📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    HSRP ರಿಲೀಫ್ + PUCC ಫೈನ್ ಮುಕ್ತ…ಡೀಟೇಲ್ಸ್ ಇಲ್ಲಿದೆ ಕರ್ನಾಟಕದ ಎಲ್ಲ ಡ್ರೈವರ್‌ಗಳಿಗೆ ಡಬಲ್ ಗುಡ್ ನ್ಯೂಸ್!???

    ಈಗಾಗಲೇ ಲಕ್ಷಾಂತರ ವಾಹನ ಮಾಲೀಕರು ಹಣ ಖರ್ಚು ಮಾಡಿ HSRP ಅಳವಡಿಸಿಕೊಂಡಿದ್ದಾರೆ. ಅವರ ಪರಿಸ್ಥಿತಿ ಏನು? ನಿಯಮ ಪಾಲಿಸಿದವರಿಗೆ ನ್ಯಾಯ ಎಲ್ಲಿದೆ?

    ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್ ಕಡ್ಡಾಯ ಯೋಜನೆ ವಿಫಲವಾಗಿ ಸರ್ಕಾರ ಅದನ್ನು ಹಿಂಪಡೆದಿದೆ. ಜನರ ನಿರಾಸಕ್ತಿ ಹಾಗೂ ಅನುಷ್ಠಾನ ಗೊಂದಲದಿಂದ ಈ ನಿಯಮ ಇನ್ನು ಕಡ್ಡಾಯವಿಲ್ಲ. ಒಂದು ನಿಯಮ ಜಾರಿಗೆ ತರಬೇಕಾದರೆ ಅದನ್ನು ಗಟ್ಟಿಯಾಗಿ, ಸ್ಪಷ್ಟವಾಗಿ ಹಾಗೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಿತ್ತು. ಮರುಮರು ಗಡುವು ವಿಸ್ತರಣೆ ಮಾಡುವುದು ಜನರಲ್ಲಿ ಗಂಭೀರತೆಯನ್ನು ಕಡಿಮೆ ಮಾಡಿತು. ಸರ್ಕಾರ ಆರಂಭದಲ್ಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರೆ, ಬಹುಶಃ ಇಂದು ಈ ಯೋಜನೆ ಯಶಸ್ವಿಯಾಗುತ್ತಿತ್ತು.

    ಅದೇ ವೇಳೆ, ಏಪ್ರಿಲ್ 1, 2026ರಿಂದ ಪಿಯುಸಿಸಿ (PUCC) pollution under control certificate ಮಾಹಿತಿಯನ್ನು ಕೇಂದ್ರದ ವಾಹನ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದರಿಂದ ಹೊರ ರಾಜ್ಯಗಳಲ್ಲಿ ವಾಹನ ಸವಾರರು ಅನಾವಶ್ಯಕ ದಂಡದಿಂದ ಮುಕ್ತರಾಗಿದ್ದಾರೆ.

    Also Read  ಬಾಲಿವುಡ್‌ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಗೆ 60ರ ವಯಸ್ಸಿನಲ್ಲಿ  ಸಿಕ್ಕ ಪರ್ಫೆಕ್ಟ್ ಸಂಗಾತಿ……?!ಎಷ್ಟನೇ ಮದುವೆ?!

    ಕರ್ನಾಟಕದಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಕಡ್ಡಾಯ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ. ಹಲವು ಬಾರಿ ಗಡುವು ವಿಸ್ತರಣೆ ಮಾಡಿದರೂ ವಾಹನ ಸವಾರರು ಆಸಕ್ತಿ ತೋರದ ಕಾರಣ ಸಾರಿಗೆ ಇಲಾಖೆ ತನ್ನ ಆದೇಶವನ್ನು ಹಿಂಪಡೆದಿದೆ. ಸುಮಾರು 2 ಕೋಟಿ ಹಳೆಯ ವಾಹನಗಳಲ್ಲಿ ಕೇವಲ 59 ಲಕ್ಷ ವಾಹನಗಳು ಮಾತ್ರ HSRP ಅಳವಡಿಸಿಕೊಂಡಿದ್ದು, 1.41 ಕೋಟಿ ವಾಹನಗಳು ಇನ್ನೂ ಬಾಕಿಯಿವೆ. ಅನುಷ್ಠಾನ ಗೊಂದಲ, ಕಠಿಣ ನಿಯಮಗಳ ಕೊರತೆ ಹಾಗೂ ಜನರ ನಿರಾಸಕ್ತಿ ಈ ಯೋಜನೆ ವಿಫಲವಾಗಲು ಪ್ರಮುಖ ಕಾರಣಗಳಾಗಿವೆ.

    ಹಾಗೇ ಕರ್ನಾಟಕ ಸರ್ಕಾರವು ಇನ್ನೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪಿಯುಸಿಸಿ (PUCC) ಮಾಹಿತಿಯನ್ನು ಕೇಂದ್ರ ಸರ್ಕಾರದ ವಾಹನ್ ಪೋರ್ಟಲ್‌ಗೆ ಲಿಂಕ್ ಮಾಡಲಾಗಿದೆ (ಏಪ್ರಿಲ್ 1, 2026ರಿಂದ). ಇದರಿಂದಾಗಿ ಇತರ ರಾಜ್ಯಗಳಲ್ಲಿ ವಾಹನದ ಮಾಲಿನ್ಯ ಪ್ರಮಾಣಪತ್ರ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲು ಮಾಹಿತಿ ಕಾಣಿಸದ ಕಾರಣ ಸಾವಿರಾರು ರೂಪಾಯಿ ದಂಡ ಕಟ್ಟಬೇಕಾಗುತ್ತಿತ್ತು, ಈಗ ಆ ಸಮಸ್ಯೆ ನಿವಾರಣೆಯಾಗಿದೆ.

