📍 Karavali Maruta
LIVE | CONTACT
ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?

ಇದು ಸಚಿವ ಜಮೀರ್ ಅಹ್ಮದ್ ಖಾನ್ ರವರ ಅಧಿಕ ಪ್ರಸಂಗತನ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ಆತನೇ ಖುದ್ದಾಗಿ ಬಂದು ದಾವಣಗೆರೆಯಲ್ಲಿ ಕೂತು ಇಂತಹದೊಂದು ಪಟಾಕಿಗೆ ಬೆಂಕಿ ಹಚ್ಚಿ ಹೋದ ಪರಿಣಾಮ, ದಾವಣಗೆರೆಯ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಹೊಣೆ ಹೊರಬೇಕಾದವರು ಯಾರು?

ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೂ ಮಾತನಾಡುತ್ತಿಲ್ಲ. ಇನ್ನೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಏನು ಮಾತನಾಡುತ್ತಿಲ್ಲ. ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿರುವವರ ಮೇಲೆ, ಅನವಶ್ಯಕವಾಗಿ ಎಲ್ಲಿಂದಲೋ ಎಲ್ಲಿಗೋ ಹೋಗಿ ವೈಯಕ್ತಿಕ ಜಾತಿ ಧರ್ಮದ ಹೆಸರಲ್ಲಿ ಬ್ಲಾಕ್ಮೈಲಿಗೆ ಇಳಿಯುವ ವ್ಯಕ್ತಿಗಳ ಮೇಲೆ ಕಂಟ್ರೋಲ್ ಇಲ್ಲಾಂದ್ರೆ ನಾಳೆ ಪಕ್ಷದ ಗತಿ ಏನು ಎಂಬ ಮಾತುಗಳು ಕಾಂಗ್ರೆಸ್ ಪಕ್ಷದ ಒಳಗಿನಿಂದಲೇ ಭುಗಿಲೇ ಹೇಳಲಾರಂಬಿಸಿದೆ.
ಜಮೀರ್ ಅಹಮದ್ ಖಾನ್ ಈತ ಕಟ್ಟಾ ಕಾಂಗ್ರೆಸ್ಸಿಗರೇನಲ್ಲ. ಕಾಂಗ್ರೆಸಿನಲ್ಲಿರುವ ಕಟ್ಟರ್ ಪಕ್ಷ ನಿಷ್ಠೆ ಹೊಂದಿರುವ ಮುಸ್ಲಿಮರಿಗಿಂತ, ಈ ಜಮೀರ್ ಅಹ್ಮದ್ ಮೇಲಕ್ಕೆ ಬೆಳೆದು ನಿಂತಿದ್ದಾರೆ. ಸಾಲು ಸಾಲು ಮುಸ್ಲಿಂ ನಾಯಕರುಗಳು ಕಾಂಗ್ರೆಸ್ಸಿನ ಒಳಗಿದ್ದಾರೆ. ಅವರಿಗೆ ಇನ್ನೂ ಸರಿಯಾದ ಸ್ಥಾನ ಮಾನ ಸಿಕ್ಕಿಲ್ಲ. ಹಲವು ಕಾರಣಗಳಿಂದಾಗಿ ಇನ್ನು ಅವರು ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ಅಂಥವರ ಮಧ್ಯೆ ಜೆಡಿಎಸ್ ನಿಂದ ಹಾರಿ ಬಂದ ಜಮೀರ್ ಅಹ್ಮದ್ ಖಾನ್, ಅವರೆಲ್ಲರನ್ನು ಓವರ್ಟೇಕ್ ಮಾಡಿ ಪಕ್ಷದಲ್ಲಿ ತನ್ನನ್ನು ತಾನು ಮುಸ್ಲಿಂ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಬಿಂಬಿಸಿಕೊಳ್ಳಲು ಹೋಗುತ್ತಿರುವುದು, ಅದನ್ನು ನೋಡಿ ಪಕ್ಷ ಯಾವುದೇ ನಿರ್ಧಾರ ಮಾಡದಿರುವುದು ಭವಿಷ್ಯದಲ್ಲಿ ಪಕ್ಷಕ್ಕೆ ಅಪಾಯವನ್ನು ತಂದುಡ್ಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ನೋವಿನ ಮಾತನ್ನು ಸ್ವತಃ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹೇಳುತ್ತಿದ್ದಾರೆ.
