📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ

    ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ತೇಲುತ್ತಿದ್ದ ಮನೆ… ಆದರೆ ಕೆಲವೇ ಗಂಟೆಗಳಲ್ಲಿ ಆ ಮನೆ ದುಃಖದ ಸಾಗರವಾಗಿಬಿಟ್ಟಿತು.

    ಬಂಟ್ವಾಳದ ಶಂಭೂರು ಸಮೀಪದ ಶೇಡಿಗುರಿಯಲ್ಲಿ ವಾಸವಾಗಿದ್ದ ಛಾಯಾಗ್ರಾಹಕ ರಕ್ಷಿತ್ ಶೆಟ್ಟಿ (45) ತಮ್ಮ ಮಗಳ 10ನೇ ಹುಟ್ಟುಹಬ್ಬವನ್ನು ಭಾನುವಾರ ದೊಡ್ಡ ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಮನೆಯ ಮುಂದೆ ಈಗಾಗಲೇ ಶಾಮಿಯಾನ ಹಾಕಲಾಗಿತ್ತು. ಪುಟ್ಟ ಮಗಳ ಸಂತೋಷವನ್ನು ನೋಡಿ ತಂದೆಯ ಮನಸ್ಸು ತುಂಬಿ ತುಳುಕುತ್ತಿತ್ತು.

    ಆದರೆ ವಿಧಿಯಾಟ ಬೇರೆದ್ದಾಗಿತ್ತು…

    ಶುಕ್ರವಾರ ರಾತ್ರಿ ಪಾಣೆಮಂಗಳೂರಿನಲ್ಲಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಕ್ಷಿತ್ ಅವರಿಗೆ ಗಂಭೀರ ಗಾಯಗಳಾದವು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರ ಎಲ್ಲಾ ಪ್ರಯತ್ನಗಳಿಗೂ ಮೀರಿಯಾಗಿ ಶನಿವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು.

    Also Read  ಕರ್ನಾಟಕದಲ್ಲಿ ನೀರು–ವಿದ್ಯುತ್ ಬಿಕ್ಕಟ್ಟಿನ ಎಚ್ಚರಿಕೆ!

    ಮಗಳ ಹುಟ್ಟುಹಬ್ಬದ ಸಂಭ್ರಮಕ್ಕೆ ಸಜ್ಜಾಗಿದ್ದ ಮನೆ ಇದೀಗ ಮೌನದಿಂದ ತುಂಬಿದೆ. ಹತ್ತು ವರ್ಷದ ಪುಟ್ಟ ಮಗಳು ತಂದೆಯಿಗಾಗಿ ಕಾಯುತ್ತಿದ್ದರೆ, ಆ ತಂದೆ ಎಂದಿಗೂ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾರೆ.

    ರಕ್ಷಿತ್ ಶೆಟ್ಟಿ ಬಂಟ್ವಾಳ ಛಾಯಾಗ್ರಾಹಕರ ಸಂಘದ ಸಕ್ರಿಯ ಸದಸ್ಯರಾಗಿದ್ದು, ಅತ್ಯುತ್ತಮ ವಿಡಿಯೋಗ್ರಾಫರ್ ಆಗಿ ಪರಿಚಿತರಾಗಿದ್ದರು. ಸರಳ ಸ್ವಭಾವ ಮತ್ತು ಪರಿಶ್ರಮದಿಂದ ಎಲ್ಲರ ಮನ ಗೆದ್ದಿದ್ದರು.

    ಇನ್ನೊಂದು ದುಃಖಕರ ಸಂಗತಿ ಎಂದರೆ, ಅವರ ಸಹೋದರ ರಂಜಿತ್ ಕೂಡ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲೇ ಮಲಗಿದ ಸ್ಥಿತಿಯಲ್ಲಿದ್ದಾರೆ. ಈಗ ಈ ಬಡ ಕುಟುಂಬ ತನ್ನ ಪ್ರಮುಖ ಆಧಾರಸ್ತಂಭವನ್ನೇ ಕಳೆದುಕೊಂಡು ಕಂಗಾಲಾಗಿದೆ.

    ಹುಟ್ಟುಹಬ್ಬದ ಕೇಕ್ ಕತ್ತರಿಸಬೇಕಿದ್ದ ದಿನ…ಶಾಮಿಯಾನ ಹಾಕಿದ ಮನೆ… ಆದರೆ ಸಂಭ್ರಮದ ಬದಲು ಮೌನ ಆವರಿಸಿತು.