    Also Read  8 ಹೈಕೋರ್ಟ್‌ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳು: ರಾಷ್ಟ್ರಪತಿ ಮುರ್ಮು ಅಂಕಿತಕ್ಕೆ ನೇಮಕಾತಿ ಆದೇಶ

    ಹೆಚ್ಚು ಮುಖ್ಯವಾಗಿ, HSRP ವಿಷಯವಾಗಿ ಯಾವುದೇ ಹೊಸ ನಿಯಮ ತರೋದಕ್ಕೂ ಮುಂಚೆ ಅದರ ಸಾಧ್ಯತೆ (success rate), ಜಾರಿಗೆ ಬೇಕಾದ ಸೌಲಭ್ಯಗಳು, ಜನರ ಪ್ರತಿಕ್ರಿಯೆ ಇವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಇಲ್ಲದಿದ್ದರೆ, ಇಂತಹ ಯೋಜನೆಗಳು ಮಧ್ಯದಲ್ಲೇ ವಿಫಲವಾಗಿ, ಸರ್ಕಾರಕ್ಕೂ ಜನರಿಗೂ ನಷ್ಟವಾಗುತ್ತದೆ.

    ##KarnatakaDrivers #HSRPUpdate #PUCC #TrafficRules #VehicleUpdate #DriverAlert #RoadSafety #IndiaTraffic #CarOwners #DriveSafe

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
    ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….
    “ವಚನಾನಂದ ಶ್ರೀ ಸರದಿ ಸಾಲಿನಲ್ಲಿ ಮಕ್ಕಳನ್ನು ಕರೆಯುತ್ತಿದ್ದರು”– ಪೀಠದಿಂದ ಉಚ್ಚಾಟನೆ ಬಳಿಕ ಪೋಕ್ಸೋ ಕೇಸ್ ಶಾಕ್..ಮಠದಲ್ಲಿ ಭಾರೀ ಸಂಚಲನ .. ಭೇಟಿ ನೀಡಿದ ಮಕ್ಕಳ ಕಲ್ಯಾಣ ಸಮಿತಿ
    ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
    ಮನೆ ಬಾಡಿಗೆ ಕೊಡುವಾಗ ನಿಗಾ ಇರಿಸಲು ಮಾಲಕರಿಗೆ ಎಚ್ಚರಿಕೆ ..!ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ….
    ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
    ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
    ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
    ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    ಅಹಮದಾಬಾದ್ ಬಾಂಬ್ ಸ್ಫೋಟ:38 ಮಂದಿಗೆ ಗಲ್ಲು ಎತ್ತಿಹಿಡಿದ ಹೈಕೋರ್ಟ್
    ಪಾಕ್ ಪ್ರಧಾನಿ ಎದುರಲ್ಲೇ ಮೋದಿ ಗುಡುಗು!“ಭಯೋತ್ಪಾದನೆ ಯಾರಿಗೂ Strategic Asset ಅಲ್ಲ” — SCO ವೇದಿಕೆಯಲ್ಲಿ ಖಡಕ್ ಸಂದೇಶ
    ಪುತ್ತೂರು ಘಟನೆ ಚಾಕು ಕಂಡು ಆತಂಕ…ಏನಾಯಿತು?ತನಿಖೆಯಲ್ಲಿ ಬಯಲಾಯ್ತು ಮತ್ತೊಂದು ಸತ್ಯ!
    ಗಂಜಿಮಠದತ್ತಿರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾದ ಆರೋಪಿಗಳು ರಸ್ತೆ ಮಧ್ಯೆ ಯೋಜಿತ ದರೋಡೆ …!
    ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
    ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
    ಫ್ಲೆಕ್ಸ್‌ಗಳ ಹೊಳಪಿನ ನಡುವೆ ಕಡಲನಗರಿಗೆ ಆಡಳಿತ ಯಂತ್ರ!
    “ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
    146 ವರ್ಷಗಳಲ್ಲೇ ಅತ್ಯಂತ ಒಣ ಜೂನ್..ದೇಶಾದ್ಯಂತ 46% ಮಳೆ ಕೊರತೆ!
    ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!
    ₹119 ಕೋಟಿ ವ್ಯತ್ಯಾಸ ಸಣ್ಣ ವಿಷಯನಾ….ಏನಿದು ತಲೈವಾ..!
    ಬೆಳಕು-ನೆರಳಿನ ಕಾವ್ಯ: ಕಾಲವನ್ನೇ ಕಟ್ಟಿಹಾಕುವ ಛಾಯಾಚಿತ್ರಗಳ ವೈಭವ
    “ಧುರಂಧರ್ “ಸಿನಿಮಾವನ್ನೂ ಮೀರಿದ ಪಾಕ್ ಸಂಚನ್ನ ಭೇದಿಸಿದ ಕೇಂದ್ರ ಗುಪ್ತಚರ ಇಲಾಖೆ ಮತ್ತು ಕರ್ನಾಟಕ ಖಾಕಿ..
    ಒಂದು ತಪ್ಪು ಹೆಜ್ಜೆ…25 ಅಡಿ ಬಾವಿಗೆ ಬಿದ್ದ ಆನೆ …ನೋಡಿ ಈ ಸ್ಮಾರ್ಟ್ ಆಪರೇಷನ್!
    ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    ನಿತ್ಯ bus ಪ್ರಯಾಣಿಕರಿಗೆ ಶಾಕ್‌: ‌ ಟಿಕೆಟ್‌ ದರ 5 ರಿಂದ 8% ಹೆಚ್ಚಳ: ಇನ್ಮೇಲೆ ಓಡಾಟ ಮತ್ತಷ್ಟು ದುಬಾರಿ!