ಸಾಧಿಕ್ ಪೈಲ್ವಾನ್
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅದು. ಇಲ್ಲಿ ಯಾವತ್ತೂ ಕಾಂಗ್ರೆಸ್ ತನ್ನ ಬಿಗಿ ಪಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ. ಸತತವಾಗಿ ಶಾಮನೂರು ಶಿವಶಂಕ್ರಪ್ಪ ಇಲ್ಲಿ ಗೆಲ್ಲುತ್ತಾ ಬಂದಿದ್ದಾರೆ. ಅಂತಹ ಬಲಿಷ್ಠ ಕಾಂಗ್ರೆಸ್ ಕೋಟೆ, ಈ ದಕ್ಷಿಣ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಸಾಕಷ್ಟು ಮುಸ್ಲಿಂ ಮತದಾರರೂ ಇದ್ದಾರೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಧಿಕ್ ಪೈಲ್ವಾನ್ ನಂತಹ ಕಟ್ಟರ್ ಕಾಂಗ್ರೆಸ್ಸಿಗ ಈ ಕ್ಷೇತ್ರದ ಮುಸ್ಲಿಂ ಮತದಾರರ ಮೇಲೆ ಹಿಡಿತವನ್ನು ಹೊಂದಿರುವಂತಹ ವ್ಯಕ್ತಿ. ಈ ವ್ಯಕ್ತಿ ಶಿವಶಂಕ್ರಪ್ಪನವರ ಗರಡಿಯಲ್ಲೇ ಪಳಗಿದವರು. ಅಂತಹ ಸಾಧಿಕ್ ಪೈಲ್ವಾನರನ್ನೇ ಜಮೀರ್ ಅಹ್ಮದ್ ಕೀ ಕೊಟ್ಟು ಆಡಿಸಿದರು ಎಂದರೆ ಲೆಕ್ಕ ಹಾಕಿ, ಈತನ ಖದರ್ ನ್ನು.
ಶಾಮನೂರು ಶಿವಶಂಕ್ರಪ್ಪನವರ ನಿಧನದಿಂದಾಗಿ ತೆರವಾದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಸ್ವತಹ ಶಾಮನೂರು ಶಿವಶಂಕ್ರಪ್ಪನವರ ಸುಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಜಿಲ್ಲೆಯ ಉಸ್ತುವಾರಿ ಮಂತ್ರಿ ಬೇರೆ. ಅವರು ಇರುವಾಗಲೇ ಈ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದಂತಹ ಜಮೀರ್ ಅಹ್ಮದ್ ಖಾನ್ ದಾವಣಗೆರೆಗೆ ಬಂದು ಮುಸ್ಲಿಂ ಸಮಾಜದ ಮುಖಂಡರ ಜೊತೆ ಕುಳಿತು ಈ ಕ್ಷೇತ್ರಕ್ಕೆ ಮುಸಲ್ಮಾನ ಅಭ್ಯರ್ಥಿಯಾಗುತ್ತಾರೆ ಅಂತ ಘೋಷಿಸಿ ಹೋಗುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಬಿಸಿ ಬಿಸಿ ವಾತಾವರಣ.