    Also Read  ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ  ಮುಂಗಾರು  ಮಳೆರಂಗು – 5 ಜಿಲ್ಲೆಗಳಲ್ಲಿ ಆಲಿಕಲ್ಲು ಅಬ್ಬರ!

    ಈಗ ಪುಟ್ಟ ಮಗಳ ಕಣ್ಣೀರೇ ಆ ಮನೆಯ ನಿಜವಾದ ಕಥೆಯನ್ನು ಹೇಳುತ್ತಿದೆ.

    #pillar of family#road accident#vedeographer

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಟೆನಿಸ್ ಕೋರ್ಟ್‌ನಲ್ಲಿ ಡಿಸೈನರ್ ಉಡುಪುಗಳ ಧಮಾಕಾ!
    ಅಧಿಕಾರಿಗಳಿಗೆ ಲಂಚವೋ? ಗೌರವ ಧನವೋ ….!ಶಿವಲಿಂಗೇಗೌಡ “ಹೇಳಿಕೆ”ಭಾರಿ ವಿವಾದ…!
    ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
    ದೇಶದ ಗಮನ ಸೆಳೆದ ಒಡಿಶಾದ ಐತಿಹಾಸಿಕ ಶಿಕ್ಷಣ ಕ್ರಾಂತಿ: LKGಯಿಂದ PGವರೆಗೆ ಸಂಪೂರ್ಣ ಉಚಿತ ಶಿಕ್ಷಣ ಘೋಷಣೆ… “ಶಿಕ್ಷಣ ಎಲ್ಲರ ಹಕ್ಕು”
    ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
    ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
    KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತ್
    ಟೆಕ್ಸಾಸ್‌ನಲ್ಲಿ ತ್ರಿವರ್ಣ ಧ್ವಜ ಹರಿದು ಹಾಕಿದ ವಿಡಿಯೋ ವೈರಲ್ …ಅಮೆರಿಕದಲ್ಲಿ ಹೆಚ್ಚುತ್ತಿದೆಯೇ ಭಾರತ ವಿರೋಧಿ ಮನೋಭಾವ?
    ಈ ‘ಗೋಲ್ಡನ್ ಇನ್ನರ್‌ವೇರ್ ಸೆಟ್ ‘ಯಾರದ್ದು ?ಜಗತ್ತನ್ನೇ ಬೆಚ್ಚಿಬೀಳಿಸಿದ ಇರಾಕ್ ಸಂಸದೆ ಅಲಿಯಾ ನಸೀಫ್ ದ್ದಾ ..!?
    ಸ್ಮಾರ್ಟ್ ಲಾಕ್ ಇದ್ದ ಸುರಕ್ಷಿತ ಮನೆಯಲ್ಲೇ ಯುವತಿಯ ರೇಪ್ ಅಂಡ್ ಮರ್ಡರ್…!ನಗರವನ್ನು ಬೆಚ್ಚಿಬೀಳಿಸಿದ ಘಟನೆ”
    ಉಡುಪಿ ಮಹಿಳೆಗೆ ಮುಂಬೈನಲ್ಲಿ ಕಂಬಿ! ₹3.10 ಕೋಟಿ ವಂಚನೆ ಉಡುಪಿ ಮೂಲದ ಮಹಿಳೆ ಅರೆಸ್ಟ್!
    ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
    ಕೂದಲೆಳೆ ಅಂತರದಲ್ಲಿ ಪಾರಾದ ಗುಜರಾತ್ ಟೈಟಾನ್ಸ್!ಕ್ಷಣಾರ್ಧ ತಡವಾಗಿದ್ದರೂ ಸಂಭವಿಸುತ್ತಿತ್ತು ಘೋರ ಅಗ್ನಿ ದುರಂತ!
    ಇರಾನ್–ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸಲು ಇರಾನ್‌ನ 3 ಷರತ್ತುಗಳು… ಅಮೇರಿಕಾ ಕಂಗಾಲು
    ಭಾರತದ 9 ರಾಜ್ಯದ 8.18 ಕೋಟಿ ಮತದಾರರನ್ನು ಕೈ ಬಿಡಲಾಗಿದ್ದು ,ಅವರ ಕಥೆ ಏನು?
    ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಇಷ್ಟ ಬಂದಂತೆ ವಿಡಿಯೋ ಮಾಡುವಂತಿಲ್ಲ! ಇನ್ಸ್ಟಾರೀಲ್ಸ್, ವಿಡಿಯೋ ಮಾಡಿದರೆ ‘ನೋ-ಫ್ಲೈ ಲಿಸ್ಟ್’ ಸೇರುವ ಮುನ್ನೆಚ್ಚರಿಕೆ ನೀಡಿದ DGCA! ಲೇಟೆಸ್ಟ್ ಅಪ್ಡೇಟ್ ಹೊಸ ರೂಲ್ಸ್ ಇಲ್ಲಿದೆ.. ಓದಿ..
    ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ಸೆ.18ಕ್ಕೆ..!
    ಮಂಗಳೂರು -ವೆನ್ಲಾಕ್ ಮಾಸ್ಟರ್ ಪ್ಲ್ಯಾನ್…!
    “ಜೈ ಶ್ರೀರಾಮ್” ಘೋಷಣೆಯಿಂದ ನಡುಗಿದ ಢಾಕಾ! 
    ವಿದ್ಯಾರ್ಥಿ ಪ್ರತಿಭಟನಾ ಪ್ರಕರಣಗಳು: ಎಫ್‌ಐಆರ್‌ ಹಿಂಪಡೆಯಲು ಸುಪ್ರೀಂ ಕೋರ್ಟ್‌ ಮಹತ್ವದ ಸ್ಪಷ್ಟನೆ
    “ವೇತನಕ್ಕಾಗಿ ಹೋರಾಟದಿಂದ ಆರಂಭವಾದ ಪ್ರತಿಭಟನೆ… ನೋಯ್ಡಾ ರಸ್ತೆಗಳಲ್ಲಿ ಅರಾಜಕತೆ, ಬೆಂಕಿ, ಘರ್ಷಣೆ — ಈಗ ಸರ್ಕಾರವೇ ತನಿಖೆ ನಡೆಸುವಷ್ಟು ಗಂಭೀರ ಪರಿಸ್ಥಿತಿ!” 🔥🚨
    7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!
    ಕಾಂಗ್ರೆಸ್ ಹೈಕಮಾಂಡ್ ಖಡಕ್ ವಾರ್ನಿಂಗ್: ಸ್ವಾಮೀಜಿ, ಧಾರ್ಮಿಕ ಮುಖಂಡರ ಶಿಫಾರಸುಗಳಿಗೆ ಸಿಗಲ್ಲ ಮನ್ನಣೆ!
    ಮೂಗಿನಿಂದ ಸೋರಿದ್ದು ಶೀತವಲ್ಲ…ಮೆದುಳಿನ ದ್ರವ! 2 ವರ್ಷ ಕಾಡಿದ ಸಮಸ್ಯೆ…10 ವರ್ಷದ ಬಾಲಕನಿಗೆ ಬೆಂಗಳೂರಿನಲ್ಲಿ ಅಪರೂಪದ skull ಡಿಫೆಕ್ಟ್ ಚಿಕಿತ್ಸೆ…!
    ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
    ಮಿಜಾರಿನಲ್ಲಿ ರಸ್ತೆ ಕುಸಿತ, ಸಾರ್ವಜನಿಕರಲ್ಲಿ ಆತಂಕ ಮೊದಲ ಮಳೆಯಲ್ಲೇ ಕೊಚ್ಚಿಹೋಯ್ತು ಹೆದ್ದಾರಿ! ಕೋಟಿ ಕೋಟಿ ಕಾಮಗಾರಿಯ ಅಸಲಿ ಮುಖ ಬಯಲು? 
    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”
    ಹೈಕೋರ್ಟ್‌ ಅಂಗಳಕ್ಕೆ ಮೂವರು ಹೊಸ ಮುಖ!ಆ ಮೂವರು ನ್ಯಾಯಾಂಗ ಅಧಿಕಾರಿಗಳು ಯಾರೆಲ್ಲಾ..ಹೇಗೆ ಆಯ್ಕೆ..
    ಓವರ್‌ಟೇಕ್ ಮಾಡಲು ಹೋಗಿ ಯಮನ ಬಾಯಿಗೆ! ಕಬ್ಬಿಣದ ಸರಳುಗಳು ನುಗ್ಗಿ KSRTC ಬಸ್ ಚಾಲಕ ಸಾವು..
    ಕೋಟ್ಯಂತರದ ಒಡೆಯ… ಒಂದು ದಿನಕ್ಕೆ ಭಿಕ್ಷುಕನಾದ ಬಿಜಿಪಿ ಶಾಸಕ…!ಜೈನ ಮುನಿಯ ಮಾತಿಗೆ ಐಷಾರಾಮಿ ಬದುಕು ಬದಿಗಿಟ್ಟು ಬೀದಿಗಿಳಿದ ಮಹಾರಾಷ್ಟ್ರದ ಶಾಸಕ