಂಚನೆ ಪ್ರಕರಣ ದೂರು ದಾಖಲು