ಈ ಹಿಂದೆ ಶ್ಯಾಮನೂರು ಶಿವಶಂಕ್ರಪ್ಪನವರು ಬಿಜೆಪಿಯ ಜಾಧವ್ ವಿರುದ್ಧ ಕೇವಲ ಐದಾರು ಸಾವಿರ ಮತಗಳಿಂದ ಗೆದ್ದಿದ್ದರು. ಈ ಇತಿಹಾಸವನ್ನು ಹೊಂದಿರುವ ಬಿಜೆಪಿಯು ಈ ಬಾರಿ ಸಖತ್ ಫೈಟ್ ಕೊಡಲು ರೆಡಿಯಾಗಿದೆ. ಇದರ ನಡುವೆ ಎಪ್ಪತ್ತು ಸಾವಿರದಷ್ಟು ಮತದಾರರನ್ನು ಹೊಂದಿರುವ ಮುಸ್ಲಿಂ ಸಮಾಜದ ಎದುರು ಜಮೀರ್ ಅಹಮದ್ ಖಾನ್ ಬಂದು ಮಾಡಿದ ಬಾಣಗಡಿಯ ಕಾರಣದಿಂದಾಗಿ ಕಾಂಗ್ರೆಸ್ ಕೋಟೆಯ ಒಳಗೆ ಬಿರುಕು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರ ಲಾಭವನ್ನು ಬಿಜೆಪಿ ಪಡೆದುಕೊಳ್ಳುವುದಕ್ಕೆ ತನ್ನೆಲ್ಲಾ ಶಕ್ತಿಯನ್ನು ಬಳಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಕಾಂಗ್ರೆಸ್ಸಿನ ಅಭ್ಯರ್ಥಿ ಶಾಮನೂರು ಶಿವಶಂಕ್ರಪ್ಪನವರ ಮೊಮ್ಮಗ ಸಮರ್ಥ್ ಗೆ ಇದು ಪ್ರತಿಷ್ಠೆಯ ಕಣ ಆಗಿದೆ. ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡುತ್ತಿರುವ ಸಮರ್ಥ್ ಸೋಲನ್ನು ಸಹಿಸಿಕೊಳ್ಳಲಾರರು. ಎಲ್ಲದಕ್ಕೂ ಹೆಚ್ಚಾಗಿ ಜಿಲ್ಲಾ ಮಂತ್ರಿಯಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಶಾಮನೂರು ಶಿವಶಂಕ್ರಪ್ಪನವರ ನಿಧನದ ನಂತರ ಆ ಕುಟುಂಬದ ಹಿಡಿತವು ಕೈತಪ್ಪಿ ಹೋಯಿತು ಎಂಬ ಮೆಸೇಜ್ ದಾವಣಗೆರೆ ಜಿಲ್ಲೆಗೆ ಪಸರಿಸಿದರೆ ಅದರ ಪರಿಣಾಮ ಭವಿಷ್ಯದಲ್ಲಿ ಕಾಂಗ್ರೆಸ್ಸಿಗಷ್ಟೇ ಅಲ್ಲ ಶಾಮನೂರು ಕುಟುಂಬಕ್ಕೂ ದೊಡ್ಡ ಹಿನ್ನಡೆಯನ್ನು ಉಂಟುಮಾಡಲಿದೆ.
ಇದೆಲ್ಲವುದಕ್ಕೂ ಕಾರಣ ಜಮೀರ್ ಅಹಮದ್ ಖಾನ್ಆಟ. ಅವರ ಅನವಶ್ಯಕವಾದ ತಪ್ಪುಗಳಿಂದಾಗಿ ಇವತ್ತು ಕಾಂಗ್ರೆಸ್ ಸಲೀಸಾಗಿ ಗೆಲ್ಲಬೇಕಿದ್ದ ಕ್ಷೇತ್ರದಲ್ಲಿ ಹರ ಸಾಹಸ ಪಡಬೇಕಾದಂತಹ ವಾತಾವರಣ ಸೃಷ್ಟಿಯಾಗಿದ್ದು.
ಈಗಾಗಲೇ ಸಾಧಿಕ್ ಪೈಲ್ವಾನ್ ಜೊತೆಗೆ ಕಾಂಗ್ರೆಸ್ ರಾಜ್ಯ ನಾಯಕರು ಮಾತುಕತೆ ಮಾಡಿ ಅವರನ್ನು ತಣ್ಣಗಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸಾಕಷ್ಟು ತಡವಾಗಿತ್ತು. ಸಾಧಿಕ್ ತಮ್ಮ ನಾಮಪತ್ರವನ್ನು ಹಿಂಪಡೆದಿಲ್ಲ, ಆದರೆ ತಾನು ಪ್ರಚಾರ ಮಾಡುವುದಿಲ್ಲ, ಕಾಂಗ್ರೆಸಿಗಾಗಿಯೇ ಮತ ಕೇಳುತ್ತೇನೆ. ಪಕ್ಷದ ವಿರುದ್ಧ ಹೋಗುವುದಿಲ್ಲ. ಏನೋ ಒಂದಿಷ್ಟು ವ್ಯತ್ಯಾಸ ಆಗಿ ಹೋಗಿದೆ ಅದನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ಸಮರ್ಥ್ ನಮ್ಮ ಮನೆಯ ಮಗನೇ ಆಗಿದ್ದಾರೆ. ವರನ್ನು ಗೆಲ್ಲಿಸಿಕೊಂಡು ಬರಲು ಶ್ರಮಿಸುತ್ತೇನೆ ಅಂತ ಮಾಧ್ಯಮದ ಮುಂದೆ ಸಾಧಿಕ್ ಪೈಲ್ವಾನ್ ಹೇಳಿದ್ದು ಒತ್ತಡದಿಂದಲೋ ಅಥವಾ ಮನಃಪೂರ್ವಕವಾಗಿ ಹೇಳಿದ್ದಾರೋ ಅರ್ಥವಾಗುತ್ತಿಲ್ಲ. ಒಂದೊಮ್ಮೆ ಪಕ್ಷ ನಿಷ್ಠೆಯ ವಿಚಾರವೇ ಮುಖ್ಯವಾಗಿದ್ದರೆ ಪೈಲ್ವಾನ್ ತಮ್ಮ ನಾಮಪತ್ರವನ್ನು ವಾಪಸ್ ಪಡೆಯಬೇಕಿತ್ತು. ಆದರೆ ಆ ಕೆಲಸವನ್ನು ಪೈಲ್ವಾನ್ ಮಾಡಿಲ್ಲ. ಬದಲಿಗೆ ನಾನು ಕಾಂಗ್ರೆಸ್ಸಿಗೆ ಮತ ಕೇಳುತ್ತೇನೆ ಅಂತ ಸ್ಟೇಟ್ಮೆಂಟ್ ನೀಡಿದ್ದಾರೆ ಅಷ್ಟೇ.
ಇನ್ನು ಜಮೀರ್ ಅಹ್ಮದ್ ಖಾನ್ ದಾವಣಗೆರೆಗೆ ಹೋಗಿ ಪಟಾಕಿ ಹಚ್ಚಿ ಬಂದಮೇಲೆ ಅತ್ತ ಕಡೆ ತಲೆ ಹಾಕಿಲ್ಲ. ಸಾಧಿಕ್ ಪೈಲ್ವಾನ್ ಅವರನ್ನು ಅಭ್ಯರ್ಥಿಯಾಗಲು ಹುರಿದುಂಬಿಸಿದ್ದು ಈ ಜಮೀರ್. ಇನ್ನೊಬ್ಬರ ಕ್ಷೇತ್ರದಲ್ಲಿ ಯಾವುದೇ ಅಧಿಕಾರ ಇಲ್ಲದೆ ಹೋಗಿ ಮೂಗು ತೂರಿಸಿ ಬಂದ ಜಮೀರ್ ಅಹ್ಮದ್ ರಿಂದಾಗಿ ಕಾಂಗ್ರೆಸ್ಗೆ ನಷ್ಟವಂತೂ ಆಗಿದೆ. ಅದನ್ನು ಸರಿಪಡಿಸುವವರಾರು? ಈ ವ್ಯಕ್ತಿಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಲವಾದ ಆಶೀರ್ವಾದವಿದ್ದಂತಿದೆ. ಈಗಾಗಲೇ ಹಲವು ಬಾರಿ ಬಾಯಿಯನ್ನು ಹರಿದು ಬಿಟ್ಟು ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ. ಆದರೂ ಯಾವುದೇ ಕ್ರಮ ಆಗದಂತೆ ನೋಡಿಕೊಂಡಿದ್ದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಈಗಲೂ ಅದೇ ರಕ್ಷಣೆಯ ಕಾರ್ಯ ಸಿದ್ದರಾಮಯ್ಯನವರಿಂದ ಆಗುತ್ತಿದೆಯೇ? ಪಕ್ಷಕ್ಕೆ ಡ್ಯಾಮೇಜ್ ಮಾಡಿದ ವ್ಯಕ್ತಿಯನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಅದೇ ಪಕ್ಷದ ಒಳಗಿನಿಂದ ಶುರುವಾಗಿದೆ. ಅವರ ಅಭಿಪ್ರಾಯ ಏನು ಅಂದರೆ, ಕಾಂಗ್ರೆಸ್ ನಾಯಕರು ಜಮೀರ್ ಅಹ್ಮದ್ ನಂತಹ ನಾಯಕರಿಗೆ ಮಣೆ ಹಾಕಿದರೆ ಬಿಜೆಪಿಯ ಬಟ್ಟಲಿಗೆ ತುಪ್ಪ ಹಾಕಿದಂತೆಯೇ ಸರಿ. ಬಿಜೆಪಿಯು ಇಂತಹ ಅವಕಾಶವನ್ನೇ ಕಾಯುತ್ತಿರುತ್ತದೆ. ಕಾಂಗ್ರೆಸ್ಸನ್ನು ಮುಸ್ಲಿಮರ ಪಕ್ಷ ಎಂದು ಬಿಂಬಿಸುವಲ್ಲಿ ಈಗಾಗಲೇ ಶೇಕಡಾ 50ರಷ್ಟು ಸಕ್ಸಸ್ ಪಡೆದಿದೆ ಬಿಜೆಪಿ. ಹಾಗಿರುವಾಗ ಪಕ್ಷದ ನಾಯಕರು ಇಂತಹ ಜಮೀರ್ ಅಹ್ಮದ್ ಅಂತವರನ್ನು ಅವರ ಕ್ಷೇತ್ರಕಷ್ಟೇ ಸೀಮಿತಗೊಳಿಸಿದರೆ ಪಕ್ಷಕ್ಕೆ ಹಾಗೂ ಸರ್ಕಾರ ಎರಡಕ್ಕೂ ಒಳ್ಳೆಯದು ಎಂಬ ಅಗ್ರಹವನ್ನು ಮಾಡಲು ಆರಂಭಿಸಿದ್ದಾರೆ.
ಶಾಮನೂರು ಶಿವಶಂಕ್ರಪ್ಪ ನವರ ಕುಟುಂಬ ಶ್ರೀಮಂತ ಹಾಗೂ ಬಲಿಷ್ಠ ಕುಟುಂಬ ಅನ್ನುವುದರಲ್ಲಿ ಎರಡು ಮಾತಿಲ್ಲ. ಅಭ್ಯರ್ಥಿ ಸಮರ್ಥ್ ಇನ್ನೂ ರಾಜಕೀಯ ಅಂಗಳದಲ್ಲಿ ಕೂಸು. ತಾಯಿ ಸಂಸದೆ ಆಗಿದ್ದರು ರಾಜಕೀಯ ಅನುಭವ ಕಡಿಮೆನೇ. ಮಲ್ಲಿಕಾರ್ಜುನ್ ಅವರಿಗೆ ರಾಜಕೀಯದ ಅನುಭವ ಇದ್ದರೂ, ಕ್ಷೇತ್ರವನ್ನು ಬಿಟ್ಟು ಹೊರಗೆ ಅವರ ರಾಜಕೀಯದ ಪಟ್ಟು ವಿಸ್ತರಣೆಯಾಗಿಲ್ಲ. ಜೊತೆಗೆ ಅವರ ದಿನಚರಿ ಜನರಿಗೆ ಅಷ್ಟು ಇಷ್ಟವಾಗುತ್ತಿಲ್ಲ ಕೂಡ. ರಾಜಕಾರಣಿಗಳು ಬೆಳಗಿನ ಹೊತ್ತಿನಲ್ಲಿ ಜನಸಾಮಾನ್ಯರಿಗೆ ಸಿಗುವಂತಾದರೆ ಮಾತ್ರ ಜನರಿಗೆ ಒಂದಿಷ್ಟು ಉಪಕಾರವಾಗುತ್ತದೆ. ಮಲ್ಲಿಕಾರ್ಜುನ್ ರವರು ಬೆಳಗಿನ ಸಮಯದಲ್ಲಿ ಜನರಿಗೆ ಸಿಗುವುದು ದುರ್ಲಭ. ಅವರೇನಿದ್ದರೂ ಮಧ್ಯಾಹ್ನ 12ರ ನಂತರವೇ ಸಿಗುವುದು ಎಂಬ ಮೆಸೇಜ್ ಯಾವಾಗಲೊ ದಾವಣಗೆರೆಯ ತುಂಬಾ ಪಸರಿಸಿಕೊಂಡಾಗಿದೆ. ಇದು ಕೂಡ, ಅವರಿಗೆ ಕೊಂಚ ಹಿನ್ನಡೆಯನ್ನು ಉಂಟು ಮಾಡಬಹುದು. ಒಂದು ಕಡೆ ಮುಸ್ಲಿಂ ಮತದಾರರ ಮಧ್ಯ ಈಗಾಗಲೇ ಗೊಂದಲದ ಸನ್ನಿವೇಶವನ್ನು ಉಂಟು ಮಾಡಿದ್ದರಿಂದ ಕಡಿಮೆ ಅಂದರೂ 20% ನಷ್ಟು ಮುಸ್ಲಿಂ ಮತವನ್ನು ಈ ಬಾರಿ ಕಾಂಗ್ರೆಸ್ ಕಳೆದುಕೊಳ್ಳಲಿದೆ. ಈ ಸಂಖ್ಯೆ ಬಿಜೆಪಿಯ ಪಾಳೆಯಕ್ಕೆ ಹೊಸ ಹುರಪನ್ನು ನೀಡುತ್ತಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ ನೋಡಿ
-ದತ್ತು

##DavangerePolitics #ByElection##MuslimVotes #BJPvsCongress##ZameerAhmedKhan #CongressKarnataka#analysis#latest news#politics

COMMENTS

Login with Gmail to comment

ಇನ್ನಷ್ಟು ಸುದ್ದಿ

ಪಿಸ್ತೂಲ್ ತೋರಿಸಿ ಬೆದರಿಸಿ ಪರಾರಿಯಾಗಿದ್ದ ಯುವಕ ಬಂಧನ
ವಿಷ ಸೇವನೆ ಸ್ವಯಂ ಆಗಿತ್ತೇ ಅಥವಾ ಪ್ರಚೋದನೆ ಕಾರಣವೇ ….?!
ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
ಹೋಳಿ ಮತ್ತು ರಂಜಾನ್ ಒಂದು ಜೀವವನ್ನೇ ನುಂಗಿತು..!
ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
“ಬರ್ಕಾಸ್ತು ಘಟಕಕ್ಕೆ ‘ಬೋಗಸ್ ನಾಯಕತ್ವ’ – ಕರವೇ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಫೋಟ!”
ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
ಬೃಹತ್ ಅಭಿಯಾನ….5.51 ಟನ್ ವಸ್ತುಗಳು..!5000ಕ್ಕೂ ಹೆಚ್ಚು ದೇವರ ಫೋಟೋಗಳು
ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆ – ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
AI ಹವಾ-ಬೇಗನೆ ಫೈನಾನ್ಷಿಯಲ್ ಇಂಡಿಪೆಂಡೆಂಟ್ ಆಗೋ ಟ್ರೆಂಡ್- ಕೈಬಿಟ್ಟ  ಓದು!! ಇದು ಗಂಭೀರ ಸೂಚನೆ….
ವಿದ್ಯಾರ್ಥಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..
ಚಿಕ್ಕಸ್ವಾಮಿ-ದೊಡ್ಡಸ್ವಾಮಿ ಭಕ್ತರ ಮಿಲನ! ಕಾಶಿಮಠ ವಿವಾದಕ್ಕೆ ಸಂಯಮೇ೦ದ್ರ ಮದ್ದು
ಮೂಡಬಿದ್ರೆ ಪೊಲೀಸ್ ಅಧಿಕಾರಿಯ ಮಾನ ಹರಾಜಿಗೆ ನಿಂತವರು ಯಾರು?
ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
ಭೀಕರ ಅಪಘಾತ ಮಹಿಳೆ ಬಲಿ
₹3 ಕೋಟಿ ಹೂಡಿಕೆ ಮಾಡಿದ ಶಾಲೆಗೀಗ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾತನಾಡುವ ಸುಂದರಿ “ಐರಿಸ್” ಮೇಡಂ…ಸರ್ಕಾರಿ ಶಾಲೆ ನೋಡಿ ದೇಶವೇ ಶಾಕ್!
ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
ಮಣಿಪಾಲ ಜೆಇಇ ಮೇನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರಯತ್ನ….
“ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ… ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?
60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
ವಿಶ್ವ ಸಂಸ್ಥೆಯು ಯಾವ ಪುರುಷಾರ್ಥಕ್ಕೆ? ಬಲವರ್ಧನೆಯ  ಅಗತ್ಯತೆ
ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
Online payments ಹೊಸ ಸುರಕ್ಷತಾ ನಿಯಮಗಳು: ನಿಮ್ಮ ಹಣಕ್ಕೆ ‘ಅದೃಶ್ಯ ಕವಚ’